Posts

Showing posts from July, 2006
Image
ಗೋಲಿಯೋ VI, ೨೦೦೬, ವಿಶ್ವಕಪ್ಪಿನ ಸಾಕರ್ ಆಟದ, ಎಂದೂ ಕಂಡು ಕೇಳರಿಯದ ಲಾಂಛನ (ಸಿಂಹ ಮಾನವ) ! ಗೊಲಿಯೋ VI, ವಿಶ್ವಕಪ್ ಕಾಲ್ಚೆಂಡಾಟ ೨೦೦೬,ರ ಎಂದೂ ಕಂಡು ಕೇಳರಿಯದ ಲಾಂಛನ,ದ ಅನಾವರಣ ಶನಿವಾರದಂದು,ಜರ್ಮನಿಯಲ್ಲಿ ನಡೆಯಲಿದೆ ! ವಿಶ್ವ ಫುಟ್ ಬಾಲ್ ಪ್ರೇಮಿಗಳು ಅತಿಸಂಭ್ರಮ, ಪ್ರೀತಿಗಳಿಂದ ನೋಡಲು ಕಾತರಿಸುತ್ತಿರುವ ಗೋಲಿಯೋ, ಶನಿವಾರದ ದಿನ ವಿಧ್ಯುಕ್ತವಾಗಿ ಜರ್ಮನಿಯ ದೂರದರ್ಶನ ಹಾಗು ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಳ್ಳಲಿದೆ. ಫಿಫಾ ಪ್ರಕಾರ, ಗೋಲಿಯೋ ಪದವನ್ನು ವಿಸ್ತರಿಸಿದರೆ, 'ಗೋ ಲಿಯೋ ಗೋ' ಎಂದಾಗುತ್ತದೆ. ಈ ಸಿಂಹ ಮುಖದ ಮಾನವನ ಕಾರ್ನಾಮಗಳೆಲ್ಲಾ, ವಿಶೇಷವೇ ! ಲೋಥರ್ ಮಾಥಿಯೊಸ್ ನ ಸುಂದರ ಮುಖ, ಡಿಯಾಗೋ ಮೆರಡೋನರ ನಾಜೂಕು, ಆಲಿವರ್ ಬಿಯರಾಫ್ ರ ಜಾತಿ, ಮತ,ಭಾಷೆಗಳ, ಭೇದವಿಲ್ಲದ ವಿಶ್ವಮಾನವತ್ವ ! 'ನಾನು ಹೊರಗೆ ಬಂದಾಗ, ನಿಮ್ಮೆಲ್ಲರ ಮೇಲೆ ಮಾಡುವ ಜಾದು ವಿನಿಂದ ಎಚ್ಚರವಾಗಿರಿ- ನನ್ನ ಹುಟ್ಟು ಗುಣವೆ ಅದು '! ಎನ್ನುತ್ತಾನೆ ಗೋಲಿಯೋ . ಆದರೆ ೨೧ ರಂದು, ಐವರಿಕೊಸ್ಟ್ ಪಂದ್ಯದ ಪುರ್ವಭಾವಿಯಾಗಿ ಎರಡು ನಿಮಿಷ ಕಂಡು, ಮುಖ ತೊರಿಸಿ ಮಾಯವಾದ ವಿಷಯ ತಿಳಿದುಬಂದಿದೆ. ಆ ದಿನ ಅವನು ಮಳೆಗಾಲದ ಟೊಪಿ, ಧರಿಸಿದ್ದನಂತೆ ! ಗೋಲಿಯೋ, ಮಾತಿನಮಲ್ಲ. ಹಾಡುಗಳನ್ನು ವಾದ್ಯದಲ್ಲಿ ನುಡಿಸಬಲ್ಲ. ಮಕ್ಕಳನ್ನು ಗೋಳ್ಹೊಯ್ಕೊತಾನಂತೆ ! ಅವನ ಕೈಯಲ್ಲಿ ಒಂದು ಚೆಂಡಿದೆ.ಅದರ ಹೆಸರು 'ಪಿಲ್ಲೆ'! ಈ ಕಾಲ್ಚೆಂಡು ಮಾತಾಡುತ

ಇಟಲಿ (ಅಝೂರಿ) ಇಂದು ವಿಶ್ವಕಪ್, ೨೦೦೬ ರ ಫುಟ್ಬಾಲ್ ಛಾಂಪಿಯನ್ !

Image
ಇಟಲಿ (ಅಝೂರಿ) ಇಂದು ವಿಶ್ವಕಪ್, ೨೦೦೬ ರ ಫುಟ್ಬಾಲ್ ಛಾಂಪಿಯನ್ ! ೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್, ಭಾನುವಾರ, ೯ ನೆ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್ ಬರ್ಲಿನ್ ನಲ್ಲಿ ನಡೆಯಿತು. ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸನ್ನು ಧ್ವಂಸ ಗೊಳಿಸಿ ಫುಟ್ಬಾಲ್ ಛಾಂಪಿಯನ್ ಪಟ್ಟವನ್ನೇರಿತು. ೧೨೦ ನಿಮಿಷದನಂತರವೂ ಈ ಹಣಾಹಣಿ ಕಾಳಗ ಮುಂದುವರಿದಾಗ, ಅಂತಿಮ ಫಲಿತಾಂಷ ನಿರ್ಧರಿಸಲು ಪೆನಾಲ್ಟಿ ಶೂಟ್ ಔಟ್ ನಿಂದ ಮಾತ್ರ ಸಾಧ್ಯವಾಯಿತು. ೧೯೮೨ ರಲ್ಲಿ, ಇಟಲಿ ವಿಶ್ವ ಛಾಂಪಿಯನ್ನಾಗಿತ್ತು. ಪುನಃ ೨೪ ವರ್ಷಗಳ ನಂತರ ಈ ಸನ್ಮಾನ ದಕ್ಕಿದೆ ! ಬಲಿಷ್ಟ ಫ್ರಾನ್ಸ್ ಮತ್ತು ಇಟಲಿ ತಂಡಗಳು ನಿಯಮಿತ ೯೦ ನಿಮಿಷಗಳ ಬೃಹತ್ ಸಮರದಲ್ಲಿ (೧-೧) ಡ್ರಾ ಮಾಡಿಕೊಂಡು ಸಮಬಲ ಸ್ಥಾಪಿಸಿದ್ದರು. ಫ್ರಾನ್ಸಿನ ನೆಚ್ಚಿನಆಟಗಾರ ಸಾಕರ್ ಮಾಂತ್ರಿಕ, ಕಪ್ತಾನ್ ಜಿದಾನೆಯವರು ಪಂದ್ಯದುದ್ದಕ್ಕೂ ಭವ್ಯ ಆಟದ ಪ್ರದರ್ಷನ ತೋರಿಸಿದ್ದು ಫೈನಲ್ಸ್ ನಲ್ಲು ಇದೆ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಫ್ರಾನ್ಸ್ ತಂಡವನ್ನು ಗೆಲುವಿಗೇರಿಸಲು ಬಹಳ ಶ್ರಮ ಪಟ್ಟರು. ತಮ್ಮ ೧೨ ವರ್ಷದ ಫುಟ್ಬಾಲ್ ವೃತ್ತಿ ಜೀವನದಲ್ಲಿ ಕ್ರೀಡಾಂಗಣದಲ್ಲಿ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಪ್ರಚಂಡ ಹರ್ಷೋದ್ಗರ, ಕರತಾಡನ ಹಾಗೂ ಶ್ಲಾಘನೆಗಳ ಮಹಾಪೂರದ ಮಧ್ಯೆ ತಮ್ಮ ನಿವೃತ್ತಿಯೊಡನೆ ವಿದಾಯ ಘೋಷಿಸುವ ಕನಸು ಕಾಣುತ್ತಿದ್ದರು. ಹಾಗೆಯೇ ಉದ್ವಿಗ

ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !

Image
ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ ! Tags: ಪ್ರಚಲಿತ ಕರ್ತೃ venkatesh ದಿನಾಂಕ Sun, 2006-07-09 21:37 ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್, ನವೆಂಬರ್, ೮, ೧೯೦೮ ರಲ್ಲಿ ಬಹಳ ಹೆಸರುವಾಸಿಯಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರ ಶಿಕ್ಷಣ ಬಾಲ್ಯದಿಂದ ಪದವಿಯವರೆವಿಗೂ ಕನ್ನಡನೆಲದಲ್ಲೇ ನಡೆಯಿತು. ಸ್ನಾತಕೊತ್ತರ ಶಿಕ್ಷಣಕ್ಕಾಗೆ ಅವರು ಯುರೊಪಿನ ಸೋರ್ಬೊನಿಯದ, ಮೌಂಟ್ ಪೆಲೀರ್ ವಿಶ್ವವಿದ್ಯಾನಿಲಯದಲ್ಲಿ ಸಂಶೊಧನೆ ಮಾಡಲು ತಮ್ಮ ೧೯ ನೇ ವಯಸ್ಸಿನಲ್ಲೇ ಹಡಗಿನಲ್ಲಿ ಪ್ರಯಾಣ ಮಾಡಿದರು.ಅಲ್ಲಿ, ಅವರ ಶಿಕ್ಷಣವೆಲ್ಲಾ ಪ್ರೆಂಚ್ ಭಾಷೆಯಲ್ಲಿ ನಡೆಯಿತು.ಆದರೆ ಅವರು ಮುಂದೆ ಬರೆದ ಕಾದಂಬರಿಗಳೆಲ್ಲಾ ಹೆಚ್ಚಾಗಿ ಇಂಗ್ಲೀಷಿನಲ್ಲೇ ! ಫ್ರಾನ್ಸಿನಲ್ಲಿ ಕಳೆದ ೧೦ ವರ್ಷಗಳ ಜೀವನದಲ್ಲಿ, ೧೯೩೧ ರಲ್ಲಿ ಫ್ರೆಂಚ್ ಭಾಷಾ ತಜ್ಞೆ, 'ಕ್ಯಾಮಿಲ್ಲೆ ಮೌಲಿ'ಯವರ ಒಡನಾಟದಿಂದ ಪ್ರಾರಂಭವಾಗಿ ಮದುವೆಯಲ್ಲಿ ಕೊನೆಗೊಂಡಿತು.೧೯೩೯ ರಲ್ಲಿ ಕಾರಣಾಂತರಗಳಿಂದ ಮದುವೆ ಮುರಿಯಿತು. ೧೯೩೧-೩೨ ರಲ್ಲಿ ಅವರು ೪ ಕನ್ನಡ ಲೇಖನಗಳನ್ನು 'ಜಯಕರ್ಣಾಟಕ' ವೆಂಬ ನಿಯತಕಾಲಿಕಕ್ಕೆ ಬರೆದುಕೊಟ್ಟಿದ್ದರು.ವಿವಾಹ ವಿಚ್ಛೇದನದ ನಂತರ, ಬೇಸತ್ತ ಅವರು, ಭಾರತಕ್ಕೆ ಬಂದು ಕೆಲವುಕಾಲ ಆಶ್ರಮಗಳಲ್ಲಿ ಕಳೆದರು.