Posts

Showing posts from May, 2006
Image
ಗಾಚಾರ್ಯ ಪೂಜ್ಯ ಶ್ರೀ. ಬಿ.ಕೆ.ಎಸ್.ಐಯ್ಯಂಗಾರ್ ಸುಮಾರು ೭೦ ವರ್ಷಗಳಿಂದ ಪತಾಂಜಲಿ ಬಾಲ್ಯದ ಅನಾರೋಗ್ಯದಿಂದ ಧೃತಿಗೆಡದೆ ಯೋಗಾಭ್ಯಾಸದಿಂದ ಭೀಮಕಾಯರಾಗಿ ಜಗತ್ತಿನ ಲಕ್ಷಾಂತರ ಜನರ ಜೀವನವನ್ನು ಸದೃಢಗೊಳಿಸಲು ಸದಾ ಪ್ರಯತ್ನಶೀಲರಾಗಿದ್ದ ಶ್ರೀ. ಯೋಗವಿದ್ಯೆಯಲ್ಲಿ ಅತ್ಯಂತ ವಿಧಿವತ್ತಾಗಿ ಮತ್ತು ವೈಜ್ಞಾನಿಕವಾಗಿ ಭಾರತ ಹಾಗೂ ವಿಶ್ವದ ಜನರಿಗೆ ಭೋಧಿಸುತ್ತ ಬಂದ ಶ್ರೀ .ಕೆ.ಎಸ್.ಐಯ್ಯಂಗಾರ್ ಪುಣೆಯಲ್ಲಿ ರಿಗೆ ಈಗ ೯೦ ವರ್ಷ ವಯಸ್ಸು. ಅವರು ಜಗತ್ತಿನ ೪೦ ರಾಷ್ಟ್ರ ಗಳಲ್ಲಿ ೧೮೦ ಯೋಗ ಕೆಂದ್ರಗಳನ್ನು ಸ್ಥಾಪಿಸಿದ್ದು, ಸುಮರು ೨,೦೦೦ ನುರಿತ ಯೋಗಾ ಶಿಕ್ಷಕರು ಯೊಗದ ಮಹತ್ವವನ್ನು ಪ್ರಚಾರ ಮಾಡುವುದರ ಮೂಲಕ ಅವರ ಸಂದೇಶವನ್ನು ಜೀವಂತವಾಗಿಟ್ಟಿದ್ದಾರೆ. ಅವರಿಗೆ ಗೀತ, ವಿನಿತ, ಸುಚಿತ, ಸುನಿತ, ಸವಿತ ಎನ್ನುವ ೫ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಪ್ರಶಾಂತ್. ಈಗ ಅವರ ಮಗ ಶ್ರೀ ಪ್ರಶಾಂತ್ ಮತ್ತು ಮಗಳು ಶ್ರೀಮತಿ ಗೀತ ಅವರ ಯೋಗಾಧ್ಯಯನ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಬೇಲ್ಲೂರ್ ಕೃಷ್ಣಮಾಚಾರ್ ಸುಂದರ್ ರಾಜ ಐಯ್ಯಂಗಾರ್ ಡಿಸೆಂಬರ್ ೧೪, ೧೯೧೮ ರಲ್ಲಿ ಜನಿಸಿದರು. ಅವರ ತಂದೆ ಶ್ರೀ ಕೃಷ್ಣಮಾಚಾರ್ ಶಿಕ್ಷಕ. ತಾಯಿ ಶೇಷಮ್ಮ. ೯ ನೇ ವಯಸ್ಸಿನಲ್ಲೇ ತಂದೆಯ ಮರಣ. ಬಾಲ್ಯದಲ್ಲಿ ಇನ್ಫ್ಲೂಯೆಂಝಾ, ಟೀ.ಬಿ ರೋಗಗಳಿಂದ ನರಳುತ್ತಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಅವರಿಗೆ ಪೌಷ್ಟಿಕ ಆಹಾರದ ಕೊರತೆ ಸದಾ ಕಾಡುತ್ತಿತ್ತು. ತಮ್ಮ ೧೫ ನೇ ವಯಸ್ಸಿನಲ್ಲಿ ಮೈಸೂರಿಗೆ

ಭಾಷೆ ಕಲಿತಶ್ಟೂ ಒಳ್ಳೆಯದು !

ಭಾಷೆ ಕಲಿತಶ್ಟೂ ಒಳ್ಳೆಯದು ! ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಹೊಸ ಹೊಸ ಭಾಷೆಗಳ ಆವಶ್ಯಕತೆ ಹೆಚ್ಚು ! ನವ ಯುಗದಲ್ಲಿ ಹಿಂದಿನಂತೆ ಕಟ್ಟುಪಾಡುಗಳಿಲ್ಲದಿರುವುದು ಒಂದು ಧನಾತ್ಮಕವಾದ ಸಂಗತಿ ! ಎಶ್ಟೇಹೇಳಿದರೂ ಒಂದು ಕಾಲದಲ್ಲಿ ಬ್ರಾಹ್ಮಣರಲ್ಲದೆ ಬೇರೆಜಾತಿಯವರು ಸಂಸ್ಕೃತ ಕಲಿಯುವುದು ಸುಲಭಸಾಧ್ಯವಾಗಿರಲಿಲ್ಲ. ಮುಸಲ್ಮಾನನೊಬ್ಬನು ಸಂಸ್ಕೃತ ಪಂಡಿತನಾದರೆ ಅದೊಂದು ಸುದ್ದಿಯಾಗುತ್ತಿತ್ತು. ಇಂದೂ ಹಾಗೆಯೇ ಸುದ್ದಿಯಲ್ಲಿರುವ ಪ್ರಸಂಗ ಇಲ್ಲಿದೆ : 'ಪಂಡಿತ ಗುಲಾಮ್ ದಸ್ತಗಿರ್ ಬಿರಾಜ್ ದರ್' ಅಂಥವರಲ್ಲಿ ಒಬ್ಬರು !ಇವರು ಮುಂಬೈನಗರದ ವರ್ಲಿನಾಕಾದಲ್ಲಿ ತಮ್ಮ ಮುಸ್ಲಿಮ್ ಬಾಂಧವ ಸಮುದಾಯದ ಜೊತೆಗೆ ವಾಸಿಸುತ್ತಿರುವ ೭೨ ವರ್ಷ ವಯಸ್ಸಿನ 'ಸಂಸ್ಕೃತ ಭಾಷಾ ವಿಶಾರದ' ! ಬೆನಾರೆಸ್ ಸಂಸ್ಕೃತ ಸಮಿತಿಯು ಕೊಟ್ಟಿರುವ 'ಮಹಾಪಂಡಿತ್', 'ಪಂಡಿತೇಂದ್ರ' ಉಪಾಧಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ. ವೇದ, ಪುರಾಣಗಳ ಪ್ರವಚನಮಾಡಲು ವಾರಣಾಸಿ, ಚೆನ್ನೈ, ಅಜ್ಮೀರ್, ವೃಂದಾವನ್ ಗಳಲ್ಲಿಗೆ ಹೋಗುವುದು ವಾಡಿಕೆಯಿದೆ ! ಮಹಾರಾಶ್ಟ್ರ ಸರ್ಕಾರ ಸಂಸ್ಕೃತ ಹಾಗೂ ಗೈಡುಗಳಿಗೆ ನೇಮಿಸಿರುವ ಸಮಿತಿಯಲ್ಲಿ ಅವರು ಕೆಲಸಮಾಡುತ್ತಿದ್ದಾರೆ. ಸಂಸ್ಕೃತ ಉಪಾಧ್ಯಾಯರುಗಳನ್ನು ನೇಮಕಾತಿಮಾಡುವಾಗ ಸರ್ಕಾರ ಇವರ ಸಹಾಯವನ್ನು ಪಡೆಯುತ್ತದೆ. ಸೋಲಾಪುರದ ಒಬ್ಬ ಕೂಲಿಮಾಡಿಕೊಂಡು ಜೀವಿಸುತ್ತಿದ್ದ ವ್ಯಕ್ತಿಯಪುತ್ರನಾಗಿ ಜನಿಸಿದ ಬಿರಾಜ್ ದರ್ ಗೆ, ಅವರ ತ

ಅಪಹರಣ, ನಂತರ ಕೊಲೆ, ಏನ್ ಕರ್ಮನಪ್ಪ !

ಅಪಹರಣ, ನಂತರ ಕೊಲೆ-ಈಗ 'ಸಾಫ್ಟ್ವೇರ್ ಈಂಜಿನಿಯರ್ ಗಳ ಸರದಿ'. ತಲೆ ಬಿಸಿ ಮಾರಾಯ್ರೆ, ಏನಾದ್ರೂ ಮಾಡಿ ! ಹಾಲಿ ಬೆಂಗಳೂರಿನಲ್ಲಿ ಭಾಸ್ಕರ್ ರೈ ಎಂಬ "ಒರೇಕಲ್ ಕಂಪೆನಿಯ" ಸಾಫಟ್ಟ್ವೇರ್ ಇಂಜಿನಿಯರ್ ಒಬ್ಬರನ್ನು ಅಹರಿಸಲು ಪ್ರಯತ್ನಿಸಿದ ದುಷ್ಕರ್ಮಿಗಳು ಅವರಮೇಲೆ ಪಿಸ್ತೂಲ್ ನಿಂದ ಗುಂಡುಹಾರಿಸಿ ಪರಾರಿಯಾಗಿರುವ ವಿಷಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ರೈ ಅವರ ತೋಳು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಾರೆ. ಮೇಲೆ ತಿಳಿಸಿದ ಕಂಪನಿಯ ತರಬೇತಿ ವಿಭಾಗದ ಮುಖ್ಯಸ್ಥರಾಗಿದ್ದ ರೈ ಅವರು ಹೊಸಮನೆ ಕಟ್ಟಿಸುತ್ತಿದ್ದು ಪ್ಲಂಬರ್ ಕೆಲಸಕ್ಕೆ ವಿಜಯಕುಮಾರ್ ಎಂಬುವನಿಗೆ ಗುತ್ತಿಗೆ ಕೊಟ್ಟಿದ್ದರು. ಮಹದೇವಪುರದ ರಿಂಗ್ ರಸ್ತೆಯಲ್ಲಿ ರೈ ಕಾರಿನಲ್ಲಿ ಹೋಗುತ್ತಿದ್ದಾಗ ವಿಜಯಕುಮಾರ್ ಅಡ್ಡಗಟ್ಟಿ ಕೆ. ಆರ್. ಪುರಮ್ ನಲ್ಲಿ ಬಿಡುವಂತೆ ಕೇಳಿಕೊಂಡ. ಮಧ್ಯದಲ್ಲಿ ಇನ್ನೊಬ್ಬ ಕಾರನ್ನು ತಡೆದು ಅವನೂ ವಿಜಯಕುಮಾರನ ಸ್ನೇಹಿತನೆಂದು ಹೇಳಿ ಕಾರಿನಲ್ಲಿ 'ಲಿಫ್ಟ್' ಪಡೆದನು. ಸ್ವಲ್ಪ ದೂರ ಹೋದಮೇಲೆ ಅವರಿಬ್ಬರೂ ಚಾಕು ತೋರಿಸಿ ಕಾರು ನಿಲ್ಲಿಸಲು ಹೇಳಿದರು. ಕಾರನ್ನು ತಾವೇ ನಡೆಸಲು ಮುಂದಾದ ಅವರನ್ನು ರೈ ಅವರು ತಡೆಯಲು ಅವರ ಬಳಿಯಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಲು ಯತ್ನಿಸಿದರು. ಆದರೆ ಆರೋಪಿಗಳು ಪಿಸ್ತೂಲ್ ಕಿತ್ತುಕೊಂಡು ರೈ ತಲೆಗೆ ಪಿಸ್ತೂಲ್ ಹಿಡಿದು ತಾವು ಹೇಳಿದ ಜಾಗಕ್ಕೆ ಹೋಗುವಂತೆ ಬೆದರಿಸಿ

ನಮ್ಮ ಕನ್ನಡದ ಆಶುಕವಿ, ನಾಡ ಕವಿ, - 'ಸರ್ವಜ್ಞ' !

ನಮ್ಮ ಕನ್ನಡದ ಆಶುಕವಿ, ನಾಡ ಕವಿ, - 'ಸರ್ವಜ್ಞ'   ! ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಶ್ಪದತ್ತ. ಸಾಕುತಾಯಿ ಮಲ್ಲಕ್ಕ. ತಂದೆ ಬಸವರಸ. ಧಾರವಾಡ ಜಿಲ್ಲೆಯ ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸ, ಎಶ್ಟುದಿನಗಳಾದರೂ ಮಕ್ಕಳಾಗದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ. ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರ ಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು. ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ' ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆ ಯಲ್ಲಿ ಕುಂಬಾರ ಮಾಳೆ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು. ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳನಂತರ ಮಾಳಿ ದಿವ್ಯ ತೇಜಸ್ಸಿನ

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ ! ಪ್ರತಿ ಕಾಲಘಟ್ಟದಲ್ಲಿ ನಿಂತು ಈ ವಿಸ್ಮಯ ಜಗತ್ತನ್ನು ವೀಕ್ಷಿಸಿದಾಗ ಅದರ ವಿಸ್ತಾರದ ಅರಿವಾಗುತ್ತದೆ. ಕೆಲವೊಂದು ವಿದ್ಯಮಾನಗಳಲ್ಲಿ ಪ್ರಕೃತಿದತ್ತವಾದ ಹಲವು ಮಾರ್ಪಾಟುಗಳು ನಮ್ಮ ಗಮನವನ್ನು ಸೆಳೆಯುತ್ತವೆ. ನಮ್ಮ ಅರಿವಿಲ್ಲದೆಯೇ ಆಗುವ ನಿರಂತರ ಬದಲಾವಣೆಗಳೊಂದೆಡೆಯಾದರೆ, ಇನ್ನು ಕೆಲವು ಮಾರ್ಪಟುಗಳನ್ನು ನಾವೇ ಕಾಲಕಾಲಕ್ಕೆ ಮಾಡುವ ಅನಿವಾರ್ಯತೆಯನ್ನು ಮನಗಾಣುತ್ತೇವೆ. ಎಲ್ಲಾ ಬೆಳೆಯುತ್ತಿರುವ ಜೀವಕೋಟಿಗಳೆಲ್ಲಾ ಮಾಡಲೇಬೇಕಾದ ಪ್ರಕ್ರಿಯೆ ಇದು ! ಇವನ್ನೇ ನಾವು ಜೀವಂತಿಕೆಯ ಸಾಕ್ಷಿಯ ಪ್ರತೀಕಗಳೆಂದು ಕರೆಯುವುದು ಕೂಡ ! ಅಂತಹ ಚಿಕ್ಕ ಬದಲಾವಣೆ ನಮ್ಮ 'ಸಂಪದ' ದಲ್ಲೂ ಮೂಡಿಬಂದಿದೆ. ಶ್ರೀಯುತ. ನಾಡಿಗರು ಅದನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರ್ವಹಿಸಿರುವುದು ನಿಜಕ್ಕೂ ಶ್ಲಾಘನೀಯ ! ಸಂಪದದ ಬಳಗದ ಎಲ್ಲಾ ಸದಸ್ಯರಿಗೂ 'ಶುಭ'ಕೋರಿ ಈ ಹೊಸ ದಿಟ್ಟ ಹೆಜ್ಜೆಯನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇನೆ. ನನ್ನ ಪ್ರೀತಿಯ ಕಾಣಿಕೆಯಾಗಿ ಈ ಕವಿತೆಯನ್ನು ಈ ಸಂದರ್ಭದಲ್ಲಿ 'ಆಶೀರ್ವಾದಪೂರ್ವಕವಾಗಿ' ಸಮರ್ಪಿಸುತ್ತಿದ್ದೇನೆ. ಆಶೀರ್ವಾದವನ್ನು ಬೇಡವೆನ್ನುವ ಪರಿಪಾಟ ನಮ್ಮ ಭಾರತೀಯ ಸಂಸ್ಕೃತಿಯಲ್ಲಿಲ್ಲ ! ಬನ್ನಿರಿಲ್ಲಿ ನೋಡಿರೆಲ್ಲಾ ಮುದ್ದು 'ಸಂಪದೆಯನು'! ಎಚ್.ಪಿ.ಎನ್ನರ ತೋಳಿನಿಂದ ಪುಟಿದೆದ್ದ ಮಿಂಚನು ! ಹುಸಿನಗು, ಬೆರಗು ಕಣ್ಣು, ತಲೆತುಂಬಾ ಕರಿಗೂದಲು! ಹಾಲಗಲ್ಲ, ಬಾ