Posts

Showing posts from February, 2016

ನನ್ನ ಶೈಕ್ಷಣಿಕ ಹಾಗೂ ಚಾರಿತ್ರಿಕ ಸ್ಥಳಗಳ ಭೇಟಿ !

Image
ನನ್ನ ಶೈಕ್ಷಣಿಕ ಹಾಗೂ ಚಾರಿತ್ರಿಕ ಸ್ಥಳಗಳ ಭೇಟಿ ! -ಲೇಖಕಿ : ಕುಮಾರಿ. ಕೆ.ಟಿ .ಸಾವಿತ್ರಿ,   : ನಾಗಾರ್ಜುನ ಸಾಗರ  ಕೆ. ಟಿ. ಸಾವಿತ್ರಮ್ಮನವರು ತಮ್ಮ ಕಾಲೇಜಿನ ದಿನಗಳಲ್ಲಿ ಮಾಡಿದ ಪ್ರವಾಸದ ಬಗ್ಗೆ ತಮ್ಮ ಅನುಭವಗಳನ್ನು ಓದುಗರಲ್ಲಿ ಹಂಚಿಕೊಂಡಿದ್ದಾರೆ . ನಾವು ಮಂತ್ರಾಲಯದಿಂದ ಹೊರಟುಶ್ರೀಶೈಲ ಕ್ಷೇತ್ರಕ್ಕೆ ೧ ಗಂಟೆಗೆ ತಲುಪಿದೆವು. ಇದೂ ಕೂಡಾ ಭಕ್ತಾದಿಗಳಿಗೆ ಯಾತ್ರಾ ಸ್ಥಳವಾಗಿದೆ. ಸಮುದ್ರಮಟ್ಟದಿಂದ ೪೫೭.೨ ಮೀಟರ್ ಗಳ ಎತ್ತರದಲ್ಲಿ ಬೆಟ್ಟದಮೇಲೆ ನೆಲೆಸಿರುವ ಶ್ರೀ ಮಲ್ಲಿಕಾರ್ಜುನ ಮತ್ತು ಭ್ರಮರಾಂಬಿಕೆಯ ದೇವಸ್ಥಾನಗಳು ಭಕ್ತರನ್ನು ಕೈಬೀಸಿ ಕರೆಯುತ್ತವೆ. ಭಾರತದಲ್ಲಿರುವ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲೊಂದು. ಇಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದು ಇಲ್ಲಿರುವ ಪಾತಾಳಗಂಗೆಯು ಶ್ರದ್ಧಾಳುಗಳ ಭಕ್ತಿಯನ್ನು ಪರೀಕ್ಷಿಸುವಂತಿದೆ. ನನಗಂತೂ ಪಾತಾಳಗಂಗೆಯ ಇಳಿಮುಖದ ದಾರಿಯಲ್ಲಿ ಸಾಗುತ್ತಿರುವಾಗ ಪಾತಾಳಲೋಕಕ್ಕೇ ಧಾವಿಸಿದ ಅನುಭವವಾಯಿತು ! ಕೆಲವೊಮ್ಮೆ ಇದೊಂದುಶಿಕ್ಷೆಯಂತೆ ತೋರಿದರೂ, ಸೃಷ್ಟಿಯ ಸೊಬಗನ್ನು ಕಣ್ತುಂಬಾನೋಡಿ ಧನ್ಯಳಾಗುವ ಭಾಗ್ಯ ಸಿಕ್ಕಿತಲ್ಲಾ ಎಂದು ಅಂದುಕೊಂಡೆ. ಇಲ್ಲಿಯ ವಿಶೇಷವೇನೆಂದರೆ, ಯಾವ ಅರ್ಚಕರ ನೆರವಿಲ್ಲದೆ ದೇವಾಲಯಗಳಿಗೆ ಹೋಗಿ ನಾವೇ ನೈವೇದ್ಯವನ್ನು ಅರ್ಪಿಸಬಹುದು. ಊಟದನಂತರ ಅಲ್ಲಿಂದ ಮುಂದೆ ಹೊರಟೆ