Posts

Showing posts from 2007
ಬೆಂಗಳೂರು, ನ.12: ಬಿ.ಎಸ್.ಯಡಿಯೂರಪ್ಪ ರಾಜಕೀಯದಲ್ಲಿ ಸವೆಸಿರುವ ಹಾದಿ ಸುದೀರ್ಘ. ಅವರ ಹೋರಾಟದ ಜೀವನ ಆರಂಭವಾದದ್ದು ಹಳ್ಳಿಯಿಂದಲೆ. ಇಂದು ಸೋಮವಾರ(ನ.12) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಅವರ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತದೆ. ಹಾಗಾಗಿ ಅವರ ವೈಯಕ್ತಿಕ ವಿವರಗಳನ್ನೊಮ್ಮೆ ತಿಲಕಿಸಿ.ಹೆಸರು : ಬಿ.ಎಸ್.ಯಡಿಯೂರಪ್ಪಜನ್ಮದಿನಾಂಕ : 27.2.1943ಹುಟ್ಟಿದ ಸ್ಥಳ : ಬೂಕನಕೆರೆ, ಕೆ.ಆರ್.ಪೇಟೆ ತಾಲೂಕು, ಮಂಡ್ಯಜಿಲ್ಲೆತಂದೆ : ಸಿದ್ಧಲಿಂಗಪ್ಪತಾಯಿ : ಪುಟ್ಟಮ್ಮಪತ್ನಿ : ಮೈತ್ರಾದೇವಿಪುತ್ರರು :ರಾಘವೇಂದ್ರ, ವಿಜಯೇಂದ್ರಪುತ್ರಿಯರು : ಅರುಣಾದೇವಿ, ಪದ್ಮಾವತಿ, ಉಮಾದೇವಿವಿದ್ಯಾರ್ಹತೆ : ಬಿ.ಎ.ಹವ್ಯಾಸ : ಓದು, ರಾಜಕೀಯಸ್ವಭಾವ : ಸಿಡುಕುಸವೆಸಿದ ರಾಜಕೀಯ ಹಾದಿ:1972 : ತಾಲೂಕು ಸಂಘದ ಅಧ್ಯಕ್ಷರಾಗಿ ರಾಜಕೀಯಕ್ಕೆ ಪಾದಾರ್ಪಣೆ1975 : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ1977 : ಶಿಕಾರಿಪುರ ಪುರಸಭೆ ಅಧ್ಯಕ್ಷ1980 : ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷ1983 : ಮೊದಲ ಬಾರಿ ಶಾಸಕರಾಗಿ ಆಯ್ಕೆ, ಮುಂದೆ ಐದು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕ1985 : ಬಿಜೆಪಿಯ ಶಿವಮೊಗ್ಗ ಜಿಲ್ಲಾದ್ಯಕ್ಷ1988 : ಬಿಜೆಪಿ ರಾಜ್ಯಾಧ್ಯಕ್ಷ1992 : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ1994 : ವಿಧಾನಸಭೆ ಪ್ರತಿಪಕ್ಷದ ನಾಯಕ1999 : ಮತ್ತೆ ರಾಜ್ಯಾಧ್ಯಕ್ಷ2000 : ವಿಧಾನ ಪರಿಷತ್ ಸದಸ್ಯ2004 : ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕ20
"ಮಧುರ ಚೆನ್ನ" - (೧೯೦೩-೧೯೫೩)ಮಧುರ ಚೆನ್ನರು ಜನಿಸಿದ್ದು ೧೯೦೩ರ ಜುಲೈ ೩೧ರಂದು; ವಿಜಾಪುರ ಜಿಲ್ಲೆಯ ಹಲಸಂಗಿಯ ಸಮೀಪದ ಹಿರೇಲೋಣಿಯಲ್ಲಿ. ತಂದೆ ಸಿದ್ಧಲಿಂಗಪ್ಪ ಗಲಗಲಿ ಹಾಗೂ ತಾಯಿ ಅಂಬಕ್ಕ. ೧೯೨೧ರಲ್ಲಿ ಮುಲ್ಕಿ ಪರೀಕ್ಷೆ ಪಾಸು ಮಾಡಿದರು. ಸಾಹಿತ್ಯದ ಕುರಿತು ಅವರ ಆಸಕ್ತಿ ಗರಿಗೆದರಿತು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮ ಸಾಹಿತ್ಯದ ವ್ಯಾಸಂಗ, ಹಲವಾರು ಭಾಷೆಗಳ ಅಭ್ಯಾಸದಲ್ಲಿ ತೊಡಗಿಕೊಂಡರು. ಯೋಗದ ಬಗ್ಗೆ ಅವರಿಗೆ ಬಹಳ ಆಸಕ್ತಿ ಇತ್ತು. ಶ್ರೀ ಅರವಿಂದರ ಯೋಗ ಮಾರ್ಗದ ಬಗ್ಗೆ ಅವರು ಆಕರ್ಷಿತರಾಗಿದ್ದರು.ನನ್ನನಲ್ಲ ಹಾಗೂ ವಿನೋದ ಕುಸುಮಾವಳಿ ಅವರ ಕವನ ಸಂಕಲನಗಳು. ಕಾಳರಾತ್ರಿ, ಬೆಳಗು, ಪೂರ್ವರಂಗ-ಕೃತಿಗಳು ಆಧ್ಯಾತ್ಮಿಕ ಆತ್ಮಕಥನಗಳು/ ಆತ್ಮಸಂಶೋಧನೆ, ಕನ್ನಡಿಗರ ಕುಲಗುರು ವಿದ್ಯಾರಣ್ಯರು, ಪೂರ್ಣಯೋಗದ ಪಥದಲ್ಲಿ, ಕನ್ನಡ ಪ್ರಾಚೀನ ಲಿಪಿ ಬೋಧಿನಿ ಕೆಲವು ಕೃತಿಗಳು. ಅನುವಾದ ಕಾರ್ಯದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡರು. ವಿಸರ್ಜನ-ರವೀಂದ್ರರ ನಾಟಕದ ಅನುವಾದ. ಬಾಳಿನಲ್ಲಿ ಬೆಳಕು, ಮಾತೃವಾಣಿ ಪೂರ್ಣಯೋಗ, ಧರ್ಮಕ್ಷೇತ್ರೇ-ಕುರುಕ್ಷೇತ್ರೇ ಇತರ ಕೆಲವು ಕೃತಿಗಳು. ಶ್ರೀಮಾತೆ ಅವರ ವರ್ಡ್ ಆಫ್ ದಿ ಮದರ್ ಕೃತಿಯನ್ನು ಮಾತೃವಾಣಿ ಎಂದು ಅನುವಾದ ಮಾಡಿದ್ದಾರೆ. ೧೯೯೬ರಲ್ಲಿ ಮಧುರಚೆನ್ನರ ಲೇಖನಗಳು-ಗ್ರಂಥರೂಪದಲ್ಲಿ ಹೊರಬಂದವು. ನನ್ನನಲ್ಲ, ಮಧುರಗೀತ-ಎರಡು ಮಧುರ ಚೆನ್ನ ಅವರು ರಚಿಸಿದ ನೀಳ್ಗತೆಗಳು. ಹಲಸಂಗಿ ಗೆಳೆಯರು ಎ

"ಟಿ.ಪಿ. ಕೈಲಾಸಂ" (೧೮೮೫-೧೯೪೬)

"ಟಿ.ಪಿ. ಕೈಲಾಸಂ" (೧೮೮೫-೧೯೪೬) ಶ್ರೀ ತ್ಯಾಗರಾಜ ಪರಮಶಿವ ಕೈಲಾಸಂ ಜನಿಸಿದ್ದು ೧೮೮೪ರ ಜುಲೈ ೨೯ರಂದು ಮೈಸೂರಿನಲ್ಲಿ. ತಂದೆ ಮೈಸೂರು ಸಂಸ್ಥಾನದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಪರಮಶಿವ ಅಯ್ಯರ್. ಮೈಸೂರು, ಬೆಂಗಳೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮದ್ರಾಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಭೂಗರ್ಭ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‍ನ ರಾಯಲ್ ಕಾಲೇಜಿಗೆ ಸೇರಿದರು. ಇಂಗ್ಲೆಂಡ್‍ನಲ್ಲಿ ಕೆಲವು ವರ್ಷಗಳ ಕಾಲ ಇದ್ದ ಅವರು ಅಲ್ಲಿನ ಸಂಗೀತ, ಸಾಹಿತ್ಯ, ನಾಟಕಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಇಂಗ್ಲಿಷ್ ರಂಗಭೂಮಿ ಅವರನ್ನು ಬಹುವಾಗಿ ಆಕರ್ಷಿಸಿತ್ತು. ನಾಟಕಗಳ ಬಗ್ಗೆ ವಿಶೇಷ ಒಲವನ್ನು ಅವರು ಬೆಳೆಸಿಕೊಂಡರು. ನಾಟಕವೆಂದರೆ ಪೌರಾಣಿಕ ನಾಟಕಗಳು, ಭಾರೀಯಾದ ಮೇಕಪ್ಪು, ದಿರಿಸು, ರಂಗಸಜ್ಜಿಕೆ ಎಂಬೆಲ್ಲ ಅಂಶಗಳಿಂದ ತುಂಬಿಹೋಗಿದ್ದ ನಾಟಕದ ಕಲ್ಪನೆಗೆ ಹೊಸ ರೂಪವನ್ನು ಕೈಲಾಸಂ ನೀಡಿದರು. ಹಾಸ್ಯ, ವ್ಯಂಗ್ಯ, ಕುಚೋದ್ಯಗಳಿಂದ ಕೂಡಿದ, ವಿನೋದಪೂರ್ಣ, ವಿಚಿತ್ರ ಚಕಮಕಿ ಸಂಭಾಷಣೆಯ ಪಾತ್ರಗಳು, ಸನ್ನಿವೇಶಗಳು ಕೈಲಾಸಂರಿಗೆ ಕೀರ್ತಿ ತಂದಿತ್ತವಲ್ಲದೆ ಕನ್ನಡ ರಂಗಭೂಮಿಗೆ ಹೊಸ ರೂಪವೊಂದನ್ನು ನೀಡಿದವು. ೧೯೧೫ರಲ್ಲಿ ಸಬ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ವೃತ್ತಿಗೆ ಸೇರಿದ ಅವರು, ಕೆ.ಜಿ.ಎಫ್., ಬೆಂಗಳೂರು, ಶಿವಮೊಗ್ಗಗಳಲ್ಲಿ ಕೆಲಸ ಮಾಡಿದರೂ, ಕೆಲವು ವರ್ಷಗಳಲ್ಲೇ ರಾಜೀನಾಮೆ ನೀಡಿದರು. ವರದಾಚಾರ್ಯರ ಕಂಪನಿಯ ನಾಟ

ಡಾ. ಎ. ಎನ್ ಮೂರ್ತಿರಾಯರು.

ಡಾ. ಎ. ಎನ್ ಮೂರ್ತಿರಾಯರು. (೧೬-೦೬-೧೯೦೦-) ಮಂಡ್ಯ ಜಿಲ್ಲೆಯ "ಅಕ್ಕಿಹೆಬ್ಬಾಳು", ಅವರ ಜನ್ಮಸ್ಥಳ. ತಂದೆ-ತಾಯಿಗಳು : ಶ್ರೀಮತಿ ಪುಟ್ಟಮ್ಮ, ಮತ್ತು ತಂದೆಯವರು, ಶ್ರೀ ಎ. ಸುಬ್ಬರಾವ್. ಹೆಂಡತಿ- ಶ್ರೀಮತಿ ಜಯಲಕ್ಷ್ಮಿ, (ಮೂರ್ತಿರಾಯರ ರಚನೆಗಳಲ್ಲಿ 'ಲಲಿತೆ,' ಯೆಂದು ಸಂಬೋಧಿಸಲ್ಪಡುತ್ತಾರೆ.) ಮಕ್ಕಳು : ೧. ಎ. ಎನ್. ಸುಬ್ಬರಾಮಯ್ಯ,೨. ಎ. ಎನ್. ನಾಗರಾಜ್,೩. ಎ. ಎನ್ ರಾಮಚಂದ್ರರಾವ್ ವಿದ್ಯಾಭ್ಯಾಸ : ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲುಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ. ಎ ; (ಇಂಗ್ಲೀಷ್ ಸಾಹಿತ್ಯದಲ್ಲಿ) ವೃತ್ತಿ : ೧. ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಢ್ಯಾಯವೃತ್ತಿ- ೧೯೨೫-೧೯೨೭ ೨. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ-೧೯೨೭-೧೯೪೦ ೩. ಶಿವಮೊಗ್ಗದ ಇಂಟರ್ಮೀಡಿಯೆಟ್ ಕಲೇಜಿನಲ್ಲಿ ಉಪಪ್ರಾಧ್ಯಾಪಕ-೧೯೪೦-೧೯೪೩ ೪. ಕರ್ನಾಟಕ ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕ-೧೯೫೬-೧೯೫೯ ಗೌರವಕೆಲಸಗಳು : ೧. ಕಾರ್ಯದರ್ಶಿ, ಕನ್ನಡಸಾಹಿತ್ಯ ಪರಿಷತ್ತು-೧೯೫೪ ೨. ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು-೧೯೫೪-೫೬ ೩. ಕೇಂದ್ರ ಸಾಹಿತ್ಯ ಅಕ್ಯಾಡಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್ ಛೇರ್ಮನ್ ೪. ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ ಕನ್ನಡ ಕನ್ವೀನರ್- ಛೇರ್ಮನ್ ೫. ಭಾರತೀಯ ಆಕಾಶ್ ವಾಣಿ ಯ 'ಕೇಂದ್ರೀಯ ಕಾರ್ಯಕ್ರಮಗಳ ಸಲಹಾಕಮಿಟಿ', ಯ ಸದಸ್ಯರಾಗಿ
ಭಾರತದಲ್ಲಿ 'ಬೀ.ಟಿ. ಹತ್ತಿ,' - ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆ : ಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ 'ಅನುಸಂಧಾನದ ಪ್ರಮಾಣ,' "ದೈತ್ಯಾಕಾರ," ವಾಗಿರುವುದು ಕಂಡು ಬರುತ್ತದೆ. ೧೯೧೨ ರಲ್ಲಿ, ಡಾ. ಬಾಲ್ಸ್ ನಿಂದ ಆರಂಭವಾಗಿ ಇಂದಿನವರೆಗಿನ ಕಾರ್ಯವಿಧಾನಗಳನ್ನು, ಅಂದರೆ, ನಿರಂತರವಾಗಿ ಬೆಳೆಯುತ್ತಿದ್ದ, ಹತ್ತಿಯ ಮರಗಳನ್ನು ಮೆಳೆಗಳಲ್ಲಿ ಅಥವ ಪೊದೆಗಳಲ್ಲಿ ಪರಿವರ್ತಿಸಿ, ವಾರ್ಷಿಕ ಫಸಲನ್ನಾಗಿಸಿದ್ದು, ಹತ್ತಿಯ ತಂತುಗಳಲ್ಲಿ ತಂದ ಅನೇಕ ಉತ್ತಮ ಗುಣಗಳು, (ತಂತುಶಕ್ತಿ, ತಂತು ಮಹೀನತೆ, ತಂತುಗಳ ಉದ್ದದಲ್ಲಿ ವೃದ್ಧಿ,) ಇತ್ಯಾದಿಗಳು, 'ಸಸ್ಯವಿಜ್ಞಾನ'ದ ಬೆಳವಣಿಗೆಯೆಂದೇ ಗುರುತಿಸಬಹುದು ! 'ವಂಶವಾಹಿನಿ ವಿಜ್ಞಾನ ಶಾಸ್ತ್ರ' ಬೆಳಕಿಗೆ ಬರುವ ಮೊದಲೇ, 'ಅರಿವಿಲ್ಲದೆ ಆದ' ಈ ಎಲ್ಲಾ ಬೆಳವಣಿಗೆಗಳೂ, ಸ್ತುತ್ಯಾರ್ಹ ! ಭಾರತದಲ್ಲಿ ೭೦ ರ ದಶಕದಲ್ಲಿ ರೂಪಗೊಂಡ 'ಹಸಿರು ಕ್ರಾಂತಿ'- ನೀರಾವರಿ, ರಸಗೊಬ

ಪ್ರೊ. ಶ್ರೀ. ಎಮ್. ಹಿರಿಯಣ್ಣನವರು. (೧೮೭೧-೧೯೭೧)

ಪ್ರೊ. ಶ್ರೀ. ಎಮ್. ಹಿರಿಯಣ್ಣನವರು. (೧೮೭೧-೧೯೫೦) ಆಂಗ್ಲಭಾಷೆಯಲ್ಲಿ ಭಾರತೀಯತತ್ವಶಾಸ್ತ್ರದ ಬಗ್ಗೆ ಸಮರ್ಥವಾಗಿ, ವಿದ್ವತ್ಪೂರ್ಣವಾಗಿ ಬರೆದ ಪುಸ್ತಕಗಳಸಾಲಿನಲ್ಲಿ ಹಿರಿಯಣ್ಣನವರ ಗ್ರಂಥ ಎದ್ದು ಕಾಣುವುದು, ಎಲ್ಲರ ಗಮನಕ್ಕೆ ಬಂದಿರುವ ವಿಷಯವಾಗಿದೆ. ಅವರ ಪುಸ್ತಕ, ಇಂದಿಗೂ ವಿಶ್ವದ ತತ್ವಶಾಸ್ತ್ರದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿದೆ. ಪ್ರೊ. ಹಿರಿಯಣ್ಣನವರು ಸಂಸ್ಕೃತದಲ್ಲಿ ಪ್ರಕಾಂಡ ಅಂಡಿತರು. ಹಾಗೆಯೇ ಆಂಗ್ಲಭಾಷೆಯಲ್ಲೂ ಪ್ರಚಂಡ ಪ್ರಭುತ್ವವನ್ನು ಸಂಪಾದಿಸಿದವರು. ಅವರ ಇಂಗ್ಲೀಷ್ ವ್ಯಾಖ್ಯಾನ, ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಅವರು ಅತ್ಯಂತ ಮೃದುಮಧುರಭಾಷಿ, ಹಾಗೂ ಸಮರ್ಥ ಚಿಂತಕರು. ಭಾರತೀಯ ತತ್ವಶಾಸ್ತ್ರವನ್ನು ಸರಿಯಾಗಿ ಅರ್ಥೈಸಿ ಹೇಳುವುದರಲ್ಲಿ ಎತ್ತಿದ ಕೈ. ತಮ್ಮ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿ-ವಿಶ್ವಾಸಳಿಂದ ಕಾಣುತ್ತಿದ್ದರು. ಜನನ ಬಾಲ್ಯ ಮತ್ತು ಮನೆಯ ಪರಿಸರ : ಹಿರಿಯಣ್ಣನವರು ಮೇ, ೭, ೧೮೭೧ ರಲ್ಲಿ ಜನಿಸಿದರು. ತಂದೆ. ಶ್ರೀ ನಂಜುಂಡಯ್ಯನವರು. ಅವರಿಗೆ ೩ ಗಂಡುಮಕ್ಕಳು. ಅವರಲ್ಲಿ ಹಿರಿಯಣ್ಣನವರು ಎರಡನೆಯವರು. ಇವರ ಒಬ್ಬ ಸೋದರ, ಪ್ರಖ್ಯಾತ ಶ್ರೀ. ಎಮ್. ಎನ್. ಕೃಷ್ಟರಾಯರು. ಇವರು ಹಿಂದಿನ ಮೈಸೂರು ಸಂಸ್ಥಾನದ ಸರ್ಕಾರಿ ಹುದ್ದೆಯಲ್ಲಿ ಹಲವಾರು ಶಾಖೆಗಳಲ್ಲಿ ದುಡಿದು, ಕೊನೆಗೆ, ದಿವಾನರಾಗಿ ನಿವೃತ್ತರಾದವರು. ಇವರ ಹೆಸರಿನಲ್ಲೇ, ಬೆಂಗಳೂರಿನ ಬಸವನಗುಡಿ ಬಡಾವಣೆಯಲ್ಲಿ, ವಿಶಾಲವಾದ, (ಕೃಷ್ಣರಾವ್ ಪಾರ್ಕ್) ಉದ್ಯ

ಅಟ್ಲಾಂಟಿಸ್ ಸುಖವಾಗಿ ಕ್ಯಾಲಿಫೋರ್ನಿಯದಲ್ಲಿ ಭೂಮಿಯ ಮೇಲೆ ಇಳಿಯಿತು !

Image
"ಸ್ಪೇಸ್ ಶಟಲ್ ಆಟ್ಲಾಂಟಿಸ್," ಕ್ಯಾಲಿಫೋರ್ನಿಯದಲ್ಲಿ ಶನಿವಾರ, ಜೂನ್, ೨೩, ೨೦೦೭ ರ ಬೆಳಿಗ್ಯೆ ಸುಖವಾಗಿ ಇಳಿಯುತ್ತಿರುವ ಭವ್ಯ ದೃಷ್ಯ ! Space Shuttle Atlantis descended to a smooth landing at Edwards Air Force Base, Calif., concluding a successful assembly mission to the International Space Station. With Commander Rick Sturckow and Pilot Lee Archambault at the controls, Atlantis landed at 3:49 p.m. EDT on Friday. The challenges posed during STS-117 are invaluable learning experiences that will help the agency prepare for future exploration, William Gerstenmaier, NASA's associate administrator for space operations, explained at a post-landing press conference. ಅಮೆರಿಕ ದೇಶಕ್ಕೆ, ರಷ್ಯ ದೇಶಕ್ಕೆ ಮತ್ತು ಅಂತರಿಕ್ಷಯಾನದ ಮಹತ್ತರ ಸಾಧನೆಗಳನ್ನು ಮಾಡಲು ಸನ್ನದ್ಧವಾಗುತ್ತಿರುವ ರಾಷ್ಟ್ರಗಳಿಗೆ ಇದು ಚೇತೋಹಾರಿಯಾಗಿದೆ. ಈ ವಿಜಯ, ಅವರ ವೈಜ್ಞಾನಿಕ ಕಾರ್ಯಕ್ಷೇತ್ರಗಳಿಗೆ ಒಂದು ಅತ್ಮವಿಶ್ವಾಸವನ್ನು ಕೊಟ್ಟು, ಅವರನ್ನು ಕಾರ್ಯರಥರನ್ನಾಗಿ ಮಾಡಲು ಪ್ರೊತ್ಸಾಹಿಸುತ್ತವೆ. ಈ ವಿಜಯೋತ್ಸಾಹ ಗಗನ ಯಾತ್ರಿಗಳ ಮುಕುಟದಲ್ಲಿ ಮತ್ತೊಂದು ಗರಿ ಮೂಡಿಸಿದೆ.

ಹವ ಹವಾಯಿ !

Image
ಹವಾಯಿ ದ್ವೀಪದ ವನ ಸಿರಿ, ಪ್ರಕೃತಿ ಸಂಪತ್ತು, ಎಂತಹವರನ್ನೂ ಚಕಿತಗೊಳಿಸುತ್ತದೆ. ಇಲ್ಲಿ ಇರುವ ಹೂ ಹಣ್ಣು ಮತ್ತು ಎಲೆ, ಮರಗಳು ವಿಶಿಷ್ಠ ಜಾತಿಗೆ (Exotic), ಸೇರಿವೆ. ಭೂದೇವಿ ತನ್ನ ಸಂಭ್ರಮದಲ್ಲಿ ಮೆರೆಯುವ ನಾಡು ಇದು ! ತೆಂಗಿನಮರಗಳು- ಬೀಚಿನಲ್ಲಿ !                             ಅಪ್ಪ ಮಗಳು, ಪ್ರಕೃತಿಯ ಮಾಯವನ್ನು ಸವಿಯುತ್ತಿದ್ದಾರೆ.                                                        ನೀರು, ಗಿಡ-ಮರಗಳ ಸ್ವರ್ಗ !                                     ಈ ಕೆಂಪು ಹೂ ನನಗೆ ಬಹಳ ಇಷ್ಟ ! ನಿಮಗೆ ? ಈ ಹೂಗಳೋ, ಬಹುಶಃ ಇವು ಇಲ್ಲಿಲ್ಲದೆ ಪ್ರಪಂಚದಲ್ಲಿ ಎಲ್ಲೂ ಸಿಕ್ಕವು ! ಒಂದು ಸುಖೀ ಸಂತೃಪ್ತ ಪರಿವಾರ ! ಎಲ್ಲರ ಪ್ರೀತಿಯ ಕೇಂದ್ರ ಬಿಂದು- ಪುಟ್ಟ ಗೌರಿ !

" ಜನ ಗಣ ಮನ "- ಡಾ. ರಾಘವೇಂದ್ರರಾವ್

Image
ಚಿತ್ರ - ೧ : ಕೋನಾರ್ಕ ದೇವಾಲಯದ ಭಾಗ. ಚಿತ್ರ- ೨ : ಪ್ರಾರಂಭದಲ್ಲಿ ಶಾಂತಿನಿಕೇತನ ಹೀಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ. ಲೇಖಕರು : ಡಾ. ಎಚ್. ಎಸ್. ರಾಘವೇಂದ್ರರಾವ್ [ರಾ. ರಾ] ಇದು ಹೊರ ನೋಟಕ್ಕೆ ಒಂದು ಪ್ರವಾಸ ಕಥನ. ಆದರೆ, ಅದರಲ್ಲಿ ಬರುವ ಸನ್ನಿವೇಶಗಳನ್ನೆ ಹೋಲಿಸಿ ರಾಯರ ಕೊಡುವ ಒಳನೋಟಗಳು ಅವರ್ಣನೀಯ. ಇದಕ್ಕೆ ಕಾರಣ ಅವರಲ್ಲಿ ಅಡಗಿರುವ ಅವರ ಅದ್ಭುತ ಜ್ಞಾನ ಭಂಡಾರ. ಅದಕ್ಕೆ ತಕ್ಕ ಹಾಗೂ ಪೂರಕವಾದ ಭಾಷಾ ಸಂಪತ್ತು. ಎಲ್ಲವನ್ನು ನಿಧಾನವಾಗಿ ನೋಡಿ ಅದನ್ನು ಸರಿಯಾಗಿ ಅರ್ಥೈಸಿಕೊಂಡು ಓದುಗರ ಮನಸ್ಸಿನಲ್ಲಿ ಒಂದು ಹೊಸ ಅನುಭವ ಲೋಕವನ್ನು ನಿರ್ಮಾಣಮಾಡುವಲ್ಲಿ ಅವರು ಸಾರ್ಥಕರಾರಿದ್ದಾರೆ. ಮುನ್ನುಡಿಯನ್ನು ಬರೆದ ಪ್ರಸಿದ್ಧ ವ್ಯಕ್ತಿ, ಹಾಗೂ ಅವರ ಮತ್ತು ನಮ್ಮೆಲ್ಲರ ಮೆಚ್ಚಿನ ಡಾ. ಶಿವರುದ್ರಪ್ಪನವರು. ನಮ್ಮ ಮಗಳು ಅವರನ್ನು ಸಂಬೋದಿಸುವ ರೀತಿ, ಹೇಗೆ; 'ಎಲ್ಲೊ ಹುಡುಕಿದೆ ಕಾಣದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ... ಆ ಪದ್ಯ ಬರ್ದಿದಾರಲ್ಲಪ್ಪ.. ಅವ್ರೆ .ಅವ್ರೆ .. ಶಿವರುದ್ರಪ್ಪ್ನೋರು, ಅಂತ. ನನಗಂತೂ ಆ ಪದ್ಯ ಅತ್ಯಂತ ಪ್ರಿಯ. ನನಗೆ ಪ್ರಿಯವಾದ ಎಲ್ಲಾ ಮಕ್ಕಳ ಬಾಯಿನಲ್ಲೂ ಒಮ್ಮೆ ಅದನ್ನು ಹಾಡಿಸಿ ಅದರ ಹೊಸ ಸೊಬಗನ್ನು ಸವಿಯುವ ಹಂಬಲ ನನ್ನದು ! ಜಿ.ಎಸ್.ಎಸ್, ಜನ ಗಣ ಮನ ಪುಸ್ತಕವನ್ನು ಬಹಳ ಸೊಗಸಾಗಿ ವಿಶ್ಲೇಷಿಸಿದ್ದಾರೆ. ರಾಘವೇಂದ್ರರಾಯರ ಒರಿಸ್ಸ ಮತ್ತು ಬಂಗಾಳದ ಭೇಟಿ ನಮಗೆಲ್ಲಾ ಮುದಕೊಡುವ ಪುಸ್ತಕ. ನಾನು ಮತ್ತು