Posts

Showing posts from May, 2013

ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶ !

ಹರಿಯವರು ಮಾಡಿದ ಭಾಷಣವನ್ನು ಕೊಟ್ಟಿದ್ದೀರಿ. ಈಗ ಹರಿಯವರು ತೀರಿಕೊಂಡ ನಂತರ ಪ್ರಕಟವಾಗುತ್ತಿರುವ ಲೇಖನ ಮಾಲೆ, ನಮಗೆ ಅವರ ಸವಿನೆನಪುಗಳನ್ನು ಕೊಡುವಲ್ಲಿ ಸಹಾಯಕವಾಗಿವೆ. 'ದಟ್ಸ್ ಕನ್ನಡ ಪತ್ರಿಕೆ ' ಯ ಸಂಪಾದಕ ವರ್ಗಕ್ಕೆ ನಮಿಸುತ್ತಾ, ತಮ್ಮ ಪತ್ರಿಕೆಯ 'ಹರಿ 'ಯವರ ಸ್ಮರಣೆಯನ್ನು ಹೇಗೆ ಬರೆದಿರುವಿರೋ ಹಾಗೆ ಪ್ರಕಟಿಸುತ್ತಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಮ್ಮೆಲ್ಲರ ಪ್ರೀತಿಯ ಹರಿಯವರ ಬಗ್ಗೆ ನಿನ್ನ ಪತ್ರಿಕೆಯ ಲೇಖಕರು, ಕೊಡುವ ಮಾಹಿತಿಗಳಿಗಿಂತ ಹೆಚ್ಚಾದದ್ದನ್ನು ಯಾರು ಕೊಡಲು ಸಾಧ್ಯ ?  ಆ ನಿಮ್ಮ ಮಾತುಗಳನ್ನು ನನ್ನ ಬ್ಲಾಗ್ ನಲ್ಲಿ ಹಾಗೆಯೇ ಕೊಟ್ಟು ಓದುಗರ್ಯಾದರೂ ಇದ್ದರೆ ಅವರ ಜೊತೆ ಹಂಚಿಕೊಳ್ಳುವ ಆಸೆಯನ್ನು ಪುಷ್ಟೀಕರಿಸುವಿರೆಂದು ನಂಬಲೇ. ಕ್ಷಮೆಯಿರಲಿ.  -ನಿಮ್ಮ ಪತ್ರಿಯ ಪ್ರತಿದಿನದ ಓದುಗ, ವೆಂಕಟೇಶ್. ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇದದಲ್ಲಿ ಹೇಳಿದೆ. ಆ ಮಾತುಗಳಂತೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಎಂದು ನಮ್ಮ ಅಂಕಣಕಾರರು  ಹೇಳುತ್ತಿದ್ದಾರೆ. ದಟ್ಸ್ ಕನ್ನಡ ದ ಓದುಗ ವೃಂದದ ಪರವಾಗಿ ಮತ್ತು ಪತ್ರಿಕೆಯ ಸಂಪಾದಕೀಯ  ಬಳಗದ ಪರವಾಗಿ ಶಿಕಾರಿಪುರ ಹರಿಹರೇಶ್ವರ ಅವರಿಗೆ ಹೃತ್ಪೂರ್ವಕ ಶುಭಪ್ರಯಾಣ ಕೋರುತ್ತಿದ್ದೇವೆ. ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು ಮನಸ್ಸಿಗೆ ಹತ್ತಿರವಾದವರೊಬ್ಬರು ಆಸ್ಪತ