Posts

Showing posts from August, 2006

ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ.ಎನ್.ಮೂರ್ತಿರಾಯರು.

'ಪ್ರಣಯ ಯಾತ್ರೆ' - ಶ್ರೀ. ಶತಾಯುಶಿ, ದಿವಂಗತ, ಎ.ಎನ್.ಮೂರ್ತಿರಾಯರು. ('ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಿಂದ ಆಯ್ದ ಭಾಗಗಳು) ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರಿನ ಪ್ರಕಟಣೆ- ೫೦ ನೆಯ ಪುಸ್ತಕ. ಶ್ರೀ ಎ. ಏನ್ ಮೂರ್ತಿರಾಯರು, ಸರಳ ಕತೆಗಳನ್ನು ಬರೆಯುವ ಪರಂಪರೆಗೆ ಹೆಸರಾದವರು. ಅವರ ಪ್ರಬಂಧಗಳನ್ನು ಓದಿದಮೇಲೆ ಎಂದೂ ಬರೆಯಲು ಸಾಹಸಮಾಡದಿದ್ದವರೂ ಸಹಿತ ಏನಾದರು ಬರೆಯಲು ಆರಂಭಿಸಿದರು. ಏನಾದರೂ ಬರೆದು ಪ್ರಕಟಿಸಲೇ ಬೇಕು ಎಂದು ಆಶಿಸುತ್ತಿದ್ದ ನನಗೆ ಜೀವಬಂದಂತಾಯಿತು. 'ಇಂಟರ್ ನೆಟ್' ಬಂದಮೇಲೆ ಬರೆಯುವ ಗೀಳು ಶುರುವಾಗಿ ಈ ಅಭಿಯಾನಕ್ಕೆ ಪುಷ್ಟಿ ಸಿಕ್ಕಿತೆಂದು ಹೇಳಿದರೆ ತಪ್ಪಾಗಲಾರದು ! (ಕಳಪೆ ಸಾಹಿತ್ಯಗಳೂ ನಾಯಿಕೊಡೆಯಂತೆ ಹುಟ್ಟಿಕೊಂಡವು ಎಂದರೂ ತಪ್ಪಿಲ್ಲ)  ಒಟ್ಟಿನಲ್ಲಿ ನಮ್ಮಪಾಲಿಗೆ ಸಿಕ್ಕಿರುವ ಈ ಸದವಕಾಶವನ್ನು ಚೆನ್ನಾಗಿ ಬಳಸೋಣ ಎನ್ನುವ ಮಾತಿನೊಂದಿಗೆ ಈ ಚಿಕ್ಕ ಲೇಖನವನ್ನು  ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.  ಮದುವೆಯಾದ ಹೊಸತರಲ್ಲಿನ 'ಪ್ರಣಯ' ನಮ್ಮೆಲ್ಲರ ಅನುಭವದ ಸಂಗತಿ. ಇದು ಇಂದು, ನಾಳೆಯ ಎಲ್ಲೆಗಳನ್ನೂ ಮೀರಿದಂತಹದು. ನಿನ್ನೆಗಳೂ ಅದಕ್ಕೆ ಹೊರತಲ್ಲ ! ಸುಮಾರು ೮ ದಶಕಗಳ ಹಿಂದಿನ ಭಾವ ತುಡಿತಗಳನ್ನು ಗಮನಿಸಿದರೆ, ಅವು ಇಂದಿನಷ್ಟೆ ವಸ್ತುನಿಷ್ಟವಾಗಿರುವುದು ನಮ್ಮ ಗಮನಕ್ಕೆ ಬರುವ ಸಂಗತಿ ! ಮದುವೆಯನಂತರ ಆಗುವ ದಿಢೀರ್ ಪರಿವರ್ತನೆಯೇ ಕಲ್ಪನೆಗೆ ಸಿಲುಕದ

೫೯ ನೆಯ ಸ್ವಾತಂತ್ರ್ಯದಿನೋತ್ಸ್ವವದ ದಿನ ೧೫, ಆಗಸ್ಟ್ ೨೦೦೬ ರಂದು !

ಹೌದು. ನಾಳಿದ್ದೇ ಅಲ್ವೆ, "ಸ್ವಾತಂತ್ರ್ಯದಿನಾಚರಣೆ" ದಿನ ! ತಿಲಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ಗಳಿಸಿ ಕೊಟ್ಟ ಸ್ವಾಧೀನತಾ ದಿನ ! ಬನ್ನಿ ಮೊದಲು ನಾವು ಇದರ ಮಹತ್ವವನ್ನು ಸರಿಯಾಗಿ ತಿಳಿದುಕೊಂಡು ನಮ್ಮ ಮಕ್ಕಳೊಡನೆ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ. ಈ 'ಸುದಿನ' ದಂದು ನಾವು ಅವರ ಹೃದಯದಲ್ಲಿ ದೇಶಪ್ರೇಮ ಬಿತ್ತಿ, ನೀರೆರದು ಬೆಳೆಸಲು ಪ್ರತಿಜ್ಞೆ ಮಾಡಬೇಕು. ಅದಕ್ಕಾಗಿ ನಾಳಿದ್ದು ಬರುವ ೧೫ ನೆಯ ತಾರೀಖಿನ 'ರಾಷ್ಟ್ರವ್ಯಾಪಿ ಹಬ್ಬ'ಕ್ಕೆ ಮಾನಸಿಕವಾಗಿ ಪೂರ್ತಿಯಾಗಿ ಸಿದ್ಧರಾಗಬೇಕಾಗಿದೆ. ಅಲೆಗ್ಝಾಂಡರನ ದಾಳಿಯಿಂದ ಹಿಡಿದು ೧೯೪೭ ರ ವರೆಗೆ ಅನೇಕ 'ವಿದೇಶಿ ಶಕ್ತಿಗಳು' ನಮ್ಮದೇಶದಮೇಲೆ ಮುತ್ತಿಗೆ ಹಾಕಿ, ಕೊಳ್ಳೆ ಹೊಡೆದು, ಸುಲಿಗೆ ಮಾಡಿ, ಸಂಪತ್ತನ್ನೆಲ್ಲಾ ದೋಚಿಕೊಂಡು ಪಲಾಯಮಾಡಿದ್ದರು. ಇನ್ನು ಹಲವರು ಈ ದೇಶದಲ್ಲೇ ತಳವೂರಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮ ಅಸ್ತಿತ್ವವೇ ಇಲ್ಲವೆನ್ನಿಸುವಂತೆ ಮಾಡಿದರು. ಹೀಗೆ ನಾವು ಶತಮಾನಗಳ ದಾಸ್ಯದ ಹೊರೆಯಿಂದ ನರಳಿ ಬೆಂಡಾಗಿದ್ದೆವು. ಕೊನೆಯ ೨೦೦ ವರ್ಷಗಳು ಬ್ರಿಟಿಷರ ಲೆಖ್ಖಕ್ಕೆ ಸೇರಿವೆ. ೧೫೦ ವರ್ಷಗಳ ಹಿಂದೆಯೇ ನಮ್ಮ ಸೇನೆಯ 'ಸಿಪಾಯಿ'ಗಳು ಇಂಗ್ಲಿಷ್ ಪ್ರಭುತ್ವವನ್ನು ಪ್ರತಿಭಟಿಸಿ ಹೋರಾಡಿದ್ದರು. ಆದರೆ ದೇಶದಲ್ಲಿ ಸಾಕಷ್ಟು ಬೆಂಬಲ ಸಿಗದೆ ಪ್ರತಿಭಟನೆಯ ಜ್ವಾಲೆ ಆಗಲೇ ನಂದಿತು !ಮ

'ಕ್ವಿಟ್ ಇಂಡಿಯ' ಆಂದೊಲನ ೧೯೪೨ ರ ಆಗಸ್ಟ್ ೮ ರಂದು !

Image
೧೯೪೨ ರ ಆಗಸ್ಟ್ ೮ ರಂದೇ 'ಕ್ವಿಟ್ ಇಂಡಿಯ ಆಂದೋಳನ' ಬೊಂಬಾಯಿನ ಗೊವಾಲಿಯ ಟ್ಯಾಂಕ್ ಬಳಿ ಶುರುವಾಗಿದ್ದು ! ಈ ದಿನ ಅಂದರೆ ೧೯೪೨ ರ ಆಗಸ್ಟ್ ೮ ನೆಯ ತಾರಿಖು, ಮಧ್ಯ ಬೊಂಬಾಯಿನ 'ಗೋವಾಲಿಯ ಕೆರೆಯ ಅಂಗಳ'ದಲ್ಲಿ (ಈಗ ಅದನ್ನು ಆಗಸ್ಟ್ ಕ್ರಾಂತಿ ಮೈದಾನವೆನ್ನುತ್ತಾರೆ.)ಮಹಾತ್ಮ ಗಾಂಧಿ ಯವರೂ ಸೇರಿದಂತೆ ಕಾಂಗ್ರೆಸ್ಸಿನ (ಎ.ಐ.ಸಿ.ಸಿ) ನಾಯಕರುಗಳೆಲ್ಲಾ ಸಮಾಲೋಚಿಸಿ 'ಕ್ವಿಟ್ ಯಿಂಡಿಯ' ಆಂದೋಳನವನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಘೋಷಿಸಿದರು. ಎರಡನೆ ವಿಶ್ವ ಯುದ್ಧ ಸಮೀಪಿಸುತ್ತಿತ್ತು. ಇಂಗ್ಲೆಂಡ್, ಭಾರತೀಯರ ಸಮ್ಮತಿ ಇಲ್ಲದೆ ನಮ್ಮ ಸೈನ್ಯವನ್ನು ಅವರ ಪರವಾಗಿ ಜರ್ಮನಿಯ ವಿರುದ್ಧ ಹೋರಾಡಲು ಆಜ್ಞಾಪಿಸಿತ್ತು. ಇದು ಗಾಂಧಿಜಿಯವರನ್ನು ಒಳಗೊಂಡಂತೆ ದೇಶದ ನಾಯಕರುಗಳಿಗೆ 'ಆಘಾತ' ತಂದಿತ್ತು. ಕಾಂಗ್ರೆಸ್ ಪ್ರತಿಭಟನೆ ಘೋಶಿಸುತ್ತಿದ್ದಂತೆ ಬ್ರಿಟನ್ ಸರ್ಕಾರ ಎಲ್ಲಾ ರಾಷ್ಟ್ರಪರ ಹೋರಾಟಗಾರರನ್ನೂ ಜೈಲಿನಲ್ಲಿ ಬಂಧಿಸಿದರು.ಆದರೆ ಇದರ ವಿರುದ್ಧ ಪ್ರಜೆಗಳು ದಂಗೆ ಎದ್ದರು. ದೇಶದಾದ್ಯಂತ ಪ್ರತಿಭಟನೆ ನಡೆಯಿತು. ಕೊನೆಗೆ ಭಾರತಕ್ಕೆ ವಿಜಯ ಸಿಕ್ಕು ದೇಶಕ್ಕೆ 'ಸ್ವಾತಂತ್ರ್ಯ' ಸಿಕ್ಕಿತು. ಇನ್ನೊಂದು ಘಟನೆಯೆಂದರೆ, ಆಗಸ್ಟ್ ೧೫ ರ ಮಧ್ಯರಾತ್ರಿ ನಮಗೆ ಸಿಕ್ಕ ಸ್ವಾತಂತ್ರ್ಯ ! ಅದೊಂದು ಸುದಿನ. ಮಹಾದಿನ ! ಭಾರತಿಯರೆಲ್ಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಸಂಘರ್ಷ ಮಾಡಿ ಬಲಾಢ್ಯ ಇಂಗ್ಲೀಷ್ ಆಡಳಿತವನ್ನು ಪರಿಸಮಾಪ

'ಇನ್ಪೊಸಿಸ್', ಕನ್ನಡ ನೆಲದ ಚೆಂದದ ಕುಸುಮ ಬೆಳ್ಳಿ ಹಬ್ಬ ಆಚರಿಸಿತು !

Image
'ಇನ್ಫೊಸಿಸ್' ಕನ್ನಡ ನೆಲದ ಚೆಂದದ ಕುಸುಮ : 'ಸಿಲ್ವರ್ ಜ್ಯುಬಿಲಿ' ಆಚರಿಸಿತು ! ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ' ಮೈಸೂರಿನಲ್ಲಿ, ಬೆಳ್ಳಿ ಹಬ್ಬ ಆಚರಿಸುತ್ತಿದೆ. ರಂಗ ಸಜ್ಜಿಕೆ ಎಲ್ಲಾ ವ್ಯವಸ್ಥಿತವಾಗಿದೆ. ಸ್ಥಳ : ಮೈಸೂರಿನ ಇನ್ಫೋಸಿಸ್ ಸಂಸ್ಥೆಯ, ೩೦೦ ಎಕರೆ ವಿಶಾಲ ವಿಶಾಲ ಭವ್ಯಾಂಗಣ ! ಪ್ಲ್ಯಾನಿಂಗ್ ಕಮೀಶನ್ ಉಪ ಅಧ್ಯಕ್ಷ, ಮೋನ್ಟೆಕ್ ಸಿಂಗ್ ಅಹ್ಲು ವಾಲಿಯ, ಕರ್ನಾಟಕದ ಮುಖ್ಯ ಮಂತ್ರಿ, ಕುಮಾರಸ್ವಾಮಿ, ನ್ಯಾಸ್ಡಾಕ್ ಸಿ.ಇ.ಒ, ಗ್ರೆವೀಲ್ಡ್, ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಸಾ.೭-೩೦ ಕ್ಕೆ, ಶ್ರಿ. ನಾರಾಯಣಮೂರ್ತಿ ಯವರು, ಘಂಟೆ ಜಗ್ಗಿ ಬಾರಿಸಿದಾಗ, ನ್ಯೂಯಾರ್ಕ್ ನ, 'ಟೈಮ್ಸ್ ಸ್ಕ್ವೇರ್' ನಲ್ಲಿರುವ ೭ ಅಂತಸ್ತಿನ ಭವ್ಯ ಕಟ್ಟಡದಲ್ಲಿ ನ ತೆರೆಯಮೇಲೆ ಬೆಳ್ಳಿಹಬ್ಬದ ಸಮಾರಂಭದ ದೃ‍ಷ್ಯಗಳು ಮೂಡಿ ಬಂದವು ! ಮೈಸುರಿನ ೩,೦೦೦ 'ಇನ್ಫೋಶಿಯನ್ಸ್' ಸಂಭ್ರಮದಿಂದ ಹರ್ಷೋದ್ಗಾರ ಮಾಡಿ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದರು. ಹೀಗೆ 'ಬೆಳ್ಳಿ ಹಬ್ಬ'ದ ಶುಭಾರಂಭವಾಯಿತು. ೧೯೮೧ ರಲ್ಲಿ ಶ್ರಿಮತಿ ಸುಧಾ ಮೂರ್ತಿಯವರ ಕೂಡಿಟ್ಟ ೧೦,೦೦೦ ರೂ. ಬಂಡವಾಳದಿಂದ ಆರಂಭಗೊಂಡ 'ಇನ್ಫೋಸಿಸ್' ಈಗ ದೈತ್ಯಾಕಾರವಾಗಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಹಬ್ಬಿದೆ. ಅಮೆರಿಕದಿಂದ ಹಿಡಿದು, ಯು.ಎ.ಐ.ವರೆಗೆ ಇದರ ಶಾಖೆಗಳಿವೆ. ಒಟ್ಟು ೫೮,೪೦೯ ಜನ ತಂತ್ರಜ್ಞ ರು ಎಡೆಬಿಡದೆ ದುಡಿಯುತ್ತಿದ್ದಾರೆ. ಅದರ ಆದ