Posts

Showing posts from 2010

’ಶ್ರೀ ನಿತ್ಯಾನಂದ ಚರಿತಂ”- ಒಂದು ಅದ್ಭುತ ಕಾವ್ಯ !

ನಮ್ಮ ಪ್ರೀತಿಯ ಹರಿ !

ಎಸ್. ಕೆ. ಹರಿಹರೇಶ್ವರ (೧೯೩೬-೨೦೧೦) ಅವರ ವ್ಯಕ್ತಿತ್ವ ಗುರುತಿಸಲು ಅಪಾರ ಶಬ್ದಗಳಿವೆ. ವಿದ್ವಾಂಸ, ಸಾಹಿತ್ಯ ಪರಿಚಾರಕ, ಸಂಘಟಕ, ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ- ಎಲ್ಲವೂ ಆಗಿದ್ದ "ಹರಿ" ಇವೆಲ್ಲಕ್ಕೂ ಮಿಗಿಲಾಗಿ ಅಮೆರಿಕದಲ್ಲಿ ಕನ್ನಡದ ಬೀಜ ಬಿತ್ತಿದ ನುಡಿಕೃಷಿಕ ! -"ಪ್ರಜಾವಾಣಿ ಗ್ಯಾಲರಿ ಚಿತ್ರಗಳು" ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶ ! ಹರಿಯವರು ಮಾಡಿದ ಭಾಷಣವನ್ನು ಕೊಟ್ಟಿದ್ದೀರಿ. ಈಗ ಹರಿಯವರು ತೀರಿಕೊಂಡ ನಂತರ ಪ್ರಕಟವಾಗುತ್ತಿರುವ ಲೇಖನ ಮಾಲೆ, ನಮಗೆ ಅವರ ಸವಿನೆನಪುಗಳನ್ನು ಕೊಡುವಲ್ಲಿ ಸಹಾಯಕವಾಗಿವೆ. 'ದಟ್ಸ್ ಕನ್ನಡ ಪತ್ರಿಕೆ ' ಯ ಸಂಪಾದಕ ವರ್ಗಕ್ಕೆ ನಮಿಸುತ್ತಾ, ತಮ್ಮ ಪತ್ರಿಕೆಯ 'ಹರಿ 'ಯವರ ಸ್ಮರಣೆಯನ್ನು ಹೇಗೆ ಬರೆದಿರುವಿರೋ ಹಾಗೆ ಪ್ರಕಟಿಸುತ್ತಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಮ್ಮೆಲ್ಲರ ಪ್ರೀತಿಯ ಹರಿಯವರ ಬಗ್ಗೆ ನಿನ್ನ ಪತ್ರಿಕೆಯ ಲೇಖಕರು, ಕೊಡುವ ಮಾಹಿತಿಗಳಿಗಿಂತ ಹೆಚ್ಚಾದದ್ದನ್ನು ಯಾರು ಕೊಡಲು ಸಾಧ್ಯ ?  ಆ ನಿಮ್ಮ ಮಾತುಗಳನ್ನು ನನ್ನ ಬ್ಲಾಗ್ ನಲ್ಲಿ ಹಾಗೆಯೇ ಕೊಟ್ಟು ಓದುಗರ್ಯಾದರೂ ಇದ್ದರೆ ಅವರ ಜೊತೆ ಹಂಚಿಕೊಳ್ಳುವ ಆಸೆಯನ್ನು ಪುಷ್ಟೀಕರಿಸುವಿರೆಂದು ನಂಬಲೇ. ಕ್ಷಮೆಯಿರಲಿ.  -ನಿಮ್ಮ ಪತ್ರಿಯ ಪ್ರತಿದಿನದ ಓದುಗ, ವೆಂಕಟೇಶ್. ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇ
Image

”ಬೆಡಗಿ ಶಾಕಿರಾ’ ರವರ ಅಭಿನಯದೊಂದಿಗೆ ಹಾಡಿದ, "ವಾಕಾ..ವಾಕಾ." ಗೀತೆಯೊಂದಿಗೆ, "ಪುಟ್ಬಾಲ್ ವಿಶ್ವಕಪ್-ಕ್ರೀಡಾ-ಮಹಾಮೇಳ " ದ, ಕಾಮನಬಿಲ್ಲಿನ ರಂಗು-ರಂಗಿನ ತೆರೆ ಮೇಲೇರಿತು !

Image
"ಜರ್ಮನಿಯ ಯುವ ಕಾಲ್ಚೆಂಡಾಟದ ತಾರೆ, ಥಾಮಸ್ ಮುಲ್ಲರ್ "  ತಮ್ಮ ದೇಶ ’ವಿಶ್ವ ಕಪ್ ’ ಗೆಲ್ಲದಿದ್ದರೂ,   "ಗೋಲ್ಡನ್ ಬೂಟ್   " ಪ್ರಶಸ್ತಿಯನ್ನು  ಗಳಿಸಿ, ಜರ್ಮನಿಯ ಜನತೆಗೆ ಮುದುನೀಡಿದ ಸುಂದರ ಕ್ಷಣ  ! ಕಳೆದ ಒಂದು ತಿಂಗಳ ಕಾಲ, ದಕ್ಷಿಣ ಆಫ್ರಿಕದ ಹಾಗೂ ವಿಶ್ವದ ಫುಟ್ಬಾಲ್ ಅಭಿಮಾನಿಗಳನ್ನು ವಿಸ್ಮಯ ಲೋಕದಲ್ಲಿ ವಿಹರಿಸುವಂತೆ ಮಾಡಿದ ವಿಶ್ವಕಪ್ ಟೂರ್ನಮೆಂಟ್ ಗೆ ಭಾನುವಾರ ಮಧ್ಯರಾತ್ರಿ ತೆರೆಬಿತ್ತು. ಕೂಟವನ್ನು ಯಶಸ್ವಿಯಾಗಿ  ಆಯೋಜಿಸಿ ಕ್ರೀಡೆಗಳೆಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಂಡುಬಂದ  ದಕ್ಷಿಣ ಆಫ್ರಿಕಾದ ಪದಾಧಿಕಾರಿಗಳು  ಎಲ್ಲರಿಗೂ ಮಾದರಿಯಾಯಿತು. ಜೋಹಾನ್ಸ್‌ಬರ್ಗ್, ಹಾಲೆಂಡ್- ಸ್ಪೇನ್ ನಡುವಿನ ಫೈನಲ್ ಪಂದ್ಯಕ್ಕೆ ಮುನ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಕೂಟಕ್ಕೆ ತೆರೆಬಿತ್ತು. ಕೊಲಂಬಿಯದ ಗಾಯಕಿ ಶಕೀರಾ ಅವರು ’ಟೂರ್ನಿಯ ಅಧಿಕೃತ ಗೀತೆ "ವಾಕಾ.. ವಾಕಾ..." ಹಾಡುವ ಮೂಲಕ ಲಕ್ಷಾಂತರ ಕಾಲ್ಚೆಂಡಿನಾಟದ ರಸಿಕರಲ್ಲೆರ  ಗಮನ ಸೆಳೆದರು. ಸಾಂಸ್ಕೃತಿಕ ಸಮಾರಂಭದಲ್ಲಿ ಆಫ್ರಿಕಾದ ಸಾಂಪ್ರದಾಯಿಕ ಹಾಗೂ ಸಮಕಾಲೀನ ಸಂಗೀತ, ನೃತ್ಯದ-ಮಿಶ್ರಣ ಕಾಣಬಹುದಿತ್ತು. ಒಂದು ರೀತಿಯಲ್ಲಿ ಆಫ್ರಿಕಾದ ಸಂಪ್ರದಾಯವನ್ನು ಆಧುನಿಕ ರೀತಿಯಲ್ಲಿ ಅನಾವರಣಗೊಳಿಸಲಾಯಿತು,ಎನ್ನಬಹುದೇನೋ !. ’ಲೇಡಿ ಸ್ಮಿತ್ ಬ್ಲಾಕ್ ಮಂಬಾಜೊ ’ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. 780 ಕ್ಕೂ

"ಹೀಗಿದೃ ನಮ್ಮ ಎಚ್ಚೆನ್ ಮೇಷ್ಟೃ" !

-ಶೇಶಾದ್ರಿವಾಸು,  ಹಳೆಯ ಸಂಗತಿಗಳನ್ನು ನೆನೆಸಿಕೊಳ್ಳುತ್ತಾರೆ. ನ್ಯಾಷನಲ್ ಕಾಲೇಜ್ ನಲ್ಲಿ ವ್ಯಾಸಂಗಮಾಡಿದವರಿಗೆ ಇವೆಲ್ಲಾ ತಕ್ಷಣ ಜ್ಞಾಪಕ ಬರುವ ವಿಚಾರಗಳೇ ಆಗಿವೆ. ಶೇಶಾದ್ರಿ ವಾಸು, ನಮಗೆಲ್ಲಾ ಆಪ್ತರು. ಅವರು ಬೆಳೆಸಿದ ಬರಹದಲ್ಲೇ ನಾನು ಇಂದು ವರದಿಮಾಡುತ್ತಿರುವುದು ! -ಕೃಪೆ :  "ದಟ್ಸ್ ಕನ್ನಡ ಇ-ಪತ್ರಿಕೆ" ಯಲ್ಲಿ ದಾಖಲಿಸಿದ ವಿಚಾರಗಳು. ಆಗ ನಾನು ನ್ಯಾಷನಲ್ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಒಂದು ದಿನ ಪ್ರಜಾವಾಣಿಯಲ್ಲಿ ಎಚ್ಚೆನ್ ಅವರ ಫೋಟೋ ಜೊತೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರುವ ಸುದ್ದಿ ಹಾಕಿದ್ದರು. ಮೂಢ ನಂಬಿಕೆಗಳ ವಿರುದ್ಧ, ವೈಜ್ಞಾನಿಕ ಮನೋಭಾವದ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಲೇಖನಗಳನ್ನು ಕುತೂಹಲದಿಂದ ಓದುತ್ತಿದ್ದೆ. ನಾನು ಸ್ಕೂಲಿನಲ್ಲಿ ದಿನಾಲೂ ನೋಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಪ್ರಶಸ್ತಿ ಬಂದಿರುವ ಸುದ್ದಿ ಓದಿ ಸಂತೋಷವಾಗಿತ್ತು. ಅದೇ ಸಂಭ್ರಮದಲ್ಲಿ ಅವರ ಚಿತ್ರವನ್ನು ಆಹ್ವಾನಪತ್ರಿಕೆಯೊಂದರ ಹಿಂಭಾಗದಲ್ಲಿ ಬರೆದಿಟ್ಟಿದ್ದೆ. ಒಂದು ದಿನ ಮಧ್ಯಾನ್ಹದ ವಿರಾಮ ಸಮಯದಲ್ಲಿ ನಮ್ಮ ಕ್ಲಾಸಿನ ಮುಂದೆ ಓಡಾಡುತ್ತಿದ್ದ ಎಚ್ಚೆನ್ ಗೆ ಆ ಚಿತ್ರವನ್ನು ತೋರಿಸಿದೆ. ಅವರು ಖುಷಿಯಿಂದ “ಬಹಳ ಚೆನ್ನಾಗಿ ಚಿತ್ರ ಬರೆದಿದ್ದೀಯಪ್ಪಾ” ಅಂತ ಹೇಳಿದರು. ಯಾವ ಕ್ಲಾಸಿನಲ್ಲಿ ಓದುತ್ತಿದ್ದಿಯಾ ಅಂತ ವಿಚಾರಿಸಿದರು. ಕೊನೆಯಲ್ಲಿ ಅವರನ್ನು ಚಿತ್ರದ ಮೇಲೆ ಸಹಿ ಹಾಕಲು ಕೇಳಿಕೊಂಡಾಗ ಸೊಗಸಾಗಿ ಕನ್ನಡದಲ್ಲೇ ಸ

’೧೯ ನೇ, ವಿಶ್ವ ಕಪ್ ಫುಟ್ಬಾಲ್ ಮ್ಯಾಚ್,’ ನಲ್ಲಿ ಪೋರ್ಚುಗಲ್ ತಂಡ, ಉತ್ತರ ಕೊರಿಯವನ್ನು ೭-೦ ಗೋಲುಗಳಿಂದ ಮಣಿಸಿ ಸ್ಪರ್ಧೆಯಲ್ಲಿ ಮುಂದುವರೆಯಿತು !

Image
ಪೋರ್ಚುಗಲ್ ತಂಡ,  'ಫಿಫಾ ರ‍್ಯಾಂಕಿಂಗ್ ' ನಲ್ಲಿ,  ೩ ನೆಯವರಾಗಿದ್ದಾರೆ. ಉತ್ತರ ಕೊರಿಯ ಕ್ರಮಾಂಕ ೧೦೫ ನೆಯದು. ಪೋರ್ಚುಗಲ್ ತಂಡ, ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಕ್ರೀಡೆಯ ಪುಟ್ಟ-ಕಂದ, ಉತ್ತರ ಕೊರಿಯವನ್ನು, 'ಗ್ರೀನ್ ಪಾರ್ಕ್  ಕ್ರೀಡಾಂಗಣ ' ದಲ್ಲಿ,  ೨೦೧೦ ರ,  ಜೂನ್ ತಿಂಗಳು,  ೨೧ ನೇ ತಾರೀಖಿನ ಸೋಮವಾರ,  ೭-೦ ಗೋಲುಗಳಿಂದ ಸೋಲಿಸಿ ವಿಜೃಂಭಿಸಿದೆ. ಹೀಗಾಗಿ ೧೯ ನೆಯ ಫಿಫಾ ವಿಶ್ವ ಫುಟ್ಬಾಲ್ ಚಾಂಪಿಯನ್ ಶಿಪ್ ನಲ್ಲಿ, ಪೋರ್ಚುಗಲ್ ಬಣ, ಮುಂದಿನ ಹಂತವನ್ನು ತಲುಪುವುದು. ಮ್ಯಾಚಿನ ಮೊದಲ ಅವಧಿಯಲ್ಲಿ ’ರಾಲ್ ಮೀರೆಲ್ಸ್’, ದಾಖಲಿಸಿದ, ಮೊದಲ ಗೋಲಿನ ಸಹಾಯದಿಂದ ಪೋರ್ಚುಗಲ್ ೧-೦ ಸ್ಕೋರ್ ನಿಂದ, ಮೇಲ್ಗೈ ಸಾಧಿಸಿತು.  ಆಟದ ಉತ್ತರಾರ್ಧದಲ್ಲಿ, ೭-೦ ಗೋಲಿನ ಮಳೆಕರೆದರು. ಉತ್ತರ ಕೊರಿಯ ಈ ಎದುರಾಳಿಗಳ ದಾಳಿಯನ್ನು ಎದುರಿಸಲಾಗದೆ ತತ್ತರಿಸಿಹೋಗಿ, ನಿರಂತರವಾಗಿ ಗೋಲುಗಳನ್ನು ಅವರಿಗೆ ಬಿಟ್ಟುಕೊಡುತ್ತಾ ಹೋಯಿತು. ಪೋರ್ಚುಗಲ್ ತಂಡ ಒಟ್ಟು ೨೬ ಬಾರಿ ಚೆಂಡನ್ನು ಗುರಿಯಿಟ್ಟು ಗೋಲಿನ ಕಡೆ ಬಾರಿಸಿದರೆ, ಉತ್ತರ ಕೊರಿಯ, ಕೇವಲ, ೧೫ ಬಾರಿಮಾತ್ರ ಆ ಕೆಲಸ ಮಾಡಿತು. ಪೋರ್ಚುಗಲ್ ಒಡ್ಡಿದ ಅಭೇದ್ಯ-ರಕ್ಷಣಾ ಗೋಡೆಯನ್ನು ಭೇದಿಸಲಾಗಲೇ ಇಲ್ಲ.  -Courtesey : Times of India, 22nd, June, 2010

'Smile please, Oh Mr. Saby ' !

ಅಲ್ರೀ ಹೀಗೆ ಸುಮ್ನೆ ಬಿಟ್ಬಿಟ್ರಾ , ಹಿಡ್ಕೊಳ್ಳೋದ್ ಬ್ಯಾಡ್ವ ! ಏನ್ರಿ ಅರ್ಥ, ಸರೀ ಹೋಯ್ತು !

'ಐಪಿಎಲ್ ಕ್ರಿಕೆಟ್ ಮ್ಯಾಚ್ 'ನಲ್ಲಿ 'ಚೆನ್ನೈ ಸೂಪರ್ ಕಿಂಗ್ಸ್ ', ’ಮುಂಬೈಇಂಡಿಯನ್ಸ್ ತಂಡ ' ವನ್ನು ೨೨ ರನ್ ಗಳಿಂದ ಮಣಿಸಿ ವಿಜಯ ಪಡೆಯಿತು !

೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವರ ಅಜೇಯ ೫೭ ಸ್ಪೋಟಕ ರನ್ ಗಳು”ಚೆನ್ನೈ ಸೂಪರ್ ಕಿಂಗ್ಸ್ ’ ಪಾಲಿಗೆ ವರದಾನವಾಗುವ ಮೂಲಕ, ’ಮುಂಬೈಇಂಡಿಯನ್ಸ್ ತಂಡ ’ವನ್ನು ೨೨ ರನ್ ಗಳಿಂದ ಸೋಲಿಸಿ, ವಿಜಯಪತಾಕೆಯನ್ನು ಹಾರಿಸಿ, ’ಪ್ರತಿಷ್ಠಿತ ಐಪಿಎಲ್-೩ ಮುಕುಟ ’ ವನ್ನು ತನ್ನ ಮುಡಿಗೇರಿಸಿಕೊಂಡಿದೆ. ಮುಂಬೈಇಂಡಿಯನ್ಸ್ ತಂಡದ ನಾಯಕ, ’ಸಚಿನ್ ತೆಂಡುಲ್ಕರ್,” ಆಡುವ ಸಾಧ್ಯತೆಗಳ ಬಗ್ಗೆ ಅನಿಶ್ಚಿತತೆ ಇದ್ದು, ಅವರು ಆಟದ ಮೈದಾನಕ್ಕೆ ಬಂದಾಗ, ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಚಪ್ಪಾಳೆಯ ಮಳೆಗರೆದು ತಮ್ಮ ಅಭಿಮಾನ ಮತ್ತು ಹರ್ಷಗಳನ್ನು ವ್ಯಕ್ತಪಡಿಸಿದದರು. ಅವರ ಬಲಗೈಗೆ ಏಟುಬಿದ್ದು ಕೊನೆಗಳಿಗೆಯವರೆಗೆ ಮತ್ತೆ ಆಡುವ ಬಗ್ಗೆ ಖಚಿತವಾಗಿ ತಿಳಿದಿರಲಿಲ್ಲ. ಮೊದಲು ಟಾಸ್ ಗೆದ್ದು, ಬ್ಯಾಟಿಂಗ್ ಶುರುಮಾಡಿದ ’ಚೆನ್ನೈ ಸೂಪರ್ ಕಿಂಗ್ಸ್ ತಂಡ,” ೫ ವಿಕೆಟ್ ಗ ೧೬೮ ರನ್ ಗಳಿಸಿ ತಂಡಕ್ಕೆ ಒಳ್ಳೆಯ ಭದ್ರ ಬುನಾದಿಯನ್ನು ದೊರಕಿಸಿತು. ಅವರ ತಂಡದ ’ಸುರೇಶ್ ರೈನಾ ’ರವರು, (೫೭ ರನ್, ೩೫ ಎಸೆತ, ೩ ಸಿಕ್ಸ್, ಮತ್ತು ೩ ಬೌಂಡರಿಗಳು) ’ಪಂದ್ಯಶೇಷ್ಠಪ್ರಶಸ್ತಿ’ ಗೆ ಭಾಜನರಾದರು. ’ಮುಂಬೈ ಇಂಡಿಯನ್ಸ್ ’ ’ಚೆನ್ನೈ ಸೂಪರ್ ಕಿಂಗ್ಸ್ ತಂಡ ’ ಕ್ಕೆ ಉತ್ತರವಾಗಿ ತಮ್ಮ ೨೦ ಓವರ್ ಗಳಲ್ಲಿ, ೯ ವಿಕೆಟ್ ನಷ್ಟಕ್ಕೆ, ೧೪೬ ರನ್ ಮಾತ್ರಗಳಿಸಿದರು. ಹಾಗಾಗಿ ೨೨ ರನ

" ಅಮ್ರಿಕಾದಾಗ, ನಾನು ಕಣ್ಣಾರ ಕಂಡದ್ದು, ಕಿವ್ಯಾರ ಕೇಳಿದ್ದು ” !

http://shyanubhogaru-davanagere.blogspot.com/ ಈ "ನನ್ನ ಕನ್ನಡ ಪ್ರವಾಸ ಕಥನ " ಕೆಳಗೆ ದಾಖಲಾಗಿರುವ ಬೇರೆ ಬೇರೆ ಲೇಖನಗಳಿಗೆ ಹೋಲಿಸಿದರೆ, ಖಂಡಿತವಾಗಿಯೂ ಭಿನ್ನವಾಗಿರುವುದು ಸರ್ವವಿದಿತವಾಗಿದೆ. ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಏಕೆಂದರೆ, ಇದು ಒಂದು " ದೊಡ್ಡ ಬ್ಲಾಗ್, " ನ ತರಹವಿದೆ. ’ಇದೆ ಅನ್ನೋದಕ್ಕಿಂತ ಬ್ಲಾಗಂತ ಕರೆಯುವುದೇ ಲೇಸೆಂಬುದು ನನ್ನ ಅಭಿಪ್ರಾಯ ಹಾಗೂ ಆಸೆ ಸಹಿತ ! ಈಗ ಆ ಬ್ಲಾಕ್ ನ ವರದಿಗಾರ ನಾನೇ : ಹೆಸರು : ಹೆಚ್. ಆರ್. ಲಕ್ಷ್ಮೀವೆಂಕಟೇಶ. ನಾನು ’ಸಂಪದ’ ವೆಂಬ”ಕನ್ನಡತಾಣ ’ದಲ್ಲಿ ಚಿಕ್ಕದಾಗಿ ಆಗಾಗ ಬರೆಯುವ ಮನುಷ್ಯ... ಆಷ್ಟು ಸಾಕು ನನ್ನ ಪರಿಚಯ ಸದ್ಯಕ್ಕೆ...