ಪ್ರೊ. ಜಿ. ವಿ. ಲೋಗನಾಥನ್ ಅಮೆರಿಕದ ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದ ಸಿವಿಲ್ ಮತ್ತು ಎನ್ವಿರ್ನ್ಮೆಂಟಲ್ ಇಂಜಿನೀರಿಂಗ್ ಶಾಖೆಯಲ್ಲಿ ಸುಮಾರು ೧೫ ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆಸಲ್ಲಿಸುತ್ತಿದ್ದರು. ಗನ್ ಮ್ಯಾನ್, ಚೊ. ಸ್ಯೂಂಗ್- ಹುಯ್ ಅವರನ್ನು ಗುಂಡಿಕ್ಕಿ ಕೊಂದಾಗ ಅವರು ತಮ್ಮ ತರಗತಿಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ದಕ್ಷಿಣ ಕೊರಿಯಾ ದೇಶದ ಚೊ, ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಮೆಜರ್ ತೆಗೆದುಕೊಂದು ಅಬ್ಯಾಸಮಾಡುತ್ತಿದ್ದನಂತೆ.
ಈ ಅನಿರೀಕ್ಷಿತ ಘಟನೆ, ಸೋಮವಾರ ಬೆಳಿಗ್ಯೆ ೭-೧೫ ಕ್ಕೆ ನಡೆಯಿತು. ಇವರಲ್ಲದೆ, ಒಟ್ಟು ೩೦ ಜನ ಬಲಿಯಾಗಿರುವ ಸಂಗತಿ ವರದಿಯಾಗಿದೆ. ಕೊನೆಗೆ ಅವನೂ ತನ್ನ ತಲೆಗೆ ಗುಂಡು ಹೊಡೆದುಕೊಂಡು ಮರಣಹೊಂದಿದ್ದಾನೆ. ಮೊದಲು ಅವನು ತನ್ನ ಗರ್ಲ್ ಫ್ರೆಂಡ್ ಜೊತೆ ಬಿರುಸಿನ ಧ್ವನಿಯಲ್ಲಿ ಮಾತಾಡಿ, ನಂತರ ಗುಂಡಿನ ಮಳೆಗರೆದನು. ಕೆಲವರ ಹೇಳಿಕೆಯ ಪ್ರಕಾರ, ಅವನಿಗೆ ಪ್ರೊಫೆಸರ್ ಮೇಲೂ ಕೋಪವಿತ್ತಂತೆ. ಏನೇ ಇರಲಿ, ಹೀಗೆ ಗನ್ ಹಿಡಿದು ಕಾಲೇಜಿನ ಆಂಗಣದಲ್ಲಿ ಸುತ್ತಾಡುವುದು. ಮತ್ತೆ ಮನಸ್ಸಿಗೆ ಘಾಸಿಯಾದಾಗ ಗನ್ನಿಗೆ ಶರಣಾಗುವ ಸಂಸ್ಕೃತಿ ಹಿತವಾದದ್ದಲ್ಲ.
ಪರಿವಾರದ ಸದಸ್ಯರಲ್ಲಿ ಹಿತಕರವಾದ ಸಂಬಂಧಗಳಿಲ್ಲದಿರುವುದು, ಪ್ರೀತಿ ಪ್ರೇಮಗಳಲ್ಲಿ ಭ್ರಮ ನಿರಸನ, ಮತ್ತೆ ಹಣ, ಅದರೊಡನೆ ಬೆರೆತ ಸ್ವಚ್ಛಂದ ಪ್ರವೃತ್ತಿ, ಇದಕ್ಕೆ ಕಾರಣಗಳು ಎಂದು ಬೇರೆ ಹೇಳಬೇಕಾಗಿಲ್ಲ.
೫೧ ವರ್ಷದ ಹರೆಯದ, ಶ್ರೀ ಲೋಗನಾಥನ್ ರವರಿಗೆ, ಇಬ್ಬರು ಹೆಣ್ಣು ಮಕ್ಕಳು ಮತ್ತು ಹೆಂಡತಿ ಇದ್ದಾರೆ. ಈತ ತಮಿಳುನಾಡಿನ ಈರೋಡ್ ಜಿಲ್ಲೆಯ, ಗೊಬಿಚೆಟ್ಟಿ ಪಾಲಯಮ್ ನ ವಾಸಿ. ಪ್ರೊ. ಜೀ. ವಿ. ಲೋಗನಾಥನ್, ಅಮೆರಿಕಾದ ವರ್ಜೀನಿಯ ವಿಶ್ವವಿದ್ಯಾಲಯಕ್ಕೆ ಪಾದಾರ್ಪಣೆ ಮಾಡುವ ಮುಂಚೆ, ತಮ್ಮ ಬೀ. ಇ. ವಿದ್ಯಾಭ್ಯಾಸವನ್ನು, ತಮಿಳ್ನಾಡಿನಲ್ಲಿ ಮುಗಿಸಿ, ಐ. ಐ. ಟಿ. ಕಾನ್ಪುರದಲ್ಲಿ, ಎಮ್. ಟೆಕ್ ಮಾಡಿ ಮುಂದೆ, ಅಮೆರಿಕಾದ ಪರ್ಡ್ಯು ವಿಶ್ವವಿದ್ಯಾಲಯದಲ್ಲಿ ಪೀ. ಎಚ್ ಡಿ ಪಡೆದಿದ್ದರು.
ಈ ಬರ್ಬರ ಹತ್ಯೆಯ ಸಮಯದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿನಿ, ಮಿನಲ್ ಪಾಂಚಾಲ್ , ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ತಾಜಾ ಸಮಾಚಾರ :
ಈಗ ನೆಟ್ ನಲ್ಲಿ ಬಂದಿರುವ ಸಮಾಚಾರದ ಪ್ರಕಾರ, ಮಿನಾಲ್ ಸಾವನ್ನು ಅಪ್ಪಿರುವುದು ಬಹಳ ಬೇಸರದ ಸಂಗತಿ. ೨೬ ವರ್ಷದ ಮಿನಾಲ್, ಮುಂಬೈ ನ ’ರಿಝ್ವಿ” ಕಾಲೇಜಿನಿಂದ ೧೯೯೮ ರಲ್ಲಿ ತನ್ನ ಗ್ರಾಜುಯೇಷನ್ ಮುಗಿಸಿ, ಬಿಲ್ಡಿಂಗ್ ಸೈನ್ಸ್ ಶಾಖೆಯಲ್ಲಿ ಮಾಸ್ಟರ್ಸ್ ಡಿಗ್ರಿಗೆ, ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಳು. ಗುಂಡಿನ ಚಕ-ಮಕಿಯಾದ ಸಮಯದಲ್ಲಿ ಅವಳು, ವಿಶ್ವವಿದ್ಯಾಲಯದ "ನಾರಿಸ್ ಹಾಲ್ " ನಲ್ಲಿದ್ದಳು. ಮಂಗಳವಾರ ಮಧ್ಯರಾತ್ರಿ ಬಂದ ವರದಿಗಳ ಪ್ರಕಾರ ಅವಳು ಮೃತಳಾಗಿರುವುದು ಖಾತ್ರಿಯಾಯಿತು.
ನಮ್ಮ ಸಮಸ್ತ ಸಂಪದದ ಪರಿವಾರದವರ ಪರವಾಗಿ ನಾವೆಲ್ಲಾ , ಈ ಬರ್ಬರ ಘಟನೆಯಿಂದ ಬಹಳ ನೊಂದಿದ್ದೇವೆ ಎಂದು ತಿಳಿಸಲು ಇಚ್ಛಿಸುತ್ತೇವೆ. ಶ್ರೀ ಲೋಗನಾಥನ್, ಮಿನಾಲ್ ಪಾಂಚಾಲ್ ಮತ್ತು ಈ ಘಟನೆಯಲ್ಲಿ ಮಡಿದ ಸಮಸ್ತರಿಗೂ ನಮ್ಮ ಸಂತಾಪಗಳು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಮೊರೆಯಿಡುತ್ತೇವೆ.
ಮುಂಬೈಕರರಿಗೆಲ್ಲಾ, ಮತ್ತು ಭಾರದವಾಸಿಗಳಿಗೆ ಬೇಸರ ತರುವ ಸಂಗತಿಯೆಂದರೆ, ಅಮೆರಿಕದ ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಬೆಳಿಗ್ಯೆ ೭-೩೦ ರ ಹೊತ್ತಿನಲ್ಲೇ ಬರ್ಬರ ಹತ್ಯೆ ನಡೆದು ೩೦ ಜನ ಮೃತರಾಗಿದ್ದದ್ದು ನೆನ್ನೆ- ಮೊನ್ನೆಯ ಸುದ್ದಿ. ಅದರಲ್ಲಿ ಚೆನ್ನೈನ ಪ್ರೊಫೆಸರ್ ಡಾ. ಲೋಗನಾಥನ್ ಮತ್ತು ಮುಂಬೈನ ಬೋರಿವಲಿ ನಿವಾಸಿ, ಮಿನಾಲ್ ಪಾಂಚಾಲ್ ಹುಡುಗಿಯೂ ಸೇರಿದ್ದಾರೆ. ’ಗನ್ನಿ”ನ ಕೆಟ್ಟ -ಸಂಸ್ಕೃತಿ ನಾಶವಾಗದಿದ್ದರೆ, ಇದೇ ಘಟನೆಯ ಪುನರಾವರ್ತನೆಗಳು, ನಮ್ಮಲ್ಲೂ ಆಗುವುದು ಸ್ವಾಭಾವಿಕವಾಗಿದೆ. ಪ್ರೀತಿ, ಸಫಲವಾಗದಿದ್ದರೆ ಗನ್ನಿನ ಆಶ್ರಯಬೇಕೆ ? ಇದರಲ್ಲಿ ಅರ್ಥವೇನು ?
ದ. ಕೊರಿಯಾದಲ್ಲಿ ಬಡತನದಲ್ಲಿ ನೊಂದು ಅಮೆರಿಕೆಗೆ ಬಂದ ಚೊ, ಅಲ್ಲಿ ಒಂದು ಹೊಸ ಅಚ್ಚುಕಟ್ಟಾದ ಸುಭದ್ರ ಜೀವನವನ್ನು ರೂಪಿಸುವ ಆಶಯಹೊಂದಿದ್ದ. ಇಂಗ್ಲೀಷ್ ನಲ್ಲಿ ತನ್ನ ಉನ್ನತ ಶಿಕ್ಷಣವನ್ನು ಪ್ರಾರಂಭಿಸಿದ್ದ. ಅದರೆ ಚೊ, ಹೇಗೆ ತನ್ನ ಈ ಕೆಟ್ಟ ನಿರ್ಧಾರಕ್ಕೆ ಬಲಿಯಾದ ? ಇವೆಲ್ಲಾ ಎಲ್ಲರನ್ನೂ ಕಾಡಿಸುವ ಯಕ್ಷಪ್ರಶ್ನೆಗಳು. ಇದನ್ನು ನಮ್ಮ ಯುವಕರು ಖಂಡಿಸಿ ಪಾಠಕಲಿಯುವರೇ ?