Posts

Showing posts from May, 2008

"ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವರು" ನಮ್ಮ ರಾಜ್ಯದ ಮುಖ್ಯಮಂತ್ರಿಯಾದರು !

ಬೆಂಗಳೂರು, ಮೇ 30 : ರೈತ ಮತ್ತು ಭಗವಂತನ ಹೆಸರಿನಲ್ಲಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿ ರಾಷ್ಟ್ರೀಯ ಮುಖಂಡರು, ಭಾರೀ ಜನಸ್ತೋಮದ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. "ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನವನಾದ ನಾನು ವಿಧಿದ್ವಾರಾ ಸ್ಥಾಪಿತ ಸಂವಿಧಾನದಲ್ಲಿ ಶ್ರದ್ಧೆಯುಳ್ಳವನಾಗಿಯೂ, ಸತ್ಯ-ನಿಷ್ಠೆಯಿಂದಲೂ, ಯಾವುದೇ ರಾಗ ದ್ವೇಷಗಳಿಗೆ ಅವಕಾಶವಾಗದಂತೆ ಕಾರ್ಯ ನಿರ್ವಹಿಸುತ್ತೇನೆಂದು ರೈತರು ಮತ್ತು ಭಗವಂತ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ" ಎಂದು ಪ್ರಮಾಣ ವಚನ ಸ್ವೀಕರಿಸಿದರು. ಬಿಎಸ್‌ವೈ ಪ್ರಮಾಣ ಸ್ವೀಕರಿಸಿದಾಗ ನಿಗದಿಯಾಗಿದ್ದ 1.50ರ ಮುಹೂರ್ತ ಮೀರಿಹೋಗಿತ್ತು ಯಡಿಯೂರಪ್ಪನವರ ಜೊತೆ ಎಂಎಲ್‌ಸಿ ಜನಾರ್ಧನ ರೆಡ್ಡಿ ಮತ್ತು ಐವರು ಪಕ್ಷೇತರರು ಸೇರಿದಂತೆ 29 ಜನರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀರಕರಿಸಿದರು. ನವವಧುವಿನಂತೆ ಸಿಂಗಾರಗೊಂಡಿರುವ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಭವ್ಯವಾದ ವೇದಿಕೆಯಲ್ಲಿ ಪಕ್ಷದ ಹಿರಿಯ ಮುಖಂಡರು, ನಾಡಿನ ವಿವಿಧ ಮಠಗಳ ಮಠಾಧೀಶರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರ ಅಪಾರ ಜನಸ್ತೋಮ ನೆರೆದಿತ್ತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರತಿಜ್ಞಾ ವಿಧಿಯ ಗೌಪ್ಯತೆಯನ್ನು ಬೋಧಿಸಿದರು. ಯಾವುದೇ ವಿಘ್ನಗಳಿಲ್ಲದೇ ಪ್ರಮಾಣ ವಚನ ಕಾರ್ಯಕ್ರಮ ಸಾಂಗೋಪಾಂಗವಾಗಿ ವಿಜೃಂಭಣೆಯಿಂದ ಜರುಗಿತು. ಭ

ವಿನಾಯಕ ದಾಮೋದರ ಸಾವರ್ಕರ್.

*ರಾಮಚಂದ್ರ ಹೆಗಡೆ. ಸಿ .ಎಸ್ (ಲೇಖನ ಆಧಾರ: ಚಕ್ರವರ್ತಿ ಸೂಲಿಬೆಲೆ ಅವರ 'ಅಪ್ರತಿಮ ಸ್ವಾತಂತ್ರವೀರ ಸಾವರ್ಕರ್' ಕೃತಿ) ಈ ಸಾವರ್ಕರ್ ಅಂದರೆ ಯಾರು?' ಹಾಗೊಂದು ಪ್ರಶ್ನೆ ನನಗೆ ಎದುರಾಗಿದ್ದು ನನ್ನ ಕಂಪನಿಯಲ್ಲಿ. ಕಳೆದ ಮೇ 10 ರಂದು 'ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ'ಯ ಸ್ಮರಣೆಯಲ್ಲಿ ಪುಟ್ಟದೊಂದು ಈ-ಮೇಲ್ ಕಳಿಸಿದ್ದಕ್ಕೆ ನನ್ನ ಸಹೋದ್ಯೋಗಿಗಳಿಂದ ನನಗೆ ಎದುರಾದ ಪ್ರಶ್ನೆಯಿದು. ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ 'ಸ್ವಾತಂತ್ರ್ಯ ಹೋರಾಟ' ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದ

ಎಮ್.ವಿ.ಕಾಮತ್‌ರ ಆತ್ಮಚರಿತ್ರೆ :

ಎಮ್.ವಿ.ಕಾಮತ್‌ರ ಆತ್ಮಚರಿತ್ರೆ : `ಎ ರಿಪೋರ್ಟರ್ ಎಟ್ ಲಾರ್ಜ್' (A Reporter at Large) ಸರಣಿ ರೂಪದಲ್ಲಿ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಲಿದೆ. ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳು ಪುಸ್ತಕದ ತುಂಬ ಹಾಸುಕೊಕ್ಕಾಗಿವೆ. ಇದು ಈಗಿನ ಪೀಳಿಗೆಯ ಪತ್ರಕರ್ತರು ಓದಲೇಬೇಕಾದ ಪುಸ್ತಕವೆಂದರೂ ತಪ್ಪಾಗಲಾರದು. ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ ಪೀಠಿಕೆ: ನಾನು ಪುಸ್ತಕಪ್ರಿಯ. ಇಂಗ್ಲೀಷಿನಲ್ಲಿ ಬಹಳ ಓದುವ ಚಟ ಇದ್ದವರಿಗೆ `ಪುಸ್ತಕದಹುಳ' (bookworm) ಎನ್ನುತ್ತಾರೆ. ಉತ್ತಮ ಪುಸ್ತಕ ಓದುವವರಿಗೆ ಹಾಗೆ ಅನ್ನಲಾಗುವುದಿಲ್ಲ. ಅದಕ್ಕಾಗಿ ನಾನು ಒಂದು ಶಬ್ದ ಟಂಕಿಸಿದ್ದೇನೆ (ಕಾಯಿನ್ ಮಾಡಿದ್ದೇನೆ). ಅದು `ಪುಸ್ತಕದಭ್ರಮರ' (bookbee). ನಾವು ಪುಸ್ತಕ-ಕುಸುಮದಿಂದ ಅದರ ಮಕರಂದ ಸವಿಯಬೇಕು. ತಾನು ಸವಿದ ಜೇನು ಇತರರಿಗೆ ಹಂಚಬೇಕು. ನನ್ನ ಒಬ್ಬ ಮಿತ್ರ ಹೇಳುತ್ತಿದ್ದ, `ನಾನು ಒಪ್ಪತ್ತು ಊಟ ಬಿಡಬಹುದು, ಆದರೆ ಒಂದು ಒಳ್ಳೆಯ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಬಿಡಲಾರೆ' ಎಂದು. ಇತ್ತೀಚೆಗೆ ಐದು ದಿನಗಳ ಯೋಗ ಶಿಬಿರ ನಡೆಸಲು ಶಿರಸಿಗೆ ಹೋಗಿದ್ದೆ. ಅದನ್ನು ಅಯೋಜಿಸಿದವರು ಶಿರಸಿಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ವ್ಯಕ್ತಿ, ಜನಸೇವಕ ಹಾಗೂ ಕರ್ಮಯೋಗಿ ಎಸ್.ವಿ.ಸೋಂದೆ ಅವರು. `ನೀವು ಮುಂಬೈಯ ಎಂ.ವಿ.ಕಾಮತರ ಆತ್ಮಚರಿತ್ರೆ ಓದಿದ್ದೀರಾ?' ಎಂದು ಕೇಳಿದರು. `ಅದರ ಬಗ್ಗೆ ಕೇಳಿದ್ದೇನೆ,