Posts

Showing posts from January, 2013

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ

Image
ಭಾವಜೀವಿಯಾದ ವ್ಯಕ್ತಿಗೆ ಕೆಲವು ಹಾಡುಗಳನ್ನು ಆಲಿಸುತ್ತಾ ಕುಳಿತರೆ ಅವು ನಮ್ಮನ್ನು ಬೇರೊಂದು ಲೋಕಕ್ಕೆ ಸೆಳೆದೊಯ್ದು ಅಲ್ಲಿ ಬೀಡು ಬಿಡುವಂತೇ ಮಾಡುತ್ತವೆ ಎಂಬ ಅನಿಸಿಕೆ ಒಮ್ಮೆಯಾದರೂ ಜೀವಿತದಲ್ಲಿ ಬಂದೇ ಬರುತ್ತದೆ. ಎಲ್ಲೋ ಯಾರೋ ಹಾಗೊಮ್ಮೆ ಗುನುಗುನಿಸಿದರೂ ಮೊದಲೆಲ್ಲೋ ಕೇಳಿದ ಇಂಪಿನ ಕಂಪು ಕಿವಿಯಲ್ಲಿ ಗುಂಯ್ಯೆನ್ನಲು ಆರಂಭಿಸುತ್ತದೆ; ಮನಸ್ಸು ತಾಳಹಾಕುತ್ತ ಸಾಗುತ್ತದೆ! ಹಾಡಿನ ಜಾಡನ್ನೇ ಹಿಡಿದು ಅದರ ಮೂಲವನ್ನು ಅರಸಿ ಹೊರಟಾಗ ಕವಿತಾ ಪಿತೃವಿನ ಪರಿಚಯ ಅಷ್ಟಿಷ್ಟು ಮಾತ್ರ ದೊರೆಯುತ್ತದೆ. ಆಳಕ್ಕೆ ಇಳಿಯುತ್ತಾ ನಡೆದಾಗ ಸಾವಿರ ಮೆಟ್ಟಿಲ ಬಾವಿಯ ಹಾಗೇ ಇನ್ನೂ ಆಳಕ್ಕೆ ಕಾಣುವ ಕವಿಗಳ ಅದ್ಭುತ ಅಂತರಂಗ ಬಹಿರಂಗಗೊಳ್ಳುತ್ತದೆ. ಸೆಳೆಮಿಂಚಿನ ಬೆಳಕಲ್ಲಿ ಕವಿಯ ಸಾಕ್ಷಾತ್ಕಾರವಾದರೆ ಕೋಲ್ಮಿಂಚಿನ ಭರದಲ್ಲಿ ಅವರ ಕೃತಿಗಳ ಸಾಲು ತೋರಿಬರುತ್ತದೆ. ಕವಿಯೊಬ್ಬ ಹಾಗಿರಬಹುದೇ ಹೀಗಿರಬಹುದೇ ಎಂದು ಕಲ್ಪಿಸಿಕೊಳ್ಳುವ ಸೀಮಿತ ಸಂವಹನದ ಕಾಲವೊಂದಿತ್ತು; ಕವಿ ಸಾಹಿತಿಗಳಿಗೆ ಪತ್ರ ಬರೆದು ಅವರುಗಳ ಅನಿಸಿಕೆಗಳಿಗಾಗಿ ಕಾಯುವ ಅದಮ್ಯ ಭಾವವೂ ಇರುತ್ತಿತ್ತು. ಇಂದು ಅಂತರ್ಜಾಲದ ಕಾಲಘಟ್ಟದಲ್ಲಿ ಜಗತ್ತು ಕಿರಿದಾಗಿದೆ; ಕವಿ-ಸಾಹಿತಿಗಳ ಛಾಯಾಚಿತ್ರಗಳೂ ಮಾತುಗಳೂ ಅಲ್ಲಲ್ಲಿ ನೋಡ/ಕೇಳ ಸಿಗುತ್ತವೆ.  ನಮ್ಮ ಗೋಕರ್ಣದ ಗೌರೀಶ್ ಕಾಯ್ಕಿಣಿಯವರು ಉದಯೋನ್ಮುಖ ಬರಹಗಾರರನ್ನು ಕುರಿತು ಹೀಗೆ ಹೇಳುತ್ತಿದ್ದರಂತೆ: "ಅವರು ಬರೆಯಲಿ ಬಿಡಿ, ಒಳ್ಳೆಯದೇ, ದಿನಕ್ಕೆ ಎಷ್ಟುಗ