Posts

Showing posts from April, 2006

'ವಿಕೆಟ್' ಅಲ್ಲ 'ವಿಟೆಟ್' !

'ವಿಕೆಟ್' ಅಲ್ಲ 'ವಿಟೆಟ್' ! 'ಅಂದ್ರೆ ಏನಿದ್ರರ್ಥ' ? ತಾಳಿ. 'ಕೋಪಮಾಡ್ಕೋಬೇಡಿ'. ಇದನ್ನ ನಾನು ಯಾವರ್ಥದಲ್ಲಿ ಹೇಳ್ತಿದೀನಿ ಅಂದ್ರೆ, ನೆನ್ನೆ, ಟಾಟರವರ, 'ಯೆಲ್ಲೋ ಪೇಜಸ್' ನೋಡ್ತಿದ್ದೆ. ಮುಂಬೈನಲ್ಲಿ ನೋಡುವ ಸ್ಥಳಗಳನ್ನೆಲ್ಲಾ ಕೊಟ್ಟಿದ್ದರು. ಪ್ರಿನ್ಸ್ ಆಫ಼್ ವೇಲ್ಸ್ ಮ್ಯೂಸಿಯೆಮ್ ಕಟ್ಟಿದ ವ್ಯಕ್ತಿ, 'ಜಾನ್.ವಿಕೆಟ್', ಎಂದಿತ್ತು. ಇದನ್ನು ಓದಿದ ಮೇಲೆ, ಬೇಸರವಾಯ್ತು ನೋಡಿ !ಅದನ್ನು ನಿರ್ಮಿಸಿದ ಶ್ರೇಷ್ಠ 'ಇನ್ ಡೋ ಸರಿಸಿನಿಕ್ ಶ್ಯಲಿಯ' ಭವ್ಯ 'ಶಿಲ್ಪಿ', 'ಜಾನ್ ವಿಟೆಟ್'. (೧೮೭೮-೧೯೨೬) ಈತ ಹುಟ್ಟಿದ್ದು ಸ್ಕಾಟ್ಲ್ಯಂಡಿನ ಬ್ಲೇರ್ ಅಥೋಲ್ ನಲ್ಲಿ. ಬಾಲ್ಯದಿಂದಲೇ ನಿರ್ಮಾಣದಲ್ಲಿ ಅತೀವ ಆಸಕ್ತಿ, ಶ್ರದ್ಧೆ. 'ಎಡಿನ್ಬರ' ಮತ್ತು 'ಯಾರ್ಕ್' ಗಳಲ್ಲಿ ನಡೆಯುತ್ತಿದ್ದ ಸ್ಕಾಟ್ಲ್ಯಾಂಡಿನ 'ಪರ್ತ್' ನಿಂದ ಬಂದ, ಮಿ.ಹೇಟನ್, ನ ಜೊತೆ, ಕಾರ್ಯದಲ್ಲಿ ಸಹಾಯಕನಾಗಿ ಕೆಲಸ ಮಡುತ್ತಿದ್ದು, ೧೯೦೪, ರಲ್ಲಿ ಬೊಂಬಾಯಿಗೆ ಬಂದ.ಆಗ ಬೊಂಬಾಯಿ ಸರ್ಕಾರದ ಪ್ರಮುಖ ಆರ್ಕಿಟೆಕ್ಟ್, ಜಾನ್ ಬೇಗರ ಸಹಾಯಕನಾಗಿ ಸೇರಿದ. ಬೇಗರು, 'ಇನ್ಡೋಸೆರಿಸಿನಿಕ್' ಎಂಬ ಹೊಸ ಶೈಲಿಯ ನಿರ್ಮಾಣವನ್ನು ಹುಟ್ಟು ಹಾಕಿ, 'ಜನರಲ್ ಪೋಸ್ಟ್ ಆಫ಼ೀಸಿ'ನಂತಹ ಹಲವು ಭವ್ಯ ಕಟ್ಟಡ ಗಳಿಗೆ ಸಲಹೆಕಾರರಾಗಿ ದುಡಿಯುತ್ತಿದ್ದರು. ಜಾನ್ ಬೇಗರ ಗರಡಿಯಲ್ಲಿ ಪಳಗ

ಬೆಸ್ಟ್ ಆಫ್ ನಾ ಕಸ್ತೂರಿ, ( ನಾ ಕಸ್ತೂರಿಯವರ ಆಯ್ದ ನಗೆಬರಹಗಳು )

ಬೆಸ್ಟ್ ಆಫ್ ನಾ ಕಸ್ತೂರಿ, ( ನಾ ಕಸ್ತೂರಿಯವರ ಆಯ್ದ ನಗೆಬರಹಗಳು ) ನಾ. ಕಸ್ತೂರಿ, ಕನ್ನಡ ದೇಶದಲ್ಲಿ ಜನಿಸದಿದ್ದರೂ, ಕನ್ನಡದ ಹಾಸ್ಯ ಸಾಹಿತ್ಯದ ಪರಂಪರೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದರು ಎಂದರೆ ಸುಳ್ಳಲ್ಲ.ಕನ್ನಡದಲ್ಲಿ ಹಾಸ್ಯ ಸಾಹಿತ್ಯದ ಬೆಳವಣಿಗೆಯ ಪ್ರಥಮ ಹಂತದಲ್ಲಿ ಅವರ ಪಾಲೂ ಬಹು ಮುಖ್ಯ. ಶ್ರೀಮತಿ ಸುನಂದಮ್ಮ, ಆರಾಸೆ, ದಾಶರಥಿ ದೀಕ್ಷಿತ್, ಜಿ. ಪಿ ರಾಜರತ್ನ್, ಮುಂತಾದವರು ಸೇರಿ 'ಕೊರವಂಜಿ' ಎಂಬ ಪತ್ರಿಕೆಯನ್ನು ಹೊರತಂದಿದ್ದರು. ಹೆಸಾರಂತ ಡಾ. ಶಿವರಾಂ ಅವರೇ ಅದರ ಸಂಪಾದಕರು. ಆರ್. ಕೆ ಲಕ್ಶ್ಮನ್ ರವರ ವ್ಯಂಗ್ಯ ಚಿತ್ರಗಳು ಈ ಪತ್ರಿಕೆಯಿಂದಲೇ ಬೆಳಕಿಗೆ ಬಂದು ಪ್ರಖ್ಯಾತರಾದರು. ಅವರಿನ್ನೂ ಆಗ ಬೆಂಗಳೂರಿನಲ್ಲೇ ಇದ್ದರು. ಕೊರವಂಜಿಯ ಮುಖಪುಟವನ್ನು ಕಲಾತ್ಮಕವಾಗಿ ರಚಿಸಿದ್ದರು. ನಾ ಕಸ್ತೂರಿಯವರು ಬರೆದ, ಅನರ್ಥಕೋಶ, ಗಗ್ಗಯ್ಯನಗಡಿಬಿಡಿ, ಕಾಡಾನೆ, ವರಪರೀಕ್ಷೆ, ತಾಪತ್ರಯತಪ್ಪಿತು, ಬ್ಯಾಂಕಿನ ದಿವಾಳಿ, ರಾಮಕ್ರುಷ್ನಯ್ಯನ ದರ್ಬಾರಿನಂತಹ ನಾಟಕಗಳನ್ನು ರಚಿಸಿದರು.ಈ ಎಲ್ಲಾ ನಗೆ ಬರಹಗಳನ್ನೂ ಒಂದೆಡೆ ಕ್ರೊಢೀಕರಿಸಿ " ಬೆಸ್ಟ್ ಆಫ್ ಕಸ್ತೂರಿ"ಎಂಬ ಶೀರ್ಶಿಕೆ ಯಲ್ಲಿ ಶ್ರಿ. ವೈ. ಎನ್. ಗುಂಡೂರಾಯರು ಸಂಪಾದಿಸಿ ಹೊರತಂದಿದ್ದಾರೆ. ಉಪಯುಕ್ತವಾದ ಚಿತ್ರಗಳನ್ನು ಬರೆದ ಹರಿಣಿಯವರು ಪುಸ್ತಕದ ಸವಿಯನ್ನು ಇಮ್ಮಡಿ ಯಾಗು ವಂತೆ ಮಾಡಿದ್ದಾರೆ.ಹಳೆಯ ಗಾದೆಗಳು ಕಸ್ತೂರಿಯವರ ಲೇಖನಿಂದ ಬಂದಮೇಲೆ ಹೊಸ ಮೆರುಗನ್ನು ಪಡೆಯುತ

೧೦ ವರ್ಷದ ನಂತರ ಹಳ್ಳಿಯಲ್ಲಿ ಕಂಡ ಹುಡುಗಿಯರು.

೧೦ ವರ್ಷದ ನಂತರ ಹಳ್ಳಿಯಲ್ಲಿ ಕಂಡ ಹುಡುಗಿಯರು. -ಶ್ರೀ. ಎಚ್.ಎಸ್. ವೆಂಕಟೇಶ ಮೂರ್ತಿ. ನನ್ನ ಕಣ್ಮುಂದೆಯೇ ಆಟಾಡಿಕೊಂದಿದ್ದಹುಡುಗಿಯರು ಈಗ ಹೆಂಗಸರು. ಕಣ್ಣಿನ ಸುತ್ತಕಪ್ಪು ಬಳೆ. ಒಳಸರಿದ ಕೆನ್ನೆ. ಮೊಲೆಗಳ ಜೋಲು.ತಕ್ಷಣವೇ ಸೆರಗೆಳೆದು ನಾಚಿ ತುಳುಕುವ ಬಿಂಕಎಲ್ಲಿ ಹೋಯಿತೋ ? ನನ್ನ ಎದುರೆ ಸಾಂಗೋಪಾಂಗಹರಿದ ಕುಪ್ಪಸದಿಂದ ಹೊರಗೆಳೆದು ಮೂಳೆಮೈಮಗುವಿಗೂಡಿದರು. ಕಣ್ಣಲ್ಲಿ ತಾಯ್ತನದೊಂದುಸಂತ್ರುಪ್ತ ಭಾವವೋ...ಬಡತನವು ಕರುಣಿಸಿದನಿರ್ಭಾವವೋ ..? ಇವರೆ ? ಇವರೆ ಆ ಹುಡುಗಿಯರು ?ಕಣ್ಣಲ್ಲಿ ಮಿಂಚಿ. ಕೆನ್ನೆಯಲ್ಲಷ್ಟು ಕೆಂಪಾಗಿಸರಿದು ಕಂಬದ ಹಿಂದೆ ಕಿವಿಯಾಗಿ ನಿಂತವರು ?ಕೊಟ್ಟ ಹಾಲನು ಕುಡಿದು ಹೋಗಿಬರಲೇ ಎಂದೆ. ಕನ್ನಡಕ ವಿಟ್ಟು ..ಮೆಲ್ಲನೆ ಮೆಟ್ಟಿಲನ್ನಿಳಿದು..ಏದುಸಿರು ಬಿಟ್ಟಾಗ ...ಲೊಚಗುಟ್ಟಿದರೆ ಅವರು ? -ವೆಂ. ('ಎಶ್ಟೊಂದು ಮುಗಿಲು,' ಕವನ ಸಂಕಲನದಿಂದ ಆಯ್ದ ಕವನ.)

ಬದುಕು ನನಗೇನು ಕಲಿಸಿದೆ ?

ಬದುಕು ನನಗೇನು ಕಲಿಸಿದೆ ? ಡಾ. ಎಚ್.ಎನ್. ಹೀಗೆ ಹೇಳುತ್ತಾರೆ. ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಶ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶ್ಯ ವಿದೆಯೇ, ಸಾವು ಬದುಕಿನ ಕೊನೆಯೇ ? ಮರಣಾ ನಂತರ ವ್ಯಕ್ತಿತ್ವ ಉಳಿಯಬಲ್ಲುದೇ ? ಎನ್ನುವ ತತ್ವ ಶಾಸ್ತ್ರದ ಸಮಸ್ಯೆಗಳು ಕೇವಲ ನನ್ನ ಇಳಿಗಾಲದ ಯೋಚನೆಗಳಲ್ಲ. "ನಾನು ನಾಸ್ತಿಕನಾದರೂ ಅಂಧ ಮೂರ್ತಿಬಂಜಕನಲ್ಲ. ಮಾನವ ಕೆಂದ್ರಿತ ಧರ್ಮಗಳಲ್ಲಿ ನನಗೆ ನಂಬಿಕೆ. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು-ಅಮಾನವೀಯ , ಅಪ್ರಮಾಣಿಕ ಆತ್ಮ ಕೆಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಿಗಿಂತ ಉತ್ತಮನೆಂದು ಪರಿಗಣಿಸುತ್ತೇನೆ. ವಿಜ್ಞಾನದಲ್ಲಿ ನನಗೆ ಸಧೃಢವಾದ ನಂಬಿಕೆಯಿದೆ.ಏಕಕೋಷಜೀವ ಅಮೀಬದಿಂದ ಮೊದಲ್ಗೊಂಡು ಮಾನವನ ವಿಕಾಸ ದಿಜ್ಞ್ಮೂಢ ಗೊಳಿಸುವಂತಹದ್ದು. ಮತ್ತು ವಿಸ್ಮಯಕಾರಿ. ಹಿಮ್ಮರಳಿ ನೋಡಿದಾಗ ನನ್ನ ಜೀವನ ನನ್ನನ್ನೇ ದಿಗ್ಭ್ರಮೆ ಗೊಳಿಸುತ್ತಾದರೂ ಈ ಎಲ್ಲಾ ವಿವಾದಗಳ, ನಿಗೂಢಗಳ, ಒಗಟುಗಳ ನಡುವೆಯೂ ಸಮಸ್ಯೆಯನ್ನು ವೈಚಾರಿಕ ದೃಶ್ಟಿ ಕೋನದಿಂದ ಗಮನಿಸುವುದರಲ್ಲಿ ನನ್ನ ಕಾಲುಗಳು ದೃಢವಾಗಿ ಬೇರೂರಿವೆ. ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆ

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು !

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು ! ಈ ತಿಂಗಳ ೨೪ ರಂದು ಡಾ. ರ್‍ಆಜ್ ಕುಮಾರ್ ಹುಟ್ಟಿದಹಬ್ಬ. ೭೭ ವರ್ಷಗಳು ತುಂಬಿ ೭೮ ಕ್ಕೆ ಕಾಲಿರಿಸುತ್ತಾರೆ. ಕನ್ನಡದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅವರು ನಟ ರಾಜ್ ಆಗಿ ಮೆರೆದ ವರ್ಷಗಳು ಅನನ್ಯ. ಅವರೀಗ ಭೌತಿಕವಾಗಿಕಾಣಿಸದಿದ್ದರೂ, ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ! ಆ ಕ್ಷಣಗಳನ್ನು ಸ್ಮರಿಸಲು ಬರೆದ ಭಾವಪೂರ್ಣ 'ಶ್ರಧ್ಧಾಂಜಲಿ' ಇದು : ಬಹುಶಃ ಯಾವ ಪ್ರಾಸ, ಚಂದಸ್ಸಿಗೂ ಒಳಪಡದ ಪದ್ಯವೆಮ್ದು ಹೇಳಲು ಯಾವ, ಸತ್ವಯುತ-ಆಧಾರವಿಲ್ಲದ ಪ್ರೀತಿಯ ನಮನವೆಮ್ದು ಸ್ವಿಕರಿಸಿ ಓ ನನ್ನ ಕನ್ನಡದ ಬಳಗವೇ !! ಪಾರ್ಕಿನೊಳು ಕುಳಿತೆದ್ದೆ, ಥಟ್ಟನುಲಿಯಿತು ಮನವು ಭುಗಿಲೆದ್ದು ಮಿಡಿಯಿತುಹೃದಯವಲ್ಲಿ ! ಏನು ಬರೆಯಲಿ ನಾನು ಸಂತಸದ 'ಸಂಪದಕೆ '? ಬರಲೊಲ್ಲುದೇ ಏನೂ, ಕ್ಷಣ ಒಂದು ಸ್ಮರಿಸಿಕೊಂಬೆ 'ಅಣ್ಣಾವ್ರ' ಸ್ಮೃತಿಯಲ್ಲಿ ಕಳೆದ ೧೨ ದಿನ ಎಂತು ಕಳೆದೆವೊ, ಏನೋ ಪೇಳಿರಲ್ಲಿ, ಅಂದು ಬುಧವಾರ, ೧೨ ನೇ ತೇದಿ ಅಣ್ಣನಗಲಿದ ದಿನವುಮರೆವುದೆಂತು ? ನಾಳೆ ೨೪, ಅವರುದಿಸಿದ ದಿನವು ರಸಿಕರೆಲ್ಲರು, ಭುವಿಯ ಕಾಯುತಿಹರು 'ಕಣ್ಣಪ್ಪ' ನಿಂದ 'ಶಬ್ಧವೇಧಿಯ' ವರೆಗೆ ಬೆಳೆದು ಹೆಮ್ಮರವಾದೆ ಅಂದಿನಾ, ಮುತ್ತುರಾಜ ಮುಗಿಲೇರಿ ತ್ರಿವಿಕ್ರಮನಾದೆ, 'ನಟರಾಜ'ನಾದೆಕನ್ನಡದ 'ಸುಧೆ'ಯನ್ನು,'ಮಧು
ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * ! ಸಾರಾಂಷ : ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ 'ಅನುಸಂಧಾನದ ಪ್ರಮಾಣ,' "ದೈತ್ಯಾಕಾರ," ವಾಗಿರುವುದು ಕಂಡು ಬರುತ್ತದೆ. ೧೯೧೨ ರಲ್ಲಿ, ಡಾ. ಬಾಲ್ಸ್ ನಿಂದ ಆರಂಭವಾಗಿ ಇಂದಿನವರೆಗಿನ ಕಾರ್ಯವಿಧಾನಗಳನ್ನು, ಅಂದರೆ, ನಿರಂತರವಾಗಿ ಬೆಳೆಯುತ್ತಿದ್ದ, ಹತ್ತಿಯ ಮರಗಳನ್ನು ಮೆಳೆಗಳಲ್ಲಿ ಅಥವ ಪೊದೆಗಳಲ್ಲಿ ಪರಿವರ್ತಿಸಿ, ವಾರ್ಷಿಕ ಫಸಲನ್ನಾಗಿಸಿದ್ದು, ಹತ್ತಿಯ ತಂತುಗಳಲ್ಲಿ ತಂದ ಅನೇಕ ಉತ್ತಮ ಗುಣಗಳು, (ತಂತುಶಕ್ತಿ, ತಂತು ಮಹೀನತೆ, ತಂತುಗಳ ಉದ್ದದಲ್ಲಿ ವೃದ್ಧಿ,) ಇತ್ಯಾದಿಗಳು, 'ಸಸ್ಯವಿಜ್ಞಾನ'ದ ಬೆಳವಣಿಗೆಯೆಂದೇ ಗುರುತಿಸಬಹುದು ! 'ವಂಶವಾಹಿನಿ ವಿಜ್ಞಾನ ಶಾಸ್ತ್ರ' ಬೆಳಕಿಗೆ ಬರುವ ಮೊದಲೇ, 'ಅರಿವಿಲ್ಲದೆ ಆದ' ಈ ಎಲ್ಲಾ ಬೆಳವಣಿಗೆಗಳೂ, ಸ್ತುತ್ಯಾರ್ಹ ! ಭಾರತದಲ್ಲಿ ೭೦ ರ ದಶಕದಲ್ಲಿ ರೂಪಗೊಂಡ 'ಹಸಿರು ಕ್ರಾಂ

ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು !

ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು ! ಭಾರತದಲ್ಲಿ ಮಕ್ಕಳ ಸಾಹಿತ್ಯ ಪರಂಪರೆ ಬಹಳ ಪ್ರಾಚೀನವಾದದ್ದು ! ಇದು, ಬಹುಶಃ ವಿಷ್ಣು ಶರ್ಮರು ಬರೆದ 'ಪಂಚತಂತ್ರ,' ದಿಂದ ಪ್ರಾರಂಭವಾಗಿರಬಹುದು. ಇಲ್ಲಿ ಪ್ರಯೋಗಿಸುವ ತಂತ್ರವೆಂದರೆ, ಯವುದೋ ರಾಜಕುಮಾರನಿಗೆ, ಕಥೆಯ ರೂಪದಲ್ಲಿ ನೀತಿ ಬೊಧಿಸುವ ರೀತಿ; ಕಥೆಗಳಲ್ಲಿ ಕಾಡುಪ್ರಾಣಿಗಳು ತಮ್ಮ ಸಹಜ ಸ್ಥಿತಿಯಲ್ಲೂ ಮನುಷ್ಯರಂತೆಯೇ, ಯೋಚಿಸುತ್ತ ಮಕ್ಕಳ ಮನಸ್ಸನ್ನು ಸೆರೆಹಿಡಿಯುವ ಅದ್ಭುತ ರೀತಿ, ಅನನ್ಯವಾಗಿದೆ ! ಮಕ್ಕಳ ಕಲ್ಪನಾಲೋಕದಲ್ಲಿ ನೀತಿಯನ್ನೂ ಬೋಧಿಸುವ ಈಸೊಪನ ಕಥೆಗಳು ಕೂಡ, 'ಪಂಚತಂತ್ರ' ದಿಂದ ಪ್ರಭಾವಿತವಾದವುಗಳೇ ! ಇಂದಿನ ವಿಜ್ನಾನ ತಂತ್ರಜ್ನಾನದ, ಯುಗದಲ್ಲೂ ವಿಶ್ವದ ವಿವಿಧ ಜನಾಂಗದ ಮಕ್ಕಳು ಕಥೆ ಕೇಳುವ ಅಥವ ಹೇಳುವ ಪರಿಪಾಠವನ್ನು ಬಿಟ್ಟಿಲ್ಲ ! ಆದರೆ ಹಿಂದೊಮ್ಮೆ ಪ್ರಾರಂಭವಾಗುತ್ತಿದ್ದ, 'ಒಂದಾನೊಂದು ಕಾಲದಲ್ಲಿ..' ಎನ್ನುವ ಶೈಲಿ ಸ್ವಲ್ಪ ಬದಲಾಗಿರಬಹುದು ಅಷ್ಟೆ ! ಅಡುಗೋಲಜ್ಜಿ ಯ ಕಥೆಯಲ್ಲಿ ಬರುವ, ರಾಜಕುಮಾರ, ರಾಜಕುಮಾರಿ, ಬ್ರಹ್ಮ ರಾಕ್ಷಸ, ಇತ್ಯಾದಿ ಗಳು ಮಾಯವಾಗಿ, ಈಗಿನ ಕಥೆಗಳು ಶುಧ್ಧ ಮನರಂಜನೆಯ ಕೆಂದ್ರದಲ್ಲೇ ಸುತ್ತುತ್ತವೆ.ಬುಧ್ಧಿ ಚಾತುರ್ಯಕ್ಕೆ ಹೆಸರಾದ, 'ಅಕ್ಬರ್ ಬೀರ್ಬಲ್', 'ತೆನಾಲಿ ರಾಮಕ್ರುಷ್ಣ', ಮಕ್ಕಳನ್ನು ನಗಿಸಿ ಪ್ರಸನ್ನತೆಯನ್ನು ಪಸರಿಸುವಲ್ಲಿ ಸಹಾಯ ಮಾಡುತ್ತವೆ. ನಮ್ಮ ದೇಶದ 'ಮಹಾಭಾರತ', '