Posts

Showing posts from 2008

'ಕನ್ನಡದಲ್ಲಿ ಪ್ರವಾಸ ಕಥನಗಳು '

Image
ಶ್ರೀ ಎಸ್. ಕೆ. ಹರಿಹರೇಶ್ವರರ ಲೇಖನಗಳು ಅತ್ಯಂತ ಮಾಹಿತಿಪೂರ್ಣವಾಗಿರುವುದು ಎಲ್ಲ "ದಟ್ಸ್ ಕನ್ನಡ " ಓದುಗರಿಗೆ ಮನದಟ್ಟಾಗಿರುವ ವಿಷಯ. ಅವರ ಸಾಹಿತ್ಯದ ಕಡೆಗಿನ ಒಲವು ನಮಗೆ ಥಟ್ಟನೆ ಗೋಚರಿಸುವ ಸಂಗತಿ. ಅವರ ಇನ್ನಿತರ ಸಂಘ ಸಂಸ್ಥೆಗಳ ಬಗೆಗಿನ ಸಂಘಟನಾತ್ಮಕ ಚಟುವಟಿಕೆಗಳು, ನಮಗೆ ನಿಧಾನವಾಗಿ ಕಾಣಬರುತ್ತವೆ. ಕನ್ನಡ ಭಾಷೆ, ಮತ್ತು ಅದರ ಪ್ರಸಾರದ ವಿಷಯಬಂದಾಗ ಅವರು ಎಲ್ಲರಿಗಿಂತಾ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. "ಅಮೆರಿಕದ ಮಿಸ್ಸೂರಿ ವಿಶ್ವವಿದ್ಯಾಲಯದ ಭೌತಶಾಸ್ತ್ರವಿಭಾಗದ ಮುಖ್ಯಸ್ಥ," ಡಾ. ಚಂದ್ರರವರು, "ಕರ್ಣಾಟಕ ಭಾಗವತ " ವೆಂಬ ಉದ್ಗ್ರಂಥವನ್ನು ಸಂಪಾದಿಸುವ ಸಮಯದಲ್ಲಿ ಅನೇಕ ಕನ್ನಡ ವಿದ್ವಾಂಸರು ಸಹಕರಿಸಿರುತ್ತಾರೆ. ಅವರಲ್ಲಿ ಪ್ರಮುಖರು, ಹರಿಹರೇಶ್ವರ ದಂಪತಿಗಳು ! ಈ ಮನೋಭಾವನೆ, ಪ್ರತಿಯೊಬ್ಬರಿಗೂ ಇರುವ ಸಾಧ್ಯತೆಗಳು ಕಡಿಮೆ. ಒಮ್ಮೊಮ್ಮೆ ಮನೆಯಲ್ಲಿ ಪತಿ ಕನ್ನಡ ವಿದ್ವಾಂಸ, ಬರಹಗಾರ, ಸಂಪಾದಕರಾದರೆ, ಪತ್ನಿ, ಕನ್ನಡವನ್ನೇ ಅರಿಯದ ಇಂಗ್ಲೀಷ್ ನಲ್ಲಿ ಪ್ರಾವೀಣ್ಯತೆ ಪಡೆದು ಹೆಸರುಮಾಡಿರುವ ವ್ಯಕ್ತಿಯಾಗಿರುವುದು ಸಾಮಾನ್ಯ ಸಂಗತಿ. ಸಮಾನ ಆಸಕ್ತರಾದ ಸತಿ-ಪತಿಯರನ್ನು ನಾವು ಸಾಮಾನ್ಯವಾಗಿ ಕಾಣುವುದು ಬಹಳ ಕಷ್ಟ ! ಇಲ್ಲಿ ಉಲ್ಲೇಖಿಸಬೇಕಾದ ಮುಖ್ಯ ವಿಷಯವೆಂದರೆ, ಶ್ರೀಮತಿ.ನಾಗಲಕ್ಷ್ಮೀಹರಿಹರೇಶ್ವರರೂ, ಪತಿಯಷ್ಟೇ ಸಾಹಿತ್ಯಾಭಿಲಾಷಿ ! ಇದೊಂದು ಗಮನಿಸಬೇಕಾದ ಸಂಗತಿಯಾಗಿದೆ.... ಕನ್ನಡದ ಲ್ಲ

"ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವರು" ನಮ್ಮ ರಾಜ್ಯದ ಮುಖ್ಯಮಂತ್ರಿಯಾದರು !

ಬೆಂಗಳೂರು, ಮೇ 30 : ರೈತ ಮತ್ತು ಭಗವಂತನ ಹೆಸರಿನಲ್ಲಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿ ರಾಷ್ಟ್ರೀಯ ಮುಖಂಡರು, ಭಾರೀ ಜನಸ್ತೋಮದ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. "ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನವನಾದ ನಾನು ವಿಧಿದ್ವಾರಾ ಸ್ಥಾಪಿತ ಸಂವಿಧಾನದಲ್ಲಿ ಶ್ರದ್ಧೆಯುಳ್ಳವನಾಗಿಯೂ, ಸತ್ಯ-ನಿಷ್ಠೆಯಿಂದಲೂ, ಯಾವುದೇ ರಾಗ ದ್ವೇಷಗಳಿಗೆ ಅವಕಾಶವಾಗದಂತೆ ಕಾರ್ಯ ನಿರ್ವಹಿಸುತ್ತೇನೆಂದು ರೈತರು ಮತ್ತು ಭಗವಂತ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ" ಎಂದು ಪ್ರಮಾಣ ವಚನ ಸ್ವೀಕರಿಸಿದರು. ಬಿಎಸ್‌ವೈ ಪ್ರಮಾಣ ಸ್ವೀಕರಿಸಿದಾಗ ನಿಗದಿಯಾಗಿದ್ದ 1.50ರ ಮುಹೂರ್ತ ಮೀರಿಹೋಗಿತ್ತು ಯಡಿಯೂರಪ್ಪನವರ ಜೊತೆ ಎಂಎಲ್‌ಸಿ ಜನಾರ್ಧನ ರೆಡ್ಡಿ ಮತ್ತು ಐವರು ಪಕ್ಷೇತರರು ಸೇರಿದಂತೆ 29 ಜನರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀರಕರಿಸಿದರು. ನವವಧುವಿನಂತೆ ಸಿಂಗಾರಗೊಂಡಿರುವ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಭವ್ಯವಾದ ವೇದಿಕೆಯಲ್ಲಿ ಪಕ್ಷದ ಹಿರಿಯ ಮುಖಂಡರು, ನಾಡಿನ ವಿವಿಧ ಮಠಗಳ ಮಠಾಧೀಶರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರ ಅಪಾರ ಜನಸ್ತೋಮ ನೆರೆದಿತ್ತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರತಿಜ್ಞಾ ವಿಧಿಯ ಗೌಪ್ಯತೆಯನ್ನು ಬೋಧಿಸಿದರು. ಯಾವುದೇ ವಿಘ್ನಗಳಿಲ್ಲದೇ ಪ್ರಮಾಣ ವಚನ ಕಾರ್ಯಕ್ರಮ ಸಾಂಗೋಪಾಂಗವಾಗಿ ವಿಜೃಂಭಣೆಯಿಂದ ಜರುಗಿತು. ಭ

ವಿನಾಯಕ ದಾಮೋದರ ಸಾವರ್ಕರ್.

*ರಾಮಚಂದ್ರ ಹೆಗಡೆ. ಸಿ .ಎಸ್ (ಲೇಖನ ಆಧಾರ: ಚಕ್ರವರ್ತಿ ಸೂಲಿಬೆಲೆ ಅವರ 'ಅಪ್ರತಿಮ ಸ್ವಾತಂತ್ರವೀರ ಸಾವರ್ಕರ್' ಕೃತಿ) ಈ ಸಾವರ್ಕರ್ ಅಂದರೆ ಯಾರು?' ಹಾಗೊಂದು ಪ್ರಶ್ನೆ ನನಗೆ ಎದುರಾಗಿದ್ದು ನನ್ನ ಕಂಪನಿಯಲ್ಲಿ. ಕಳೆದ ಮೇ 10 ರಂದು 'ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ'ಯ ಸ್ಮರಣೆಯಲ್ಲಿ ಪುಟ್ಟದೊಂದು ಈ-ಮೇಲ್ ಕಳಿಸಿದ್ದಕ್ಕೆ ನನ್ನ ಸಹೋದ್ಯೋಗಿಗಳಿಂದ ನನಗೆ ಎದುರಾದ ಪ್ರಶ್ನೆಯಿದು. ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ 'ಸ್ವಾತಂತ್ರ್ಯ ಹೋರಾಟ' ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದ

ಎಮ್.ವಿ.ಕಾಮತ್‌ರ ಆತ್ಮಚರಿತ್ರೆ :

ಎಮ್.ವಿ.ಕಾಮತ್‌ರ ಆತ್ಮಚರಿತ್ರೆ : `ಎ ರಿಪೋರ್ಟರ್ ಎಟ್ ಲಾರ್ಜ್' (A Reporter at Large) ಸರಣಿ ರೂಪದಲ್ಲಿ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಲಿದೆ. ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳು ಪುಸ್ತಕದ ತುಂಬ ಹಾಸುಕೊಕ್ಕಾಗಿವೆ. ಇದು ಈಗಿನ ಪೀಳಿಗೆಯ ಪತ್ರಕರ್ತರು ಓದಲೇಬೇಕಾದ ಪುಸ್ತಕವೆಂದರೂ ತಪ್ಪಾಗಲಾರದು. ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ ಪೀಠಿಕೆ: ನಾನು ಪುಸ್ತಕಪ್ರಿಯ. ಇಂಗ್ಲೀಷಿನಲ್ಲಿ ಬಹಳ ಓದುವ ಚಟ ಇದ್ದವರಿಗೆ `ಪುಸ್ತಕದಹುಳ' (bookworm) ಎನ್ನುತ್ತಾರೆ. ಉತ್ತಮ ಪುಸ್ತಕ ಓದುವವರಿಗೆ ಹಾಗೆ ಅನ್ನಲಾಗುವುದಿಲ್ಲ. ಅದಕ್ಕಾಗಿ ನಾನು ಒಂದು ಶಬ್ದ ಟಂಕಿಸಿದ್ದೇನೆ (ಕಾಯಿನ್ ಮಾಡಿದ್ದೇನೆ). ಅದು `ಪುಸ್ತಕದಭ್ರಮರ' (bookbee). ನಾವು ಪುಸ್ತಕ-ಕುಸುಮದಿಂದ ಅದರ ಮಕರಂದ ಸವಿಯಬೇಕು. ತಾನು ಸವಿದ ಜೇನು ಇತರರಿಗೆ ಹಂಚಬೇಕು. ನನ್ನ ಒಬ್ಬ ಮಿತ್ರ ಹೇಳುತ್ತಿದ್ದ, `ನಾನು ಒಪ್ಪತ್ತು ಊಟ ಬಿಡಬಹುದು, ಆದರೆ ಒಂದು ಒಳ್ಳೆಯ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಬಿಡಲಾರೆ' ಎಂದು. ಇತ್ತೀಚೆಗೆ ಐದು ದಿನಗಳ ಯೋಗ ಶಿಬಿರ ನಡೆಸಲು ಶಿರಸಿಗೆ ಹೋಗಿದ್ದೆ. ಅದನ್ನು ಅಯೋಜಿಸಿದವರು ಶಿರಸಿಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ವ್ಯಕ್ತಿ, ಜನಸೇವಕ ಹಾಗೂ ಕರ್ಮಯೋಗಿ ಎಸ್.ವಿ.ಸೋಂದೆ ಅವರು. `ನೀವು ಮುಂಬೈಯ ಎಂ.ವಿ.ಕಾಮತರ ಆತ್ಮಚರಿತ್ರೆ ಓದಿದ್ದೀರಾ?' ಎಂದು ಕೇಳಿದರು. `ಅದರ ಬಗ್ಗೆ ಕೇಳಿದ್ದೇನೆ,

ಎಮ್. ವಿ. ಕಾಮತ್- ಒಬ್ಬ ಸಮರ್ಥ ಪತ್ರಕರ್ತ !

ಹದಿವಯದ ಹುಡುಗನ ಜೀವನದಲ್ಲಿಯ ಒಂದು ಮಹತ್ವದ ಸಂಸ್ಕಾರವೆಂದರೆ `ಯಜ್ಞೋಪವೀತ' ಧಾರಣ. ಮಾಧವರ ಮುಂಜಿ ಆದಾಗ ಕುಟುಂಬದ ಸದಸ್ಯರೆಲ್ಲ ನೆರೆದಿದ್ದರು. ವೈದಿಕ ಸಂಪ್ರದಾಯದ ಪ್ರಕಾರ ಈ ಸಂಸ್ಕಾರದೊಂದಿಗೆ ವಟುವಿಗೆ ದ್ವಿಜತ್ವ ಪ್ರಾಪ್ತವಾಗುತ್ತದೆ. ಈ ವಯಕ್ಕೆ ಹಿಂದಿನ ಕಾಲದಲ್ಲಿ ಬಾಲಕನು ಗುರುಕುಲ ಸೇರುತ್ತಿದ್ದನು. ಆಗ ಗುರುವೇ ಅವನ ಎರಡನೆಯ ತಾಯಿಯಾಗಿ ವಿದ್ಯೆಯನ್ನು ನೀಡಿ ಪಾಲನೆ ಮಾಡುತ್ತಿದ್ದ. ಬಾಲಕ ಮರುಹುಟ್ಟು ಪಡೆಯುವುದರಿಂದ `ದ್ವಿಜ' ಎಂದು ಕರೆಯಲ್ಪಡುತ್ತಿದ್ದ. ಕಾಮತರು ಈ ಸಂಸ್ಕಾರ ಪಡೆದ ಮೇಲೆ ಪ್ರತಿದಿನ ಸಂಧ್ಯಾವಂದನೆ ಮಾಡಲು ಪ್ರಾರಂಭಿಸಿದರಂತೆ. ದಿನಕ್ಕೆ ಮೂರು ಸಲ ಸಂಧ್ಯಾವಂದನೆ ಮಾಡಬೇಕು. ಪ್ರಾತಃಸಂಧ್ಯಾ, ಮಧ್ಯಾಹ್ನ ಸಂಧ್ಯಾ ಹಾಗೂ ಸಾಯಂಸಂಧ್ಯಾ. `ಶುಕ್ಲಾಂಬರಧರಂ ವಿಷ್ಣುಂ ಶಶಿವರರ್ಣಂ ಚತುರ್‌ಭುಜಂ | ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ' ಮಂತ್ರದಿಂದ ಪ್ರಾರಂಭ. ಕಾಮತರು ತಾವು ಬಾಲ್ಯದಲ್ಲಿ ಪಠಿಸುತ್ತಿದ್ದ ಹಲವಾರು ಮಂತ್ರಗಳನ್ನು ಉದ್ಧರಿಸಿ ಅವುಗಳ ಇಂಗ್ಲಿಷ್ ಅನುವಾದ ಕೊಡುತ್ತಾರೆ. `ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನೀ | ದೇಶೋಯಂ ಕ್ಷೋಭರಹಿತಾ ಸಜ್ಜನಾ ಸಂತು ನಿರ್ಭಯಾ'. ಎಂತಹ ಉದಾತ್ತ ವಿಚಾರ ಇಲ್ಲಿ ಅಡಗಿದೆ ಎನ್ನುತ್ತಾರೆ. `ಸರ್ವೇಪಿ ಸುಖಿನಸ್ಸಂತು ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖಾಮಾಪ್ನುಯಾತ್'. ಇವುಗಳ ಜೊತೆಗೆ ಗಾಯತ್ರೀ ಮಂತ್ರದ

ಡಾ. ಅಚ್ಯುತ ಸಮಂತಾ.

ಇಲ್ಲೊಬ್ಬ ಸುಬ್ಭಣ್ಣ, ಅಲ್ಲೊಬ್ಬ ಸುದರ್ಶನ್, ಅಗೋನೋಡು ಸಮಂತಾ ! ಹೌದು. ಸರಕಾರ, ರಾಜಕೀಯ ಧುರೀಣರು, ಫಾರಿನ್ ಏಡ್ ಅಥವಾ ಒಂದು ಜಾತಿಮಠದ ಹಂಗಿಲ್ಲದೆ ಭಾರತದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿರುವವರು ಇಂಥವರೇ. ಒರಿಸ್ಸಾದ ಬೆಂಗಾಡಿನಲ್ಲಿ ಶಿಕ್ಷಣ ಕ್ಷೇತ್ರದ ನಂದನವನ ನಿರ್ಮಿಸಿದ ಆಧುನಿಕ ಕಳಿಂಗ ಸಾಮ್ರಾಜ್ಯದ ದೊರೆ ಡಾ.ಅಚ್ಯುತ ಸಮಂತಾ ಅವರ ಕಿರುಪರಿಚಯ. ಚಿತ್ರ ಲೇಖನ : ರಾಜು ಅಡಕಳ್ಳಿ ಒಂದು ಕಾಲಕ್ಕೆ ಆ ಮುನ್ನೂರು ಎಕರೆ ಜಾಗ ಕಾಡುಕುಪ್ಪೆ, ಮುಳ್ಳು ಕಂಟಿಗಳ ಕೊಂಪೆ. ಈಗ ಅದೇ ಪ್ರದೇಶ ಸಾಮಾಜಿಕವಾಗಿ ಮೂಲೆಗುಂಪಾದವರ ಶಿಕ್ಷಣಕ್ಕೆ ಶೋಭೆ ತಂದ ನಂದನವನ. ಎಲ್ಲಿ ನೋಡಿದರಲ್ಲಿ ಹಸುರು, ಆಧುನಿಕ ಕಟ್ಟಡಗಳ ಕ್ಯಾಂಪಸ್, ಗ್ರಂಥಾಲಯ, ಆಟದ ಮೈದಾನ, ಸಾವಿರಾರು ಅಧ್ಯಾಪಕರು, ಎಲ್ಲಕ್ಕೂ ಹೆಚ್ಚಾಗಿ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಕಲರವ. ಕ್ಯಾಂಪಸ್ ತುಂಬೆಲ್ಲ ಉಜ್ವಲ ಭವಿಷದ್ದೇ ಕನಸು. ಶೈಕ್ಷಣಿಕ ಕ್ಷೇತ್ರದ ಇತ್ತೀಚಿನ ಸವಾಲುಗಳನ್ನು ಮೀರಿನಿಲ್ಲುವ ಬೆರಗು ಹುಟ್ಟಿಸುವ ಈ ಅನುಭವ ಅನಾವರಣವಾಗಿದ್ದು, ಇತ್ತೀಚೆಗೆ ನಮ್ಮ ಪತ್ರಕರ್ತರ ತಂಡ ತೆರಳಿದಾಗ. ದೂರದ ಒರಿಸ್ಸಾದ ರಾಜಧಾನಿ ಭುವನೇಶ್ವರದ ಕಳಿಂಗ ವಿಶ್ವವಿದ್ಯಾಲಯದ ಅಂಗಳದಲ್ಲಿ. ಕೇವಲ 6 ವರ್ಷಗಳಲ್ಲಿ ಕಳಿಂಗ ಕ್ಯಾಂಪಸ್‌ನಲ್ಲಿ 8 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಜೊತೆಗೆ ಉಚಿತ ಊಟ ವಸತಿಗಳೊಂದಿಗೆ ಶಿಕ್ಷಣ ಕಲಿಯುತ್ತಿರುವ, ನಲಿಯುತ್ತಿರುವ 5 ಸಾವಿರ ಬುಡಕಟ್ಟು ವಿದ್ಯಾರ

'ಎ ರಿಪೋರ್ಟರ್ ಎಟ್ ಲಾರ್ಜ್' ಭಾಗ 1

ಖ್ಯಾತ ಪತ್ರಕರ್ತ, ಕನ್ನಡಿಗ ಎಂ.ವಿ.ಕಾಮತ್ ಅವರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್' ಕನ್ನಡ ಸಂಗ್ರಹಾನುವಾದದ ಎರಡನೇ ಭಾಗ ಇಲ್ಲಿದೆ. ಕ್ರಿಶ್ಚಿಯನ್ನರೊಡನೆಯ ಕಾಮತ್ ಅವರ ಒಡನಾಟ, ತುಂಬಿದ ಮನೆಯಲ್ಲಿನ ಚೆಂದದ ಬಾಲ್ಯ, ಕೊಂಕಣಿ ಮೇಲಿನ ಭಾಷಾಪ್ರೇಮ, ಮೀನಿನ ಮೇಲಿನ ಪ್ರೀತಿ ಮುಂತಾದ ವಿವರಗಳನ್ನು ಲೇಖಕರು ಅನಾವರಣಗೊಳಿಸಿದ್ದಾರೆ. ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ ಕೆನರಾದಲ್ಲಿ ವಾಸವಾಗಿದ್ದ ರೋಮನ್ ಕೆಥೊಲಿಕ್ ಜನಾಂಗದ ಬಗ್ಗೆ ವಿವರವಾಗಿ ಕಾಮತರು ಬರೆಯುತ್ತಾರೆ. 1768ರಲ್ಲಿ, ಹೈದರಲಿ ಮತ್ತು ಬ್ರಿಟಿಶರ ನಡುವೆ ನಡೆದ ಕಾಳಗದಲ್ಲಿ, ಕೆಥೊಲಿಕ್ ಜನಾಂಗದವರು ಇಂಗ್ಲಿಷರಿಗೆ ಬೆಂಬಲ ನೀಡಿದ್ದರಿಂದ ಹೈದರಲಿಯು ಅವರ ಬಗ್ಗೆ ಬಹಳ ಕುಪಿತನಾಗಿದ್ದ. ಮುಂದೆ ಅರಸನಾದ ಟೀಪು ಅದೇ ಕೋಪ ಮುಂದುವರಿಸಿದ್ದ. ಇದರ ಬಗ್ಗೆ ಕ್ರಾಂತಿ ಪೆರಿಯಾಸ್ ಬರೆಯುತ್ತಾರೆ, `ಅವನು(ಟೀಪು) ರಾಜ್ಯವಾಳಿದ ಕಾಲ (1784-1799) ಕೆನರಾದ ಕ್ರಿಶ್ಚನ್ ಸಮಾಜಕ್ಕೆ ಕರಾಳ ದಿನಗಳಾಗಿದ್ದವು. ಸುಮಾರು 60 ಸಾವಿರ ಕ್ರಿಶ್ಚನ್ ಸ್ತ್ರೀಪುರುಷರನ್ನು ಬಂದಿಮಾಡಿ ಶ್ರೀರಂಗಪಟ್ಟಣದಲ್ಲಿ ಇಟ್ಟಿದ್ದ. ಟೀಪುನ ಅವಸಾನದ ನಂತರ ಅವರು ಮುಕ್ತರಾದರು. ಬೇಸಾಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರು.' ಎಂದು. ರಾಷ್ಟ್ರೀಯ ಮನೋಭಾವವುಳ್ಳ ಕ್ರಿಶ್ಚನ್ನರ ಬಗ್ಗೆ ಕಾಮತರು ಬರೆಯುತ್ತಾರೆ. ಮುಂಬೈಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಬೇರೆ ಮತದ

ಎಮ್. ವಿ. ಕಾಮತ್

ಎಮ್.ವಿ.ಕಾಮತ್‌ರ ಆತ್ಮಚರಿತ್ರೆ : `ಎ ರಿಪೋರ್ಟರ್ ಎಟ್ ಲಾರ್ಜ್' (A Reporter at Large) ಸರಣಿ ರೂಪದಲ್ಲಿ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಲಿದೆ. ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳು ಪುಸ್ತಕದ ತುಂಬ ಹಾಸುಕೊಕ್ಕಾಗಿವೆ. ಇದು ಈಗಿನ ಪೀಳಿಗೆಯ ಪತ್ರಕರ್ತರು ಓದಲೇಬೇಕಾದ ಪುಸ್ತಕವೆಂದರೂ ತಪ್ಪಾಗಲಾರದು. ಸಂಗ್ರಹಾನುವಾದ : ಡಾ 'ಜೀವಿ' ಕುಲಕರ್ಣಿ , ಪೀಠಿಕೆ: ನಾನು ಪುಸ್ತಕಪ್ರಿಯ. ಇಂಗ್ಲೀಷಿನಲ್ಲಿ ಬಹಳ ಓದುವ ಚಟ ಇದ್ದವರಿಗೆ `ಪುಸ್ತಕದಹುಳ' (bookworm) ಎನ್ನುತ್ತಾರೆ. ಉತ್ತಮ ಪುಸ್ತಕ ಓದುವವರಿಗೆ ಹಾಗೆ ಅನ್ನಲಾಗುವುದಿಲ್ಲ. ಅದಕ್ಕಾಗಿ ನಾನು ಒಂದು ಶಬ್ದ ಟಂಕಿಸಿದ್ದೇನೆ (ಕಾಯಿನ್ ಮಾಡಿದ್ದೇನೆ). ಅದು `ಪುಸ್ತಕದಭ್ರಮರ' (bookbee). ನಾವು ಪುಸ್ತಕ-ಕುಸುಮದಿಂದ ಅದರ ಮಕರಂದ ಸವಿಯಬೇಕು. ತಾನು ಸವಿದ ಜೇನು ಇತರರಿಗೆ ಹಂಚಬೇಕು. ನನ್ನ ಒಬ್ಬ ಮಿತ್ರ ಹೇಳುತ್ತಿದ್ದ, `ನಾನು ಒಪ್ಪತ್ತು ಊಟ ಬಿಡಬಹುದು, ಆದರೆ ಒಂದು ಒಳ್ಳೆಯ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಬಿಡಲಾರೆ' ಎಂದು. ಇತ್ತೀಚೆಗೆ ಐದು ದಿನಗಳ ಯೋಗ ಶಿಬಿರ ನಡೆಸಲು ಶಿರಸಿಗೆ ಹೋಗಿದ್ದೆ. ಅದನ್ನು ಅಯೋಜಿಸಿದವರು ಶಿರಸಿಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ವ್ಯಕ್ತಿ, ಜನಸೇವಕ ಹಾಗೂ ಕರ್ಮಯೋಗಿ ಎಸ್.ವಿ.ಸೋಂದೆ ಅವರು. `ನೀವು ಮುಂಬೈಯ ಎಂ.ವಿ.ಕಾಮತರ ಆತ್ಮಚರಿತ್ರೆ ಓದಿದ್ದೀರಾ?' ಎಂದು ಕೇಳಿದರು. `ಅದರ ಬಗ್ಗೆ ಕೇಳಿದ್ದೇನೆ, ಅದು ನನಗೆ