ಆಯಾಯ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿರುವ ಆಡು ಭಾಷೆಗಳ ಸೊಗಡಿನ ಸೊಬಗನ್ನು ಬಲ್ಲವರೇ ಬಲ್ಲರು ! ಪ್ರತಿ ಭಾಷೆಗೂ ತನ್ನದೇ ಆದ ಸಮೃದ್ಧವಾದ ಪರಂಪರೆ ಇದೆ, ಇತಿಹಾಸವಿದೆ. ಆದರೆ ನಮ್ಮ ಆಕಾಶವಾಣಿಯಲ್ಲಿ ಬಿತ್ತರಿಸಲ್ಪಡುವ ಭಾಷೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿರುವಂತಿದೆ.
ಧಾರವಾಡ, ಗುಲ್ಬರ್ಗ, ಮುಂತಾದ ಕಡೆಗಳಲ್ಲೂ ಬೆಂಗಳೂರಿನ ಭಾಷೆಯ ಪಾರುಪತ್ಯವೇಕೆ ? ಅಲ್ಲಿ ಪ್ರಸಾರವಾಗುವ ಬೆಂಗಳೂರಿನ ಭಾಷೆ ಜಗಿದು ಉಗಿದ ಕಬ್ಬಿನ ಸಿಪ್ಪೆಯಂತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಪ್ರಾಂತೀಯ ಭಾಷೆಯಲ್ಲೇ ವಾರ್ತೆ ಏಕೆ ಓದಬಾರದು. ಹೆಚ್ಚು ಸಮಯ ಅಲ್ಲಿನ ಭಾಷೆಯಲ್ಲೇ ಏಕೆ ಕಾರ್ಯಕ್ರಮಗಳು ಬಿತ್ತರವಾಗಬಾರದು ? ...
0 comments:
Post a Comment