Posts

Showing posts from March, 2007

ಮುಂಬೈ ವಿಶ್ವವಿದ್ಯಾಲಯ, ನಮ್ಮ ದೇಶದ ಪ್ರೆಸಿಡೆನ್ಸಿ ವಿಶ್ವವಿದೆಯಾಲಯಗಳ "೧೫೦ ವರ್ಷಗಳ ಸುದೀರ್ಘ ಹಾಗೂ ಸಮರ್ಥಸೇವೆ" ಯನ್ನು ಸ್ಮರಿಸಲು ’ವಸ್ತು ಪ್ರದರ್ಶನ ಕಾರ್ಯಕ್ರಮವನ್ನು’ ಹಮ್ಮಿಕ

ಮುಂಬೈ ವಿಶ್ವವಿದ್ಯಾಲಯ, ನಮ್ಮ ದೇಶದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ "೧೫೦ ವರ್ಷಗಳ ಸುದೀರ್ಘ ಹಾಗೂ ಸಮರ್ಥಸೇವೆ" ಯನ್ನು ಸ್ಮರಿಸಲು 'ವಸ್ತು ಪ್ರದರ್ಶನ ಕಾರ್ಯಕ್ರಮವನ್ನು' ಹಮ್ಮಿಕೊಂಡಿದೆ ! ಮುಂಬೈ ವಿಶ್ವವಿದ್ಯಾಲಯ, ಭಾರತದಲ್ಲಿ ( ೧೮೫೭- ೨೦೦೭) ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ೧೫೦ ವರ್ಷಗಳ ಸುದೀರ್ಘ ಅವಧಿಯಲ್ಲಿ ಮಾಡಿದ ವಿದ್ಯಾಸೇವೆಯ ಸುಮಧುರ ಗಳಿಗೆಗಳನ್ನು ಸ್ಮರಿಸಲು ಹಮ್ಮಿಕೊಂಡ ವಸ್ತುಪ್ರದರ್ಶನ ಈ ದಿನ ಸಾಯಂಕಾಲ ೬ ಗಂಟೆಗೆ ಜವಹರ್ಲಾಲ್ ಲೈಬ್ರೆರಿಯ ಡೀ. ಎನ್. ಮಾರ್ಶೆಲ್ ಸಭಾಗೃಹದಲ್ಲಿ ಉದ್ಘಾಟನೆಯಾಗಲಿದೆ. ವೈಸ್ ಛಾನ್ಸಲರ್ ಶ್ರಿ. ವಿಜಯ್ ಖೋಲೆ ಹೆಳುವಂತೆ, ಈ ಪ್ರದರ್ಶನ ಕೇಂದ್ರ ಸರ್ಕಾರದ Ministry of Cultural Affairs ಜೊತೆ ಜಂಟಿಯಾಗಿ ಮತ್ತು National Archives ಸಹಯೋಗದೊಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಬ್ಬದಲ್ಲಿ ಭಾಗವಹಿಸಲು, ಕೊಲ್ಕತ್ತಾ ಹಾಗೂ ಚೆನ್ನೈ ವಿಶ್ವವಿದ್ಯಾಲಯಗಳೂ ಜೊತೆಗೂಡಿವೆ. ಇದೇ ಸಮಯದಲ್ಲಿ ಅಲ್ಲಿಯೂ ವಿಶ್ವದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿತ್ತು. ಪ್ರದರ್ಶನದ ಮಳಿಗೆಯಲ್ಲಿ ಅತ್ಯಂತ ಹಳೆಯ ಫೋಟೋಗಳನ್ನು ಕಾಣಬಹುದು. ವಿಶೇಷವಸ್ತುಗಳು ವರ್ಣರಂಜಿತ ಚಿತ್ರಗಳು ಮತ್ತು ಅಮೂಲ್ಯ ಪುಸ್ತಕ್ಗಳ ಭಂಡಾರವನ್ನು ನಾವು ಅಲ್ಲಿ ಕಾಣಬಹುದು. ಮುಂಬೈ ವಿಶ್ವವಿದ್ಯಾಲಯದಿಂದ ೧೮೮೮ ರಲ್ಲಿ ಪದವಿ ಪಡೆದ ಮುಂಬೈನ (ಅಥವಾ ಭಾರದ ? ) ಪ್ರಥಮ ಮಹಿಳೆ [ಪಾರ್ಸಿ] ಕಾರ್ನೆಲಿಯ ಸೊರಾಬ್ಜಿಯಾ ಫ

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು : (೧೮೯೫-೧೯೯೬)

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು : (೧೮೯೫-೧೯೯೬) ಇವರು ಒಬ್ಬ ಮಹಾಸಾಧಕರು,ತಪಸ್ವಿಗಳು,ಯೋಗಾಚಾರ್ಯರು,ಮತ್ತು ಮಹಾಸಂಘಟಕರು, ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ಈ ಕಗ್ಗ ಹಳ್ಳಿ- ಮಲ್ಲಾಡಿಹಳ್ಳಿಗೆ, ಅವರು ಬಂದದ್ದು, ಅಲ್ಲಿನ ಜನರ ಸುಯೋಗವೇ ಸರಿ. ತಮ್ಮ ಗುರುಗಳಾದ ಶಿವಾನಂದರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನು ಉದ್ಧರಿಸುವ ಕೆಲಸವನ್ನು ಒಂದು 'ಪರಮಾತ್ಮನ ಪೂಜೆ' ಎಂದು ಸ್ವೀಕರಿಸಿ, ಸುಮಾರು ೪೫-೫೦ ಹಳ್ಳಿಗಳಿಗೆ ಭೇಟಿಕೊಟ್ಟು, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನೂ ತಮ್ಮ ಕೈಗೆ ತೆಗೆದುಕೊಂಡು ಗ್ರಾಮಗಳ ಜನರಿಗೆ ತಿಳುವಳಿಕೆಯನ್ನು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. ೧೯೪೩ ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ ೫೦ ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು. ಅವರ ತಂದೆಯವರಾದ, ಅನಂತ ಪದ್ಮನಾಭ ನಂಬೂದರಿಯವರು, ಮೂಲತಃ ಕೇರಳದ ತಿಷ್ಯವಿದ್ವಾಂಸರು,ಮಹಾಪಂಡಿತರು; ಅಲ್ಲಿನ ಸುತ್ತುಮುತ್ತಲಿನ ಜನಕ್ಕೆ ತಮ್ಮ ಅಮೂಲ್ಯ ಜ್ಞಾನದಿಂದ ಸಲಹೆ ಸಮಾಧಾನ ಹೇಳುತ್ತಿದ್ದರು. ಪದ್ಮಾಂಬಳ್,ಅವರ ತಾಯಿ, ಮಹಾಸಾಧ್ವಿ. ಅವರಿಗೆ ಜನಿಸಿದ ಮಗುವಿನ ಹೆಸರು 'ಕುಮ