ಆಯಾಯ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿರುವ ಆಡು ಭಾಷೆಗಳ ಸೊಗಡಿನ ಸೊಬಗನ್ನು ಬಲ್ಲವರೇ ಬಲ್ಲರು ! ಪ್ರತಿ ಭಾಷೆಗೂ ತನ್ನದೇ ಆದ ಸಮೃದ್ಧವಾದ ಪರಂಪರೆ ಇದೆ, ಇತಿಹಾಸವಿದೆ. ಆದರೆ ನಮ್ಮ ಆಕಾಶವಾಣಿಯಲ್ಲಿ ಬಿತ್ತರಿಸಲ್ಪಡುವ ಭಾಷೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿರುವಂತಿದೆ. ಧಾರವಾಡ, ಗುಲ್ಬರ್ಗ, ಮುಂತಾದ ಕಡೆಗಳಲ್ಲೂ ಬೆಂಗಳೂರಿನ ಭಾಷೆಯ ಪಾರುಪತ್ಯವೇಕೆ ? ಅಲ್ಲಿ ಪ್ರಸಾರವಾಗುವ ಬೆಂಗಳೂರಿನ ಭಾಷೆ ಜಗಿದು ಉಗಿದ ಕಬ್ಬಿನ ಸಿಪ್ಪೆಯಂತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಪ್ರಾಂತೀಯ ಭಾಷೆಯಲ್ಲೇ ವಾರ್ತೆ ಏಕೆ ಓದಬಾರದು. ಹೆಚ್ಚು ಸಮಯ ಅಲ್ಲಿನ ಭಾಷೆಯಲ್ಲೇ ಏಕೆ ಕಾರ್ಯಕ್ರಮಗಳು ಬಿತ್ತರವಾಗಬಾರದು ? ...
Wednesday, April 14, 2010
" ಅಮ್ರಿಕಾದಾಗ, ನಾನು ಕಣ್ಣಾರ ಕಂಡದ್ದು, ಕಿವ್ಯಾರ ಕೇಳಿದ್ದು ” !
http://shyanubhogaru-davanagere.blogspot.com/ ಈ "ನನ್ನ ಕನ್ನಡ ಪ್ರವಾಸ ಕಥನ " ಕೆಳಗೆ ದಾಖಲಾಗಿರುವ ಬೇರೆ ಬೇರೆ ಲೇಖನಗಳಿಗೆ ಹೋಲಿಸಿದರೆ, ಖಂಡಿತವಾಗಿಯೂ ಭಿನ್ನವಾಗಿರುವುದು ಸರ್ವವಿದಿತವಾಗಿದೆ. ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಏಕೆಂದರೆ, ಇದು ಒಂದು " ದೊಡ್ಡ ಬ್ಲಾಗ್, " ನ ತರಹವಿದೆ. ’ಇದೆ ಅನ್ನೋದಕ್ಕಿಂತ ಬ್ಲಾಗಂತ ಕರೆಯುವುದೇ ಲೇಸೆಂಬುದು ನನ್ನ ಅಭಿಪ್ರಾಯ ಹಾಗೂ ಆಸೆ ಸಹಿತ ! ಈಗ ಆ ಬ್ಲಾಕ್ ನ ವರದಿಗಾರ ನಾನೇ : ಹೆಸರು : ಹೆಚ್. ಆರ್. ಲಕ್ಷ್ಮೀವೆಂಕಟೇಶ. ನಾನು ’ಸಂಪದ’ ವೆಂಬ”ಕನ್ನಡತಾಣ ’ದಲ್ಲಿ ಚಿಕ್ಕದಾಗಿ ಆಗಾಗ ಬರೆಯುವ ಮನುಷ್ಯ... ಆಷ್ಟು ಸಾಕು ನನ್ನ ಪರಿಚಯ ಸದ್ಯಕ್ಕೆ...
Subscribe to:
Post Comments (Atom)
0 comments:
Post a Comment