Posts

Showing posts from February, 2007

ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ.ಪಿ.ನಯ್ಯರ್', ಇನ್ನೆಲ್ಲಿ ?

Image
ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ.ಪಿ.ನಯ್ಯರ್', ಇನ್ನೆಲ್ಲಿ ? (೧೯೨೬-೨೦೦೭) ಸೂಟು ಬೂಟಿನ ಫೆಲ್ಟ್, ಹ್ಯಾಟ್, ಜೊತೆ, ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ 'ವಾಕಿಂಗ್ ಸ್ಟಿಕ್,' ಹಿಡಿದಿರುತ್ತಿದ್ದ, ಈ 'ಅಂಕಲ್' ಯಾರು ಎಂದು ಪ್ರಶ್ನಾರ್ಥಕವಾಗಿ ನೋಡಿ ತಮ್ಮಲ್ಲೇ ಪಿಸುಗುಟ್ಟುತ್ತಿದ್ದ ಪವಾರ್ ನಗರ, ಥಾನದ ಪಡ್ಡೆಹುಡುಗರಿಗೆ, ವಿಸ್ಮಯಾಗಿರಬೇಕು ! ಅಲ್ಲಿ, ಕ್ರಿಕೆಟ್ ಆಟ್ ವಾಡುತ್ತಿದ್ದಾಗ ಅವರ ಮಧ್ಯೆ, 'ನಯ್ಯರ್' ನಡೆದುಕೊಂಡು ಹೋಗುತ್ತಿದ್ದರಂತೆ. ಆ ವಯೊವೃದ್ಧರು ಬೇರೆ ಯಾರೂ ಆಗಿರದೆ, ಖ್ಯಾತ ಸಂಗೀತಜ್ಞ ಒ. ಪಿ. ನಯ್ಯರ್ ! 'ರಾಣೀ ನಖ್ವಾ,' ಅವರ ಮನೆಯಲ್ಲಿ ಶನಿವಾರ ರಾರತ್ರಿ ೩-೩೦ ಕ್ಕೆ ಒ. ಪಿ. ನಯಾರ್, ಮೃತರಾಗಿದ್ದರು. ಭಾನುವಾರ, ಜನವರಿ ೨೮ ರಂದು, ಅವರ ಅಂತಿಮ ದರ್ಶನಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಮನೆಯ ಮುಂದೆ ಜನರು ನೆರೆದಿದ್ದರು. ಸುಮಾರು ಎರಡೂವರೆ ದಶಕಗಳಲ್ಲಿ ೬೯ ಚಿತ್ರಗಳಿಗೆ ಸಂಗೀತ ನೀಡಿ, ಚಿತ್ರರಸಿಕರ ಹೃದಯವನ್ನು ಸೂರೆಗೊಂಡ ಒ. ಪಿ. ನಯ್ಯರ್, ಮುಂಬೈನಿಂದ, ಪ್ರಪಂಚದಿಂದ ಮತ್ತೆ ಹಿಂತಿರುಗಿ ಬರಲಾರದಷ್ಟು ದೂರಕ್ಕೆ ಸರಿದು ಹೋಗಿದ್ದರು ! ಅವರ ಪರಿವಾರದವರನ್ನು ಬಿಟ್ಟು, ಅಪಾರ ಗೆಳೆಯರು, ಚಿತ್ರಪ್ರೇಮಿಗಳು, ಥಾನೆಯಲ್ಲಿ ನಡೆದ ಅಂತಿಮ ವಿಧಿಯಲಿ ಹಾಜರಿದ್ದರು. ಎಂದಿನಂತೆ 'ಸಹಾರ ಟೀ.ವಿ' ಯ, ಬೆಳಗಿನ ಕಾರ್ಯಕ್ರಮ, ಒ.ಪಿ.ನಯ್ಯರ್ ರವರ ಮೌಂಬೈ