Posts

Showing posts from June, 2006

ಡಾ.ಯು.ಬಿ.ರಾವ್- ಒಂದು ಸವಿನೆನಪು !

ಡಾ.ಯು.ಬಿ.ರಾವ್- ಒಂದು ಸವಿನೆನಪು ! ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ.ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ 'ಪೇನಲ್ ಡಾಕ್ಟರ್'. ಮಾತುಂಗಾದಲ್ಲೇ ಬಹಳ ಜನಪ್ರಿಯ ವೈದ್ಯರು ! ಒಮ್ಮೆ ನಾನು ನನ್ನ ಹೆಂಡತಿ ನಮ್ಮ ಮಗು ರವಿ,ಯನ್ನು ಅವರಬಳಿ ತೋರಿಸಲೆಂದು ಕರೆದುಕೊಂಡು ಹೋಗಿದ್ದೆವು. ರವಿ, ಸ್ಪಲ್ಪ ಸಪೂರಾಗಿದ್ದ.ಆದರೆ ಆಟ ಆಡಿಕೊಂದಿದ್ದ; ಗೆಲುವಾಗಿದ್ದ. ನಮ್ಮಪಡೋಸಿ, 'ಓಜಾ' ರವರು ಅವನನ್ನು ಕಂಡಾಗಲೆಲ್ಲಾ 'ಕಿತನ ಪತಲ ಹೈ, ಕುಚ್ ಅಚ್ಚ ಖಿಲಾವ್ ಪಿಲಾವ್' ಎಂದು ಹೇಳುತ್ತಲೇ ನಮ್ಮಿಬ್ಬರನ್ನು ಪೇಚಿಗೆ ಸಿಲುಕಿಸುತ್ತಿದ್ದರು.ನಮ್ಮ ತಾಯಿಯವರ ಪ್ರಕಾರ, 'ಕೆಲವು ಮಕ್ಕಳು ಚಿಕ್ಕವಯಸ್ಸಿನಲ್ಲಿ ಹಾಗೆ ಇರುತ್ತಾರೆ. ಕ್ರಮೇಣ ಎಲ್ಲಾ ಸರಿಹೋಗುತ್ತೆ' ಎಂದು ಹೇಳಿದ್ದು ತಲೆಗೆ ನಾಟಲಿಲ್ಲ. ಮೊದಲು ರವಿಯನ್ನು ಬೆಂಚಿನ ಮೇಲೆ ಮಲಗಿಸಿ ಎಲ್ಲಾ ತಪಾಸಣೆ ಮಾಡಿದರು. ಹೆಚ್ಚಿನ ಯಾವ ಸಮಸ್ಯೆಯು ಇದೆಯೆಂದು ಅವರಿಗೆ ಅನ್ನಿಸಲಿಲ್ಲ ಎಂದು ತೋರಿತು. ತಕ್ಷಣ ನಮ್ಮ ಕಡೆಗೆ ತಿರುಗಿ, 'ಏನ್ರಿ, ಹೇಗಿದೆ ಮಗು' ಎಂದು ಡಾ. ರಾವ್ ಕೇಳಿದಾಗ, ನಾನು, ಅವಳು, ಉಸುರು ಸಿಕ್ಕಿಹಾಕಿ ಕೊಂಡವರಂತೆ ಒಮ್ಮೆಲೇ,'ತಟ್ಟೆಯಲ್ಲಿ ಕಲಸಿದ ಅನ್ನ ಪೂರ್ತಿ ತಿನ್ನಲ್ಲ, ಬೆಳಿಗ್ಯೆ ಮದ್ಯಾನ್ಹ, ರಾತ್ರಿ ಕೊಟ್ಟ ಕಾಂಪ್ಲ

ಹೊಳಲ್ಕೆರೆಗೆ ಪ್ರಥಮಸ್ಥಾನ, ಚಂದ್ರಶೇಖರನ ಅಖಂಡವಿಜಯ !

Image
ಹೊಳಲ್ಕೆರೆಗೆ ಪ್ರಥಮಸ್ಥಾನ, ಚಂದ್ರಶೇಖರನ ಅಖಂಡವಿಜಯ ! ಪರೀಕ್ಷೆಯ ಫಲಿತಾಂಷಗಳು ದಿನಪತ್ರಿಕೆಗಳಲ್ಲಿ : ಮೇಲಿನ ವರದಿ ಮಾಡಿದ್ದು  'ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ. ವರ್ಷ 1962.  ಆ ದಿನ ಬೆಳಿಗ್ಯೆ ತಾನೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಷಗಳನ್ನು ಪೇಪರ್ ನಲ್ಲಿ ಪ್ರಕಟಿಸಿದ್ದರು. ಅಂದಿನ ದಿನಗಳಲ್ಲಿ ಫಲಿತಾಂಷಗಳನ್ನು ಹೀಗೆಯೇ ದಿನ ಪತ್ರಿಕೆಗಳಲ್ಲಿ ಮುದ್ರಿಸುತ್ತಿದ್ದರು. ನಂತರ ಮುಂದಿನ ವರ್ಷಗಳಲ್ಲಿ ನಾವೆಲ್ಲಾ  ದಿನಪತ್ರಿಕೆಗಳ ಮೊದಲ ಪುಟದಲ್ಲೇ ಚಿತ್ರ ಸಹಿತಾ ಅವನ ಪರೀಕ್ಷೆಗಳ ಫಲಿತಾಂಶಗಳನ್ನು ನೋಡುತ್ತಾ  ಬಂದೆವು .                                                                                                                     ನಮ್ಮಪ್ರೀತಿಯ  ಅಮ್ಮ  ಇದಾದ ತರುವಾಯ ಕಾನ್ಪುರ್ ಐ. ಐ. ಟಿ. ಯಲ್ಲೂ ಅವನು ಎಂದಿನಂತೆ ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾದ ಸುದ್ದಿ ಅವನಿಂದ ಕೇಳಿದ್ದೆವು.  ಹೊಳಲ್ಕೆರೆಯ 'ಹೈದ' ಚಂದ್ರಶೇಖರ, ಮೈಸೂರು ರಾಜ್ಯಕ್ಕೇ ಪ್ರಥಮನಾಗಿ (ರ‍್ಯಾಂಕ್ ) ಉತ್ತೀರ್ಣ ಗೊಂಡಿದ್ದ !  ನಮ್ಮ ತಾಯಿ ರಾಧಮ್ಮನವರು,  ಅವನ ಪರೀಕ್ಷೆಯ ಬಗ್ಗೆ ತುಂಬಾ ತಲೆಗೆ ಹಚ್ಚಿಕೊಂಡಿದ್ದರು. ಬಗ್ಗೆ ಅವರಿಗೆ ಹೆಚ್ಚು ತಿಳಿಯದಿದ್ದರೂ ಅವರು  ಪಟ್ಟ ಆನಂದ ಮತ್ತು ತಾವು ಹರಸಿಕೊಂಡಿದ್ದ ಎಲ್ಲಾ ದೇವರುಗಳಿಗೂ ಸಲ್ಲಿಸಿದ ಪೂಜೆ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.  ಗ

ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ !!

ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ !! ಅರೆ ಎಂಟಣ್ಣ, ಏನಾಯ್ತು ? ನೆಟ್ಗಿದಿಯೆನಪ್ಪ ! ಎನೊ ಆಡೆಳ್ತಿದಿಯಲ್ಲಪ್ಪ ! ಎ ತೆಗ್ಯಯಪ್ಪ, ನಿನೊಳ್ಳೆ, ನನ್ಗೆನಾಗೈತೆ, ದೆವ್ನಂಗ್ ನಿನ್ ಮುಂದ್ ಕಾಣ್ತಿಲ್ವ. ನಾನು..ನಾನು...ಬಂದಿದ್ಯಾಕೆ ? ಅ ... ಗ್ಯಪ್ತಿ ಬಂತಪ. ಎಳ್ತಿನ್ ತಾಳು. " ನಿನ್ನಿನ್ ಮ್ಯಾಚ್ ನಾಗೆ ಗುಂಗುರ್ ಕುದ್ಲಿನ್ ಉಡ್ಗ ಕೊನ್ಯಾಗೆ ಗೊಲ್ ಬಡೀಲಿಲ್ವ ! ' ಮಸ್ಯಪ್ಪ,' ಅದ್ನ, ನಿನ್ ನೊಡ್ದಾ ಎಂಗೆ, ಅಂತ ತಿಳ್ದ್ ಒಗ್ವ; ಸರಿ ನೀನ್ ನೋಡ್ದೆ- ಸಂಕೆ, ಪರಿಆರ ಆತು ಬಿಡ್ಪಾ,ಎಂಕ್ಟೇಸಪ್ಪ : ' ಎಂಥ ಗೊಲೊ ಮಾರಾಯ ಅದು.' ಮ್ಯರಡೊನ ಹೇಳಿದ್ನಿಜ ನೋಡು."ಇಂತ ಗೋಲ್ ಹೊಡ್ಯೊ ತಂಡ ಸೊಲೊದ್ ಸಾಧ್ಯವೆ "? ಸರಿ ಬಿಡು, ನಾನ್ ಒರಟೆ; 'ನಿನ್ ಸಂಪ್ದ ಕ್ಕೆನೊ ಬರಿತೊಯೊ ಎನಪ'. 'ಅದೆ ಬಿಟಿ ಅತ್ತಿ ಬೀಜ, ಕೊಳ್ಬೆಕು. ಯದ್ವ ತದ್ವ ಬೆಲೆಗೊಳ್ ಎರ್ಸವ್ರೆ, ಯಡ್ವಟ್ ಆದೀತು, ಬತ್ತಿನಪ್ಪೊ',ಬರ್ಲಾ ! ಇಂತಹ ಸರಳ ಹೃದಯದ ಎಂಟಪ್ಪ, ಎಲ್ಲರ ಹಿತ ಬಯಸೊನು, ಅವನ ಬಾಯ್ನಲ್ಲಿ ಎಲ್ರು ಅಪ್ಗಳೆ ! 'ಮೆಸ್ಸಿ' ಅವನ್ ಲೆಕ್ದಲ್ಲಿ ಮಸ್ಯಪ್ಪ ! ಜರ್ಮನಿಯ 'ಸಿ 'ಗ್ರುಪ್ ನ ಅರ್ಜೆಂಟೈನ ಸರ್ಬಿಯ ಮಾಂಟೆನೆಗ್ರೋ ವಿರುಧ್ದ ಆಡಿದ ಆಟದಲ್ಲಿ (೬-೦) ಗೊಲಿನಿಂದ ಭರ್ಜರಿ ವಿಜಯ ಗಳಿಸಿ ಮುಂದೋಡಿದೆ. ಈ ಸಂಭ್ರದ ಪಂದ್ಯ, ಜಿಲ್ ಸಿಂಕರ್ ಜೆನ್ ನ ಎಫ್.ಸಿ ಶಾಲ್ಕೆಸ್ ಸ್ಟೇಡಿಯಂ ನಮು

ತಿರುಮಂತ್ರ- ಜಿ.ಪಿ.ರಾಜರತ್ನಂ !

Image
ರಾಜರತ್ನಂ ಬರೆದ 'ಬಣ್ಣದ ತಗಡಿನ ತುತ್ತೂರಿ'...... .. ಎಂಡಕುಡಕ್ ರತ್ನ....ಇತ್ಯಾದಿಗಳು ಎಲ್ಲರಿಗೂ ಚಿರಪರಿಚಯ. ಅವರು ಜೈನ ಸಾಹಿತ್ಯದ ಬಗ್ಯೆಯೂ ವಿಪುಲವಾಗಿ ಬರೆದಿದ್ದಾರೆ. ಅವರ ಕವನ ಸಂಗ್ರಹ ದಿಂದ ಕೇವಲ ಕೆಲವು ಕವನಗಳೇ ಪುನರಾರ್ವರ್ತನೆ ಯಾಗುತ್ತಿವೆ. ಇನ್ನು ಹಲವು ವಿಶೇಷ ಕವನಗಳು ಮನರಂಜನೆಗೆ ವ್ಯಂಜನಗಳಾಗಿವೆ. ನನಗೆ ಹಿಡಿಸಿದ ಒಂದು ಕವನದ ಗೊಂಚಲನ್ನು ಕೆಳಗೆ ಕೊಟ್ಟಿದ್ದೇನೆ. ಅದು 'ತಿರುಮಂತ್ರ' ಎಂಬ ಶೀರ್ಷಿಕೆಯಡಿಯಲ್ಲಿ ಇದೆ. ಓದಿ ಆನಂದಿಸಿ. ಇನ್ನೂ ಕೆಲವು ಕವನಗಳು ಸೊಗಸಾಗಿವೆ. ಓದಲು ಇಚ್ಛಿಸಿದರೆ, ಜಿ.ಪಿ.ರಾಜರತ್ನಂ, ಪ್ರಕಟಿಸಿದ ಪುಸ್ತಕ 'ನಾಗನಪದಗಳು', ವಿದೇಹ', ೭೭೧, ೧೭ನೆ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರಿಗೆ ಬರೆದು ಪಡೆಯಿರಿ. ತಿರುಮಂತ್ರ ! ಯಾಂಡಲ್ ಯಿಂಗ್ ಯಿಡೀಕ್ಕ ! ಶೀಟ್ ಮ್ಯಾಗ್ ಮಡೀಕ್ಕ ! ಐ...ನಾಚ್ ಕ್ಯಾಕೆ ಮಲ್ಲಿ ? ಯಾರೆ ಔರ್ ಇಲ್ಲಿ ? ತಿಂಗಳ್ ಇದ್ರೇನೇ ? ಸುತ್ತೆಲ್ಲ ಮಬ್ಬು. ಬೇಕಾರೆ ನೀ ನನ್ನ ಯಿಂಗ್ ಇಲ್ಲೆ ತಬ್ಬು ಪತ್ತೇನ್ ಆಗೊಲ್ಲ ! ನೋಡೋರ್ ಯಾರಿಲ್ಲ ! ಯಿಂಗ್ ಕುಂತರ್ ಎಂಗೆ ? ನಾ ಕಲಿಶಿ ಕೊಡಕ್ ಉಂಟ ? ಯಾಕೆ ಪಿರಕೀ? ನಿಂಗೆ ಸಡಿಲನಾ ಸೊಂಟ ? ನಂಬು ನಿನ ಪಕದಾಗ ನಾನ್ ಇರೋಗಂಟ- ಮೀಶೆ ಮ್ಯಾಗ್ ಯಿಂಗ್ ಕೈಯಿ ! ಬೈಸಿಕಲು ಬಂಟ ! ಅಕ್ಕಳಿಸಿತು- ಎಳೆ -ಎಳಕೋ -ವೊಟ್ಟೇ- ವೊಳೀಕೆ ! ಮುಂಬಾರ ! ಅಯ್ ! ಅಷ್ಟು ಬಗ್ ಬ್ಯಾಡ್ ಕೆಳೀಕೆ ! ಆ ! ಅಂಗೆ ! ಕುದು