Posts

Showing posts from 2006

ಕಾಡ್ ಅಳ್ಟೆ !

ಕಾಡ್ ಅಳ್ಟೆ : ಎಂಟಣ್ಣ : ಎಂಗಿದಿಯಪ್ಪೊ ಎನ್ಕ್ಟೇಸಪ್ಪ ? ಎನ್ಕ್ಟೇಸಪ್ಪ : ಚೆನ್ನಾಗಿದಿನಪ್ಪ. ನೀನು ಏನು ಇವತ್ತು ದರ್ಶನ ಕೊಟ್ಟೆ ? ಎಂಟಣ್ಣ : ಟ್ಯಾಕ್ಟ್ರು ಕೆಟ್ಟೋಗದೆ. ಮ್ಯಕ್ನಿಕ್ಕು ಇನ್ನೂ ಬಂದಿಲ್ಲ. ಎನ್ಕ್ಟೇಸಪ್ಪ : ಸರಿ ಕಣಪ್ಪ. ಅದರಿಂದ ಬಂದಿದೀಯ ಅಂತ ಹೇಳು ! ಎಂಟಣ್ಣ : ಓಗ್ಲಿ ಬಿಡಪ್ಪ ಎಲ್ಲ ಎಡವಟ್ಟು. ಕುಮಾರ 'ಪ್ಯಾಟೆ'ಗೊದೊನು ಇನ್ನು ಬಂದಿಲ್ಲ. ನನ್ ತಲ್ಯಾಮೇಗೆ ಬಿದ್ದೈತೆ ನೋಡು ಎಲ್ಲ ! ಎನ್ಕ್ಟೇಸಪ್ಪ : ಸರಿ ಕೂತ್ಕೊ. ಕಾಫಿ ಕುಡ್ಕಂಡ್ ಹೋಗು. ಇನ್ನೇನ್ 'ಗುಪ್ತ ಗಾಮಿನಿ' ಬರತ್ತೆ. ನೋಡುವಂತೆ ! ಎಂಟಣ್ನ: ಕಾಪಿ ಉ.. ಸರಿಏಳ್ದೆ. ಆದ್ರೆ ಆ ಗುಪ್ತಗಾಮ್ನಿ ನೋಡಾಕಿಲ್ಲ ಮಾರಾಯ. ಅಲ್ಲ ಕಣಪ್ಪೊ ಸೀನಣ್ಣ ಅಯಮ್ಮನ್ನ (ಅವರೆಂಡ್ರನ್ನ) ಯದ್ವ ತದ್ವ ಬೈತನಲ್ಲೊ ಮರಯ. ಎಸ್ಸೆಲ್ಸಿ, ಗುಬೆ ಇನ್ನು ಎನೆನೊ ! ಎಂಟಣ್ಣ : ನಮ್ಮೀರಿ ಸಿಟ್ಮಾಡ್ಕಂಡವ್ಳೆ. ಅಂತ ಸಿರಿಲ್ ನೋಡ್ನೋಡಿ ನಿವು ನನ್ನ ಇಚಾರ್ಸ್ಕಂಡ್ರೆ ಎಂಗೆ ಅಂತವ್ಳೆ ! ಎಂಕ್ಟೇಸಪ್ಪ : ನಿನ್ಹೇಳೋದು ಸರಿಕಣಪ. ಸಂಧ್ಯ ಪೈ ಇದನ್ನೆಲ್ಲ ನೊಡಿ ಇತ್ಯರ್ಥ ಮಾಡೊದ್ಬೆಡ್ವ ? ಅಲ್ಲಕಣ್ವೆಂಕ್ಟೇಸಪ್ಪ ನಿನೆ ವಸಿ ಎಚ್ನೆ ಮಾಡು. ಕುಮಾರ್ನ ಎಂಡ್ರು ಬಂದ್ರೆ ಈರೀಗೆ ನಾನ್ ಇಂಗೆ ಬೈದ್ರೆ ಎಂಗೆ ಅಂತ. ಎನ್ಕ್ಟೇಸಪ್ಪ : ಕಾಫಿ ಬಂತು ಕುಡ್ಯಪ್ಪ. ಯಾರ್ಯಾರ್ಗೆ ಅಂತ ಹೇಳೋದು ತಿಳಿತಿಲ್ಲ. ಅಂದಂಗೆ ಅಮ್ಮನ್ ಪಾತ್ರ ಸರಿಯಾಗಿಯೇನಪ್ಪ ? ಎಂಟಣ್ಣ : ಒಳ್ಳೇ ಆಸಾಮಿ ನೀನು. ಅವರ

ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ ? ಹಾ - ಕುವೆಂಪು.

Image
೨೩ನೇ ಡಿಸೆಂಬರ್, ೨೦೦೬, ಶನಿವಾರ, ಮೈಸೂರು ಅಸೋಸಿಯೇಷನ್ ಸಭಾಂಗಣ, ಮಾಟುಂಗದಲ್ಲಿ ಕನ್ನಡ ಪುಸ್ತಕಮಾರಾಟ ಮಳಿಗೆ ಉದ್ಘಾಟನೆ ಸಮಾರಂಭ ಎರ್ಪಟ್ಟಿತ್ತು. ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಡಾ. ಶ್ರೀನಿವಾಸ್ ಮತ್ತು ಶ್ರೀ ಮಂಜುನಾಥ್ ಅತಿಥಿಗಳನ್ನು ಸ್ವಾಗತಿಸಿದರು. ಮೊದಲು ಶ್ರೀ. ಹಂಸಲೇಖ, ದೇಸಿ ಚಿಂತಕ, ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ,ಕನ್ನಡ ಪುಸ್ತಕ ಮಾರಾಟ ಮಳಿಗೆ ಉದ್ಘಾಟನೆಯನ್ನು ಮಾಡಿದರು. ನಂತರ ಮೊದಲನೆಯ ಮಹಡಿಯಲ್ಲಿ ಹವಾನಿಯಂತ್ರಿತ ಸಭಾಗೃಹದಲ್ಲಿ ಮುಂದಿನ ಕಾರ್ಯಕ್ರಮಗಳು ಪ್ರಾರಂಭವಾದವು. ಶ್ರೀ ಚಂದ್ರಶೇಖರ ಪಾಲೆತ್ತಾಡಿ, ಸಂಪಾದಕ, ಕರ್ನಾಟಕ ಮಲ್ಲ, ಮುಂಬೈ, ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮುಂಬೈನಂತಹ ಬೃಹತ್ ಶಹರಿನಲ್ಲಿ ಒಂದು ಕನ್ನಡ ಪತ್ರಿಕೆಯನ್ನು ಹುಟ್ಟು ಹಾಕುವ ಪ್ರಕ್ರಿಯೆ ಎಷ್ಟು ಸವಾಲುಗಳನ್ನು ಎದುರಿಸಬೇಕಾಯಿತು ಎನ್ನುವ ವಿಚಾರವನ್ನು ಮನದಟ್ಟು ಮಾಡಿದರು. ಈಗ 'ಕರ್ನಾಟಕ ಮಲ್ಲ' ಮುಂಬೈ ಕನ್ನಡಿಗರ ಉಸುರಿನಂತೆ ಕೆಲಸಮಾಡುತ್ತಿದೆ ! ಮೈಸೂರಸೋಸಿಯೇಷನ್ನಿನ ಕನ್ನಡ ಪುಸ್ತಕ ಮಾರಾಟ ಮಳಿಗೆ ಕೇವಲ ಕನ್ನಡ ಪ್ರಾಧಿಕಾರದ ಪುಸ್ತಕಗಳನ್ನೇ ಮಾರುವ ಕೇಂದ್ರವಾಗದೆ, ಮುಂಬೈ ಲೇಖಕರ ಮೌಲ್ಯಾಧಾರಿತ ಕೃತಿಗಳನ್ನೂ ಪ್ರದರ್ಶಿಸಿ ಅವರಿಗೆ ಭರವಸೆ ನೀಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಶ್ರೀ. ಹಂಸಲೇಖರವರು ಕನ್ನಡ ಪುಸ್ತಕ ಪ್ರಾಧಿಕಾರದ ಕೊಡುಗೆಯನ್ನು ಸ್ಮರಿಸುತ್ತಾ " ಈಗಾಗಲೇ ೧೦ ಮಳಿಗೆಗಳು ಕರ್ಣಾಟಕದಲ್ಲಿ ತೆ

ಬಾಗಿಲು ತೆರೆಯೆ, ಪುಟ್ಟಮ್ಮ .....!

ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳು ದೊಡ್ಡವರಾಗಿ ಬೆಳೆದು ರೆಕ್ಕೆ ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್ ನಲ್ಲಿದ್ದೇವೆ. ಆದರೂ ನಾವು ಬೊಂಬಾಯಿನ ಶಿವಾಜಿ ಪಾರ್ಕ್ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ. ಏಕೆಂದರೆ ಇಲ್ಲಿ ನಮ್ಮ ಇಬ್ಬರು ಮಕ್ಕಳ ಮೊದಲ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸದ 'ವಿಧಿ' ಅಲ್ಲೇ ನಡೆಯಿತು. ೨-೩ ಕನ್ನಡ ಪರಿವಾರಗಳು ನಮ್ಮ ಸಹವರ್ತಿಗಳು ನಮ್ಮೊಡನೆ ವಾಸವಾಗಿದ್ದರು. ಮೇಲಾಗಿ ಕರ್ನಾಟಕಸಂಘ ನಮಗೆ ಅತಿ ಸಮೀಪ. ಎಲ್ಲಾ ಕಾರ್ಯಕ್ರಮಗಳಿಗೂ ಬಿಡದೆ ಹೋಗುತ್ತಿದ್ದೆವು. ಆಗ ವ್ಯಾಸರಾವ್ ಬಲ್ಲಾಳ್, ಶ್ರೀಪತಿ ಬಲ್ಲಾಳ್,ಅವರ ಪತ್ನಿ, ಕಿಶೋರಿ ಬಲ್ಲಾಳ್, ವರದರಾಜ್ ಆದ್ಯ,ಅವರ ಪತ್ನಿ, ಮತ್ತು ಸನದಿ, ಡಾ. ಚಿದಂಬರ ದೀಕ್ಷಿತ್ , ಎ.ಎಸ್.ಕೆ. ರಾವ್ ರವರ ಭಾಷಣಗಳನ್ನು ಕೇಳುತ್ತಿದ್ದೆವು. ಎಮ್.ವಿ. ಕಾಮತ್, ಜಯದೇವ ಹಟ್ಟಂಗಡಿ, ಗಿರೀಷ್ ಕಾರ್ನಾಡ್ ವಿಶೇಷ ಅತಿಥಿಗಳಾಗಿ ಆಗಾಗ ಬರುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಲು ಆಗ ನಮಗೇನೊ ಖುಷಿ ! ಶಿವಾಜಿ ಪಾರ್ಕ್,ನಲ್ಲಿ ಒಂದು ತರಹ ಕಾಸ್ಮೊಪಾಲಿಟನ್ ಅಟ್ಮೋಸ್ ಫಿಯರ್ ಇತ್ತು. ಮರಾಠಿ, ಫಿಲಮ್ ಸಂಗೀತಕಾರರು, ಕ್ರಿಕೆಟ್ ಪಟುಗಳು, ಕವಿಗಳು, ಉದ್ಯಮಿಗಳು,ರಾಜಕಾರಣಿಗಳು, ಮೀಡಿಯಾದವರು ಎಲ್ಲ ವರ್ಗದವರೂ ನಮಗೆ ನೋಡಲು ಸಿಗುತ್ತಿದ್ದರು. ಮಧ್ಯಮ ವರ್ಗ ಹಾ

'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'...!..

'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'..... ಈ ಹಾಡನ್ನು ರಾಗವಾಗಿ ಹೇಳುತ್ತ, ಭಾವುಕತೆಯ ಉತ್ತುಂಗದಲ್ಲಿ ತೇಲುತ್ತಾ ಅವನ ಲೋಕದಲ್ಲೇ ಕಳೆದುಹೋಗುತ್ತಾನೋ ಎನ್ನಿಸುವಷ್ಟು ಮಗ್ನನಾದ ಒಬ್ಬ ವ್ಯಕ್ತಿ(ತಿರುಕ) ನನ್ನಮೇಲೆ ಗಾಢವಾದ ಪರಿಣಾಮ ಬೀರಿದ್ದಾನೆ ! ಎಲ್ಲರು ಗಮನಿಸುವಂತೆ, ಇತರ ನೇತ್ರಹೀನ ಬಿಕ್ಷುಕರು ತಮ್ಮ ದುಷ್ಕರ್ಮವನ್ನು ಹಳಿದುಕೊಳ್ಳುತ್ತಾ 'ಪಾಪಿ ಪೇಟ್ ಕೆ ಲಿಯ ಕುಚ್ ದೇದೋ ಮಾ; ಜನಮ್ ಸೆ ಅಂಧ ಹೈ, ದಯಾ ಕರೋ' ಎಂದೋ ಮೇರಾ ಕೋಯಿ ನಹಿ ಹೈ; ಇಸ್ ದುನಿಯ ಮೆ' ಇತ್ಯಾದಿ ಗಳು ಅವನ ಹತ್ತಿರವೂ ಸುಳಿಯುವುದಿಲ್ಲ ! ಅವನೊಬ್ಬ 'ಸ್ಥಿತಪ್ರಜ್ಞ'ನಂತೆ ತೋರುತ್ತಾನೆ ! ಬಸವಣ್ಣನವರ ಮಾತಿನಂತೆ, ಕಾಯಕಮಾಡುವುದಷ್ಟೆ ಅವನ ಕೆಲಸ. ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ,ಹೇಳಿರುವಂತೆ, ನಿನ್ನ ಕೆಲಸ ಮಾಡು; ಉಳಿದದ್ದನ್ನು ನನಗೆ ಬಿಡು. ಫಲಾಪೇಕ್ಷೆ ನಿನಗೆ ಬೇಡ' ಸರ್ವಜ್ಞನು ತಿಳಿಸಿದಂತೆ 'ಕೋಟಿವಿದ್ಯಗಳಿಗಿಂತ ಮೇಟಿವಿದ್ಯೆಯೆ ಲೇಸು.' ಮೇಟಿವಿದ್ಯೆಯನ್ನು (ಬೇಸಾಯ) ಇವನು ಧಾರಾಳವಾಗಿ ಮಾಡಬಾಹುದಿತ್ತು. ಆದರೆ ನೇತ್ರಹೀನತೆ, ಅವನನ್ನು ಹಿಡಿದು ಕಟ್ಟಿದೆ ! ಬೇಕಾದಷ್ಟು ಜನ ಮಾಡುತ್ತಲೂ ಇದ್ದಾರೆ. ಭಿಕ್ಷೆಯನ್ನು ಮಾಡುವುದೊಂದೇ ಅವನಿಗೆ ಒದಗಿಬಂದಿರುವ ಕೆಲಸ.'ಭವತಿ ಭಿಕ್ಷಾಂದೇಹಿ' ಎಂಬ ಪಂಚಾಕ್ಷರಿ ಮಂತ್ರವನ್ನು ಹೇಳಿ, ಮನೆ ಮನೆಗೆ ಹೋಗಿ ಕೈಒಡ್ಡಲು ಅವನಿಗಾಗುತ್ತಿಲ್ಲ. ಅಂಧನಲ್ಲವೆ ! ಆ

೨೦೦೫ ರಲ್ಲಿ ನಮಗಾದ ದೆಹಲಿಯ 'ದುರದೃಷ್ಟ ದೀಪಾವಳಿ' ಅನುಭವ !

Image
ಹೋದ ವರ್ಷ ಏಕೋ ದೀಪಾವಳಿಗೆ ದಿಲ್ಲೀಗೆ ಹೋಗೋಣ ಅನ್ನಿಸಿತ್ತು. ಇದುವರ್ಗೂ ಹೇಗೊ ಪ್ರತಿ ಬೇಸ್ಗೆ ಮತ್ತು ಕ್ರಿಸ್ಮಸ್ ರಜೆಯಲ್ಲಿ ಊರು ಮತ್ತೆ ನಮ್ಮೂರಿಗೆ (ಮುಂಬೈ) ವಾಪಸ್ ಹೀಗೇ ನಡೆದಿತ್ತು. ಹೇಗಿದ್ದರೂ ರವಿಗೆ ಇದು ಅವನ M.B.A; ಡಿಗ್ರಿ ಯ ಕೊನೆಯ ವರ್ಷ ತಾನೆ. ಹೋದ ಸಾರಿ ಬಂದಾಗ್ಲೂ 'ಒಮ್ಮೆ ಬಂದು ಹೋಗಿ' ಅಂದಿದ್ದ. ಚಿಕ್ಕ ಮಗ ಪ್ರಕಾಶ ಈಗ Hongkong ನಲ್ಲಿದಾನೆ. ಮನೆಯಲ್ಲಿ ನಾವಿಬ್ಬರೆ. ಇಲ್ಲಿದ್ರೇನು, ಡೆಲ್ಲಿಗ್ ಹೋದ್ರೇನು ಎಲ್ಲಾ ಒಂದೆ. ಬೆಳಗಿನ 'ಸ್ಪೈಸ್ ಜೆಟ್ 'ನಲ್ಲಿ ಹೊರಟೇ ಬಿಟ್ಟೆವು. ಹೋದಬಾರಿ ನಾವು 'ಡೆಕ್ಕನ್ ಏರ್ವೇಸ್ನ'ಲ್ಲಿ ಬೆಂಗಳೂರಿನಿಂದ ಮುಂಬೈ ಗೆ ಬಂದಾಗ ಕಿಟಕಿ ಸೀಟಿಗೆ 'ಕ್ಯೂ'ನಲ್ಲಿ ಓಡಿದ್ದರ ನೆನೆಪು ಇಂದಿಗೂ ಇದೆ. ಸ್ಪೈಸ್ ಜೆಟ್ಟಿನ್ನಲ್ಲಾದರೋ ಎಲ್ಲಾ ಸುವ್ಯವಸ್ಥೆ. ಪ್ರಯಾಣನೂ ಚೆನ್ನಾಗಿತ್ತು. ದಿಲ್ಲಿ ಯಲ್ಲಿ ನಾವು ಇಳಿದಾಗ ರವಿ ರೆಡಿಯಾಗಿ ಬಂದಿದ್ದ. ಅವನ ಜೊತೆ ನಾವು ಕರೋಲ್ ಬಾಗಿನಲ್ಲಿದ್ದ ನಮ್ಮ Southern Hotels, ೩೦ ನಿಮಿಷದಲ್ಲಿ ಮುಟ್ಟಿದೆವು. ಅಲ್ಲಿಗೆ ದೆಹಲಿ ರೈಲ್ವೆ ನಿಲ್ದಾಣವೂ ಹತ್ತಿರ. ಕರೋಲ್ ಬಾಗ್ ಪಹಾಡ್, ಗಂಜ್ ಬಳಿ ಇತ್ತು. ಪಂಜಾಬಿಗಳು ಹೆಚ್ಚಾಗಿ ವಾಸಿಸುವ ಜಾಗ. ಅಲ್ಲೆಲ್ಲಾ ಪಂಜಾಬೀ ಧಾಬಾಗಳು, ಮಾರಾಟದ ಮಳಿಗೆಗಳು, ದೊಡ್ಡ ವ್ಯಾಪಾರಸ್ಥಳ. ಆಟೋ ಸ್ಪೇರ್ಪಾರ್ಟ್ಸ್,ಶಾಪುಗಳು ಮೋಟಾರ್ ಕಾರುಗಳ ಷೋರೂಂ ಗಳು ಇದ್ದವು. ನಮ್ಮ Hotel ಆರ್ಯಸಮಾಜ ರಸ್ತೆಯಲ್ಲಿತ

ಮುಂಬೈ ನ ಸುಂದರ 'ಗಣರಾಯ'ರ ವಿಗ್ರಹಗಳು ನೋಡಲು ಎಷ್ಟು ಚೆಂದ !

Image
ಈ ವರ್ಷದ ಗಣಪತಿ ಹಬ್ಬ ನಿರ್ವಿಘ್ನವಾಗಿ ನೆರವೇರಿತು ! "ಗಣ್ಪತಿ ಬಪ್ಪ ಮೋರ್ಯಾ, ಪುಡ್ಚಾ ವರ್ಷಿ ಲವ್ಕರ್ ಯಾ" !! ಬುಧವಾರ, ೬ ನೆಯ ತಾ. ಸೆಪ್ಟೆಂಬರ್ ೨೦೦೬ ರಂದು ಗಣಪತಿಯ ಭವ್ಯ ಮೂರ್ತಿಗಳು ಮುಂಬೈ ನ ಗಿರಗಾವ್, ಜುಹು ಚೌಪಾತಿಗಳಲ್ಲಿ ವಿಜೃಂಭಣೆ ಯಿಂದ ಆರತಿ, ನೈವೇದ್ಯ, ಭಜನೆ, ನೃ‍ತ್ಯ ಗಳೊಂದಿಗೆ ಸಕಲ ಪಾರಂಪರಿಕ ಮರ್ಯಾದೆ ಗಳೊಂದಿಗೆ ವಿಸರ್ಜನೆ ಮಾಡಲಾಯಿತು. ಈ ವಿಸರ್ಜನೆಯ ವಿಧಿ ೭ ನೆ ತಾರೀಖಿನ ಬೆಳಗಿನ ವರೆಗೂ ಇತ್ತು. ಒಂದು ವಿಘ್ನೇಶ್ವರನ ಮೂರ್ತಿ. ಅಭಿನೇತ, ನಾನಾ ಪಾಟೇಕರ್ ಪೂಜಿಸಿದ ಭವ್ಯ ಗಣರಾಯನ ವಿಗ್ರಹ. ಮುಂ ಬೈನ ಇನ್ನೊಂದು ಬೃಹತ್ ಗಣರಾಯನ ಮೂರ್ತಿ:

ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ.ಎನ್.ಮೂರ್ತಿರಾಯರು.

'ಪ್ರಣಯ ಯಾತ್ರೆ' - ಶ್ರೀ. ಶತಾಯುಶಿ, ದಿವಂಗತ, ಎ.ಎನ್.ಮೂರ್ತಿರಾಯರು. ('ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಿಂದ ಆಯ್ದ ಭಾಗಗಳು) ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರಿನ ಪ್ರಕಟಣೆ- ೫೦ ನೆಯ ಪುಸ್ತಕ. ಶ್ರೀ ಎ. ಏನ್ ಮೂರ್ತಿರಾಯರು, ಸರಳ ಕತೆಗಳನ್ನು ಬರೆಯುವ ಪರಂಪರೆಗೆ ಹೆಸರಾದವರು. ಅವರ ಪ್ರಬಂಧಗಳನ್ನು ಓದಿದಮೇಲೆ ಎಂದೂ ಬರೆಯಲು ಸಾಹಸಮಾಡದಿದ್ದವರೂ ಸಹಿತ ಏನಾದರು ಬರೆಯಲು ಆರಂಭಿಸಿದರು. ಏನಾದರೂ ಬರೆದು ಪ್ರಕಟಿಸಲೇ ಬೇಕು ಎಂದು ಆಶಿಸುತ್ತಿದ್ದ ನನಗೆ ಜೀವಬಂದಂತಾಯಿತು. 'ಇಂಟರ್ ನೆಟ್' ಬಂದಮೇಲೆ ಬರೆಯುವ ಗೀಳು ಶುರುವಾಗಿ ಈ ಅಭಿಯಾನಕ್ಕೆ ಪುಷ್ಟಿ ಸಿಕ್ಕಿತೆಂದು ಹೇಳಿದರೆ ತಪ್ಪಾಗಲಾರದು ! (ಕಳಪೆ ಸಾಹಿತ್ಯಗಳೂ ನಾಯಿಕೊಡೆಯಂತೆ ಹುಟ್ಟಿಕೊಂಡವು ಎಂದರೂ ತಪ್ಪಿಲ್ಲ)  ಒಟ್ಟಿನಲ್ಲಿ ನಮ್ಮಪಾಲಿಗೆ ಸಿಕ್ಕಿರುವ ಈ ಸದವಕಾಶವನ್ನು ಚೆನ್ನಾಗಿ ಬಳಸೋಣ ಎನ್ನುವ ಮಾತಿನೊಂದಿಗೆ ಈ ಚಿಕ್ಕ ಲೇಖನವನ್ನು  ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.  ಮದುವೆಯಾದ ಹೊಸತರಲ್ಲಿನ 'ಪ್ರಣಯ' ನಮ್ಮೆಲ್ಲರ ಅನುಭವದ ಸಂಗತಿ. ಇದು ಇಂದು, ನಾಳೆಯ ಎಲ್ಲೆಗಳನ್ನೂ ಮೀರಿದಂತಹದು. ನಿನ್ನೆಗಳೂ ಅದಕ್ಕೆ ಹೊರತಲ್ಲ ! ಸುಮಾರು ೮ ದಶಕಗಳ ಹಿಂದಿನ ಭಾವ ತುಡಿತಗಳನ್ನು ಗಮನಿಸಿದರೆ, ಅವು ಇಂದಿನಷ್ಟೆ ವಸ್ತುನಿಷ್ಟವಾಗಿರುವುದು ನಮ್ಮ ಗಮನಕ್ಕೆ ಬರುವ ಸಂಗತಿ ! ಮದುವೆಯನಂತರ ಆಗುವ ದಿಢೀರ್ ಪರಿವರ್ತನೆಯೇ ಕಲ್ಪನೆಗೆ ಸಿಲುಕದ

೫೯ ನೆಯ ಸ್ವಾತಂತ್ರ್ಯದಿನೋತ್ಸ್ವವದ ದಿನ ೧೫, ಆಗಸ್ಟ್ ೨೦೦೬ ರಂದು !

ಹೌದು. ನಾಳಿದ್ದೇ ಅಲ್ವೆ, "ಸ್ವಾತಂತ್ರ್ಯದಿನಾಚರಣೆ" ದಿನ ! ತಿಲಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ಗಳಿಸಿ ಕೊಟ್ಟ ಸ್ವಾಧೀನತಾ ದಿನ ! ಬನ್ನಿ ಮೊದಲು ನಾವು ಇದರ ಮಹತ್ವವನ್ನು ಸರಿಯಾಗಿ ತಿಳಿದುಕೊಂಡು ನಮ್ಮ ಮಕ್ಕಳೊಡನೆ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ. ಈ 'ಸುದಿನ' ದಂದು ನಾವು ಅವರ ಹೃದಯದಲ್ಲಿ ದೇಶಪ್ರೇಮ ಬಿತ್ತಿ, ನೀರೆರದು ಬೆಳೆಸಲು ಪ್ರತಿಜ್ಞೆ ಮಾಡಬೇಕು. ಅದಕ್ಕಾಗಿ ನಾಳಿದ್ದು ಬರುವ ೧೫ ನೆಯ ತಾರೀಖಿನ 'ರಾಷ್ಟ್ರವ್ಯಾಪಿ ಹಬ್ಬ'ಕ್ಕೆ ಮಾನಸಿಕವಾಗಿ ಪೂರ್ತಿಯಾಗಿ ಸಿದ್ಧರಾಗಬೇಕಾಗಿದೆ. ಅಲೆಗ್ಝಾಂಡರನ ದಾಳಿಯಿಂದ ಹಿಡಿದು ೧೯೪೭ ರ ವರೆಗೆ ಅನೇಕ 'ವಿದೇಶಿ ಶಕ್ತಿಗಳು' ನಮ್ಮದೇಶದಮೇಲೆ ಮುತ್ತಿಗೆ ಹಾಕಿ, ಕೊಳ್ಳೆ ಹೊಡೆದು, ಸುಲಿಗೆ ಮಾಡಿ, ಸಂಪತ್ತನ್ನೆಲ್ಲಾ ದೋಚಿಕೊಂಡು ಪಲಾಯಮಾಡಿದ್ದರು. ಇನ್ನು ಹಲವರು ಈ ದೇಶದಲ್ಲೇ ತಳವೂರಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮ ಅಸ್ತಿತ್ವವೇ ಇಲ್ಲವೆನ್ನಿಸುವಂತೆ ಮಾಡಿದರು. ಹೀಗೆ ನಾವು ಶತಮಾನಗಳ ದಾಸ್ಯದ ಹೊರೆಯಿಂದ ನರಳಿ ಬೆಂಡಾಗಿದ್ದೆವು. ಕೊನೆಯ ೨೦೦ ವರ್ಷಗಳು ಬ್ರಿಟಿಷರ ಲೆಖ್ಖಕ್ಕೆ ಸೇರಿವೆ. ೧೫೦ ವರ್ಷಗಳ ಹಿಂದೆಯೇ ನಮ್ಮ ಸೇನೆಯ 'ಸಿಪಾಯಿ'ಗಳು ಇಂಗ್ಲಿಷ್ ಪ್ರಭುತ್ವವನ್ನು ಪ್ರತಿಭಟಿಸಿ ಹೋರಾಡಿದ್ದರು. ಆದರೆ ದೇಶದಲ್ಲಿ ಸಾಕಷ್ಟು ಬೆಂಬಲ ಸಿಗದೆ ಪ್ರತಿಭಟನೆಯ ಜ್ವಾಲೆ ಆಗಲೇ ನಂದಿತು !ಮ

'ಕ್ವಿಟ್ ಇಂಡಿಯ' ಆಂದೊಲನ ೧೯೪೨ ರ ಆಗಸ್ಟ್ ೮ ರಂದು !

Image
೧೯೪೨ ರ ಆಗಸ್ಟ್ ೮ ರಂದೇ 'ಕ್ವಿಟ್ ಇಂಡಿಯ ಆಂದೋಳನ' ಬೊಂಬಾಯಿನ ಗೊವಾಲಿಯ ಟ್ಯಾಂಕ್ ಬಳಿ ಶುರುವಾಗಿದ್ದು ! ಈ ದಿನ ಅಂದರೆ ೧೯೪೨ ರ ಆಗಸ್ಟ್ ೮ ನೆಯ ತಾರಿಖು, ಮಧ್ಯ ಬೊಂಬಾಯಿನ 'ಗೋವಾಲಿಯ ಕೆರೆಯ ಅಂಗಳ'ದಲ್ಲಿ (ಈಗ ಅದನ್ನು ಆಗಸ್ಟ್ ಕ್ರಾಂತಿ ಮೈದಾನವೆನ್ನುತ್ತಾರೆ.)ಮಹಾತ್ಮ ಗಾಂಧಿ ಯವರೂ ಸೇರಿದಂತೆ ಕಾಂಗ್ರೆಸ್ಸಿನ (ಎ.ಐ.ಸಿ.ಸಿ) ನಾಯಕರುಗಳೆಲ್ಲಾ ಸಮಾಲೋಚಿಸಿ 'ಕ್ವಿಟ್ ಯಿಂಡಿಯ' ಆಂದೋಳನವನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಘೋಷಿಸಿದರು. ಎರಡನೆ ವಿಶ್ವ ಯುದ್ಧ ಸಮೀಪಿಸುತ್ತಿತ್ತು. ಇಂಗ್ಲೆಂಡ್, ಭಾರತೀಯರ ಸಮ್ಮತಿ ಇಲ್ಲದೆ ನಮ್ಮ ಸೈನ್ಯವನ್ನು ಅವರ ಪರವಾಗಿ ಜರ್ಮನಿಯ ವಿರುದ್ಧ ಹೋರಾಡಲು ಆಜ್ಞಾಪಿಸಿತ್ತು. ಇದು ಗಾಂಧಿಜಿಯವರನ್ನು ಒಳಗೊಂಡಂತೆ ದೇಶದ ನಾಯಕರುಗಳಿಗೆ 'ಆಘಾತ' ತಂದಿತ್ತು. ಕಾಂಗ್ರೆಸ್ ಪ್ರತಿಭಟನೆ ಘೋಶಿಸುತ್ತಿದ್ದಂತೆ ಬ್ರಿಟನ್ ಸರ್ಕಾರ ಎಲ್ಲಾ ರಾಷ್ಟ್ರಪರ ಹೋರಾಟಗಾರರನ್ನೂ ಜೈಲಿನಲ್ಲಿ ಬಂಧಿಸಿದರು.ಆದರೆ ಇದರ ವಿರುದ್ಧ ಪ್ರಜೆಗಳು ದಂಗೆ ಎದ್ದರು. ದೇಶದಾದ್ಯಂತ ಪ್ರತಿಭಟನೆ ನಡೆಯಿತು. ಕೊನೆಗೆ ಭಾರತಕ್ಕೆ ವಿಜಯ ಸಿಕ್ಕು ದೇಶಕ್ಕೆ 'ಸ್ವಾತಂತ್ರ್ಯ' ಸಿಕ್ಕಿತು. ಇನ್ನೊಂದು ಘಟನೆಯೆಂದರೆ, ಆಗಸ್ಟ್ ೧೫ ರ ಮಧ್ಯರಾತ್ರಿ ನಮಗೆ ಸಿಕ್ಕ ಸ್ವಾತಂತ್ರ್ಯ ! ಅದೊಂದು ಸುದಿನ. ಮಹಾದಿನ ! ಭಾರತಿಯರೆಲ್ಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಸಂಘರ್ಷ ಮಾಡಿ ಬಲಾಢ್ಯ ಇಂಗ್ಲೀಷ್ ಆಡಳಿತವನ್ನು ಪರಿಸಮಾಪ

'ಇನ್ಪೊಸಿಸ್', ಕನ್ನಡ ನೆಲದ ಚೆಂದದ ಕುಸುಮ ಬೆಳ್ಳಿ ಹಬ್ಬ ಆಚರಿಸಿತು !

Image
'ಇನ್ಫೊಸಿಸ್' ಕನ್ನಡ ನೆಲದ ಚೆಂದದ ಕುಸುಮ : 'ಸಿಲ್ವರ್ ಜ್ಯುಬಿಲಿ' ಆಚರಿಸಿತು ! ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ' ಮೈಸೂರಿನಲ್ಲಿ, ಬೆಳ್ಳಿ ಹಬ್ಬ ಆಚರಿಸುತ್ತಿದೆ. ರಂಗ ಸಜ್ಜಿಕೆ ಎಲ್ಲಾ ವ್ಯವಸ್ಥಿತವಾಗಿದೆ. ಸ್ಥಳ : ಮೈಸೂರಿನ ಇನ್ಫೋಸಿಸ್ ಸಂಸ್ಥೆಯ, ೩೦೦ ಎಕರೆ ವಿಶಾಲ ವಿಶಾಲ ಭವ್ಯಾಂಗಣ ! ಪ್ಲ್ಯಾನಿಂಗ್ ಕಮೀಶನ್ ಉಪ ಅಧ್ಯಕ್ಷ, ಮೋನ್ಟೆಕ್ ಸಿಂಗ್ ಅಹ್ಲು ವಾಲಿಯ, ಕರ್ನಾಟಕದ ಮುಖ್ಯ ಮಂತ್ರಿ, ಕುಮಾರಸ್ವಾಮಿ, ನ್ಯಾಸ್ಡಾಕ್ ಸಿ.ಇ.ಒ, ಗ್ರೆವೀಲ್ಡ್, ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಸಾ.೭-೩೦ ಕ್ಕೆ, ಶ್ರಿ. ನಾರಾಯಣಮೂರ್ತಿ ಯವರು, ಘಂಟೆ ಜಗ್ಗಿ ಬಾರಿಸಿದಾಗ, ನ್ಯೂಯಾರ್ಕ್ ನ, 'ಟೈಮ್ಸ್ ಸ್ಕ್ವೇರ್' ನಲ್ಲಿರುವ ೭ ಅಂತಸ್ತಿನ ಭವ್ಯ ಕಟ್ಟಡದಲ್ಲಿ ನ ತೆರೆಯಮೇಲೆ ಬೆಳ್ಳಿಹಬ್ಬದ ಸಮಾರಂಭದ ದೃ‍ಷ್ಯಗಳು ಮೂಡಿ ಬಂದವು ! ಮೈಸುರಿನ ೩,೦೦೦ 'ಇನ್ಫೋಶಿಯನ್ಸ್' ಸಂಭ್ರಮದಿಂದ ಹರ್ಷೋದ್ಗಾರ ಮಾಡಿ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದರು. ಹೀಗೆ 'ಬೆಳ್ಳಿ ಹಬ್ಬ'ದ ಶುಭಾರಂಭವಾಯಿತು. ೧೯೮೧ ರಲ್ಲಿ ಶ್ರಿಮತಿ ಸುಧಾ ಮೂರ್ತಿಯವರ ಕೂಡಿಟ್ಟ ೧೦,೦೦೦ ರೂ. ಬಂಡವಾಳದಿಂದ ಆರಂಭಗೊಂಡ 'ಇನ್ಫೋಸಿಸ್' ಈಗ ದೈತ್ಯಾಕಾರವಾಗಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಹಬ್ಬಿದೆ. ಅಮೆರಿಕದಿಂದ ಹಿಡಿದು, ಯು.ಎ.ಐ.ವರೆಗೆ ಇದರ ಶಾಖೆಗಳಿವೆ. ಒಟ್ಟು ೫೮,೪೦೯ ಜನ ತಂತ್ರಜ್ಞ ರು ಎಡೆಬಿಡದೆ ದುಡಿಯುತ್ತಿದ್ದಾರೆ. ಅದರ ಆದ
Image
ಗೋಲಿಯೋ VI, ೨೦೦೬, ವಿಶ್ವಕಪ್ಪಿನ ಸಾಕರ್ ಆಟದ, ಎಂದೂ ಕಂಡು ಕೇಳರಿಯದ ಲಾಂಛನ (ಸಿಂಹ ಮಾನವ) ! ಗೊಲಿಯೋ VI, ವಿಶ್ವಕಪ್ ಕಾಲ್ಚೆಂಡಾಟ ೨೦೦೬,ರ ಎಂದೂ ಕಂಡು ಕೇಳರಿಯದ ಲಾಂಛನ,ದ ಅನಾವರಣ ಶನಿವಾರದಂದು,ಜರ್ಮನಿಯಲ್ಲಿ ನಡೆಯಲಿದೆ ! ವಿಶ್ವ ಫುಟ್ ಬಾಲ್ ಪ್ರೇಮಿಗಳು ಅತಿಸಂಭ್ರಮ, ಪ್ರೀತಿಗಳಿಂದ ನೋಡಲು ಕಾತರಿಸುತ್ತಿರುವ ಗೋಲಿಯೋ, ಶನಿವಾರದ ದಿನ ವಿಧ್ಯುಕ್ತವಾಗಿ ಜರ್ಮನಿಯ ದೂರದರ್ಶನ ಹಾಗು ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಳ್ಳಲಿದೆ. ಫಿಫಾ ಪ್ರಕಾರ, ಗೋಲಿಯೋ ಪದವನ್ನು ವಿಸ್ತರಿಸಿದರೆ, 'ಗೋ ಲಿಯೋ ಗೋ' ಎಂದಾಗುತ್ತದೆ. ಈ ಸಿಂಹ ಮುಖದ ಮಾನವನ ಕಾರ್ನಾಮಗಳೆಲ್ಲಾ, ವಿಶೇಷವೇ ! ಲೋಥರ್ ಮಾಥಿಯೊಸ್ ನ ಸುಂದರ ಮುಖ, ಡಿಯಾಗೋ ಮೆರಡೋನರ ನಾಜೂಕು, ಆಲಿವರ್ ಬಿಯರಾಫ್ ರ ಜಾತಿ, ಮತ,ಭಾಷೆಗಳ, ಭೇದವಿಲ್ಲದ ವಿಶ್ವಮಾನವತ್ವ ! 'ನಾನು ಹೊರಗೆ ಬಂದಾಗ, ನಿಮ್ಮೆಲ್ಲರ ಮೇಲೆ ಮಾಡುವ ಜಾದು ವಿನಿಂದ ಎಚ್ಚರವಾಗಿರಿ- ನನ್ನ ಹುಟ್ಟು ಗುಣವೆ ಅದು '! ಎನ್ನುತ್ತಾನೆ ಗೋಲಿಯೋ . ಆದರೆ ೨೧ ರಂದು, ಐವರಿಕೊಸ್ಟ್ ಪಂದ್ಯದ ಪುರ್ವಭಾವಿಯಾಗಿ ಎರಡು ನಿಮಿಷ ಕಂಡು, ಮುಖ ತೊರಿಸಿ ಮಾಯವಾದ ವಿಷಯ ತಿಳಿದುಬಂದಿದೆ. ಆ ದಿನ ಅವನು ಮಳೆಗಾಲದ ಟೊಪಿ, ಧರಿಸಿದ್ದನಂತೆ ! ಗೋಲಿಯೋ, ಮಾತಿನಮಲ್ಲ. ಹಾಡುಗಳನ್ನು ವಾದ್ಯದಲ್ಲಿ ನುಡಿಸಬಲ್ಲ. ಮಕ್ಕಳನ್ನು ಗೋಳ್ಹೊಯ್ಕೊತಾನಂತೆ ! ಅವನ ಕೈಯಲ್ಲಿ ಒಂದು ಚೆಂಡಿದೆ.ಅದರ ಹೆಸರು 'ಪಿಲ್ಲೆ'! ಈ ಕಾಲ್ಚೆಂಡು ಮಾತಾಡುತ

ಇಟಲಿ (ಅಝೂರಿ) ಇಂದು ವಿಶ್ವಕಪ್, ೨೦೦೬ ರ ಫುಟ್ಬಾಲ್ ಛಾಂಪಿಯನ್ !

Image
ಇಟಲಿ (ಅಝೂರಿ) ಇಂದು ವಿಶ್ವಕಪ್, ೨೦೦೬ ರ ಫುಟ್ಬಾಲ್ ಛಾಂಪಿಯನ್ ! ೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್, ಭಾನುವಾರ, ೯ ನೆ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್ ಬರ್ಲಿನ್ ನಲ್ಲಿ ನಡೆಯಿತು. ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸನ್ನು ಧ್ವಂಸ ಗೊಳಿಸಿ ಫುಟ್ಬಾಲ್ ಛಾಂಪಿಯನ್ ಪಟ್ಟವನ್ನೇರಿತು. ೧೨೦ ನಿಮಿಷದನಂತರವೂ ಈ ಹಣಾಹಣಿ ಕಾಳಗ ಮುಂದುವರಿದಾಗ, ಅಂತಿಮ ಫಲಿತಾಂಷ ನಿರ್ಧರಿಸಲು ಪೆನಾಲ್ಟಿ ಶೂಟ್ ಔಟ್ ನಿಂದ ಮಾತ್ರ ಸಾಧ್ಯವಾಯಿತು. ೧೯೮೨ ರಲ್ಲಿ, ಇಟಲಿ ವಿಶ್ವ ಛಾಂಪಿಯನ್ನಾಗಿತ್ತು. ಪುನಃ ೨೪ ವರ್ಷಗಳ ನಂತರ ಈ ಸನ್ಮಾನ ದಕ್ಕಿದೆ ! ಬಲಿಷ್ಟ ಫ್ರಾನ್ಸ್ ಮತ್ತು ಇಟಲಿ ತಂಡಗಳು ನಿಯಮಿತ ೯೦ ನಿಮಿಷಗಳ ಬೃಹತ್ ಸಮರದಲ್ಲಿ (೧-೧) ಡ್ರಾ ಮಾಡಿಕೊಂಡು ಸಮಬಲ ಸ್ಥಾಪಿಸಿದ್ದರು. ಫ್ರಾನ್ಸಿನ ನೆಚ್ಚಿನಆಟಗಾರ ಸಾಕರ್ ಮಾಂತ್ರಿಕ, ಕಪ್ತಾನ್ ಜಿದಾನೆಯವರು ಪಂದ್ಯದುದ್ದಕ್ಕೂ ಭವ್ಯ ಆಟದ ಪ್ರದರ್ಷನ ತೋರಿಸಿದ್ದು ಫೈನಲ್ಸ್ ನಲ್ಲು ಇದೆ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಫ್ರಾನ್ಸ್ ತಂಡವನ್ನು ಗೆಲುವಿಗೇರಿಸಲು ಬಹಳ ಶ್ರಮ ಪಟ್ಟರು. ತಮ್ಮ ೧೨ ವರ್ಷದ ಫುಟ್ಬಾಲ್ ವೃತ್ತಿ ಜೀವನದಲ್ಲಿ ಕ್ರೀಡಾಂಗಣದಲ್ಲಿ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಪ್ರಚಂಡ ಹರ್ಷೋದ್ಗರ, ಕರತಾಡನ ಹಾಗೂ ಶ್ಲಾಘನೆಗಳ ಮಹಾಪೂರದ ಮಧ್ಯೆ ತಮ್ಮ ನಿವೃತ್ತಿಯೊಡನೆ ವಿದಾಯ ಘೋಷಿಸುವ ಕನಸು ಕಾಣುತ್ತಿದ್ದರು. ಹಾಗೆಯೇ ಉದ್ವಿಗ

ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !

Image
ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ ! Tags: ಪ್ರಚಲಿತ ಕರ್ತೃ venkatesh ದಿನಾಂಕ Sun, 2006-07-09 21:37 ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್, ನವೆಂಬರ್, ೮, ೧೯೦೮ ರಲ್ಲಿ ಬಹಳ ಹೆಸರುವಾಸಿಯಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರ ಶಿಕ್ಷಣ ಬಾಲ್ಯದಿಂದ ಪದವಿಯವರೆವಿಗೂ ಕನ್ನಡನೆಲದಲ್ಲೇ ನಡೆಯಿತು. ಸ್ನಾತಕೊತ್ತರ ಶಿಕ್ಷಣಕ್ಕಾಗೆ ಅವರು ಯುರೊಪಿನ ಸೋರ್ಬೊನಿಯದ, ಮೌಂಟ್ ಪೆಲೀರ್ ವಿಶ್ವವಿದ್ಯಾನಿಲಯದಲ್ಲಿ ಸಂಶೊಧನೆ ಮಾಡಲು ತಮ್ಮ ೧೯ ನೇ ವಯಸ್ಸಿನಲ್ಲೇ ಹಡಗಿನಲ್ಲಿ ಪ್ರಯಾಣ ಮಾಡಿದರು.ಅಲ್ಲಿ, ಅವರ ಶಿಕ್ಷಣವೆಲ್ಲಾ ಪ್ರೆಂಚ್ ಭಾಷೆಯಲ್ಲಿ ನಡೆಯಿತು.ಆದರೆ ಅವರು ಮುಂದೆ ಬರೆದ ಕಾದಂಬರಿಗಳೆಲ್ಲಾ ಹೆಚ್ಚಾಗಿ ಇಂಗ್ಲೀಷಿನಲ್ಲೇ ! ಫ್ರಾನ್ಸಿನಲ್ಲಿ ಕಳೆದ ೧೦ ವರ್ಷಗಳ ಜೀವನದಲ್ಲಿ, ೧೯೩೧ ರಲ್ಲಿ ಫ್ರೆಂಚ್ ಭಾಷಾ ತಜ್ಞೆ, 'ಕ್ಯಾಮಿಲ್ಲೆ ಮೌಲಿ'ಯವರ ಒಡನಾಟದಿಂದ ಪ್ರಾರಂಭವಾಗಿ ಮದುವೆಯಲ್ಲಿ ಕೊನೆಗೊಂಡಿತು.೧೯೩೯ ರಲ್ಲಿ ಕಾರಣಾಂತರಗಳಿಂದ ಮದುವೆ ಮುರಿಯಿತು. ೧೯೩೧-೩೨ ರಲ್ಲಿ ಅವರು ೪ ಕನ್ನಡ ಲೇಖನಗಳನ್ನು 'ಜಯಕರ್ಣಾಟಕ' ವೆಂಬ ನಿಯತಕಾಲಿಕಕ್ಕೆ ಬರೆದುಕೊಟ್ಟಿದ್ದರು.ವಿವಾಹ ವಿಚ್ಛೇದನದ ನಂತರ, ಬೇಸತ್ತ ಅವರು, ಭಾರತಕ್ಕೆ ಬಂದು ಕೆಲವುಕಾಲ ಆಶ್ರಮಗಳಲ್ಲಿ ಕಳೆದರು.

ಡಾ.ಯು.ಬಿ.ರಾವ್- ಒಂದು ಸವಿನೆನಪು !

ಡಾ.ಯು.ಬಿ.ರಾವ್- ಒಂದು ಸವಿನೆನಪು ! ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ.ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ 'ಪೇನಲ್ ಡಾಕ್ಟರ್'. ಮಾತುಂಗಾದಲ್ಲೇ ಬಹಳ ಜನಪ್ರಿಯ ವೈದ್ಯರು ! ಒಮ್ಮೆ ನಾನು ನನ್ನ ಹೆಂಡತಿ ನಮ್ಮ ಮಗು ರವಿ,ಯನ್ನು ಅವರಬಳಿ ತೋರಿಸಲೆಂದು ಕರೆದುಕೊಂಡು ಹೋಗಿದ್ದೆವು. ರವಿ, ಸ್ಪಲ್ಪ ಸಪೂರಾಗಿದ್ದ.ಆದರೆ ಆಟ ಆಡಿಕೊಂದಿದ್ದ; ಗೆಲುವಾಗಿದ್ದ. ನಮ್ಮಪಡೋಸಿ, 'ಓಜಾ' ರವರು ಅವನನ್ನು ಕಂಡಾಗಲೆಲ್ಲಾ 'ಕಿತನ ಪತಲ ಹೈ, ಕುಚ್ ಅಚ್ಚ ಖಿಲಾವ್ ಪಿಲಾವ್' ಎಂದು ಹೇಳುತ್ತಲೇ ನಮ್ಮಿಬ್ಬರನ್ನು ಪೇಚಿಗೆ ಸಿಲುಕಿಸುತ್ತಿದ್ದರು.ನಮ್ಮ ತಾಯಿಯವರ ಪ್ರಕಾರ, 'ಕೆಲವು ಮಕ್ಕಳು ಚಿಕ್ಕವಯಸ್ಸಿನಲ್ಲಿ ಹಾಗೆ ಇರುತ್ತಾರೆ. ಕ್ರಮೇಣ ಎಲ್ಲಾ ಸರಿಹೋಗುತ್ತೆ' ಎಂದು ಹೇಳಿದ್ದು ತಲೆಗೆ ನಾಟಲಿಲ್ಲ. ಮೊದಲು ರವಿಯನ್ನು ಬೆಂಚಿನ ಮೇಲೆ ಮಲಗಿಸಿ ಎಲ್ಲಾ ತಪಾಸಣೆ ಮಾಡಿದರು. ಹೆಚ್ಚಿನ ಯಾವ ಸಮಸ್ಯೆಯು ಇದೆಯೆಂದು ಅವರಿಗೆ ಅನ್ನಿಸಲಿಲ್ಲ ಎಂದು ತೋರಿತು. ತಕ್ಷಣ ನಮ್ಮ ಕಡೆಗೆ ತಿರುಗಿ, 'ಏನ್ರಿ, ಹೇಗಿದೆ ಮಗು' ಎಂದು ಡಾ. ರಾವ್ ಕೇಳಿದಾಗ, ನಾನು, ಅವಳು, ಉಸುರು ಸಿಕ್ಕಿಹಾಕಿ ಕೊಂಡವರಂತೆ ಒಮ್ಮೆಲೇ,'ತಟ್ಟೆಯಲ್ಲಿ ಕಲಸಿದ ಅನ್ನ ಪೂರ್ತಿ ತಿನ್ನಲ್ಲ, ಬೆಳಿಗ್ಯೆ ಮದ್ಯಾನ್ಹ, ರಾತ್ರಿ ಕೊಟ್ಟ ಕಾಂಪ್ಲ

ಹೊಳಲ್ಕೆರೆಗೆ ಪ್ರಥಮಸ್ಥಾನ, ಚಂದ್ರಶೇಖರನ ಅಖಂಡವಿಜಯ !

Image
ಹೊಳಲ್ಕೆರೆಗೆ ಪ್ರಥಮಸ್ಥಾನ, ಚಂದ್ರಶೇಖರನ ಅಖಂಡವಿಜಯ ! ಪರೀಕ್ಷೆಯ ಫಲಿತಾಂಷಗಳು ದಿನಪತ್ರಿಕೆಗಳಲ್ಲಿ : ಮೇಲಿನ ವರದಿ ಮಾಡಿದ್ದು  'ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ. ವರ್ಷ 1962.  ಆ ದಿನ ಬೆಳಿಗ್ಯೆ ತಾನೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಷಗಳನ್ನು ಪೇಪರ್ ನಲ್ಲಿ ಪ್ರಕಟಿಸಿದ್ದರು. ಅಂದಿನ ದಿನಗಳಲ್ಲಿ ಫಲಿತಾಂಷಗಳನ್ನು ಹೀಗೆಯೇ ದಿನ ಪತ್ರಿಕೆಗಳಲ್ಲಿ ಮುದ್ರಿಸುತ್ತಿದ್ದರು. ನಂತರ ಮುಂದಿನ ವರ್ಷಗಳಲ್ಲಿ ನಾವೆಲ್ಲಾ  ದಿನಪತ್ರಿಕೆಗಳ ಮೊದಲ ಪುಟದಲ್ಲೇ ಚಿತ್ರ ಸಹಿತಾ ಅವನ ಪರೀಕ್ಷೆಗಳ ಫಲಿತಾಂಶಗಳನ್ನು ನೋಡುತ್ತಾ  ಬಂದೆವು .                                                                                                                     ನಮ್ಮಪ್ರೀತಿಯ  ಅಮ್ಮ  ಇದಾದ ತರುವಾಯ ಕಾನ್ಪುರ್ ಐ. ಐ. ಟಿ. ಯಲ್ಲೂ ಅವನು ಎಂದಿನಂತೆ ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾದ ಸುದ್ದಿ ಅವನಿಂದ ಕೇಳಿದ್ದೆವು.  ಹೊಳಲ್ಕೆರೆಯ 'ಹೈದ' ಚಂದ್ರಶೇಖರ, ಮೈಸೂರು ರಾಜ್ಯಕ್ಕೇ ಪ್ರಥಮನಾಗಿ (ರ‍್ಯಾಂಕ್ ) ಉತ್ತೀರ್ಣ ಗೊಂಡಿದ್ದ !  ನಮ್ಮ ತಾಯಿ ರಾಧಮ್ಮನವರು,  ಅವನ ಪರೀಕ್ಷೆಯ ಬಗ್ಗೆ ತುಂಬಾ ತಲೆಗೆ ಹಚ್ಚಿಕೊಂಡಿದ್ದರು. ಬಗ್ಗೆ ಅವರಿಗೆ ಹೆಚ್ಚು ತಿಳಿಯದಿದ್ದರೂ ಅವರು  ಪಟ್ಟ ಆನಂದ ಮತ್ತು ತಾವು ಹರಸಿಕೊಂಡಿದ್ದ ಎಲ್ಲಾ ದೇವರುಗಳಿಗೂ ಸಲ್ಲಿಸಿದ ಪೂಜೆ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.  ಗ

ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ !!

ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ !! ಅರೆ ಎಂಟಣ್ಣ, ಏನಾಯ್ತು ? ನೆಟ್ಗಿದಿಯೆನಪ್ಪ ! ಎನೊ ಆಡೆಳ್ತಿದಿಯಲ್ಲಪ್ಪ ! ಎ ತೆಗ್ಯಯಪ್ಪ, ನಿನೊಳ್ಳೆ, ನನ್ಗೆನಾಗೈತೆ, ದೆವ್ನಂಗ್ ನಿನ್ ಮುಂದ್ ಕಾಣ್ತಿಲ್ವ. ನಾನು..ನಾನು...ಬಂದಿದ್ಯಾಕೆ ? ಅ ... ಗ್ಯಪ್ತಿ ಬಂತಪ. ಎಳ್ತಿನ್ ತಾಳು. " ನಿನ್ನಿನ್ ಮ್ಯಾಚ್ ನಾಗೆ ಗುಂಗುರ್ ಕುದ್ಲಿನ್ ಉಡ್ಗ ಕೊನ್ಯಾಗೆ ಗೊಲ್ ಬಡೀಲಿಲ್ವ ! ' ಮಸ್ಯಪ್ಪ,' ಅದ್ನ, ನಿನ್ ನೊಡ್ದಾ ಎಂಗೆ, ಅಂತ ತಿಳ್ದ್ ಒಗ್ವ; ಸರಿ ನೀನ್ ನೋಡ್ದೆ- ಸಂಕೆ, ಪರಿಆರ ಆತು ಬಿಡ್ಪಾ,ಎಂಕ್ಟೇಸಪ್ಪ : ' ಎಂಥ ಗೊಲೊ ಮಾರಾಯ ಅದು.' ಮ್ಯರಡೊನ ಹೇಳಿದ್ನಿಜ ನೋಡು."ಇಂತ ಗೋಲ್ ಹೊಡ್ಯೊ ತಂಡ ಸೊಲೊದ್ ಸಾಧ್ಯವೆ "? ಸರಿ ಬಿಡು, ನಾನ್ ಒರಟೆ; 'ನಿನ್ ಸಂಪ್ದ ಕ್ಕೆನೊ ಬರಿತೊಯೊ ಎನಪ'. 'ಅದೆ ಬಿಟಿ ಅತ್ತಿ ಬೀಜ, ಕೊಳ್ಬೆಕು. ಯದ್ವ ತದ್ವ ಬೆಲೆಗೊಳ್ ಎರ್ಸವ್ರೆ, ಯಡ್ವಟ್ ಆದೀತು, ಬತ್ತಿನಪ್ಪೊ',ಬರ್ಲಾ ! ಇಂತಹ ಸರಳ ಹೃದಯದ ಎಂಟಪ್ಪ, ಎಲ್ಲರ ಹಿತ ಬಯಸೊನು, ಅವನ ಬಾಯ್ನಲ್ಲಿ ಎಲ್ರು ಅಪ್ಗಳೆ ! 'ಮೆಸ್ಸಿ' ಅವನ್ ಲೆಕ್ದಲ್ಲಿ ಮಸ್ಯಪ್ಪ ! ಜರ್ಮನಿಯ 'ಸಿ 'ಗ್ರುಪ್ ನ ಅರ್ಜೆಂಟೈನ ಸರ್ಬಿಯ ಮಾಂಟೆನೆಗ್ರೋ ವಿರುಧ್ದ ಆಡಿದ ಆಟದಲ್ಲಿ (೬-೦) ಗೊಲಿನಿಂದ ಭರ್ಜರಿ ವಿಜಯ ಗಳಿಸಿ ಮುಂದೋಡಿದೆ. ಈ ಸಂಭ್ರದ ಪಂದ್ಯ, ಜಿಲ್ ಸಿಂಕರ್ ಜೆನ್ ನ ಎಫ್.ಸಿ ಶಾಲ್ಕೆಸ್ ಸ್ಟೇಡಿಯಂ ನಮು

ತಿರುಮಂತ್ರ- ಜಿ.ಪಿ.ರಾಜರತ್ನಂ !

Image
ರಾಜರತ್ನಂ ಬರೆದ 'ಬಣ್ಣದ ತಗಡಿನ ತುತ್ತೂರಿ'...... .. ಎಂಡಕುಡಕ್ ರತ್ನ....ಇತ್ಯಾದಿಗಳು ಎಲ್ಲರಿಗೂ ಚಿರಪರಿಚಯ. ಅವರು ಜೈನ ಸಾಹಿತ್ಯದ ಬಗ್ಯೆಯೂ ವಿಪುಲವಾಗಿ ಬರೆದಿದ್ದಾರೆ. ಅವರ ಕವನ ಸಂಗ್ರಹ ದಿಂದ ಕೇವಲ ಕೆಲವು ಕವನಗಳೇ ಪುನರಾರ್ವರ್ತನೆ ಯಾಗುತ್ತಿವೆ. ಇನ್ನು ಹಲವು ವಿಶೇಷ ಕವನಗಳು ಮನರಂಜನೆಗೆ ವ್ಯಂಜನಗಳಾಗಿವೆ. ನನಗೆ ಹಿಡಿಸಿದ ಒಂದು ಕವನದ ಗೊಂಚಲನ್ನು ಕೆಳಗೆ ಕೊಟ್ಟಿದ್ದೇನೆ. ಅದು 'ತಿರುಮಂತ್ರ' ಎಂಬ ಶೀರ್ಷಿಕೆಯಡಿಯಲ್ಲಿ ಇದೆ. ಓದಿ ಆನಂದಿಸಿ. ಇನ್ನೂ ಕೆಲವು ಕವನಗಳು ಸೊಗಸಾಗಿವೆ. ಓದಲು ಇಚ್ಛಿಸಿದರೆ, ಜಿ.ಪಿ.ರಾಜರತ್ನಂ, ಪ್ರಕಟಿಸಿದ ಪುಸ್ತಕ 'ನಾಗನಪದಗಳು', ವಿದೇಹ', ೭೭೧, ೧೭ನೆ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರಿಗೆ ಬರೆದು ಪಡೆಯಿರಿ. ತಿರುಮಂತ್ರ ! ಯಾಂಡಲ್ ಯಿಂಗ್ ಯಿಡೀಕ್ಕ ! ಶೀಟ್ ಮ್ಯಾಗ್ ಮಡೀಕ್ಕ ! ಐ...ನಾಚ್ ಕ್ಯಾಕೆ ಮಲ್ಲಿ ? ಯಾರೆ ಔರ್ ಇಲ್ಲಿ ? ತಿಂಗಳ್ ಇದ್ರೇನೇ ? ಸುತ್ತೆಲ್ಲ ಮಬ್ಬು. ಬೇಕಾರೆ ನೀ ನನ್ನ ಯಿಂಗ್ ಇಲ್ಲೆ ತಬ್ಬು ಪತ್ತೇನ್ ಆಗೊಲ್ಲ ! ನೋಡೋರ್ ಯಾರಿಲ್ಲ ! ಯಿಂಗ್ ಕುಂತರ್ ಎಂಗೆ ? ನಾ ಕಲಿಶಿ ಕೊಡಕ್ ಉಂಟ ? ಯಾಕೆ ಪಿರಕೀ? ನಿಂಗೆ ಸಡಿಲನಾ ಸೊಂಟ ? ನಂಬು ನಿನ ಪಕದಾಗ ನಾನ್ ಇರೋಗಂಟ- ಮೀಶೆ ಮ್ಯಾಗ್ ಯಿಂಗ್ ಕೈಯಿ ! ಬೈಸಿಕಲು ಬಂಟ ! ಅಕ್ಕಳಿಸಿತು- ಎಳೆ -ಎಳಕೋ -ವೊಟ್ಟೇ- ವೊಳೀಕೆ ! ಮುಂಬಾರ ! ಅಯ್ ! ಅಷ್ಟು ಬಗ್ ಬ್ಯಾಡ್ ಕೆಳೀಕೆ ! ಆ ! ಅಂಗೆ ! ಕುದು