Wednesday, February 15, 2012

Mahatma Gandhiji's Fasts and Satyagrahas..


1948 Jan. 13 Fasted for five days in Delhi for communal unity.

1947 Sept. Fasted for three days to stop communal violence in Calcutta.

1947 Aug. 15 Fasted and prayed to combat riots in Calcutta as India was partitioned and granted independence.

1944 Feb. 22 Kasturba died in detention at Aga Khan Palace at age of seventy-four.

1943 Feb. 10 Began 21-day fast at Aga Khan Palace to end deadlock of negotiations between Viceroy and Indian leaders.

1942 Aug.Mahadev Desai, Gandhi's secretary and intimate, died in Palace.

1942 Aug. 9Arrested with other Congress leaders and Kasturba and imprisoned in Aga Khan Palace near Poona, with populace revolting in many parts of India. He began correspondence with Viceroy.

1942 Aug.Congress passed "Quit India" resolution - the final nation-wide satyagraha campaign - with Gandhi as leader.

1940 Oct.Launched limited, individual civil-disobedience campaign against Britain's refusal to allow Indians to express their opinions regarding World War II - 23,000 persons imprisoned within a year.

1939 March Began fast unto death as part of satyagraha campaign in Rajkot; fast ended four days later when Viceroy appointed as arbitrator.1935Health declined; moved to Bombay to recover

1934 July Fasted at Wardha ashram for seven days in penance against intolerance of opponents of the movement against untouchability.

1933 Nov. Kasturba arrested and imprisoned for sixth time in two years.

1933 Aug. 16Began fast against refusal of  government to grant him permission to work against untouchability while in prison; on  fifth day of fast he was removed to Sassoon Hospital; his health was precarious; he was  unconditionally released on eighth day.

1933 AugArrested and imprisoned at Yeravda for four days with 34 members of his ashram. When he refused to leave Yeravda village for Poona, he was sentenced to one year's imprisonment at Yeravda.

1933 8-May Began self-purification fast of 21 days against untouchability and was released from prison by government on first day.  Fast concluded after 21 days at Poona.

1932 Dec. Joined fast initiated by another prisoner, Appasaheb Patwardhan, against untouchability; but fast ended in two days.

1932 Sept. 26 Concluded "epic fast” with historic cell scene in presence of Tagore after British accepted "Yeravda Pact".

1932 Sept. 20 Began "perpetual fast unto death" while in prison in protest of British action giving separate electorates to untouchables.

1932 Jan. Arrested in Bombay with Sardar Patel and detained without trial at Yeravda prison.

1931 Dec.Left England for Switzerland, where he met Romain Rolland, and Italy, where he met Mussolini.

1931 Dec.Arrived in India. Was authorised by Congress to renew satyagraha campaign (fourth nation-wide effort).

1931 Autumn. Resided at Kingsley Hall in London slums, broadcast to America, visited universities, met celebrities, and attended Round Table Conference sessions.

1931 Aug.Sailed from Bombay accompanied by Desai, Naidu, Mira, etc., for the second Round Table Conference, arriving in London via Marseilles, where he was met by C.F. Andrews.

1931 Jan .Released unconditionally with 30 other Congress leaders.

1931 March Gandhi-Irwin (Viceroy) Pact signed, which ended civil disobedience.

1931 Jan.Released unconditionally with 30 other Congress leaders.

1930 One hundred thousand persons arrested. There was no Congress in December because all leaders were in jail.

1930 6-Apr Broke salt law by picking salt up at seashore as whole world watched.

1930 12-Mar Set out from Sabamarti with 79 volunteers on historic salt march 200 miles to sea at Dandi

1929 Dec. Congress session at Lahore declared complete independence and a boycott of the legislature and fixed January 26 as National Independence Day. Third all-Indian satyagraha campaign began.

1929 March Arrested for burning foreign cloth in Calcutta and fined one rupee.

1928 Dec.Moved compromise resolution at Congress session at Calcutta, calling for complete independence within one year, or else the beginning of another all-Indian satyagraha campaign.

1927 No-tax satyagraha campaign launched at Bardoli, led by Sardar Patel.

1925 Nov.Fasted at Sabarmati for seven days because of misbehaviour of members of ashram.

1924 Sept. Began 21-day "great fast" at Mohammed Ali's home near Delhi as penance for communal rioting (between Hindus and Moslems), especially at Kohat.

1924 Jan.Was operated on for appendicitis and unconditionally released from prison in February.

1923 Wrote Satyagraha in South Africa and part of his autobiography in prison.

1922 Statement at the "great trial" in Ahmedabad before Judge Broomfield. Sentenced to six years' imprisonment in Yeravda jail.

1921 Nov.Fasted at Bombay for five days because of communal rioting following visit of Prince of Wales (later Edward VIII and Duke of Windsor).

1921 Dec.Mass civil disobedience, with thousands in jail. Gandhi invested with "sole executive authority" on behalf of Congress.

1922 Feb.Suspended mass disobedience because of violence at Chauri Chaura and undertook five-day fast of penance at Bardoli.

1922 MarchArrested at Sabarmati in charge of sedition in Young India. Pleaded guilty in famous

1922 MarchArrested at Sabarmati in charge of sedition in Young India. Pleaded guilty in famous

1921 Nov.Fasted at Bombay for five days because of communal rioting following visit of Prince of Wales (later Edward VIII and Duke of Windsor).

1921 Dec.Mass civil disobedience, with thousands in jail. Gandhi invested with "sole executive authority" on behalf of Congress

1921 Nov.Fasted at Bombay for five days because of communal rioting following visit of Prince of Wales (later Edward VIII and Duke of Windsor).

1920 Aug Second all-India satyagraha campaign began when he gave up Kaisar-i-Hind medal.

1920 June Successfully urged resolution for  a satyagraha campaign of non-cooperation at Moslem Conference at Allahabad and at  Congress sessions at Calcutta (Sept.) and Nagpur (Dec.)

1919 Fasted at Sabarmati for three days in penitence for violence and suspended satyagraha campaign, which he called a “Himalayan miscalculation" because people were not disciplined enough.


Wednesday, January 25, 2012

Dr M. Chidananda murthy, is this year's invited speaker !

This year's (2012) Annual Golden Jubilee Endowment Lectures,

Dr.  Chidanand Murthy, noted scholar, Researcher, of Bengaluru. 

The subject being : Hampi ; Capital of Vijayanagar-A cultural review.

-(On  Saturday, 28-01-2012 at 6.00 pm to 8-30 pm)
-(On Sunday, 29-01-2012 he will talk on,  at 11 am to 1 pm)
Greater Karnataka,



Organized by :

This program is being arranged by Dr. G. N. Upadhya, Head, Dept. of kannada, University of Mumbai, Vidyanagar, Mumbai-98,
 and
Y. D. Venkatesh, Hon. Secretary The Mysore
Association, Mumbai-19

Wednesday, June 29, 2011

Janapriya Yakshagan kalamandali, Kurla, Mumbai !


Posted by Picasa

Monday, October 25, 2010

Monday, July 26, 2010

ನಮ್ಮ ಪ್ರೀತಿಯ ಹರಿ !

ಎಸ್. ಕೆ. ಹರಿಹರೇಶ್ವರ (೧೯೩೬-೨೦೧೦)

ಅವರ ವ್ಯಕ್ತಿತ್ವ ಗುರುತಿಸಲು ಅಪಾರ ಶಬ್ದಗಳಿವೆ. ವಿದ್ವಾಂಸ, ಸಾಹಿತ್ಯ ಪರಿಚಾರಕ, ಸಂಘಟಕ, ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ- ಎಲ್ಲವೂ ಆಗಿದ್ದ "ಹರಿ" ಇವೆಲ್ಲಕ್ಕೂ ಮಿಗಿಲಾಗಿ ಅಮೆರಿಕದಲ್ಲಿ ಕನ್ನಡದ ಬೀಜ ಬಿತ್ತಿದ ನುಡಿಕೃಷಿಕ !

-"ಪ್ರಜಾವಾಣಿ ಗ್ಯಾಲರಿ ಚಿತ್ರಗಳು"






ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶ !


ಹರಿಯವರು ಮಾಡಿದ ಭಾಷಣವನ್ನು ಕೊಟ್ಟಿದ್ದೀರಿ. ಈಗ ಹರಿಯವರು ತೀರಿಕೊಂಡ ನಂತರ ಪ್ರಕಟವಾಗುತ್ತಿರುವ ಲೇಖನ ಮಾಲೆ, ನಮಗೆ ಅವರ ಸವಿನೆನಪುಗಳನ್ನು ಕೊಡುವಲ್ಲಿ ಸಹಾಯಕವಾಗಿವೆ. 'ದಟ್ಸ್ ಕನ್ನಡ ಪತ್ರಿಕೆ ' ಯ ಸಂಪಾದಕ ವರ್ಗಕ್ಕೆ ನಮಿಸುತ್ತಾ, ತಮ್ಮ ಪತ್ರಿಕೆಯ 'ಹರಿ 'ಯವರ ಸ್ಮರಣೆಯನ್ನು ಹೇಗೆ ಬರೆದಿರುವಿರೋ ಹಾಗೆ ಪ್ರಕಟಿಸುತ್ತಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಮ್ಮೆಲ್ಲರ ಪ್ರೀತಿಯ ಹರಿಯವರ ಬಗ್ಗೆ ನಿನ್ನ ಪತ್ರಿಕೆಯ ಲೇಖಕರು, ಕೊಡುವ ಮಾಹಿತಿಗಳಿಗಿಂತ ಹೆಚ್ಚಾದದ್ದನ್ನು ಯಾರು ಕೊಡಲು ಸಾಧ್ಯ ?  ಆ ನಿಮ್ಮ ಮಾತುಗಳನ್ನು ನನ್ನ ಬ್ಲಾಗ್ ನಲ್ಲಿ ಹಾಗೆಯೇ ಕೊಟ್ಟು ಓದುಗರ್ಯಾದರೂ ಇದ್ದರೆ ಅವರ ಜೊತೆ ಹಂಚಿಕೊಳ್ಳುವ ಆಸೆಯನ್ನು ಪುಷ್ಟೀಕರಿಸುವಿರೆಂದು ನಂಬಲೇ. ಕ್ಷಮೆಯಿರಲಿ. 

-ನಿಮ್ಮ ಪತ್ರಿಯ ಪ್ರತಿದಿನದ ಓದುಗ, ವೆಂಕಟೇಶ್.

ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇದದಲ್ಲಿ ಹೇಳಿದೆ. ಆ ಮಾತುಗಳಂತೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಎಂದು ನಮ್ಮ ಅಂಕಣಕಾರರು  ಹೇಳುತ್ತಿದ್ದಾರೆ. ದಟ್ಸ್ ಕನ್ನಡ ದ ಓದುಗ ವೃಂದದ ಪರವಾಗಿ ಮತ್ತು ಪತ್ರಿಕೆಯ ಸಂಪಾದಕೀಯ  ಬಳಗದ ಪರವಾಗಿ ಶಿಕಾರಿಪುರ ಹರಿಹರೇಶ್ವರ ಅವರಿಗೆ ಹೃತ್ಪೂರ್ವಕ ಶುಭಪ್ರಯಾಣ ಕೋರುತ್ತಿದ್ದೇವೆ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ಮನಸ್ಸಿಗೆ ಹತ್ತಿರವಾದವರೊಬ್ಬರು ಆಸ್ಪತ್ರೆಯ ತೀವ್ರ ಚಿಕಿತ್ಸಾಘಟಕದಲ್ಲಿ ಶುಶ್ರೂಷೆ ಪಡೆಯುತ್ತಿದ್ದರು; ಹೋಗಿ ನೋಡಿ ಬಂದೆ. ಆಗ ಅಪ್ಪಳಿಸಿದ ಯೋಚನಾಲಹರಿಗಳು ದಟ್ಟವಾಗಿ ಕಾಡುತ್ತಿವೆ.

ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದುಹುದೇ? ಎನ್ನುತ್ತದೆ ಒಂದು ಜನಪ್ರಿಯ ಚಿತ್ರಗೀತೆ. ಹೌದು, ಕೊನೆಯ ಅಂಕದ ತೆರೆ ಬಿದ್ದ ಬಳಿಕ ನಾಟಕ ಮುಗಿದಂತೆ; ರಂಗಕರ್ಮಿಗಳು ಕಾಲ್ತೆಗೆಯಲು ಅದು ಹಸಿರು ನಿಶಾನೆ ತೋರಿಸಿದಂತೆ. ನಾಟ್ಯಶಾಸ್ತ್ರದ ಭರತನ ಪ್ರಕಾರ 'ಅ೦ಕ' ಎನ್ನುವುದು ಹತ್ತು ಬಗೆಯ ನಾಟಕಪ್ರಭೇದಗಳಲ್ಲಿ ಒಂದರ ಹೆಸರೂ ಹೌದು. ಬಣ್ಣ ಹಚ್ಚಿಕೊಂಡು ಒಂದು ಭ್ರಾಮಕ ಪ್ರಪಂಚವನ್ನು ಹುಟ್ಟು ಹಾಕಿ ಕುಣಿಯುತ್ತಲೋ ಕುಣಿಸುತ್ತಲೋ ನೋಡುಗರನ್ನ ತಣಿಸುತ್ತ, ಅಥವಾ ಹಾಗೆ ತಣಿಸುತ್ತಿದ್ದೇವೆಂಬ ಹುಸಿ ಹಸಿ ನಂಬುಗೆಯ ಭೃಂಗದ ಬೆನ್ನೇರಿ ಕಲ್ಪನಾವಿಲಾಸದಲ್ಲಿ ಮೈಮರೆತ ಕಲಾವಿದರು ಈಗ ನೇಪಥ್ಯಕ್ಕೆ ಸರಿಯಲೇ ಬೇಕು.

ಆದರೆ, ಈ ಕೊನೆಯ ತೆರೆ ಬೀಳುವುದು ಯಾವಾಗ? ಯಾವಾಗ ಬೇಕಾದರೂ ಬೀಳಬಹುದು. ನಾಟಕ ಬರೆದವರು 'ಅದು ಹೀಗೇ ಇಲ್ಲಿಗೆ ಮುಗಿಯಲಿ' ಎಂದು ಆಶಿಸಿರಬಹುದು. ಜನರಿಗೆ ಏನು ಬೇಕು, ಹೇಗೆ ಬೇಕು, ಎಷ್ಟು ಬೇಕು ಎಂಬುವುಗಳು ತನಗಿಂತ ಬೇರೆ ಯಾರಿಗೆ ಗೊತ್ತು? ಎಂದುಕೊಂಡ ನಿರ್ದೇಶಕ ಕವಿಕಲ್ಪನೆಗೆ ಒಂದು ಹೊಸ ಆಯಾಮವನ್ನು ಕಾಣಿಸುವ ತವಕದಲ್ಲಿ ಇಲ್ಲಿಯೋ ಅಲ್ಲಿಯೋ ಎಲ್ಲಿಯೋ ತುಂಡರಿಸಿ ಬೇಕೆಂದಲ್ಲಿ ಈ ದೃಶ್ಯಕಾವ್ಯವನ್ನ ನಿಲ್ಲಿಸಿಯೂ ಬಿಡಬಹುದು. ಭೋಂಕನೆ ರಂಗವನ್ನೂ, ಜನಾಂತರಂಗವನ್ನೂ, ನಮ್ಮ ಕನ್ನಡದ ಪಂಪಕವಿಯ ಆದಿಪುರಾಣದ ನೀಲಾಂಜನೆ ಮಾಡಿದಂತೆ, ಪ್ರವೇಶಿಸಿ ಅಲೆಯೆಬ್ಬಿಸಿ ಅಲ್ಲೋಲ ಕಲ್ಲೋಲ ಮಾಡಿರುವ ಕಲಾವತಂಸರಿದ್ದಾರೆ.

ಅಭಿಮಾನಿಗಳು ಇನ್ನೂ ಬೇಕು, ಇನ್ನಷ್ಟು ಬೇಕು- ಎಂದು ತಹತಹಿಸುತ್ತಿರುವಾಗಲೇ ಹೂಡಿದ ಹಣದ ನವಿಲುಗರಿಗಳ ಮರಿಗಳ ಸುರಿಮಳೆಯ ಕನಸು ಕಾಣುತ್ತಿರುವ ನಿರ್ಮಾಪಕರ ನಿದ್ದೆಗೆಡೆಸಿ, ಆ ನವಿರುಹಾಸ್ಯದ ಸರಸ ನಟ ಸೈನ್‌ಫೀಲ್ಡ್ ಮಾಡಿದಂತೆ, ಕಲಾವಿದ ತಾನೇ ಸ್ವಯಂ ನಿವೃತ್ತಿ ಘೋಷಿಸಿಕೊಂಡು, ಮೆಲ್ಲಗೆ ರಂಗಮಂಚದಿಂದ ಅಂತರ್ಧಾನನಾಗಲೂಬಹುದು. ಕಿಂಕಾಪಿನ ರಂಗುರಂಗಿನ ವರ್ಣಪಟಲ ತೆರೆ ಮರೆಗೊಂದು ಕಿರುಸಾಧನವೂ ಹೌದು, ಅಪ್ಪಳಿಸಿ ಬರುವ ಅಲೆಯೂ ಹೌದು. ಖುಷಿಯಿಂದ ತಟ್ಟುತ್ತಿದ್ದ ಚಪ್ಪಾಳೆಯ ಕೈಗಳೇ ಕೊಳೆತ ಕಳಿತ ಹಣ್ಣು ಮೊಟ್ಟೆಗಳ ಕ್ಷಿಪಣಿಗಳನ್ನ ವೇದಿಕೆಯತ್ತ ತೂರಿ ಎಸೆಯತೊಡಗಿ ಹಠಾತ್ತನೆ ಅಂಕದ ಪರದೆ ಬಿದ್ದಿತೆಂದರೆ ಅದು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಅಭಿನೇತೃಗಳ ಆತ್ಮರಕ್ಷಣೆಗಾಗಿ. ಹೀಗೆ, ತೆರೆ ಯಾವಾಗ ಬೇಕಾದರೂ ಬೀಳಬಹುದು.

ಕುಳಿತಿದ್ದವರು ಎದ್ದು ಹೋಗತೊಡಗಿದಾಗ ಸಭಾಂಗಣದ ಖಾಲಿ ಕುರ್ಚಿಗಳು ಮುಲುಗಿದಾಗ. ಮೂಕವೇದನೆಯಿಂದ ರಂಗಸಜ್ಜಿಕೆ ಗದ್ಗದಿಸಿದಾಗ ಕಣ್ಣೊರೆಸಲು ಇಳಿಬಿಟ್ಟ ಪರದೆಯ ಸೆರಗಿಗಿಂತ ಬೇರೆ ನೆರವು ಇನ್ನೇನು ಬೇಕು? ಅಡಗಿಕೊಳ್ಳಲು ತೆರೆಯ ಮರೆಯ ಮಡಿಲಿಗಿಂತ ಸುರಕ್ಷಿತ ಬಿಲ ಇನ್ನೆಲ್ಲಿ ಸಿಕ್ಕೀತು? ನಿತ್ಯಜವ್ವನೆ ರಂಗರಮಣಿಯ ಮುಖಾರವಿಂದಕ್ಕೆ ಈ ಸಮಯದಲ್ಲಿ ಮುಸುಕೆನ್ನಿ, ಅವಗುಂಠನವೆನ್ನಿ, ಬುರ್‌ಖಾ ಎನ್ನಿ- ಯವನಿಕೆ ಪರದೆ ಕೆಳಗಿಳಿದು ಬೀಳುತ್ತದೆ. 'ಪರದೇ ಮೇರಹನೇ ದೋ, ಪರದಾ ನ ಉಠಾವೋ' ಎಂದು ಗೋಗರೆಯುವುದು ಈ ಸನ್ನಿವೇಶದಲ್ಲೇ. ಹಿಂದೆಲ್ಲ ಪಾಶ್ಚಾತ್ಯ ರಂಗಭೂಮಿಯಲ್ಲಿ ನಾಟಕಕ್ಕೆ ಮಂಗಳ ಹಾಡುವಾಗ ಸಾಮಾನ್ಯವಾಗಿ ಯಾರಾದರೂ ಒಬ್ಬರು ನಟೀಮಣಿ ವೇದಿಕೆಯ ಮೇಲೆ ಬಂದು ಹಾಡಿಹೋಗುತ್ತಿದ್ದರಂತೆ. ನಮ್ಮ ಕೆಲವು ಸಂಘಗಳಲ್ಲಿ ಖಾಯಂ ಕಾರ್ಯದರ್ಶಿ, ಖಾಯಂ ಅಧ್ಯಕ್ಷರು ಇದ್ದ ಹಾಗೆ. ಬಹುಶಃ ಯಾರೋ ಪ್ರಖ್ಯಾತ ಗಾಯಕಿಯೊಬ್ಬರು ನಿರಂತರವಾಗಿ ಈ ಪಾತ್ರ ವಹಿಸುತ್ತಿದ್ದರೇನೋ. ದಿನ ಕಳೆದಂತೆ, ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳಾದರೂ ಈಕೆಯ ಕಂಠಶ್ರೀಗೆ ಜನ ಮುಗಿಬಿದ್ದಿದ್ದರೇನೋ. ಜನರ ಮೆಚ್ಚುಗೆಯ ಕಡಾಯಿ ತುಂಬುತಿದ್ದಂತೆಯೇ ಈ ಮಹಾಮಾತೆಯ ಗಾತ್ರವೂ ವರ್ಧಿಸುತ್ತಲೇ ಇತ್ತೇನೋ. ಅದಕ್ಕೇ ಬಂದಿರಬೇಕು ಈ ಉದ್ಘೋಷ- ಗುಂಡಮ್ಮನವರು ಬಂದು ಹಾಡಿಹೋಗುವವರೆಗೂ ನಾಟಕ ಮುಗಿಸುವಂತಿಲ್ಲ. (ದ ಷೋ ಈಸ್ ನಾಟ್ ಓವರ್, ಅಂಟಿಲ್ ದ ಫ್ಯಾಟ್ ಲೇಡಿ ಸಿಂಗ್ಸ್!)

ಸಿನೆಮಾ ಮುಗಿದಮೇಲೆಯೂ, ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊನೆಯಲ್ಲಿಯೂ 'ಜನಗಣಮನ' ಕಡ್ಡಾಯವಾಗಿದ್ದ ಕಾಲ ಒಂದಿತ್ತು; ಈಗ ರಾಷ್ಟ್ರಪತಿ/ರಾಜ್ಯಪಾಲರಿಗೆ ಆ ಗೌರವ ಮೀಸಲು. 'ನಾಂದ್ಯಂತೇ ಪ್ರವಿಶತಿ ಸೂತ್ರಧಾರಃ' ಎಂದು ಭಾಸ ಮೊದಲಾದ ನಮ್ಮ ಸಂಸ್ಕೃತ ನಾಟಕಕಾರರು ಪ್ರಾರಂಭದಲ್ಲಿ ಶ್ರೀಗಣೇಶ ಮಾಡುವ ರೀತಿಯಲ್ಲೇ, ಆ ನಾಟಕಗಳ ಸೂತ್ರಧಾರನೋ, ನಿರ್ದೇಶಕನೋ, ಕಂಪನಿ ಮಾಲೀಕನೋ ಕೊನೆಯಲ್ಲಿ ಇತಿಶ್ರೀ ಹೇಳಲು ರಂಗದ ಮೇಲೆ ಕಾಣಿಸಿಕೊಳ್ಳುತ್ತಾನೆ; ಸಾವಧಾನದಿಂದ ನಾಟಕವನ್ನ ನೋಡಿದುದಕ್ಕೆ ಸಭಿಕರಿಗೆ ಥ್ಯಾಂಕ್ಸ್ ಹೇಳುತ್ತಾನೆ. ಈಗ ನಮ್ಮ ಕಾರ್ಯಕ್ರಮಗಳಲ್ಲಿ ಶಾಸ್ತ್ರಕ್ಕಾಗಿಯೋ ಏನೋ ಎನ್ನುವಂತೆ ಮಾಡುತ್ತಿರುವ ವಂದನಾರ್ಪಣೆಯ ಮೂಲ ರೂಪ ಅದು. "ನಮ್ಮ ಈ ಪ್ರಯೋಗಕ್ಕೆ ಆಶ್ರಯವಿತ್ತ ರಾಜ, ಪಾಳೇಗಾರ, ಊರ ಪಟೇಲ ಸುಖವಾಗಿರಲಿ, ಅವನು ಕೈಹಿಡಿದವಳು, ಅವನ ಕೈಯನ್ನು ಹಿಡಿದವಳೂ, ಅವರ ಮಕ್ಕಳು ಮರಿಗಳ ಹೊಟ್ಟೆ ತಣ್ಣಗಿರಲಿ, ಅವನನ್ನೇ ನಂಬಿರುವ ಪ್ರಜೆಗಳಾದ ನಿಮ್ಮ ಮೇಲೆ ಸದಾ ನೆಮ್ಮದಿಯ ಮಳೆಗರೆಯುತ್ತಿರಲಿ" ಎಂದೆಲ್ಲ ಹಾಡುತ್ತಾನೆ. ಇದೇ ಭರತ ವಾಕ್ಯ. ಪಾತ್ರಧಾರಿಗಳೆಲ್ಲರೂ ಒಟ್ಟಿಗೇ ಅರ್ಧಚಂದ್ರಾಕಾರವಾಗಿ ನಿಂತು ಒಟ್ಟಿಗೇ ತಲೆಬಾಗಿ ಸಭಿಕರಿಗೆ ನಮಸ್ಕರಿಸುತ್ತಾರೆ. ಸಭಿಕರು ಕರತಾಡನ ಮಾಡುತ್ತಾರೆ. ಈ ಪರಿಯ ತೆರೆಯ ಕರೆ (ಕರ್ಟನ್ ಕಾಲ್) ಮರುಕಳಿಸುವುದೇ ಒಂದು ಸೊಗಸು. ಅಭಿನಯ ತುಂಬಾ ಖುಷಿತಂದುಕೊಟ್ಟಿತ್ತೆಂದರೆ ನೋಡುಗರೆಲ್ಲ ಎದ್ದುನಿಂತು ಚಪ್ಪಾಳೆ ತಟ್ಟುವುದೂ ಉಂಟು.

ಎಲ್ಲಾ ಕಲಾವಿದರೂ ಸಮಾನವಾಗಿ ಮಿಂಚುತ್ತಾರೆಂದೇನಲ್ಲ. ಒಬ್ಬರು ಮಿಂಚಿದರೆಂದರೂ ಎಲ್ಲಾ ದೃಶ್ಯಗಳಲ್ಲೂ ಅವರು ಒಂದೇ ಪ್ರಮಾಣದಲ್ಲಿ ಮೆರೆದರು ಎನ್ನುವಂತಿಲ್ಲ. ಅಭಿನೇತೃವು ಪ್ರತಿಭಾವಂತನಾದರೂ, ಆ ಪ್ರತಿಭೆ ಕ್ಷಣಕ್ಷಣಕ್ಕೂ ನಿಚ್ಚಂಪೊಸತಾಗಿ ನವನವೋನ್ಮೇಷಶಾಲಿನಿಯಾಗಿ ಬೆಳಗಿದರೂ, ತುತ್ತತುದಿಯ ಪರಾಕಾಷ್ಠೆಗೆ ಮುಟ್ಟಿದ ಆ ಕಿಡಿ ಕೊನೆಗೊಮ್ಮೆ ಆರಲೇಬೇಕು. ಆದಿ ಇದ್ದುದಕ್ಕೆಲ್ಲ ಅಂತ್ಯ ಬಂದೊದಗಲೇಬೇಕು. ಅವತಾರಕ್ಕೂ ಸಹ ಒಂದು ಮಹಾಪ್ರಸ್ಥಾನದ ಅವಕಾಶ ಪುರಾಣಕಾರರು ಒದಗಿಸಿಟ್ಟಿದ್ದಾರೆ. ಸಂದರ್ಶನಕ್ಕೆಂದು ಬಂದ ಜೀವಾತ್ಮ ತನ್ನ ಕೆಲಸ ಮುಗಿದ ಮೇಲೆ ದೇಹವೆಂಬ ಕೊಠಡಿಯಿಂದ ಮೆಲ್ಲಗೆ ಹೊರ ಜಾರಲೇ ಬೇಕು. ಈಗ ಇದ್ದವರು ನಮ್ಮನಗಲಿ ಇನ್ನಿಲ್ಲವಾಗಿ ಹೋದರು- ಎಂದು ತಿಳಿಸಿ ಚರಮಗೀತೆ ಹಾಡುವಾಗ ಅಸುನೀಗಿದರು, ಕೊನೆಯುಸಿರೆಳೆದರು, ನಿಧನರಾದರು, ಪ್ರಾಣಬಿಟ್ಟರು, ತೀರಿಹೋದರು, ಮರಣಹೊಂದಿದರು ಅಥವಾ ನೇರವಾಗಿ ಅವರು ಸತ್ತುಹೋದರು ಎಂದು ಹೇಳಿಬಿಡುತ್ತೇವೆ. ಅಥವಾ ಈ ನೋವಿನ ಕಾರ್ಮುಗಿಲಲ್ಲೂ ಏನೋ ಒಂದು ಬೆಳಕಿನ ಕಿರಣವನ್ನ ಕಾಣುತ್ತಾ ದೈವಾಧೀನರಾದರು, ಸ್ವರ್ಗಸ್ಥರಾದರು, ವೈಕುಂಠವಾಸಿಗಳಾದರು, ಶಿವೈಕ್ಯರಾದರು ಎಂದು ಹೇಳುವುಂದುಟು. ಈ ಬಿಡುಗಡೆಯನ್ನ ಮೋಕ್ಷ, ಮುಕ್ತಿ, ಕೈವಲ್ಯ, ನಿರ್ವಾಣ, ಲಿಂಗೈಕ್ಯತೆ, ಬಯಲಾಗುವುದು, ಸಮಾಧಿ, ಅವನಲ್ಲಿ ಲೀನವಾಗುವುದು- ಹೀಗೆ ಬಣ್ಣಿಸುವುದುಂಟು.

ಹಾಡುಗಾರರು ಪ್ರವಚನಕಾರರು ಮಂಗಳ ಹಾಡದೆ ಕಾರ್ಯಕ್ರಮ ಮುಗಿಸರು. ಬ್ರಹ್ಮರ್ಷಿಗಳು ಶಾಂತಿಮಂತ್ರ ಪಠಿಸಿದರೆಂದರೆ ಜಗತ್ತಿನಲ್ಲೆಲ್ಲ ನೆಮ್ಮದಿಯ ಮಾವಿನಕಾಯಿಗಳು ಉದುರುತ್ತಿದ್ದ ಒಂದು ಕಾಲವೂ ಹಿಂದೆ ಇತ್ತಂತೆ. ಸಂಗೀತದ ಕಛೇರಿಗಳಲ್ಲಿ ಪವಮಾನ ಹಾಡಿದರೆಂದರೆ ಸಂಗೀತವಿದ್ವಾಂಸರು ಕೊನೆಯ ಘಟ್ಟ ಮುಟ್ಟಿದರೆಂದೇ ಅರ್ಥ. ಬೆಳ್ಳಿತೆರೆಯ ಕಿರುತೆರೆಯ ದೃಶ್ಯಾವಳಿಗಳು ಮುಕ್ತಾಯಗೊಳ್ಳುವಾಗ ಮಂಗಳ, ಶುಭಂ- ಹೇಳಿ ಬೀಳ್ಕೊಡುವುದು ಈಗಲೂ ನಮ್ಮ ಸಂಪ್ರದಾಯ. ಪಾಶಾತ್ಯರಲ್ಲಿ 'ಕೊನೆಗೊಂಡಿತು' ಎನ್ನುವುದನ್ನ ಫಿನಿಸ್, ದ ಎಂಡ್- ಎಂದು, ಫಿನಲೆಯೊಂದಿಗೆ ಸೂಚಿಸುತ್ತಾರೆ. ಪಾಶ್ಚಾತ್ಯ ಭಾಷೆಗಳಲ್ಲಿ ಹಿ೦ದೆ ಇದೇ ಪದ್ಧತಿ ಗ್ರಂಥಗಳ ಮುಗಿವಿಗೂ ಬಳಸುತ್ತಿದ್ದರು.

ಮುದ್ರಾಂಕಿತಗಳು ಗೋಚರಿಸಿದವೆಂದರೆ ವಚನಗಳು, ಕೀರ್ತನೆಗಳು, ಮುಕ್ತಕಗಳು ಇನ್ನೇನು ಮುಕ್ತಾಯಗೊಂಡವು ಎನ್ನುವುದರ ಖಚಿತ ಸೂಚನೆ; ಆಕಾಶವಾಣಿಯವರು ಕಾಪಿರೈಟ್ ಯಾರಿಗೆ ಸೇರಿದ್ದು ಎಂದು ಹುಡುಕಿಕೊಂಡು ಹೋಗಬೇಕಿಲ್ಲ. ಹಿಂದಿನ ಕಾಲದಲ್ಲಿ ಸಂಸ್ಕೃತ ಗ್ರಂಥಗಳನ್ನ ಬರೆಯುತ್ತಿದ್ದವರು 'ಪಠ್ಯಭಾಗವು ಮುಕ್ತಾಯಗೊಂಡಿತು' ಎಂಬುದನ್ನ ಇನ್ನೊಂದು ರೀತಿ ಸೂಚಿಸುತ್ತಿದ್ದರು. ಪುಸ್ತಿಕೆಯ ಕೊನೆ ವಾಕ್ಯವನ್ನು ಅಥವಾ ಕೊನೆಯ ಶ್ಲೋಕವನ್ನು ಮೂರುಬಾರಿ ಹೇಳಿದರೆಂದರೆ ಅಲ್ಲಿಗೆ ಗ್ರಂಥ ಮುಗಿಯಿತೆಂದು ಸಂಕೇತ. ಅಲ್ಲಿಂದ ಮುಂದೆ, ಸಾಮಾನ್ಯವಾಗಿ, ಅಭಿಮಾನಿಗಳು ಲಗತ್ತಿಸಿರಬಹುದಾದ 'ವೇದಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನಫಲ'ಗಳೆಲ್ಲ ಫಲಶ್ರುತಿಯ ಬಾಲಂಗೋಚಿಗಳು. ಮಹಾಭಾರತ ಭೀಷ್ಮಪರ್ವಾಂತರ್ಗತ ವಿಷ್ಣುಸಹಸ್ರನಾಮ ಸ್ತೋತ್ರದ ಕೊನೆಯಲ್ಲಿ, 'ವನಮಾಲೀ, ಗದೀ, ಶಾಙ್ಗ, ಶಂಖೀ, ಚಕ್ರೀ, ಚ ನಂದಕೀ....' ಎಂದು ಮೂರು ಬಾರಿ ಪುನರಾವರ್ತನೆ ಮಾಡಿರುವುದು ಅದಕ್ಕಾಗಿಯೇ.

ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇದದಲ್ಲಿ ಹೇಳಿದೆ. ಓಂ ಶಾಂತಿಃ ಶಾಂತಿಃ ಶಾಂತಿಃ ಎನ್ನುವುದಿಲ್ಲವೆ, ಹಾಗೆ. (ತೌರಿಗೆ ಹೋದ ಹೆಂಡತಿ ಬೇಗ ಬರಲೆಂದು "ಹೊರಟು ಬಾ, ಹೊರಟು ಬಾ, ಹೊರಟು ಬಾ" ಎಂದು ಟೆಲಿಗ್ರಾಂ ಕಳುಹಿಸಿದ ಕಥೆ ನೆನಪಿಗೆ ಬರುತ್ತದೆಯೆ? ಅಲ್ಲಿ, ಮೂರು ಸಾರಿ ಹೇಳಿದರೇನೇ ಅವಳು ತನ್ನ ಮಾತು ಕೇಳುವವಳು ಎಂದುಕೊಂಡ ಬಡಪಾಯಿ ಗಂಡ ತೆಗೆದುಕೊಂಡ ಮುಂಜಾಗರೂಕತೆ ಕ್ರಮ ಅದು ಅಷ್ಟೆ.) ಮುಸ್ಲಿಮರಲ್ಲಿ ವಿಚ್ಛೇದನ ಸಿಂಧುವಾಗಬೇಕಾದರೆ 'ತಲಾಕ್ ತಲಾಕ್ ತಲಾಕ್' ಎಂದು ಮೂರು ಬಾರಿ ಹೇಳಬೇಕಂತೆ. ಅಲ್ಲಿಗೆ ಕಳಚಿತು ಅವನ-ಅವಳ ಸಂಬಂಧದ ಮೂರ್ಕಾಲೋಟ.

ಶಬ್ದಮಣಿದರ್ಪಣದ ಸಮಾಪ್ತಿ ವಾಕ್ಯವಾಗಿ ಕೇಶಿರಾಜ ಹೇಳುತ್ತಾನೆ: ತಾನು ನಡೆದುದೆ ಮಾರ್ಗಂ, ಪದವಿಡಲ್ ಒಡರಿಸಿದುದೆ ಭಂಗಿ; ಲೋಕದೊಳ್ [ಈ ಕವಿ]ಗಿದಿರುಂಟೇ? [ತಾನು] ತೊಡಗಿದ ಕೃತಿಗಳೊಳ್ ಆನೆಯ ನಡು ಬಡವೇ? ||338|| ಆನೆಯ ನಡು ಬಡವಾದುದದನ್ನ ಕಂಡವರಿದ್ದಾರೆಯೇ? ಈ ಆನೆ ನಡೆದಿದ್ದೇ ದಾರಿ, ಒಮ್ಮೆ ಇಟ್ಟ ಪದವನ್ನ ಅಳುಹದ ಹೆಗ್ಗಳಿಕೆ, ನಾನೇರುವೆತ್ತರಕೆ ನೀನೆರಬಲ್ಲೆಯಾ? ಇತ್ಯಾದಿ ಆತ್ಮವಿಶ್ವಾಸದ ಪರಾಕಾಷ್ಠತೆಯ ಮಾತುಗಳನ್ನ ಆಡುವ ದಾರ್ಷ್ಟ್ಯ ಉಳ್ಳವರೂ ಇದ್ದಾರೆ. ಅವಧರಿಪುದು ವಿಬುಧರ್ ದೋಷವಿದರೊಳ್ ಏನಾನುಂ ಉಳ್ಳೊಡಂ ಪ್ರಿಯದಿಂ ತಿರ್ದುವುದು; ಗುಣಯುಕ್ತಮುಂ ದೋಷವಿದೂರಮುಂ ಆಗೆ ಮೆಚ್ಚಿ ಕೈಕೊಳ್ವುದಿದಂ||1:4|| ಎಂದು ಕೇಶಿರಾಜನೇ ಇನ್ನೊಂದೆಡೆ ಹೇಳುವಂತೆ, ಸಮರ್ಪಿಸಿದುದನ್ನು ಹಂಸ-ಕ್ಷೀರ ನ್ಯಾಯದಂತೆ ಸ್ವೀಕರಿಸಬೇಕೆಂದು ಗುಣಗ್ರಾಹಿಗಳಲ್ಲಿ ಕೊನೆಯಲ್ಲಿ ವಿನಂತಿಸಿಕೊಳ್ಳುವವರೂ ಇದ್ದಾರೆ. ಮಂಗಳ ಹಾಡುವಾಗ ಈ ಬಗೆಯ ವಿನಯದ ಮಾತುಗಳು ಯಾವ ಕವಿಗಾದರೂ ಶೋಭೆ ತರುವ ವಿಚಾರವೇ ಸರಿ.

'ವಾಚಕ ಮಹಾಶಯರೇ' ಎಂದು ಆರಂಭವಾಗುತ್ತಿದ್ದ ಆ ಕಾಲದ ಕಥನಗಳನ್ನು ಜ್ಞಾಪಿಸಿಕೊಳ್ಳಿ 'ಇಂತು ಎಂಬಲ್ಲಿಗೆ ಇದು ಸಂಪೂರ್ಣಂ' ಎಂದೆಲ್ಲ ಅವು ಕೊನೆಗಾಣುತ್ತಿದ್ದ ಬರೆಹಗಳು. ತಾವು ಹೇಳುವ ಕಾಗಕ್ಕ ಗುಬ್ಬಕ್ಕನ ಕತೆಗೆ ಅನಾಮಕವೆಂದಾದರೂ ಸರಿ, ಮಾನ್ಯತೇ ಸಿಗಲಿ ಎಂಬ ಹಂಬಲವಿದ್ದವರು ಸ್ಕಾಂದಪುರಾಣದ ರೇವಾಖಂಡದಲ್ಲಿ ಸೂತಪುರಾಣಿಕರು ಶೌನಕಾದಿ ಋಷಿಗಳಿಗೆ ಇದನ್ನು ಹೇಳಿದರು ಎಂಬ ಮುಕ್ತಾಯಮುದ್ರೆ(ಕಾಲ್‌ಫನ್) ಅಥವಾ ಮುದ್ರಾಂಕಿತ ಸಮಾಪ್ತಿ ವಚನ ನಮೂದಿಸಿದ್ದರೆ ಸಾಕಿತ್ತು; ಏಕೆಂದರೆ ಅದರಲ್ಲಿ ಇಲ್ಲದ ವ್ರತಕತೆಯಿಲ್ಲ. ಹೀಗೆ 'ಶ್ರೀರಸ್ತು' ಎನ್ನುವಾಗ ತಮಗೆ ಯಾರೋ ಕೊಟ್ಟ ಅಥವಾ ಕೊಟ್ಟರೆ ಚೆನ್ನಾಗಿತ್ತು ಎಂದುಕೊಂಡ ಬಿರುದುಬಾವಲಿ, ಕಾವ್ಯನಾಮಾವಳಿಗಳನ್ನ ಓದುಗರಿಗೆ ನೆನಪಿಸಲು ಇದೊಂದು ಸದಾವಕಾಶ. 'ಅಭಿನವ ಕಪಿಕುಲತಿಲಕನೂ, ಪ್ಲವಂಗ ಕುಲೋತ್ಪನ್ನನೂ, ಅಆಕಖಗಘಹಳ ಬಿರುದಾಂಕಿತನೂ ಆದ ತನ್ನಿಂದ ಶಕವರ್ಷ ಇಷ್ಟಿಷ್ಟರಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಅಮುಕ ಸಂವತ್ಸರದಲ್ಲಿ ವಿರಚಿತಮಪ್ಪ ಈ ಕೃತಿಗೆ ಮಂಗಳಂ'- ಎಂದು ಹೇಳುತ್ತ, ಗ್ರಂಥದ ಒಟ್ಟು ಅಧ್ಯಾಯಗಳು ಪ್ರಕರಣಗಳು, ಪದ್ಯ ಸಂಖ್ಯೆಗಳು ಎಷ್ಟಿವೆ ಎಂಬುದನ್ನ ತಿಳಿಸುವುದು ಒಂದು ಪದ್ಧತಿಯಾಗಿತ್ತು. ಇನ್ನ್ನು ಕೆಲವರು ತಾವೇ ಬರೆದರೂ, ಆಶ್ರಯ ಕೊಟ್ಟ ಛತ್ರಪತಿಯ ಹೆಸರನ್ನ ಠಂಕಿಸಿ ನಮ್ಮ ಶ್ರೀವಿಜಯ ಶತಮಾನಗಳ ನಂತರ ಉದಯಿಸಿದ ಸಂಶೋಧಕರಲ್ಲಿ ಗೊಂದಲವೆಬ್ಬಿಸಿದಂತೆ, ಇಂತು ಪರಮ ಸರಸ್ವತೀ ತೀರ್ಥಾವತಾರ ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗದೊಳ್ ತೃತೀಯ [ಅಂತಿಮ] ಪರಿಚ್ಛೇದಂ ಸಂಪೂರ್ಣಮ್||- ಎಂದು ಕೊನೆಮುಟ್ಟಿಸುತ್ತಾರೆ.

"ಕೊನೆಯಲ್ಲಿ ಹೇಳುವುದೇನೆಂದರೆ" ಎನ್ನುತ್ತಾ ಭಾಷಣದ ಕೊರೆತವನ್ನು ಮುಂದುವರಿಸುವವರ ಮಾತು ಅತ್ತ ಇರಲಿ, ಮುಕ್ತಾಯದ ಬಗ್ಗೆ ಇಂಗ್ಲಿಷಿನಲ್ಲಿ ಇರುವ ಈ ಎರಡು ಸಾರ್ವಕಾಲಿಕ ಸದುಕ್ತಿಗಳನ್ನು ಕೇಳಿ: ಒಂದು: ಸರಿಯಾಗಿ ಕೊನೆಗೊಂಡಿತು ಎಂದರೆ ಅದರ ಒಳಹೊರಗು ಎಲ್ಲಾ ಚೆನ್ನಾಗಿದೆ ಅನ್ನುವುದರ ಲಕ್ಷಣ (ಆಲ್ ಈಸ್ ವೆಲ್ ದಟ್ ಎಂಡ್ಸ್ ವೆಲ್). ಇನ್ನೊಂದು: ಚೆನ್ನಾಗಿರುವುದೆಲ್ಲ ಒಂದಲ್ಲಾ ಒಂದು ದಿನ ಕೊನೆಗೊಳ್ಳಲೇ ಬೇಕು (ಆಲ್ ಗುಡ್ ಥಿಂಗ್ಸ್ ಶುಡ್ ಕಂ ಟು ಆನ್ ಎಂಡ್).*

ವಿಳಾಸ :

ನಂ. 4, 3ನೇ ಮುಖ್ಯರಸ್ತೆ, 5ನೇ ಅಡ್ದರಸ್ತೆ, ಸರಸ್ವತೀಪುರಂ, ಮೈಸೂರು-570 009; ಫೋನ್: 0821-2544841

[[http://thatskannada.oneindia.in/column/sham/2008/0919-farewell-to-shikaripura-harihareshwara.html]]

Friday, July 23, 2010

Thursday, July 15, 2010

”ಬೆಡಗಿ ಶಾಕಿರಾ’ ರವರ ಅಭಿನಯದೊಂದಿಗೆ ಹಾಡಿದ, "ವಾಕಾ..ವಾಕಾ." ಗೀತೆಯೊಂದಿಗೆ, "ಪುಟ್ಬಾಲ್ ವಿಶ್ವಕಪ್-ಕ್ರೀಡಾ-ಮಹಾಮೇಳ " ದ, ಕಾಮನಬಿಲ್ಲಿನ ರಂಗು-ರಂಗಿನ ತೆರೆ ಮೇಲೇರಿತು !

"ಜರ್ಮನಿಯ ಯುವ ಕಾಲ್ಚೆಂಡಾಟದ ತಾರೆ, ಥಾಮಸ್ ಮುಲ್ಲರ್"  ತಮ್ಮ ದೇಶ ’ವಿಶ್ವ ಕಪ್ ’ ಗೆಲ್ಲದಿದ್ದರೂ,  "ಗೋಲ್ಡನ್ ಬೂಟ್  " ಪ್ರಶಸ್ತಿಯನ್ನು  ಗಳಿಸಿ, ಜರ್ಮನಿಯ ಜನತೆಗೆ ಮುದುನೀಡಿದ ಸುಂದರ ಕ್ಷಣ  !
ಕಳೆದ ಒಂದು ತಿಂಗಳ ಕಾಲ, ದಕ್ಷಿಣ ಆಫ್ರಿಕದ ಹಾಗೂ ವಿಶ್ವದ ಫುಟ್ಬಾಲ್ ಅಭಿಮಾನಿಗಳನ್ನು ವಿಸ್ಮಯ ಲೋಕದಲ್ಲಿ ವಿಹರಿಸುವಂತೆ ಮಾಡಿದ ವಿಶ್ವಕಪ್ ಟೂರ್ನಮೆಂಟ್ ಗೆ ಭಾನುವಾರ ಮಧ್ಯರಾತ್ರಿ ತೆರೆಬಿತ್ತು. ಕೂಟವನ್ನು ಯಶಸ್ವಿಯಾಗಿ  ಆಯೋಜಿಸಿ ಕ್ರೀಡೆಗಳೆಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಂಡುಬಂದ  ದಕ್ಷಿಣ ಆಫ್ರಿಕಾದ ಪದಾಧಿಕಾರಿಗಳು  ಎಲ್ಲರಿಗೂ ಮಾದರಿಯಾಯಿತು.
ಜೋಹಾನ್ಸ್‌ಬರ್ಗ್, ಹಾಲೆಂಡ್- ಸ್ಪೇನ್ ನಡುವಿನ ಫೈನಲ್ ಪಂದ್ಯಕ್ಕೆ ಮುನ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಕೂಟಕ್ಕೆ ತೆರೆಬಿತ್ತು. ಕೊಲಂಬಿಯದ ಗಾಯಕಿ ಶಕೀರಾ ಅವರು ’ಟೂರ್ನಿಯ ಅಧಿಕೃತ ಗೀತೆ "ವಾಕಾ.. ವಾಕಾ..." ಹಾಡುವ ಮೂಲಕ ಲಕ್ಷಾಂತರ ಕಾಲ್ಚೆಂಡಿನಾಟದ ರಸಿಕರಲ್ಲೆರ  ಗಮನ ಸೆಳೆದರು.
ಸಾಂಸ್ಕೃತಿಕ ಸಮಾರಂಭದಲ್ಲಿ ಆಫ್ರಿಕಾದ ಸಾಂಪ್ರದಾಯಿಕ ಹಾಗೂ ಸಮಕಾಲೀನ ಸಂಗೀತ, ನೃತ್ಯದ-ಮಿಶ್ರಣ ಕಾಣಬಹುದಿತ್ತು. ಒಂದು ರೀತಿಯಲ್ಲಿ ಆಫ್ರಿಕಾದ ಸಂಪ್ರದಾಯವನ್ನು ಆಧುನಿಕ ರೀತಿಯಲ್ಲಿ ಅನಾವರಣಗೊಳಿಸಲಾಯಿತು,ಎನ್ನಬಹುದೇನೋ !.
’ಲೇಡಿ ಸ್ಮಿತ್ ಬ್ಲಾಕ್ ಮಂಬಾಜೊ ’ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. 780 ಕ್ಕೂ ಅಧಿಕ ಸಂಗೀತಕಾರರು ಮತ್ತು ಕಲಾವಿದರು ಇದರಲ್ಲಿ ಪಾಲ್ಗೊಂಡರು. ಜಗತ್ತಿನಾದ್ಯಂತ ೫೦೦ ದಶಲಕ್ಷಕ್ಕೂ ಅಧಿಕ ಮಂದಿ ಸಮಾರೋಪ ಸಮಾರಂಭವನ್ನು ಟಿವಿ ಮೂಲಕ ವೀಕ್ಷಿಸಿದರು.  ಒಂದು ತಿಂಗಳ ಕಾಲ ನಡೆದ ಟೂರ್ನಿಯಲ್ಲಿ ೩೨ ಬಲಾಢ್ಯ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. ಈ "ಮಹಾಮೇಳ"ದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಸಂಘಟಕರ ಮುಖದಲ್ಲಿ ಮಂದಹಾಸ ಕಾಣಬಹುದಿತ್ತು.
ಫೈನಲ್ ಪಂದ್ಯದ ವೇಳೆ ಸಾಕರ್‌ಸಿಟಿ ಕ್ರೀಡಾಂಗಣದಲ್ಲಿ ಗಣ್ಯರ ದಂಡೇ ನೆರೆದಿತ್ತು. ವಿಶ್ವದ ೧೭ ದೇಶಗಳ ಅಧ್ಯಕ್ಷರು ಹಾಜರಿದ್ದರು. ಅದೇ ರೀತಿ ’ನೊಬೆಲ್ ಪ್ರಶಸ್ತಿ ವಿಜೇತರು”, ’ಹಾಲಿವುಡ್ ತಾರೆಯರೂ ’ ಇದ್ದರು.”ಸ್ಪೇನ್ ರಾಣಿ ಸೋಫಿಯಾ ’ ಮತ್ತು”ಮೊನಾಕೊದ ರಾಜ ಆಲ್ಬರ್ಟ್ ’ ಪಂದ್ಯ ವೀಕ್ಷಿಸಿದರು.
ಆಫ್ರಿಕಾದ ಜನತೆ ಹೀರೋಗಳು: ಆಫ್ರಿಕಾ ಖಂಡದ ಮೊದಲ ವಿಶ್ವಕಪ್ ಟೂರ್ನಿಯ ನಿಜವಾದ ಹೀರೊ ಮತ್ತು ಚಾಂಪಿಯನ್ನರು "ದಕ್ಷಿಣ ಆಫ್ರಿಕಾದ ಜನತೆ" ಎಂದು ದೇಶದ ಅಧ್ಯಕ್ಷ ಜೇಕಬ್ ಜುಮಾ ಹೇಳಿದ್ದಾರೆ.
"ಈ ಟೂರ್ನಿಯ ಆತಿಥ್ಯದ ಹಕ್ಕು ಲಭಿಸಿದಾಗ ನಮಗೆ ಒಂದು ವಿಚಾರ ಸ್ಪಷ್ಟವಾಗಿತ್ತು. ಅದೇನೆಂದರೆ, ಎಲ್ಲರೂ ಒಟ್ಟಾಗಿ ಶ್ರಮವಹಿಸಿದರೆ ಟೂರ್ನಿ ಯಶಸ್ವಿಯಾಗಬಹುದು ಎಂಬ ವಿಚಾರ ನಮಗೆ ತಿಳಿದಿತ್ತು. ನಾವು ಅದನ್ನೇ ಮಾಡಿದ್ದೇವೆ. ಫೈನಲ್ ಸಮರ  ಪಂದ್ಯ, ಯೂರೋಪಿನ   ಎರಡು ಮಹಾಟೀಮ್ ಗಳಮಧ್ಯೆ  ಬಿರುಸಿನಿಂದ ಪ್ರಾರಂಭವಾಯಿತು. ಎಲ್ಲರ ಕಣ್ಣಿನಲ್ಲಿಯೂ ಆತಂಕ, ತವಕ, ಏನಾಗುತ್ತದೋ ಯಾವ ಬಣಕ್ಕೆ ವಿಜಯಲಕ್ಷ್ಮಿ ವರಮಾಲೆ ತೊಡಿಸುವಳೋ ಎಂದು ಎವೆಯಿಕ್ಕದೆ, ನೋಡುತ್ತಿದ್ದರು. ವಿಶ್ವಕ ಬಿಲಿಯನ್ ಗಟ್ಟಲೆ ವೀಕ್ಷಕರು, ತಮ್ಮ ತಮ್ಮ ಮನೆಯ ಟೆಲಿವಿಶನ್ ಪೆಟ್ಟಿಗೆಗಳಿಗೆ ಕಚ್ಚಿಕೊಂಡಿದ್ದು, ಅನ್ನ-ನೀರು, ಮದ್ಯಸೇವನೆಗಳನ್ನು ಮಾಡುತ್ತಾ ಆಟದ ಸವಿಯನ್ನು ಅನುಭವಿಸುತ್ತಿದ್ದರು. ನಿಜಕ್ಕೂ ಕಾಲ್ಚೆಂಡಿನಾಟ ವಿಶ್ವದ ಒಂದು ಸುಂದರ ಆಟವಾಗಿ ಪರಿಣಮಿಸಿತ್ತು. ಒಂದು ತಿಂಗಳು ಕಳೆದದ್ದೇ ಯಾರಿಗೂ ಗೊತ್ತಾಗಲೇ ಇಲ್ಲ !
ಸಾಕಷ್ಟು ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾದ ವಿಶ್ವಕಪ್-ಪಂದ್ಯದ  ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲುಗಳಿಸಲು ವಿಫಲವಾದವು.  ಪಾಸ್-ಕೊಟ್ಟು, ಪಾಸ್-ಪಡೆದು, ಚೆಂಡನ್ನು ಸಾಗಿಸಿಕೊಂಡು ಹೋಗುವ ಪರಿ ಸ್ಪಾನಿಯರ್ಡ್ ಗಳದ್ದಾದರೆ, ರಭಸದಿಂದ ಚೆಂಡನ್ನು ನೇರವಾಗಿ ಹೆಚ್ಚು ಪಾಸಿನ ಸಹಾಯವಿಲ್ಲದೆ, ಮಿಂಚಿನಿಂದ ಮುನ್ನುಗ್ಗುವುದು, ಡಚ್ ರ ರಣನೀತಿಯಾಗಿತ್ತು. ಈ ತರಹದ ಒರಟಾಟಕ್ಕೆ ಡಚ್ ತಂಡ ತೆರಬೇಕಾದ ದಂಡ, ೯ ಯೆಲ್ಲೊ ಕಾರ್ಡ್ ಗಳು, ಹಾಗೂ ಒಂದು ರೆಡ್ ಕಾರ್ಡ್ ಸಹಿತ ! ಸ್ಪಾನಿಯರ್ಡ್ ಗಳು ಪಡೆದದ್ದು ೫ ಯೆಲ್ಲೊಕಾರ್ಡ್. ಅದರಲ್ಲಿ ಇನೀಸ್ತಾರವರು ವಿನ್ನಿಂಗ್ ಗೋಲ್ ಥಳಿಸಿದ ಬಳಿಕ ಆದ ಹರ್ಷೋಲ್ಲಾಸದಲ್ಲಿ, ತಮ್ಮ ಜರ್ಸಿಯನ್ನು ತೆಗೆದರು. ರೆಫ್ರಿ, ವೆಬ್ ರವರು, ತಕ್ಷಣ ಯೆಲ್ಲೊ ಕಾರ್ಡ್ ನ್ನು ಗೀಚಿ ಕೊಟ್ಟೇಬಿಟ್ಟರು !  ಇದು ಫುಟ್ಬಾಲ್ ಕಾನೂನಿಗೆ ವಿರುದ್ಧವಾಗಿದ್ದು ಅವರ ಗಮನಕ್ಕೆ ಬರಲಿಲ್ಲ. ಬಂದರೂ ಅದನ್ನು ಅವರು ನಿರಾಕರಿಸುತ್ತಿದ್ದರು ! ಹೀಗೆ ಸ್ವಲ್ಪ, ಗುದ್ದಾಟ, ಎಗರಾಟ, ಚೀರಾಟ, ಮಾತಿನ ಚಕಮಕಿ, ಮತ್ತೆ ಬಿರುಸಿನ ಆಟದ ಸಮಯದಲ್ಲಿ ಅರಿವಿಲ್ಲದೆ ಸ್ಪೇನ್ ಆಟಗಾರನಿಗೆ ಎದೆಗೆ ಒದ್ದ ಹಾಲೆಂಡ್ ಆಟಗಾರನ ಒರಟುತನದ ಪ್ರದರ್ಶನ, ಇತ್ಯಾದಿಗಳು ಫೈನಲ್ ಪಂದ್ಯದ ಕೆಲವು ರೋಚಕ ಸನ್ನಿವೇಶಗಳಾಗಿದ್ದವು. ಎರಡು ಮಹಾರಥಿಗಳೂ, ಅರ್ಥಸಮಯದ ಹೊತ್ತಿನಲ್ಲಿ, ಒಂದು ಗೋಲನ್ನೂ ಹೊಡೆಯದೆ ಸೆಣೆಸಿದರು. 
ಸಹಜವಾಗಿ, ವಿಶ್ವ ಚಾಂಪಿಯನ್ನರ ನಿರ್ಣಯಕ್ಕೆ ಹೆಚ್ಚುವರಿ ಅವಧಿಯ ಮೊರೆಹೋಗಲಾಯಿತು.  ಅದು ೧೧೬ ನೆ ನಿಮಿಷ. ೧೯ ನೇ ವಿಶ್ವಕಪ್ ಪ್ರಶಸ್ತಿಯನ್ನು ಯೂರೋಪಿಯನ್ ಚಾಂಪಿಯನ್ನಾಗಿರುವ  ಸ್ಪೇನ್‌ ಟೀಮ್  ಗೆ ವಿಶ್ವಕಪ್ ನಲ್ಲಿ  ಗೋಲು ದಾಖಲಾದ ಅತಿಸುಂದರ ಕ್ಷಣ !  ಆ ಗೋಲಿಗೆ ಹಾದಿಯೊದಗಿಸಿದ್ದು ’ಸೆಸ್ ಫ್ಯಾಬ್ರೆಗಾಸ್,” ಅದುವರೆಗೂ ಒಂದಲ್ಲ ಒಂದು ರೀತಿಯಲ್ಲಿ ತಡೆಯೊಡುತ್ತಿದ್ದ ಹಾಲೆಂಡ್ ಡಿಫೆಂಡರ್‌ಗಳನ್ನು ಸಮರ್ಥವಾಗಿ ತಪ್ಪಿಸಿದ, ಬದಲಿ ಆಟಗಾರನಾಗಿ ಕ್ರೀಡಾಂಗಣಕ್ಕೆ ಆಗಮಿಸಿದ್ದ  ಫ್ಯಾಬ್ರೆಗಾಸ್ ಚೆಂಡನ್ನು ಇನೀಸ್ತಾಗೆ ಪಾಸ್ ಮಾಡಿದರು.
ಬಲಗಾಲಲ್ಲಿ ಝಾಡಿಸಿ ಒದ್ದ ಇನೀಸ್ತಾರ ವೇಗದ ಹೊಡೆತದ  ಚೆಂಡು, ಡಚ್ ಗೋಲ್‌ಕೀಪರ್ ಮಾರ್ಟಿನ್ ಸ್ಟೆಕೆಲೆನ್‌ಬರ್ಗ್ ಅವರನ್ನು ದಾಟಿ ನೇರವಾಗಿ ಗೋಲ್‌ಪೋಸ್ಟ್ ಸೇರಿತು. ಸ್ಪೇನ್ ಆಟಗಾರರ, ಸಮರ್ಥಕರ, ಮತ್ತು ಅಭಿಮಾನಿಗಳ ಸಂಭ್ರಮೋಲ್ಲಾಸಗಳ ಕೆರೆಯ ಕಟ್ಟೆಯೊಡೆದ ಮಿಂಚಿನ ನಿಮಿಷವಾಗಿತ್ತು ! !  ಅದಾದ ನಾಲ್ಕು ನಿಮಿಷಗಳ ಬಳಿಕ ಇಂಗ್ಲೆಂಡ್‌ನ ರೆಫರಿ ಹಾವರ್ಡ್ ವೆಬ್ ಅಂತಿಮ ವಿಷಲ್ ಮೊಳಗಿಸಿದರು. ಸ್ಪೇನ್ ಆಟಗಾರರು ಪರಸ್ಪರ ಒಬ್ಬರನ್ನೊಬ್ಬರು, ಆಲಿಂಗಿಸಿ, ಮುತ್ತಿ, ಸಂಭ್ರಮಿಸಿದರೆ, ನೆದರ್ಲ್ಯಾಂಡ್ ತಂಡದವರು ಉದ್ವೇಗ ಸೋಲಿನ ಅವಮಾನದಿಂದ ಕಂಗೆಟ್ಟು ರೋಸಿಹೋಗಿದ್ದರು.
ಇನೀಸ್ತಾ ಒಂದೇ ರಾತ್ರಿಯಲ್ಲಿ  ತಾವು ಬಾರಿಸಿದ ಒಂದೇ ಒಂದು ಗೋಲಿನಿಂದ ವಿಶ್ವಕಪ್ ಸ್ಟೇಡಿಯಂ ನಿಂದ ಹೊರಬಂದಾಗ ಒಬ್ಬ ಪ್ರವಾದಿ, ಅಥವಾ ’ವಿಶ್ವ ಹೀರೊ’ ವಿನಂತೆ ಜನರಿಗೆ ಕಂಡರು. "ಪಂದ್ಯಶ್ರೇಷ್ಠ" ಎನಿಸಿಕೊಂಡ ಸ್ಪೇನ್ ಫುಟ್‌ಬಾಲ್‌ನ ದಂತಕತೆಯಾಗಿ ಬದಲಾದರು. "ಕಾಲ್ಚೆಂಡಾಟದ ವಿಶ್ವಕಪ್ ಮಹಾಮೇಳ,  ನಮ್ಮ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದೆ" ಎಂದು 'ಜುಮಾ'  ನುಡಿದಿದ್ದಾರೆ.

'ವಕ ವಕ ಹಾಡು'



Give me freedom, give me fire, give me reason, take me higher

See the champions, take the field now, you define us, make us feel proud

In the streets are, exaliftin , as we lose our inhabition,

Celebration its around us, every nation, all around us

Singin forever young, singin songs underneath that sun

Lets rejoice in the beautiful game.

And together at the end of the day




You're a good soldier
Choosing your battles
Pick yourself up
And dust yourself off
Get back in the saddle

You're on the front line
Everyone's watching
You know it's serious
We are getting closer
This isn't over

The pressure is on
You feel it
But you got it all
Believe it

When you fall get up, oh oh
If you fall get up, eh eh
Tsamina mina zangalewa
Cuz this is Africa
Tsamina mina, eh eh
Waka waka, eh eh
Tsamina mina zangalewa
This time for Africa

Listen to your God
This is our motto
Your time to shine
Don't wait in line
Y vamos por todo

People are raising
Their expectations
Go on and feed them
This is your moment
No hesitations

Today's your day
I feel it
You paved the way
Believe it

If you get down get up, oh oh
When you get down get up, eh eh
Tsamina mina zangalewa
This time for Africa
Tsamina mina, eh eh
Waka waka, eh eh
Tsamina mina zangalewa
Anawa a a
Tsamina mina, eh eh
Waka waka, eh eh
Tsamina mina zangalewa
This time for Africa

Awela Majoni Biggie Biggie Mama One A To Zet
Athi sithi LaMajoni Biggie Biggie Mama From East To West
Bathi . . . Waka Waka Ma Eh Eh Waka Waka Ma Eh Eh
Zonke zizwe mazi buye
Cuz this is Africa

Voice: Tsamina mina, Anawa a a
Tsamina mina
Tsamina mina, Anawa a a

Tsamina mina, eh eh
Waka waka, eh eh
Tsamina mina zangalewa
Anawa a a
Tsamina mina, eh eh
Waka waka, eh eh
Tsamina mina zangalewa
This time for Africa

Django eh eh
Django eh eh
Tsamina mina zangalewa
Anawa a a

Django eh eh
Django eh eh
Tsamina mina zangalewa
Anawa a a

(2x) This time for Africa

(2x) We're all Africa.....

Some interesting facts about this most popular song :

Columbian singer, 'Shakira,'  and 'Band Freshly Ground' (SA) jointly sang the song, in English and Spanish as well. This particular song is about the Traditional African Soldier named,  'ZANGALEWA', Sung on Pre-Tournament kick off, time, at 'The  Concert in 'Soweto'  on 10th, June, and the closing ceremony on 11, July, 2010, at  'Johannesburg',  as well !

The money spent for the Tournament before starting of Game :

* Total money was, 420 million Dollars. (Including the payments made  to Domestic clubs, of 40 million Dollars)
* The  money spent is,  more than  60%  increase,  since,  '2006 World Cup Event'. Before the Tournament started, each of The 32 Teams were given,  1 million Dollars,  as  'the preparation  cost'.