
ಗಾಚಾರ್ಯ ಪೂಜ್ಯ ಶ್ರೀ. ಬಿ.ಕೆ.ಎಸ್.ಐಯ್ಯಂಗಾರ್ ಸುಮಾರು ೭೦ ವರ್ಷಗಳಿಂದ ಪತಾಂಜಲಿ ಬಾಲ್ಯದ ಅನಾರೋಗ್ಯದಿಂದ ಧೃತಿಗೆಡದೆ ಯೋಗಾಭ್ಯಾಸದಿಂದ ಭೀಮಕಾಯರಾಗಿ ಜಗತ್ತಿನ ಲಕ್ಷಾಂತರ ಜನರ ಜೀವನವನ್ನು ಸದೃಢಗೊಳಿಸಲು ಸದಾ ಪ್ರಯತ್ನಶೀಲರಾಗಿದ್ದ ಶ್ರೀ. ಯೋಗವಿದ್ಯೆಯಲ್ಲಿ ಅತ್ಯಂತ ವಿಧಿವತ್ತಾಗಿ ಮತ್ತು ವೈಜ್ಞಾನಿಕವಾಗಿ ಭಾರತ ಹಾಗೂ ವಿಶ್ವದ ಜನರಿಗೆ ಭೋಧಿಸುತ್ತ ಬಂದ ಶ್ರೀ .ಕೆ.ಎಸ್.ಐಯ್ಯಂಗಾರ್ ಪುಣೆಯಲ್ಲಿ ರಿಗೆ ಈಗ ೯೦ ವರ್ಷ ವಯಸ್ಸು. ಅವರು ಜಗತ್ತಿನ ೪೦ ರಾಷ್ಟ್ರ ಗಳಲ್ಲಿ ೧೮೦ ಯೋಗ ಕೆಂದ್ರಗಳನ್ನು ಸ್ಥಾಪಿಸಿದ್ದು, ಸುಮರು ೨,೦೦೦ ನುರಿತ ಯೋಗಾ ಶಿಕ್ಷಕರು ಯೊಗದ ಮಹತ್ವವನ್ನು ಪ್ರಚಾರ ಮಾಡುವುದರ ಮೂಲಕ ಅವರ ಸಂದೇಶವನ್ನು ಜೀವಂತವಾಗಿಟ್ಟಿದ್ದಾರೆ. ಅವರಿಗೆ ಗೀತ, ವಿನಿತ, ಸುಚಿತ, ಸುನಿತ, ಸವಿತ ಎನ್ನುವ ೫ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಪ್ರಶಾಂತ್. ಈಗ ಅವರ ಮಗ ಶ್ರೀ ಪ್ರಶಾಂತ್ ಮತ್ತು ಮಗಳು ಶ್ರೀಮತಿ ಗೀತ ಅವರ ಯೋಗಾಧ್ಯಯನ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಬೇಲ್ಲೂರ್ ಕೃಷ್ಣಮಾಚಾರ್ ಸುಂದರ್ ರಾಜ ಐಯ್ಯಂಗಾರ್ ಡಿಸೆಂಬರ್ ೧೪, ೧೯೧೮ ರಲ್ಲಿ ಜನಿಸಿದರು. ಅವರ ತಂದೆ ಶ್ರೀ ಕೃಷ್ಣಮಾಚಾರ್ ಶಿಕ್ಷಕ. ತಾಯಿ ಶೇಷಮ್ಮ. ೯ ನೇ ವಯಸ್ಸಿನಲ್ಲೇ ತಂದೆಯ ಮರಣ. ಬಾಲ್ಯದಲ್ಲಿ ಇನ್ಫ್ಲೂಯೆಂಝಾ, ಟೀ.ಬಿ ರೋಗಗಳಿಂದ ನರಳುತ್ತಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಅವರಿಗೆ ಪೌಷ್ಟಿಕ ಆಹಾರದ ಕೊರತೆ ಸದಾ ಕಾಡುತ್ತಿತ್ತು. ತಮ್ಮ ೧೫ ನೇ ವಯಸ್ಸಿನಲ್ಲಿ ಮೈಸೂರಿಗೆ ಹೋಗಿ ಅವರ ಗುರುಗಳಾದ ತಿರುಮಲೈ ಕೃಷ್ಣಮಾಚಾರ್ (೧೮೮೮-೧೯೮೯) ಮನೆಯಲ್ಲೇ ಇದ್ದುಕೊಂಡು ಯೋಗಾಭ್ಯಾಸ ಮಾಡಿದರು.ಅವರ ಆರೋಗ್ಯ ಗಮನಾರ್ಹವಾಗಿ ಉತ್ತಮಗೊಂಡಿತು. ಅವರ ಗುರುಗಳ ಆದೇಶದಂತೆ ೧೯೩೭ ರಲ್ಲಿ ಪುಣೆಗೆ ಬಂದು ನೆಲೆಸಿದರು.೧೯೪೩ ರಲ್ಲಿ ರಮಾಮಣಿಯವರ ಜೊತೆಗೆ ವಿವಾಹ. ಪತ್ನಿಯ ಅಕಾಲ ಮರಣದಿಂದ ಅವರಿಗೆ ಬಹಳ ಸಂಕಟವಾಯಿತು. ೧೯೭೫ ರಲ್ಲಿ ಆಕೆಯ ಹೆಸರಿನಲ್ಲಿ* Ramamani Iyengar Memorial Yoga Institute (RIMYI) ('ರಮಾಮಣಿ ಐಯ್ಯಂಗಾರ್ ಮೆಮೋರಿಯಲ್ ಯೊಗ ಇನ್ಸ್ಟಿಟ್ಯೂಟ್ ' ) ( RIMYI) ನ್ನು ಪುಣೆಯಲ್ಲಿ ಸ್ಥಾಪಿಸಿದರು. ಸಾವಿರಾರು ಜನರಿಗೆ ಯೋಗವಿದ್ಯೆಯನ್ನು ಧಾರೆಯೆರೆದರು.
೧೯೫೦ ರಲ್ಲಿ ಪ್ರಪ್ರಥಮವಾಗಿ ಯೋಗದ ಪ್ರಭಾವ ವನ್ನು ವಿದೇಶದಲ್ಲೂ ಸಾರಿದ 'ಪ್ರಥಮ'ರೆಂದು ಹೆಸರಾದರು. ಅವರಿಗೆ ದಾರಿದೀಪವಾದವರು, ವಿಶ್ವದ ಪ್ರಖ್ಯಾತ ಪಿಟೀಲ್ ವಾದಕ, ಶ್ರೀ ಯೆಹೂದಿ ಮೆನ್ಹನ್ ರವರು. ೧೯೫೨ ರಲ್ಲಿ ಮೆನ್ ಹನ್ ರವರು ಐಯ್ಯಂಗಾರ್ ರವರನ್ನು ಲಂಡನ್, ಪ್ಯಾರಿಸ್, ಸ್ವಿಟ್ಜರ್ ಲ್ಯಾಂಡ್ ನ ಪ್ರೇಕ್ಷಕರಿಗೆ ಪರಿಚಯಿಸಿದರು. ಅಲ್ಲಿಂದ ಪ್ರಾರಂಭವಾದ ಅವರ ಯಶಸ್ಸು ನಿರಂತರವಾಗಿ ಬೆಳೆಯುತ್ತಲೇ ಹೊಯಿತು. ೧೯೫೬ ರಲ್ಲಿ ಅವರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಭೇಟಿಕೊಟ್ಟರು. ಯೊಗದ ಬಗ್ಯೆ ಅವರಿಗಿದ್ದ ಉತ್ಕಟ ಆಸಕ್ತಿ, ಪರಿಶ್ರಮ, ಹಾಗೂ ಸಂಪಾದಿಸಿದ ಅಪಾರಜ್ಞಾನದಿಂದ ಅಲ್ಲಿನ ಜನರ ಮನವನ್ನು ಗೆದ್ದರು. ಎಲ್ಲಿ ನೋಡಿದರೂ ಹೊಸ ಹೊಸ ಯೋಗ ಶಿಕ್ಷಣ ಶಿಬಿರ/ಕೇಂದ್ರಗಳನ್ನು ತೆರೆಯಲು ಒತ್ತಾಯ ಬಂತು.
೧೯೮೪ ರಲ್ಲಿ ಅಯ್ಯಂಗಾರ್ ತಾವೇ ಯೋಗಪ್ರದರ್ಶನ ಮಾಡಿ ತೋರಿಸುವುದನ್ನು ನಿಲ್ಲಿಸಿದರು. ಯುವ ಜನರನ್ನು ತಯಾರುಮಾಡಿದ್ದರಿಂದ ಅವರೇ ಆ ಕೆಲಸವನ್ನು ಮಾಡಬೇಕಾಗಿರಲಿಲ್ಲ. ಅವರು ಬರದ ಪುಸ್ತಕಗಳಸಂಖ್ಯೆ ೧೫ ಕ್ಕಿಂತ ಹೆಚ್ಚು. ೧೯೬೬ ರಲ್ಲೇ ಅವರ ಪ್ರಥಮ ಪುಸ್ತಕ ' Light on Yoga' 'ಲೈಟ್ ಆನ್ ಯೋಗ', ೧೭ ಭಾಷೆಗಳಲ್ಲಿ ತರ್ಜುಮೆಗೊಂಡು ಸುಮಾರು ೧೦ ಲಕ್ಷ ಪ್ರತಿಗಳು ಮಾರಾಟವಾದವು ! ೨೦೦೪ ರಲ್ಲಿ ಇತ್ತೀಚೆಗೆ ಪ್ರಕಟಗೊಂಡ Light on Life' ('ಲೈಟ್ ಆನ್ ಲೈಫ್') ಅವರ ಸಮಗ್ರ ವ್ಯಕ್ತಿತ್ವ, ಸಾಧನೆಗಳ ಧಾಖಲೆಗಳನ್ನೊಳಗೊಂಡ ವಿಶೇಷ ಕೃತಿ. 'ನ್ಯುಯಾರ್ಕ್ ಟೈಮ್ಸ್' ಅವರ ಬಗ್ಯೆ ಬರೆಯುತ್ತಾ 'ಯೊಗವನ್ನು ಅತಿ ಗಹನವಾಗಿ ಅಭ್ಯಸಿಸಿ, ಅತ್ಯಂತ ಸಮರ್ಥವಾಗಿ ಬರೆದು ಪ್ರಚುರಪಡಿಸಿದ ವಂತವ್ಯಕ್ತಿಗಳಲ್ಲೊಬ್ಬ'ರೆಂದು ವರ್ಣಿಸಿತು. 'ಟೈಮ್ಸ್' ಪತ್ರಿಕೆ 'ಪ್ರಪಂಚದ ಅತಿ ಹೆಚ್ಚು ಜನರಮೇಲೆ ಪ್ರಭಾವ ಬೀರಿದ ೧೦೦ ಪ್ರತಿಭಾನ್ವಿತ ವ್ಯಕ್ತಿಗಳಲ್ಲೊಬ್ಬರೆಂದು' ಶ್ಲಾಘಿಸಿತು.
ಬಿ.ಕೆ.ಎಸ್ ಅಯ್ಯಂಗಾರ್ ಜಗತ್ತಿನಲ್ಲೇ ಪ್ರಥಮವಾಗಿ 'ಪತಾಂಜಲಿ ಮಹರ್ಷಿ'ಗಳ ದೇವಸ್ಥಾನವನ್ನು ೨೦೦೪ ರಲ್ಲಿ ಬೇಲೂರಿನಲ್ಲಿ ಕಟ್ಟಿಸಿದರು. ಅವರ ಯೊಗ ಶಿಕ್ಷಣದ ಪ್ರಭಾವಕ್ಕೆ ಒಳಗಾದವರಲ್ಲಿ ಜೆ.ಕೃಷ್ಣಮೂರ್ತಿ, ಆಲ್ಡುಅಸ್ ಹಕ್ಸಲೀ , ಮೆನ್ಹುನ್ ಮುಂತಾದವರಿದ್ದಾರೆ. ಅಯ್ಯಂಗಾರರನ್ನು ಕೆಲವರು 'Michelangelo of Yoga' ('ಮೈಖೇಲ್ ಎಂಜಿಲೋ ಆಫ್ ಯೋಗ' )ಎಂದರೆ, ಮತ್ತೆ ಕೆಲವರು 'King of Yoga' ('ಕಿಂಗ್ ಆಫ್ ಯೋಗ') ಎನ್ನುವವರೂ ಇದ್ದಾರೆ ! ಅವೆಲ್ಲಾ ಮಾತುಗಳು ಅವರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತವೆ. ಅವರ
* ನನಗೆ ಯೋಗಾಚಾರ್ಯ ದಿವಂಗತ, ಪೂಜ್ಯ ಶ್ರೀ ಮಹದೇವ್ ಭಟ್ಟರಿಂದ ಪೂಜ್ಯ ಶ್ರೀ ಬಿ.ಕೆ.ಎಸ್.ಐಯ್ಯಂಗಾರ್ ಬಗ್ಯೆ ವಿಶೇಷ ಮಾಹಿತಿ ಸಿಕ್ಕಿತ್ತು. ಅವರ ಮುಂಬೈನ ರುಂಗ್ಟಾ ಹೌಸ್ ಗೆ ಹೋಗಿ ಭೆಟ್ಟಿಯಾದಾಗ ಅವರಿಂದ ಶ್ರೀ ರಾಘವೇಂದ್ರ ಸ್ವಾಮೀಜಿ, ಮಲ್ಲಾಡಿಹಳ್ಳಿ, ಬಗ್ಗೆ ವಿಷೇಶ ವಿಷಯಗಳು ತಿಳಿದವು. ಅವರೆಲ್ಲಾ ಸಮಕಾಲೀನರು. ಶ್ರೀ ಮಹದೇವ ಭಟ್ಟರು ಮಲ್ಲಾಡಿ ಹಳ್ಳಿಯ ಆಶ್ರಮದಲ್ಲಿ ಯೋಗಾಭ್ಯಾಸದ ಕಾರ್ಯಾಗಾರ ಗಳನ್ನುನಡೆಸಿದ ಬಗ್ಗೆ ನಮ್ಮ ತಂದೆಯವರಿಂದ ತಿಳಿಯಿತು.
0 comments:
Post a Comment