Posts

Showing posts from October, 2007
"ಮಧುರ ಚೆನ್ನ" - (೧೯೦೩-೧೯೫೩)ಮಧುರ ಚೆನ್ನರು ಜನಿಸಿದ್ದು ೧೯೦೩ರ ಜುಲೈ ೩೧ರಂದು; ವಿಜಾಪುರ ಜಿಲ್ಲೆಯ ಹಲಸಂಗಿಯ ಸಮೀಪದ ಹಿರೇಲೋಣಿಯಲ್ಲಿ. ತಂದೆ ಸಿದ್ಧಲಿಂಗಪ್ಪ ಗಲಗಲಿ ಹಾಗೂ ತಾಯಿ ಅಂಬಕ್ಕ. ೧೯೨೧ರಲ್ಲಿ ಮುಲ್ಕಿ ಪರೀಕ್ಷೆ ಪಾಸು ಮಾಡಿದರು. ಸಾಹಿತ್ಯದ ಕುರಿತು ಅವರ ಆಸಕ್ತಿ ಗರಿಗೆದರಿತು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮ ಸಾಹಿತ್ಯದ ವ್ಯಾಸಂಗ, ಹಲವಾರು ಭಾಷೆಗಳ ಅಭ್ಯಾಸದಲ್ಲಿ ತೊಡಗಿಕೊಂಡರು. ಯೋಗದ ಬಗ್ಗೆ ಅವರಿಗೆ ಬಹಳ ಆಸಕ್ತಿ ಇತ್ತು. ಶ್ರೀ ಅರವಿಂದರ ಯೋಗ ಮಾರ್ಗದ ಬಗ್ಗೆ ಅವರು ಆಕರ್ಷಿತರಾಗಿದ್ದರು.ನನ್ನನಲ್ಲ ಹಾಗೂ ವಿನೋದ ಕುಸುಮಾವಳಿ ಅವರ ಕವನ ಸಂಕಲನಗಳು. ಕಾಳರಾತ್ರಿ, ಬೆಳಗು, ಪೂರ್ವರಂಗ-ಕೃತಿಗಳು ಆಧ್ಯಾತ್ಮಿಕ ಆತ್ಮಕಥನಗಳು/ ಆತ್ಮಸಂಶೋಧನೆ, ಕನ್ನಡಿಗರ ಕುಲಗುರು ವಿದ್ಯಾರಣ್ಯರು, ಪೂರ್ಣಯೋಗದ ಪಥದಲ್ಲಿ, ಕನ್ನಡ ಪ್ರಾಚೀನ ಲಿಪಿ ಬೋಧಿನಿ ಕೆಲವು ಕೃತಿಗಳು. ಅನುವಾದ ಕಾರ್ಯದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡರು. ವಿಸರ್ಜನ-ರವೀಂದ್ರರ ನಾಟಕದ ಅನುವಾದ. ಬಾಳಿನಲ್ಲಿ ಬೆಳಕು, ಮಾತೃವಾಣಿ ಪೂರ್ಣಯೋಗ, ಧರ್ಮಕ್ಷೇತ್ರೇ-ಕುರುಕ್ಷೇತ್ರೇ ಇತರ ಕೆಲವು ಕೃತಿಗಳು. ಶ್ರೀಮಾತೆ ಅವರ ವರ್ಡ್ ಆಫ್ ದಿ ಮದರ್ ಕೃತಿಯನ್ನು ಮಾತೃವಾಣಿ ಎಂದು ಅನುವಾದ ಮಾಡಿದ್ದಾರೆ. ೧೯೯೬ರಲ್ಲಿ ಮಧುರಚೆನ್ನರ ಲೇಖನಗಳು-ಗ್ರಂಥರೂಪದಲ್ಲಿ ಹೊರಬಂದವು. ನನ್ನನಲ್ಲ, ಮಧುರಗೀತ-ಎರಡು ಮಧುರ ಚೆನ್ನ ಅವರು ರಚಿಸಿದ ನೀಳ್ಗತೆಗಳು. ಹಲಸಂಗಿ ಗೆಳೆಯರು ಎ

"ಟಿ.ಪಿ. ಕೈಲಾಸಂ" (೧೮೮೫-೧೯೪೬)

"ಟಿ.ಪಿ. ಕೈಲಾಸಂ" (೧೮೮೫-೧೯೪೬) ಶ್ರೀ ತ್ಯಾಗರಾಜ ಪರಮಶಿವ ಕೈಲಾಸಂ ಜನಿಸಿದ್ದು ೧೮೮೪ರ ಜುಲೈ ೨೯ರಂದು ಮೈಸೂರಿನಲ್ಲಿ. ತಂದೆ ಮೈಸೂರು ಸಂಸ್ಥಾನದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಪರಮಶಿವ ಅಯ್ಯರ್. ಮೈಸೂರು, ಬೆಂಗಳೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮದ್ರಾಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಭೂಗರ್ಭ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‍ನ ರಾಯಲ್ ಕಾಲೇಜಿಗೆ ಸೇರಿದರು. ಇಂಗ್ಲೆಂಡ್‍ನಲ್ಲಿ ಕೆಲವು ವರ್ಷಗಳ ಕಾಲ ಇದ್ದ ಅವರು ಅಲ್ಲಿನ ಸಂಗೀತ, ಸಾಹಿತ್ಯ, ನಾಟಕಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಇಂಗ್ಲಿಷ್ ರಂಗಭೂಮಿ ಅವರನ್ನು ಬಹುವಾಗಿ ಆಕರ್ಷಿಸಿತ್ತು. ನಾಟಕಗಳ ಬಗ್ಗೆ ವಿಶೇಷ ಒಲವನ್ನು ಅವರು ಬೆಳೆಸಿಕೊಂಡರು. ನಾಟಕವೆಂದರೆ ಪೌರಾಣಿಕ ನಾಟಕಗಳು, ಭಾರೀಯಾದ ಮೇಕಪ್ಪು, ದಿರಿಸು, ರಂಗಸಜ್ಜಿಕೆ ಎಂಬೆಲ್ಲ ಅಂಶಗಳಿಂದ ತುಂಬಿಹೋಗಿದ್ದ ನಾಟಕದ ಕಲ್ಪನೆಗೆ ಹೊಸ ರೂಪವನ್ನು ಕೈಲಾಸಂ ನೀಡಿದರು. ಹಾಸ್ಯ, ವ್ಯಂಗ್ಯ, ಕುಚೋದ್ಯಗಳಿಂದ ಕೂಡಿದ, ವಿನೋದಪೂರ್ಣ, ವಿಚಿತ್ರ ಚಕಮಕಿ ಸಂಭಾಷಣೆಯ ಪಾತ್ರಗಳು, ಸನ್ನಿವೇಶಗಳು ಕೈಲಾಸಂರಿಗೆ ಕೀರ್ತಿ ತಂದಿತ್ತವಲ್ಲದೆ ಕನ್ನಡ ರಂಗಭೂಮಿಗೆ ಹೊಸ ರೂಪವೊಂದನ್ನು ನೀಡಿದವು. ೧೯೧೫ರಲ್ಲಿ ಸಬ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ವೃತ್ತಿಗೆ ಸೇರಿದ ಅವರು, ಕೆ.ಜಿ.ಎಫ್., ಬೆಂಗಳೂರು, ಶಿವಮೊಗ್ಗಗಳಲ್ಲಿ ಕೆಲಸ ಮಾಡಿದರೂ, ಕೆಲವು ವರ್ಷಗಳಲ್ಲೇ ರಾಜೀನಾಮೆ ನೀಡಿದರು. ವರದಾಚಾರ್ಯರ ಕಂಪನಿಯ ನಾಟ

ಡಾ. ಎ. ಎನ್ ಮೂರ್ತಿರಾಯರು.

ಡಾ. ಎ. ಎನ್ ಮೂರ್ತಿರಾಯರು. (೧೬-೦೬-೧೯೦೦-) ಮಂಡ್ಯ ಜಿಲ್ಲೆಯ "ಅಕ್ಕಿಹೆಬ್ಬಾಳು", ಅವರ ಜನ್ಮಸ್ಥಳ. ತಂದೆ-ತಾಯಿಗಳು : ಶ್ರೀಮತಿ ಪುಟ್ಟಮ್ಮ, ಮತ್ತು ತಂದೆಯವರು, ಶ್ರೀ ಎ. ಸುಬ್ಬರಾವ್. ಹೆಂಡತಿ- ಶ್ರೀಮತಿ ಜಯಲಕ್ಷ್ಮಿ, (ಮೂರ್ತಿರಾಯರ ರಚನೆಗಳಲ್ಲಿ 'ಲಲಿತೆ,' ಯೆಂದು ಸಂಬೋಧಿಸಲ್ಪಡುತ್ತಾರೆ.) ಮಕ್ಕಳು : ೧. ಎ. ಎನ್. ಸುಬ್ಬರಾಮಯ್ಯ,೨. ಎ. ಎನ್. ನಾಗರಾಜ್,೩. ಎ. ಎನ್ ರಾಮಚಂದ್ರರಾವ್ ವಿದ್ಯಾಭ್ಯಾಸ : ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲುಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ. ಎ ; (ಇಂಗ್ಲೀಷ್ ಸಾಹಿತ್ಯದಲ್ಲಿ) ವೃತ್ತಿ : ೧. ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಢ್ಯಾಯವೃತ್ತಿ- ೧೯೨೫-೧೯೨೭ ೨. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ-೧೯೨೭-೧೯೪೦ ೩. ಶಿವಮೊಗ್ಗದ ಇಂಟರ್ಮೀಡಿಯೆಟ್ ಕಲೇಜಿನಲ್ಲಿ ಉಪಪ್ರಾಧ್ಯಾಪಕ-೧೯೪೦-೧೯೪೩ ೪. ಕರ್ನಾಟಕ ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕ-೧೯೫೬-೧೯೫೯ ಗೌರವಕೆಲಸಗಳು : ೧. ಕಾರ್ಯದರ್ಶಿ, ಕನ್ನಡಸಾಹಿತ್ಯ ಪರಿಷತ್ತು-೧೯೫೪ ೨. ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು-೧೯೫೪-೫೬ ೩. ಕೇಂದ್ರ ಸಾಹಿತ್ಯ ಅಕ್ಯಾಡಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್ ಛೇರ್ಮನ್ ೪. ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ ಕನ್ನಡ ಕನ್ವೀನರ್- ಛೇರ್ಮನ್ ೫. ಭಾರತೀಯ ಆಕಾಶ್ ವಾಣಿ ಯ 'ಕೇಂದ್ರೀಯ ಕಾರ್ಯಕ್ರಮಗಳ ಸಲಹಾಕಮಿಟಿ', ಯ ಸದಸ್ಯರಾಗಿ