Posts

Showing posts from November, 2006

ಬಾಗಿಲು ತೆರೆಯೆ, ಪುಟ್ಟಮ್ಮ .....!

ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳು ದೊಡ್ಡವರಾಗಿ ಬೆಳೆದು ರೆಕ್ಕೆ ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್ ನಲ್ಲಿದ್ದೇವೆ. ಆದರೂ ನಾವು ಬೊಂಬಾಯಿನ ಶಿವಾಜಿ ಪಾರ್ಕ್ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ. ಏಕೆಂದರೆ ಇಲ್ಲಿ ನಮ್ಮ ಇಬ್ಬರು ಮಕ್ಕಳ ಮೊದಲ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸದ 'ವಿಧಿ' ಅಲ್ಲೇ ನಡೆಯಿತು. ೨-೩ ಕನ್ನಡ ಪರಿವಾರಗಳು ನಮ್ಮ ಸಹವರ್ತಿಗಳು ನಮ್ಮೊಡನೆ ವಾಸವಾಗಿದ್ದರು. ಮೇಲಾಗಿ ಕರ್ನಾಟಕಸಂಘ ನಮಗೆ ಅತಿ ಸಮೀಪ. ಎಲ್ಲಾ ಕಾರ್ಯಕ್ರಮಗಳಿಗೂ ಬಿಡದೆ ಹೋಗುತ್ತಿದ್ದೆವು. ಆಗ ವ್ಯಾಸರಾವ್ ಬಲ್ಲಾಳ್, ಶ್ರೀಪತಿ ಬಲ್ಲಾಳ್,ಅವರ ಪತ್ನಿ, ಕಿಶೋರಿ ಬಲ್ಲಾಳ್, ವರದರಾಜ್ ಆದ್ಯ,ಅವರ ಪತ್ನಿ, ಮತ್ತು ಸನದಿ, ಡಾ. ಚಿದಂಬರ ದೀಕ್ಷಿತ್ , ಎ.ಎಸ್.ಕೆ. ರಾವ್ ರವರ ಭಾಷಣಗಳನ್ನು ಕೇಳುತ್ತಿದ್ದೆವು. ಎಮ್.ವಿ. ಕಾಮತ್, ಜಯದೇವ ಹಟ್ಟಂಗಡಿ, ಗಿರೀಷ್ ಕಾರ್ನಾಡ್ ವಿಶೇಷ ಅತಿಥಿಗಳಾಗಿ ಆಗಾಗ ಬರುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಲು ಆಗ ನಮಗೇನೊ ಖುಷಿ ! ಶಿವಾಜಿ ಪಾರ್ಕ್,ನಲ್ಲಿ ಒಂದು ತರಹ ಕಾಸ್ಮೊಪಾಲಿಟನ್ ಅಟ್ಮೋಸ್ ಫಿಯರ್ ಇತ್ತು. ಮರಾಠಿ, ಫಿಲಮ್ ಸಂಗೀತಕಾರರು, ಕ್ರಿಕೆಟ್ ಪಟುಗಳು, ಕವಿಗಳು, ಉದ್ಯಮಿಗಳು,ರಾಜಕಾರಣಿಗಳು, ಮೀಡಿಯಾದವರು ಎಲ್ಲ ವರ್ಗದವರೂ ನಮಗೆ ನೋಡಲು ಸಿಗುತ್ತಿದ್ದರು. ಮಧ್ಯಮ ವರ್ಗ ಹಾ

'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'...!..

'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'..... ಈ ಹಾಡನ್ನು ರಾಗವಾಗಿ ಹೇಳುತ್ತ, ಭಾವುಕತೆಯ ಉತ್ತುಂಗದಲ್ಲಿ ತೇಲುತ್ತಾ ಅವನ ಲೋಕದಲ್ಲೇ ಕಳೆದುಹೋಗುತ್ತಾನೋ ಎನ್ನಿಸುವಷ್ಟು ಮಗ್ನನಾದ ಒಬ್ಬ ವ್ಯಕ್ತಿ(ತಿರುಕ) ನನ್ನಮೇಲೆ ಗಾಢವಾದ ಪರಿಣಾಮ ಬೀರಿದ್ದಾನೆ ! ಎಲ್ಲರು ಗಮನಿಸುವಂತೆ, ಇತರ ನೇತ್ರಹೀನ ಬಿಕ್ಷುಕರು ತಮ್ಮ ದುಷ್ಕರ್ಮವನ್ನು ಹಳಿದುಕೊಳ್ಳುತ್ತಾ 'ಪಾಪಿ ಪೇಟ್ ಕೆ ಲಿಯ ಕುಚ್ ದೇದೋ ಮಾ; ಜನಮ್ ಸೆ ಅಂಧ ಹೈ, ದಯಾ ಕರೋ' ಎಂದೋ ಮೇರಾ ಕೋಯಿ ನಹಿ ಹೈ; ಇಸ್ ದುನಿಯ ಮೆ' ಇತ್ಯಾದಿ ಗಳು ಅವನ ಹತ್ತಿರವೂ ಸುಳಿಯುವುದಿಲ್ಲ ! ಅವನೊಬ್ಬ 'ಸ್ಥಿತಪ್ರಜ್ಞ'ನಂತೆ ತೋರುತ್ತಾನೆ ! ಬಸವಣ್ಣನವರ ಮಾತಿನಂತೆ, ಕಾಯಕಮಾಡುವುದಷ್ಟೆ ಅವನ ಕೆಲಸ. ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ,ಹೇಳಿರುವಂತೆ, ನಿನ್ನ ಕೆಲಸ ಮಾಡು; ಉಳಿದದ್ದನ್ನು ನನಗೆ ಬಿಡು. ಫಲಾಪೇಕ್ಷೆ ನಿನಗೆ ಬೇಡ' ಸರ್ವಜ್ಞನು ತಿಳಿಸಿದಂತೆ 'ಕೋಟಿವಿದ್ಯಗಳಿಗಿಂತ ಮೇಟಿವಿದ್ಯೆಯೆ ಲೇಸು.' ಮೇಟಿವಿದ್ಯೆಯನ್ನು (ಬೇಸಾಯ) ಇವನು ಧಾರಾಳವಾಗಿ ಮಾಡಬಾಹುದಿತ್ತು. ಆದರೆ ನೇತ್ರಹೀನತೆ, ಅವನನ್ನು ಹಿಡಿದು ಕಟ್ಟಿದೆ ! ಬೇಕಾದಷ್ಟು ಜನ ಮಾಡುತ್ತಲೂ ಇದ್ದಾರೆ. ಭಿಕ್ಷೆಯನ್ನು ಮಾಡುವುದೊಂದೇ ಅವನಿಗೆ ಒದಗಿಬಂದಿರುವ ಕೆಲಸ.'ಭವತಿ ಭಿಕ್ಷಾಂದೇಹಿ' ಎಂಬ ಪಂಚಾಕ್ಷರಿ ಮಂತ್ರವನ್ನು ಹೇಳಿ, ಮನೆ ಮನೆಗೆ ಹೋಗಿ ಕೈಒಡ್ಡಲು ಅವನಿಗಾಗುತ್ತಿಲ್ಲ. ಅಂಧನಲ್ಲವೆ ! ಆ