Posts

Showing posts from January, 2007

'ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ.......ನ್ನೆನು ' !

Image
ಪ್ರಾರ್ಥನೆ : ಕರುಣಾಳು, ಬಾ, ಬೆಳಕೆ,ಮುಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆನ್ನನುಇರುಳು ಕತ್ತಲೆಯ ಗವಿ; ಮನೆದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ಕನ್ನಡಿಯಿಡಿಸು; ಬಲುದೂರ ನೋಟವನು ಕೇಳಿದೊಡನೆಯೆ-ಸಾಕು ನನಗೊಂದು ಹೆಜ್ಜೆ. ಮುನ್ನ ಇಂತಿರದಾದೆ; ನಿನ್ನಬೇಡದೆ ಹೋದೆ, ಕೈಹಿಡಿದು ನಡಸು ಎನುತ ನನ್ನ ದಾರಿಯ ನಾನೆ ನೋಡಿಹಿಡಿದೆನು:-ಇನ್ನು ಕೈಹಿಡಿದು ನಡಸು ನೀನು. ಮಿರುಗುಬಣ್ಣಕೆ ಬೆರೆತು, ಭಯಮರೆತು ಕೊಬ್ಬಿದೆನು; ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ. ಇಷ್ಟುದಿನ ಸಲಹಿರುವೆ ಮೂರ್ಖನನು ;ಮುಂದೆಯೂ ಕೈಹಿಡಿದು ನಡಸದಿಹೆಯಾ ? ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು, ಇರುಳನ್ನು ನೂಕದಿಹೆಯಾ ? ಬೆಳಗಾದ ಹೊಳೆಯದೇ ಹಿಂದೊಮ್ಮೆ ನಾನೊಲಿದು ಈ ನಡುವೆ ಕಳೆಕೊಂಡ ದಿವ್ಯ ಮುಖ ನಗುತ ? - ನ್ಯುಮನ್, (೧೮೦-೧-೧೮೯೦, ('ಲೀಡ್, ಕೈಂಡ್ಲಿ ಲೈಟ್') 'ಶತಮಾನದ ಕಾವ್ಯ'- ಸಂಪಾದಕರು, ಡಾ. ಎಚ್. ಎಸ್. ವೆಂಕಟೇಶ ಮೂರ್ತಿ)

ಬಿ. ಎಂ. ಶ್ರೀ- ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ಪ್ರೊ. ಎಲ್. ಎಸ್. ಶೇಷಗಿರಿರಾಯರು !

Image
ಪ್ರೊ. ಎಲ್. ಎಸ್. ಶೇಷಗಿರಿರಾಯರು ಪ್ರೊ. ಬಿ. ಎಂ. ಶ್ರೀ ಅವರ ಬಗ್ಗೆ ಸುಂದರ ಉಪನ್ಯಾಸವನ್ನು ಶನಿವಾರ ೬ ನೇ ಜನವರಿ ೨೦೦೭ ರಂದು ಸಾಯಂಕಾಲ  ೬-೩೦ ಕ್ಕೆ ನೀಡಿದ್ದರು.  ಮೈಸೂರು ಅಸೋಸಿಯೇಷನ್ ಬಂಗಾರದ ದತ್ತಿ ಹಬ್ಬದ ಪ್ರಯುಕ್ತ ಯೋಗಿಸಲಾಗಿದ್ದ ದತ್ತಿ ಉಪನ್ಯಾಸ ಶನಿವಾರ ೬ ನೇ ಜನವರಿ ೨೦೦೭ರಂದು ಸಯಕಾಲ ೬-೩೦ ಕ್ಕೆ ಶುರುವಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಶ್ಯಾಮಲ ಮತ್ತು ವೃಂದದವರಿಂದ ಬಿ. ಎಂ. ಶ್ರೀ ರವರು ಬರೆದ ಕವನಗಳ ವಾಚನವಾಯಿತು. ಮೊದಲು 'ಕರುಣಾಳು ಬಾ ಬೆಳಕೆ' ಪ್ರಾರಂಭವಾಗಿ 'ವಸಂತ ಬಂದ ಋತುಗಳ ರಾಜ' ದಿಂದ ಮುಕ್ತಾಯವಾಯಿತು. ಮೈಸೂರ್ ಅಸೊಸಿಯೇಷನ್ ಅಧ್ಯಕ್ಷರಾದ ಶ್ರೀ. ದೊರೈಸ್ವಾಮಿಯವರು ಮಾತನಾಡಿ, ದತ್ತಿ ಉಪನ್ಯಾಸಮಾಲೆಯ ೨೫ ನೇ ವರ್ಷದ ಜೊತೆಗೆ ೨೫ ವರ್ಷಗಳಿಂದ ನಡೆದುಕೊಂಡು ಬಂದ ಪತ್ರಿಕೆ, 'ನೇಸರು'ವಿನ ಪ್ರತಿಯನ್ನು ರಾಯರ ಅಮೃತಹಸ್ತದಿಂದ ಬಿಡುಗಡೆಮಾಡಲಾಯಿತು. ಮೊದಲನೆಯ ದಿನದ ಪ್ರಾಸ್ತಾವಿಕ ಭಾಷಣವನ್ನು ಡಾ. ತಾಳ್ತಜೆ ವಸಂತ ಕುಮಾರ್ ಮಾಡಿದರು. ೭೫ ವರ್ಷವಯಸ್ಸಿನ ಶ್ರೀ ಎಲ್.ಎಸ್.ಶೇಷಗಿರಿರಾಯರು, ಆಂಗ್ಲ ಬಾಷೆಯನ್ನು ಸುಮಾರು ೪ ದಶಕಗಳಕಾಲ ಹೇಳಿಕೊಟ್ಟಿದ್ದಾರೆ. ಕನ್ನಡ ಪುಸ್ತಕ ಪ್ರಾಢಿಕಾರದ ಪ್ರಥಮ ಚೇರ್ಮನ್ನಾಗಿ ನೇಮಕಗೊಂಡಿದ್ದರು. ಇಂಗ್ಲೀಷಿನಲ್ಲಿ ಅವರ ಕೃತಿಗಳು : ಕನ್ನಡದಲ್ಲಿ ಕೆಲಸ :೧. ಸಾಹಿತ್ಯ- ಮನುಷ್ಯ, ೨. ಫ್ರಾನ್ಸ್ ಕಾವ್ಯ ೩. ವಿಲಿಯಮ್ ಶೇಕ್ಸ್ ಪಿಯರ್, ಸಾಹಿತ್ಯ ಬದು