ಪೋರ್ಚುಗಲ್ ತಂಡ, 'ಫಿಫಾ ರ‍್ಯಾಂಕಿಂಗ್ ' ನಲ್ಲಿ, ೩ ನೆಯವರಾಗಿದ್ದಾರೆ. ಉತ್ತರ ಕೊರಿಯ ಕ್ರಮಾಂಕ ೧೦೫ ನೆಯದು. ಪೋರ್ಚುಗಲ್ ತಂಡ, ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಕ್ರೀಡೆಯ ಪುಟ್ಟ-ಕಂದ, ಉತ್ತರ ಕೊರಿಯವನ್ನು, 'ಗ್ರೀನ್ ಪಾರ್ಕ್ ಕ್ರೀಡಾಂಗಣ ' ದಲ್ಲಿ, ೨೦೧೦ ರ, ಜೂನ್ ತಿಂಗಳು, ೨೧ ನೇ ತಾರೀಖಿನ ಸೋಮವಾರ, ೭-೦ ಗೋಲುಗಳಿಂದ ಸೋಲಿಸಿ ವಿಜೃಂಭಿಸಿದೆ. ಹೀಗಾಗಿ ೧೯ ನೆಯ ಫಿಫಾ ವಿಶ್ವ ಫುಟ್ಬಾಲ್ ಚಾಂಪಿಯನ್ ಶಿಪ್ ನಲ್ಲಿ, ಪೋರ್ಚುಗಲ್ ಬಣ, ಮುಂದಿನ ಹಂತವನ್ನು ತಲುಪುವುದು.
ಮ್ಯಾಚಿನ ಮೊದಲ ಅವಧಿಯಲ್ಲಿ ’ರಾಲ್ ಮೀರೆಲ್ಸ್’, ದಾಖಲಿಸಿದ, ಮೊದಲ ಗೋಲಿನ ಸಹಾಯದಿಂದ ಪೋರ್ಚುಗಲ್ ೧-೦ ಸ್ಕೋರ್ ನಿಂದ, ಮೇಲ್ಗೈ ಸಾಧಿಸಿತು.
ಆಟದ ಉತ್ತರಾರ್ಧದಲ್ಲಿ, ೭-೦ ಗೋಲಿನ ಮಳೆಕರೆದರು. ಉತ್ತರ ಕೊರಿಯ ಈ ಎದುರಾಳಿಗಳ ದಾಳಿಯನ್ನು ಎದುರಿಸಲಾಗದೆ ತತ್ತರಿಸಿಹೋಗಿ, ನಿರಂತರವಾಗಿ ಗೋಲುಗಳನ್ನು ಅವರಿಗೆ ಬಿಟ್ಟುಕೊಡುತ್ತಾ ಹೋಯಿತು. ಪೋರ್ಚುಗಲ್ ತಂಡ ಒಟ್ಟು ೨೬ ಬಾರಿ ಚೆಂಡನ್ನು ಗುರಿಯಿಟ್ಟು ಗೋಲಿನ ಕಡೆ ಬಾರಿಸಿದರೆ, ಉತ್ತರ ಕೊರಿಯ, ಕೇವಲ, ೧೫ ಬಾರಿಮಾತ್ರ ಆ ಕೆಲಸ ಮಾಡಿತು. ಪೋರ್ಚುಗಲ್ ಒಡ್ಡಿದ ಅಭೇದ್ಯ-ರಕ್ಷಣಾ ಗೋಡೆಯನ್ನು ಭೇದಿಸಲಾಗಲೇ ಇಲ್ಲ.
-Courtesey : Times of India, 22nd, June, 2010

0 comments:
Post a Comment