Posts

ಪಂಡಿತ ಪುಟ್ಟರಾಜ ಗವಾಯಿಯವರ ಪುಣ್ಯಸ್ಮರಣೆಯ ಆಚರಣೆ ; ಮುಂಬಯಿನಲ್ಲಿ !

ಮೈಸೂರು ಅಸೋಸಿಯೇಷನ್, ಮುಂಬಯಿ  ಹಾಗೂ  ' ಗೀಗಿ ಎಂಟರ್‍ಟೈನ್‍ಮೆಂಟ್ ಜೊತೆಗೂಡಿ, ಪದ್ಮಭೂಷಣ ಪುಟ್ಟರಾಜ ಗವಾಯಿಯವರ ಪುಣ್ಯಸ್ಮರಣೆಯನ್ನು ಭಾನುವಾರ  ೧, ಮಾರ್ಚ್ ೨೦೨೦ ರ ಸಂಜೆ ಆಚರಿಸಲಾಯಿತು . ಈ ಸಮಯದಲ್ಲಿ ಪಂಡಿತ ಪುಟ್ಟರಾಜ ಗವಾಯಿಯವರ ಗೀತೆಗಳನ್ನು ಮತ್ತು ಕರ್ನಾಟಕ ಸಂಗೀತವನ್ನೂ ತಮ್ಮ ವಿಶೇಷ ಶೈಲಿಯಲ್ಲಿ ಪ್ರಸ್ತುತಪಡಿಸಿದ ಸಂಗೀತ ವಿದುಷಿ ಶ್ರೀಮತಿ ಚಂದನ ಬಾಲರವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.  ಪಂಡಿತ. ಪುಟ್ಟರಾಜ ಗವಾಯಿ ಅವರ ಸೂಕ್ಷ್ಮ ಪರಿಚಯ :  ಹಿಂದುಸ್ತಾನಿ ಮತ್ತು ಕರ್ನಾಟಕ ಶೈಲಿಯ ಸಂಗೀತಗಳಲ್ಲಿ ಕೃಷಿ ಮಾಡಿದ್ದ ಅವರು ಕನ್ನಡ ,ಹಿಂದಿ, ಸಂಸ್ಕೃತದಲ್ಲಿ ಅಧ್ಯಾತ್ಮವನ್ನು ಕುರಿತು ಕೃತಿರಚನೆ ಮಾಡಿದ್ದಾರೆ. ಒಟ್ಟು ೮೦ ಕ್ಕೂ ಮಿಗಿಲಾಗಿ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ  ಗುರುಗಳಾದ ಪಂಚಾಕ್ಷರಿ ಗವಾಯಿಯವರ ಬಗ್ಗೆ ಅಪಾರ ಗೌರವ ಪ್ರೀತಿ. ತಮ್ಮ ಪ್ರೀತಿಯ ಹಿರಿಮೆಯನ್ನು ಕನ್ನಡ ನಾಡಿನಲ್ಲಿ ತಮ್ಮ ಕೃತಿಗಳ ಮುಖಾಂತರ ಸಾರಿದ್ಧಾರೆ. ಅವರು ಮುಖ್ಯವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಸಂಗೀತವನ್ನು ಕಲಿತು, ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಅವರ ಗೀತೆಗಳನ್ನು ಹಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ.    ಆ ದಿನದ  ಸಂಜೆಯ ಪ್ರಮುಖ ಗಾಯಕಿಯಾಗಿದ್ದ  ಸಂಗೀತ ವಿದುಷಿ, ಶ್ರೀಮತಿ ಚಂದನಬಾಲಾರವರ  ಜೊತೆಗೆ  ಶ್ರೀ ವಿನಾಯಕ್ ಅವರು, ತಬಲಾದಲ್ಲಿ, ಗಿಟಾರ್‍ನ ಮೇಲೆ ಶ್ರೀ ಅಭಯ್ ನ್ಯಾಯಂಪಲ್ಲಿಯವರು, ಮತ್ತು  ಹಾರ್ಮೋನಿಯಂ
ನಾನು ಹೇಳುತ್ತಿದ್ದ ನಮ್ಮ ಅಂಗಳದ ಭಾವಿ ಇದೇ ! (ಈ ಭಾವಿಯ ನೀರು ಉಪ್ಪು. ಸ್ನಾನ,ಪಾತ್ರೆ ತೊಳೆಯಲು, ಹಾಗೂ ಇತರ ಕಾರ್ಯಗಳಿಗೆ ಬಳಸಲ್ಪಡುತ್ತಿತ್ತು.) ವೆಂಕಟಲಕ್ಷಮ್ಮನವರು, ನಮ್ಮ ಗೋಪಾಲ್ ರಾವ್ ಮೇಸ್ಟ್ರ ತಾಯಿ. ಅವರ ಸೊಸೆ ಪುಟ್ಟಕ್ಕ.  ನಾಗಮ್ಮ, ಸುಂದರ,   ಶಂಕರ. ಮೊಮ್ಮಕ್ಕಳು. ವೆಂಕಟಲಕ್ಷಮ್ಮನವರು, ಅನೇಕವೇಳೆ ನಮ್ಮಮ್ಮನ ಹತ್ತಿರ ತಮ್ಮ ಮನದ ಇಂಗಿತವನ್ನು ತೋಡಿಕೊಂಡ ಕೆಲವು ಮಾತುಗಳು ಇನ್ನೂ ಅಸ್ಪಷ್ಟವಾಗಿ ನನ್ನ ಕಿವಿಯಲ್ಲಿ ತೇಲುತ್ತಿವೆ. ಆ ಮಾತುಗಳೇನೆ ಇರಲಿ, ಅವು ಹೇಳುವುದಿಷ್ಟೆ, ಎಂಬುದನ್ನು ನನ್ನ ಹಲವು ವರ್ಷಗಳ ಒಡನಾಟದಿಂದ ಅರಿತಿದ್ದೇನೆ. ’ಯಾರೋ ನನಗೆ ಹೀಗಂದೃ’. ’ನಾನ್ ಸುಮ್ನಿರೋಳಲ್ಲಪ್ಪ;ನಾನೂ ಝಾಡ್ಸಿ ಮಾತಾಡ್ಬಿಟ್ಟೆ ರಾಧಮ್ನೋರೆ, ನೀವೇನಾದೃ ತಿಳ್ಕೊಳ್ಳಿ’, ’ಅದೆಲ್ಲಾ ನನಗ್ ಸರಿಹೋಗಲ್ಲಪ್ಪ. ಅವರ್ ದೊಡ್ಡಸ್ತಿಕೆ ಇದ್ರೇ ಅವರ್ಹತ್ರಾ, ನಮ್ಗೇನ್ಬಂತು  ನೀವೇ ಹೇಳಿ” ಅನ್ನೋರು, ವೆಂಕಟ್ಲಕ್ಷಮ್ನೋರು !   ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ.  ಬಾಲ್ಯದ  ಅದೊಂದು ಘಟನೆಯ ಅನುಭವ ನನ್ನ  ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ  ಸಂಗತಿಗಳಲ್ಲೊಂದು.  ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ, ಅಥವಾ ನಾವು ಜೀವನದಲ್ಲಿ ಛಲವಂತರಾಗಿರಬೇಕು, ಎನ್ನುವ ವಿಷಯ ಬಂದಾಗ ಇದನ್ನು ಉದಾಹರಿಸಬಹುದೆ ? ಎನ್ನುವ ವಿಷಯಗಳಲ್ಲಿ ಗೊಂದಲವೇ ಆಗಿತ್ತು. ಒಟ್ಟಿನಲ್ಲಿ ಈ ಒಂದು ಚಿಕ್ಕ ಘಟನೆ ನನ್ನ ಮನಸ್ಸಿನಾಳದಲ

Prof. B.M.Shrikanthaiah,

 
knowledge