Posts

Showing posts from April, 2007

ಪಂ. ಟೀ. ಎನ್. ಅಶೋಕ್ ಮತ್ತು ಪಂ. ಚಂದ್ರಶೇಖರ್ ವಝೆ (ಮುಂಬೈ ಸೋದರರ) ಜುಗಲ್ ಬಂದೀ ಕಾರ್ಯಕ್ರಮ !

Image
"ಮುಂಬೈ ಸೋದರರೆಂದು" ಪ್ರಸಿದ್ಧರಾದ ಪಂಡಿತ್. ಅಶೋಕ್ ಮತ್ತು ಪಂಡಿತ್. ಚಂದ್ರಶೇಖರ ವಜೆಯವರ, 'ಜುಗಲ್ ಬಂದೀ ಸಂಗೀತ ಕಾರ್ಯಕ್ರಮ' ೨೦೦೭ ರ ಜನವರಿ, ೫ ರಂದು, ಮುಂಬೈನ ಸಹ್ಯಾದ್ರಿಯ ಡೀ. ಡಿ ನಲ್ಲಿ ರಾತ್ರಿ ೧೧ ಘಂಟೆಯ ಕಾರ್ಯಕ್ರಮದಲ್ಲಿ ಮೂಡಿಬಂದಿತ್ತು. 'ಜುಗಲ್ ಬಂದಿ' ಕಾರ್ಯಕ್ರಮದ ವಿಶೇಷತೆಯೆಂದರೆ, ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತಗಳ ಹೊಳಹುಗಳನ್ನು ಸಮರ್ಥವಾಗಿ ಬೆಸೆಯುವ ಪರಿಕ್ರಮ. ಇದೇ ಮ್ಯೂಸಿಕ್ ಪ್ರಿಯರು ಫೂಶನ್ ಎಂದು ಹೇಳುವ ಮಾತು. ಅಶೋಕ್ ಮತ್ತು ವಜೆಯವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಅಪಾರ ಸಾಧನೆಗಳನ್ನು ಮಾಡಿ, 'ಜುಗಲ್ ಬಂದಿ' ಯಂತಹ ಒಂದು ಹೊಸ ಆಯಾಮವನ್ನು ಸೃಷ್ಟಿಸಿ ಅತ್ಯಂತ ಯಶಸ್ಸನ್ನು ಪಡೆದಿದ್ದಾರೆ. ದೇಶ-ವಿದೇಶಗಳಲ್ಲೂ ಈ ಪ್ರಾಕಾರದ ವೈವಿಧ್ಯತೆ, ಸಂಗೀತಾಭಿಲಾಷಿಗಳ ಮನವನ್ನು ಸೂರೆಗೊಂಡಿದೆ. ಇದೇ ವರ್ಷದ ಮೇ ತಿಂಗಳ ೨೪ ರಂದು ಮೈಸೂರಿನ 'ನಾದಮಂಟಪ' ದಲ್ಲಿ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಜುಗಲ್ ಬಂದೀ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪಂ. ಟೀ. ಎನ್ . ಅಶೋಕ್, ಎ. ಐ. ಆರ್. ಮುಂಬೈ, ಮತ್ತು ದೂರದರ್ಶನದಲ್ಲಿ 'ಎ' ಗ್ರೇಡ್ ಕಲಾವಿದರಾಗಿ ದುಡಿಯುತ್ತಿದ್ದಾರೆ. ಅವರು ಆಕಾಶವಾಣಿಯ ಕರ್ನಾಟಕ ಸಂಗೀತ ವಿಭಾಗದ ಮುಖ್ಯಸ್ತರು. 'ಶ್ರೀರಂಜಿನಿ ಗಾನ ಮಂದಿರ' ದ ಪ್ರಾಂಶುಪಾಲರು. 'ಶ್ರೀರಂಜಿನಿ ಸಂಗೀತ ಸಭ (ರಿ) ಡೊಂಬಿವಲಿ'ಯ ಸ್ಥಾಪಕ ಅ

ಮುಂಬೈನ ಮಿನಾಲ್ ಪಾಂಚಾಲ್ ಮತ್ತು ಡಾ.ಲೋಗನಾಥನ್ ವಿಧಿವಷರಾದರು !

Image
ಪ್ರೊ. ಜಿ. ವಿ. ಲೋಗನಾಥನ್ ಅಮೆರಿಕದ ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದ ಸಿವಿಲ್ ಮತ್ತು ಎನ್ವಿರ್ನ್ಮೆಂಟಲ್ ಇಂಜಿನೀರಿಂಗ್ ಶಾಖೆಯಲ್ಲಿ ಸುಮಾರು ೧೫ ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆಸಲ್ಲಿಸುತ್ತಿದ್ದರು. ಗನ್ ಮ್ಯಾನ್, ಚೊ. ಸ್ಯೂಂಗ್- ಹುಯ್ ಅವರನ್ನು ಗುಂಡಿಕ್ಕಿ ಕೊಂದಾಗ ಅವರು ತಮ್ಮ ತರಗತಿಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ದಕ್ಷಿಣ ಕೊರಿಯಾ ದೇಶದ ಚೊ, ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಮೆಜರ್ ತೆಗೆದುಕೊಂದು ಅಬ್ಯಾಸಮಾಡುತ್ತಿದ್ದನಂತೆ. ಈ ಅನಿರೀಕ್ಷಿತ ಘಟನೆ, ಸೋಮವಾರ ಬೆಳಿಗ್ಯೆ ೭-೧೫ ಕ್ಕೆ ನಡೆಯಿತು. ಇವರಲ್ಲದೆ, ಒಟ್ಟು ೩೦ ಜನ ಬಲಿಯಾಗಿರುವ ಸಂಗತಿ ವರದಿಯಾಗಿದೆ. ಕೊನೆಗೆ ಅವನೂ ತನ್ನ ತಲೆಗೆ ಗುಂಡು ಹೊಡೆದುಕೊಂಡು ಮರಣಹೊಂದಿದ್ದಾನೆ. ಮೊದಲು ಅವನು ತನ್ನ ಗರ್ಲ್ ಫ್ರೆಂಡ್ ಜೊತೆ ಬಿರುಸಿನ ಧ್ವನಿಯಲ್ಲಿ ಮಾತಾಡಿ, ನಂತರ ಗುಂಡಿನ ಮಳೆಗರೆದನು. ಕೆಲವರ ಹೇಳಿಕೆಯ ಪ್ರಕಾರ, ಅವನಿಗೆ ಪ್ರೊಫೆಸರ್ ಮೇಲೂ ಕೋಪವಿತ್ತಂತೆ. ಏನೇ ಇರಲಿ, ಹೀಗೆ ಗನ್ ಹಿಡಿದು ಕಾಲೇಜಿನ ಆಂಗಣದಲ್ಲಿ ಸುತ್ತಾಡುವುದು. ಮತ್ತೆ ಮನಸ್ಸಿಗೆ ಘಾಸಿಯಾದಾಗ ಗನ್ನಿಗೆ ಶರಣಾಗುವ ಸಂಸ್ಕೃತಿ ಹಿತವಾದದ್ದಲ್ಲ. ಪರಿವಾರದ ಸದಸ್ಯರಲ್ಲಿ ಹಿತಕರವಾದ ಸಂಬಂಧಗಳಿಲ್ಲದಿರುವುದು, ಪ್ರೀತಿ ಪ್ರೇಮಗಳಲ್ಲಿ ಭ್ರಮ ನಿರಸನ, ಮತ್ತೆ ಹಣ, ಅದರೊಡನೆ ಬೆರೆತ ಸ್ವಚ್ಛಂದ ಪ್ರವೃತ್ತಿ, ಇದಕ್ಕೆ ಕಾರಣಗಳು ಎಂದು ಬೇರೆ ಹೇಳಬೇಕಾಗಿಲ್ಲ. ೫೧ ವರ್ಷದ ಹರೆಯದ, ಶ್ರೀ ಲೋಗನಾಥ

ಏರ್ ಡೆಕ್ಕನ್ ನ ಲಾಂಛನ, ಕಾಮನ್ ಮ್ಯಾನ್. ಇದು ಕ್ಯಾಪ್ಟನ್ ಗೋಪೀನಾಥರ ಆಯ್ಕೆ !

Image
ಕ್ಯಾಪ್ಟನ್ ಗೋಪೀನಾಥ್, ಶ್ರೀ. ಆರ್ ಕೆ. ಲಕ್ಷ್ಮಣ್ ರ "ಕಾಮನ್ ಮ್ಯಾನ್ " ನನ್ನು ತಮ್ಮ ’ಲೋ ಕಾಸ್ಟ್ ಏರ್ ಲೈನ್ಸ್,’ ಏರ್ ಡೆಕ್ಕನ್ನಿನ,” ಲಾಂಛನ” ವನ್ನಾಗಿ ಆರಿಸಿಕೊಂಡಿದ್ದಾರೆ. ಇದುವರೆಗೂ ಯಾವ ವ್ಯಂಗ್ಯ ಚಿತ್ರಲೇಖಕನಿಗೂ ಸಲ್ಲದ ಗೌರವ, ಲಕ್ಷ್ಮಣರಿಗೆ ಸಂದಿದೆ. ಇದು ಅವರ ಜನಪ್ರಿಯತೆಗೆ ಒಂದು ನಿದರ್ಶನವಲ್ಲವೇ ?