Posts

Showing posts from July, 2010

ನಮ್ಮ ಪ್ರೀತಿಯ ಹರಿ !

ಎಸ್. ಕೆ. ಹರಿಹರೇಶ್ವರ (೧೯೩೬-೨೦೧೦) ಅವರ ವ್ಯಕ್ತಿತ್ವ ಗುರುತಿಸಲು ಅಪಾರ ಶಬ್ದಗಳಿವೆ. ವಿದ್ವಾಂಸ, ಸಾಹಿತ್ಯ ಪರಿಚಾರಕ, ಸಂಘಟಕ, ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ- ಎಲ್ಲವೂ ಆಗಿದ್ದ "ಹರಿ" ಇವೆಲ್ಲಕ್ಕೂ ಮಿಗಿಲಾಗಿ ಅಮೆರಿಕದಲ್ಲಿ ಕನ್ನಡದ ಬೀಜ ಬಿತ್ತಿದ ನುಡಿಕೃಷಿಕ ! -"ಪ್ರಜಾವಾಣಿ ಗ್ಯಾಲರಿ ಚಿತ್ರಗಳು" ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶ ! ಹರಿಯವರು ಮಾಡಿದ ಭಾಷಣವನ್ನು ಕೊಟ್ಟಿದ್ದೀರಿ. ಈಗ ಹರಿಯವರು ತೀರಿಕೊಂಡ ನಂತರ ಪ್ರಕಟವಾಗುತ್ತಿರುವ ಲೇಖನ ಮಾಲೆ, ನಮಗೆ ಅವರ ಸವಿನೆನಪುಗಳನ್ನು ಕೊಡುವಲ್ಲಿ ಸಹಾಯಕವಾಗಿವೆ. 'ದಟ್ಸ್ ಕನ್ನಡ ಪತ್ರಿಕೆ ' ಯ ಸಂಪಾದಕ ವರ್ಗಕ್ಕೆ ನಮಿಸುತ್ತಾ, ತಮ್ಮ ಪತ್ರಿಕೆಯ 'ಹರಿ 'ಯವರ ಸ್ಮರಣೆಯನ್ನು ಹೇಗೆ ಬರೆದಿರುವಿರೋ ಹಾಗೆ ಪ್ರಕಟಿಸುತ್ತಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಮ್ಮೆಲ್ಲರ ಪ್ರೀತಿಯ ಹರಿಯವರ ಬಗ್ಗೆ ನಿನ್ನ ಪತ್ರಿಕೆಯ ಲೇಖಕರು, ಕೊಡುವ ಮಾಹಿತಿಗಳಿಗಿಂತ ಹೆಚ್ಚಾದದ್ದನ್ನು ಯಾರು ಕೊಡಲು ಸಾಧ್ಯ ?  ಆ ನಿಮ್ಮ ಮಾತುಗಳನ್ನು ನನ್ನ ಬ್ಲಾಗ್ ನಲ್ಲಿ ಹಾಗೆಯೇ ಕೊಟ್ಟು ಓದುಗರ್ಯಾದರೂ ಇದ್ದರೆ ಅವರ ಜೊತೆ ಹಂಚಿಕೊಳ್ಳುವ ಆಸೆಯನ್ನು ಪುಷ್ಟೀಕರಿಸುವಿರೆಂದು ನಂಬಲೇ. ಕ್ಷಮೆಯಿರಲಿ.  -ನಿಮ್ಮ ಪತ್ರಿಯ ಪ್ರತಿದಿನದ ಓದುಗ, ವೆಂಕಟೇಶ್. ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇ
Image

”ಬೆಡಗಿ ಶಾಕಿರಾ’ ರವರ ಅಭಿನಯದೊಂದಿಗೆ ಹಾಡಿದ, "ವಾಕಾ..ವಾಕಾ." ಗೀತೆಯೊಂದಿಗೆ, "ಪುಟ್ಬಾಲ್ ವಿಶ್ವಕಪ್-ಕ್ರೀಡಾ-ಮಹಾಮೇಳ " ದ, ಕಾಮನಬಿಲ್ಲಿನ ರಂಗು-ರಂಗಿನ ತೆರೆ ಮೇಲೇರಿತು !

Image
"ಜರ್ಮನಿಯ ಯುವ ಕಾಲ್ಚೆಂಡಾಟದ ತಾರೆ, ಥಾಮಸ್ ಮುಲ್ಲರ್ "  ತಮ್ಮ ದೇಶ ’ವಿಶ್ವ ಕಪ್ ’ ಗೆಲ್ಲದಿದ್ದರೂ,   "ಗೋಲ್ಡನ್ ಬೂಟ್   " ಪ್ರಶಸ್ತಿಯನ್ನು  ಗಳಿಸಿ, ಜರ್ಮನಿಯ ಜನತೆಗೆ ಮುದುನೀಡಿದ ಸುಂದರ ಕ್ಷಣ  ! ಕಳೆದ ಒಂದು ತಿಂಗಳ ಕಾಲ, ದಕ್ಷಿಣ ಆಫ್ರಿಕದ ಹಾಗೂ ವಿಶ್ವದ ಫುಟ್ಬಾಲ್ ಅಭಿಮಾನಿಗಳನ್ನು ವಿಸ್ಮಯ ಲೋಕದಲ್ಲಿ ವಿಹರಿಸುವಂತೆ ಮಾಡಿದ ವಿಶ್ವಕಪ್ ಟೂರ್ನಮೆಂಟ್ ಗೆ ಭಾನುವಾರ ಮಧ್ಯರಾತ್ರಿ ತೆರೆಬಿತ್ತು. ಕೂಟವನ್ನು ಯಶಸ್ವಿಯಾಗಿ  ಆಯೋಜಿಸಿ ಕ್ರೀಡೆಗಳೆಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಂಡುಬಂದ  ದಕ್ಷಿಣ ಆಫ್ರಿಕಾದ ಪದಾಧಿಕಾರಿಗಳು  ಎಲ್ಲರಿಗೂ ಮಾದರಿಯಾಯಿತು. ಜೋಹಾನ್ಸ್‌ಬರ್ಗ್, ಹಾಲೆಂಡ್- ಸ್ಪೇನ್ ನಡುವಿನ ಫೈನಲ್ ಪಂದ್ಯಕ್ಕೆ ಮುನ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಕೂಟಕ್ಕೆ ತೆರೆಬಿತ್ತು. ಕೊಲಂಬಿಯದ ಗಾಯಕಿ ಶಕೀರಾ ಅವರು ’ಟೂರ್ನಿಯ ಅಧಿಕೃತ ಗೀತೆ "ವಾಕಾ.. ವಾಕಾ..." ಹಾಡುವ ಮೂಲಕ ಲಕ್ಷಾಂತರ ಕಾಲ್ಚೆಂಡಿನಾಟದ ರಸಿಕರಲ್ಲೆರ  ಗಮನ ಸೆಳೆದರು. ಸಾಂಸ್ಕೃತಿಕ ಸಮಾರಂಭದಲ್ಲಿ ಆಫ್ರಿಕಾದ ಸಾಂಪ್ರದಾಯಿಕ ಹಾಗೂ ಸಮಕಾಲೀನ ಸಂಗೀತ, ನೃತ್ಯದ-ಮಿಶ್ರಣ ಕಾಣಬಹುದಿತ್ತು. ಒಂದು ರೀತಿಯಲ್ಲಿ ಆಫ್ರಿಕಾದ ಸಂಪ್ರದಾಯವನ್ನು ಆಧುನಿಕ ರೀತಿಯಲ್ಲಿ ಅನಾವರಣಗೊಳಿಸಲಾಯಿತು,ಎನ್ನಬಹುದೇನೋ !. ’ಲೇಡಿ ಸ್ಮಿತ್ ಬ್ಲಾಕ್ ಮಂಬಾಜೊ ’ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. 780 ಕ್ಕೂ