Posts

Showing posts from 2018
ಎಪಿಸೋಡ್ ೧೨೩. (ಮ. ಜಾ.ಧಾರವಾಹಿ, ೧೯,ಡಿಸೇಂಬರ್ ೨೦೧೮) ಒಟ್ಟಾರೆ ಕತೆ ಬಹಳ ರೋಚಕವಾಗಿ, ನಂಬಲಾರ್ಹವಾಗಿ  ಮುಂದುವರೆಯುತ್ತಿದೆ. ಚಂದು  ಬಾರ್ಗಿಯವರು  ತಂದೆ ಶಂಕರ ದೇವಘಟ್ಟ, ಮಗ ಸುಹಾಸ್ ದೇವಘಟ್ಟರ  ನಡುವೆ ಭಿನ್ನಾಭಿಪ್ರಾಯದ ವಿಷ ಬೀಜ ಬಿತ್ತಿ ಅವರಿಬ್ಬರ ನಡುವೆ  ಜಗಳ ಆಡಿಸಿ ತನ್ನ ಕೆಲಸ ಸಾಹಿಸಿದ್ದಾರೆ ಚಂದು ಭಾರ್ಗಿಯವರ ಕುಟಿಲತೆಯಿಂದ ಶಂಕರದೇವಘಟ್ಟರಂತಹ ನಿಸ್ಪೃಹ ಶಿಕ್ಷಣ ಸಂಸ್ಥೆಯ ನಿರ್ಮಾಪರು, ರಾಜೀನಾಮೆ ಕೊಡುವ ಬೆಳವಣಿಗೆಯಿಂದ  ಜಾನಕಿ  ತನ್ನ ಪಿ. ಎ. ಪೋಸ್ಟ್ ಗೆ  ರಾಜೀನಾಮೆ ಕೊಡಲು ವಿವಶಳಾಗುತ್ತಾಳೆ.  ಸುಹಾಸ್ ಜಾನಕಿಗೆ, "ನಿಮಗೆ  ಕೆಲ್ಸ ಬೇಕೇ  ಬೇಕು ಅನ್ನಿಸಿದರೆ, ಹೊಸ ಮ್ಯಾನೇಜಿಂಗ್ ಟ್ರಸ್ಟಿಯವರ ಕಚೇರಿಯಲ್ಲಿ ಸೆಕ್ರೆಟರಿಯಾಗಿ ಮುಂದುವರೆಯ ಬೇಕಾಗುತ್ತೆ.  ನೋಡಿ " ತಿಂಗಳಿಗೆ  ೬೦ ಸಾವಿರ ರೂಪಾಯಿ ವೇತನ ಮತ್ತು ವಸತಿ ಸೌಕರ್ಯ ಕೊಡುವುದಾಗಿ ಹೇಳಿದ ಭಾರ್ಗಿಯವರ  ಮಾತಿಗೆ  ಸೊಪ್ಪುಹಾಕದೆ, "ನನಗೆ ನೌಕರಿ ಬೇಡ", ಎಂದು ಹೇಳಿ ಹೊರಡುತ್ತಾಳೆ, ಸ್ವಾಭಿಮಾನಿ ಜಾನಕಿ ಪುಟ್ಟ. ಎನೇನೋಬೆಳವಣಿಗೆಗಳು : ಬಾರ್ಗಿಯವರು ಸಿಎಮ್.ರವರನ್ನು ಭೇಟಿಮಾಡಿ, ದೇವಘಟ್ಟದ ರೂರಲ್ ಶಿಕ್ಷಣ ಸಂಸ್ಥೆಗೆ ಮ್ಯಾನೇಜಿಂಗ್ ಟ್ರಸ್ಟಿ ಪದವಿ ಬಿಟ್ಟುಕೊಟ್ಟ ಅಚ್ಚರಿಯನ್ನು  ವಿವರಿಸುವ ಮೊದಲೇ ಸಿ.ಎಮ್. ಗೆ ಈ ವಿಷಯ ಗೊತ್ತಿರುತ್ತದೆ. ಸಿ.ಎಂ. ಇದನ್ನು ಅರ್ಥಮಾಡಿಕೊಳ್ಳಲು ಕಷ್ಟ ಪಡು ತ್ತಿರುವಾಗಲೇ, ಭಾರ್ಗಿಯವರು ತಮಗೆ ಬೇಗ ಮಂತ
೧೭ ನೇ ತಾರೀಖಿನ ಮಗಳು ಜಾನಕಿ ಧಾರಾವಾಹಿ ಸುಮಾರಾಗಿ  ಧಾರಾವಾಹಿಯ ಎಲ್ಲಾ ಒಳ  ಗುಟ್ಟುಗಳೂ ನಿಧಾನವಾಗಿ ಕಳಚಿಕೊಳ್ಳುತ್ತಿವೆ . ಜಾನಕಿ, ಶಂಕರ ದೇವಘಟ್ಟರ ಸ್ಕೂಲ್ ನಲ್ಲಿ ಕೆಲಸಮಾಡ್ತಿರೋದು ಅನ್ನೋ ವಿಷಯ ತಂದೆ ಚಂದು ಭಾರ್ಗಿಯವರಿಗೆ ಮಗಳ ಬಾಯಿನಿಂದಲೇ ತಿಳಿಯಿತು. ಜಾನಕಿ ವಾಸಿಸುವ ಜಾಗಾನೂ ತಿಳೀತು. ಜಾನಕಿಗೆ ಡಿ.ಎನ್.ಎಸ್. ರಾಜುನ  ನೋಡಿದ್ದಾಯಿತು .(ಆತನೇ ತನ್ನ ಅದೃಷ್ಟಹೀನ ಮಾವ ಆನ್ನೋ ವಿಶಯ ತಿಳಿಯದು ) ನಿರಂಜನನ ತಾಯಿ, ದೇವಕಿ, ಅಕ್ಕ ಸಂಜನಳನ್ನು  ನೋಡಿದಿದ್ದಾಗಿದೆ. ಅವರೇ ಅನ್ನ ಗಂಡನ ತಾಯಿ, ಹಾಗೂ  ಅಕ್ಕ ಅನ್ನೋ ವಿಷಯ ತಿಳ್ಕೊಳ್ಳಬೇಕಾಗಿದೆ. ತಾಯಿ ಮಗಳಿಗೂ ಜಾನಕಿಯ ಬಗ್ಗೆ ಗೊತ್ತಿಲ್ಲ ತಿಳಿಯದ ವಿಷಯಗಳೆಂದರೆ, ಶಂಕರದೇವಘಟ್ಟರಿಗೆ ತನ್ನ ಬಾಲ್ಯದ ಗೆಳೆಯ ಡಿ.ಎನ್.ಎಸ್.ರಾಜು ಕಷ್ಟದಲ್ಲಿದಾನೆ. ಆತನೇ ಜಾನಕಿಯ ಮಾವ ಅನ್ನೋ ವಿಚಾರ ಗೊತ್ತಾಗಬೇಕಿದೆ. ಸಿ.ಎಸ್.ಪಿ ಮತ್ತು ಶ್ಯಾಮಲಮ್ಮನಿಗೆ ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ನಿರಂಜನನೇ ನಿರಂಜನ್ ಧಾವಳಿ ಅನ್ನೋ ಸತ್ಯ ಗೊತ್ತಾದರೆ ಎಲ್ಲಾ ತಳಮೇಲಾಗುವ ಸಾಧ್ಯತೆ ಇರುತ್ತೆ ಇಂತಹ ಸಂದಿಗ್ದ  ಪರಿಸ್ಥಿತಿಯಲ್ಲಿ ಕತೆಯನ್ನು ಸಮತೋಲಿಸಿಕೊಂಡು  ಓಡಿಸಿಕೊಂಡು ಹೋಗುವುದು ಬಹಳ ಸವಾಲಿನ ಕೆಲಸ. ಈಗಾಗಲೇ ಪ್ರಸಿದ್ಧಿಯ ಶಿಖರದಲ್ಲಿರುವ ಟೀ.ಎನ್ ಸೀತಾರಾಮ್ ತಮ್ಮ ಕತೆಯ ಕೊನೆಯಲ್ಲಿ ಜಾನಕಿ, ಸಿ.ಎಸ್.ಪಿ. ಮಗಳು, ರಶ್ಮಿಯವರು  ಆಕೆಯ ತಾಯಿ  ಅನ್ನೋ ವಿಚಾರವನ್ನು ಪ್ರತಿಪಾದಿಸುವ  ಸೀನ್  ಹೇಗೆ ತೆರೆಯಮೇಲೆ ತ
೧೧೧ ನೆಯ ಎಪಿಸೋಡಿನ ಮಗಳು ಜಾನಕಿ, (೩ ಡಿಸೇಂಬರ್, ೨೦೧೮) ಇದನ್ನು ಪರಿಚಯದ ಕಂತೆಂದು ಹೇಳಬಹುದು. ಹೊಸ ಪಾತ್ರಗಳ ಪರಿಚಯ, ಅವರ ಮುಂದಿನ ಹೆಜ್ಜೆಗಳು. ಹಳೆವ್ಯಕ್ತಿಗಳ ಮುನ್ನೋಟಗಳು ಇತ್ಯಾದಿ. ಜಾನಕಿ ಮನೆಬಿಟ್ಟಬಳಿಕ ತನ್ನ ಗೆಳತಿ ಅದಿತಿಯ ಮನೆಗೆ ಹೋಗಲು ಬಸ್ಸಿನಲ್ಲಿ ಪ್ರಯಾಣಿಸುತ್ತಾಳೆ.  ಅವಳು ತಿಳಿಸಿದ ಶೋರೂಮ್ ಸೇಲ್ಸ್ ಕೆಲಸ ಜಾನಕಿಯ ಮನೋಧರ್ಮಕ್ಕೆ ಹಿಡಿಸುತ್ತಿಲ್ಲ. ಬೇಡವೆಂದು ನಿರಾಕರಿಸಿ ಪ್ರೀತಿಯ ಗೆಳತಿಯ ಮನಸ್ಸನ್ನು ನೋಯುಸುವುದು ಹರ್ಟ್ ಆಗುವಂತಹದು. ಡಾನ್ಸ್ ಟೀಚಿಂಗ್ ಕೆಲಸಕ್ಕೆ ಸೇರಲು ತುಂಬಾ ಸಮಯವಿದೆ. ತಲೆಯಲ್ಲಿ  ಏನು ಮಾಡಬೇಕೆಂಬ ನಿರ್ದಿಷ್ಟವಾದ ಪ್ಲಾನ್  ಇಲ್ಲ. ಬಸ್ಸಿನಿಂದ ಇಳಿದು ಜೇನುತೊರೆಗೆ ಹೋಗುವಾಗ  ಟ್ಯಾಕ್ಸಿಯಲ್ಲಿ ಇಬ್ಬರು ಸಹಪ್ರಯಾಣಿಕರ ಭೇಟಿಯಾಗಾತ್ತೆ. ಅವರು ಅವಳಿಗೆ ಅಪರಿಚಿತರು. ಆದರೆ ಪ್ರೇಕ್ಷಕರಾದ ನಮಗೆ ಗೊತ್ತು. ಅವರಲ್ಲೊಬ್ಬರು, ತನ್ನ ಗಂಡ ನಿರಂಜನನ ತಾಯಿ ಮತ್ತೊಬ್ಬರು ನಿರಂಜನನ ಅಕ್ಕ ಸಂಜನ (ಇವರನ್ನು ನೋಡುವ ನಾವೆಲ್ಲಾ ಕಾಯ್ತಿದ್ವಲ್ಲಾ)  ಮೂವರೂ ಮಾತಾಡುವಾಗ  ಜಾನಕಿಯ ಹೆಸರು ಗೊತ್ತಾಗದಂತೆ ಎಚ್ಚರಿಕೆ ವಹಿಸಿರುವುದು ನಿರ್ಮಾಪಕರ ಜಾಣ್ಮೆಯ  ವೇದ್ಯವಾಗುತ್ತೆ. ಸಂಜನ ಕೆಲಸಕ್ಕೆ ಪ್ರಯತ್ನಿಸಿದ್ದು ಸಿಗಲಿಲ್ಲ. ಹೆಚ್ಚಿನ ಸತ್ಯಸಂಧತೆಯಿಂದಾಗಿ. ಸಿ.ಎಸ್.ಪಿ.ಮನೆಯಲ್ಲಿ ಚೇತನ್ ಜೊತೆ ಮಾತುಕತೆ : ಸಿ.ಎಸ್.ಪಿ. ಮನೆಗೆ ಪ್ರಭಂಜನ ಚೇತನ್ ಹೋಗುತ್ತಾರೆ. ಚೇತನ್,  ನಿರಂಜನನೂ ಆ ಕಂಪೆನಿಗೆ ಸೇರಬಹುದು. ಎನ್ವಿರಾ

ಮೊದಲಿನ ದುರ್ಬಲ ಜಾನಕಿಯಾಗದೆ ಹೊಸಜಾನಕಿಯಾಗಬೇಕೆನ್ನುವ ಹಂಬಲ !

೩೦, ನವೆಂಬರ್, ೨೦೧೮ ರ  ಸೀತಾರಾಂ ವಿರಚಿತ, ಮಗಳು ಜಾನಕಿ ಧಾರಾವಾಹಿಯ  ೧೧೦ ನೆಯ ಕಂತು.  ! ಅರ್ಧ ಸತ್ಯ, ಪೂರ್ಣ ಸತ್ಯಾನ್ವೇಷಣೆ ಮಾಡುತ್ತಾ ಸಾಗುತ್ತಿರುವ ಮಗಳು ಜಾನಕಿ ಧಾರಾವಾಹಿಯ, ನಾಯಕಿ  ಜಾನಕಿ ಮನೆಬಿಟ್ಟು ಹೊರಗೆ ಹೋಗಿ ಸ್ವತಂತ್ರವಾಗಿ ಹೋರಾಡಬೇಕು, ಮೊದಲಿನ ದುರ್ಬಲ ಜಾನಕಿಯಾಗದೆ ಹೊಸಜಾನಕಿಯಾಗಬೇಕೆನ್ನುವ ಜೀವನವನ್ನೆದುರುಸುತ್ತಾ ಸತ್ಯದರ್ಶಮಾಡಬೇಕೆನ್ನುವ ಹಂಬಲ ಹೊಂದಿದ್ದಾಳೆ ! ತಂದೆ ಬಾರ್ಗಿ, ಮತ್ತು ಪತಿ, ನಿರಂಜನರ ನಡುವೆ ಆದ ಘಟನೆಯಿಂದ  ಜಾನಕಿ' ಡಿಸ್ಟರ್ಬ್' ಆಗಿ್ದಾರೆ. ನಿರಂಜನನ ಮೇಲೆ ಕೈಮಾಡಿ ರಕ್ತಬರುವಂತೆ ಹೊಡೆದದ್ದುಅವಳ ಮನಸ್ಸಿಗೆ ಬಹಳ ಆಘಾತವಾಗಿದೆ. ಇತರಹದ ಘರ್ಷಣೆಗಳು ಏಕೆ ಆಗುತ್ತಿವೆ. ಯಾರು ಸರಿ, ಯಾರು ತಪ್ಪು ಎನ್ನುವ  ಮೂಲ ಅರಿಯಲು ಮನೆ ಬಿಟ್ಟು ದೂರಹೋಗಬೇಕು. ಸ್ವತಂತ್ರವಾಗಿ ಜೀವನವನ್ನು ಎದುರಿಸಬೇಕೆನ್ನುವ ಅವಳ ನಿರ್ಧಾರ  ! ಒಂಟಿಯಾಗಿರುವಾಗ ಇವುಗಳ ಸತ್ಯ ಕಾಣಿಸಬಹುದೇನೋ !? ಬಾರ್ಗಿಯವರು,  ನಿಮ್ಮಪ್ಪ ಸರಿಯೇ ? ಅಥವಾ  ನಿರಂಜನ ಸರಿಯೇ ? ಎಂದು ಕೇಳಿದಾಗ, "ನೀವು ನಿಮ್ಮ  ಎಷ್ಟೋ ಆಪ್ತರನ್ನು  ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದೀರಿ;  ನಂಬಿದರಿಗೆ ದ್ರೋಹ ಎಸಗಿದ್ದೀರಿ.  ಹಾಗೆಯೇ ಮಗಳಿಗೂ ಏಕೆ ದ್ರೋಹ ಮಾಡಿರಬಹುದು "? ನಾನು ಸ್ವಂತ ಮಗಳಾಗಿಯೂ ನನಗೇಕೆ ಹೀಗೆ ಮಾಡಿದಿರಿ ? ಎನ್ನುವ ಪ್ರಶ್ನೆಯಿಂದ ಬಾರ್ಗಿಯವರು  ತತ್ತರಿಸಿಹೋಗುತ್ತಾರೆ. ನಿರಂಜನ ಒಂದು ವರ್ಷ ದೂರಕ್ಕೆ ಹೋಗ

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ ಮಗಳು ಜಾನಕಿ ಧಾರಾವಾಹಿಯ ವರದಿ !

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ ಮಗಳು ಜಾನಕಿ ಧಾರಾವಾಹಿಯ ವರದಿ : ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ  ಟೆಲಿವಿಷನ್ ನ ಕನ್ನಡ ಸೀರಿಯಲ್ ಮಗಳು ಜಾನಕಿಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ. ಬಾರ್ಗಿಯವರ ಮನೆಯಲ್ಲಿ ರಾತ್ರಿ ಊಟದ ಡೈನಿಂಗ್ ಟೇಬಲ್ ಬಳಿ ಊಟಕ್ಕೆ ಎಲ್ಲರೂ ಕೂತಿದ್ದಾರೆ (ಜಾನಕಿ ಚಂಚಲ ರಷ್ಮಿಯರು) ಊಟ  ಮಾಡುವ ಸಮಯ. ಈಗಾಗಲೇ ಗಡಿಯಾರ ೯-೧೫ ತೋರಿಸ್ತಾ ಇದೆ. ಮಗಳು ಚಂಚಲೆ "ಪಪ್ಪಾ ಊಟಕ್ಕೆ ಬನ್ನಿ"  ಅಂತ ಮಹಡಿಯಮೇಲಿರುವ ತಂದೆ ಬಾರ್ಗಿಯವರನ್ನು ಕೂಗಿ ಕರೆಯುತ್ತಿದ್ದಾಳೆ. ಮಹಡಿಯ ಮೇಲೆ : ಬಾರ್ಗಿ ತಮ್ಮ ಪಿ ಎ, ಮೀರಾ ರವರ ಜೊತೆ ನಿರಂಜನನ  ವಿಷಯ ಏನಾಯಿತು ಅಂತ ಸಮಾಲೋಚಿಸುತ್ತಿದ್ದಾರೆ. ಅಷ್ಟರಲ್ಲೇ ದೂತ ಚರಣಮೂರ್ತಿ ಓಡಿಬಂದು ಬಾಸ್ ಗೆ ವರದಿ ಒಪ್ಪಿಸುತ್ತಾನೆ.  ನಿರಂಜನ ಅಂಗಡಿಹತ್ರ ಬಂದಿಲ್ಲ. ಗ್ಯಾಂಗ್ ನವರು ಕಾದು ,ನಿಂತಿದಾರೆ  ಗಾಡಿ ನಿಲ್ಲಿಸಿ ಕಾಯ್ತಾ ಇದ್ದಾರೆ. ನಿರಂಜನ   ತನ್ನ ಫೋನ್ ಸ್ವಿಚ್ ಆಪ್ ಮಾಡಿದಾನೆ   ನಿರಂಜನ ಪತ್ತೆ ಇಲ್ಲ. ಟೆನ್ಷನ್ ಹೆಚ್ತಾ ಇದೆ ಸರಿ,  ಬಾರ್ಗಿ,ಮಿರಾ ಗೊಂದಲಕ್ಕೆ ಈಡಾಗುತ್ತಾರೆ. ಒಂದೂ  ಅರ್ಥ ಆಗ್ತಿಲ್ಲ ಭಾರ್ಗಿ ಮೀರರನ್ನು ತಮ್ಮ ಜೊತೆ ಊಟಮಾಡಲು ಕರಕೊಂಡು ಬರ್ತಾರೆ. ಬಾರ್ಗಿ ತಮ್ಮ ಉದ್ವಿಗ್ನತೆಯನ್ನು ಬದಿಗೊತ್ತಿ, ನಗುಮುಖವಾಡವನ್ನು ಹಾಕಿಕೊಂಡು   ೯

ದೀಪಾವಳಿ ಹಬ್ಬದ ಮಹತ್ವ :

 ದೀಪಾವಳಿ ಹಬ್ಬ,  ಕೇವಲ ಪಟಾಕಿಗಳನ್ನೂ ಹಚ್ಚಿಇಲ್ಲವೇ ದೀಪಮಾಲೆಗಳನ್ನು ಪ್ರಜ್ವಲಿಸಿ  ಸಂಭ್ರಮಿಸುವ ದಿನವೊಂದೇ ಅಲ್ಲ. ದೀಪಾವಳಿಗೆ ಕೌಮುದಿ ಉತ್ಸವ್  ಭಾಯೀದೂಜ್ , ಧನ್ ತೇರಾಸ್,  ಎನ್ನುವ ಹೆಸರುಗಳೂ ಇವೆ. ೦೫, ನವೆಂಬರ್,  ೨೦೧೮,  ತ್ರಯೋದಶಿ  ಧನ್ ತೇರಾಸ್ ನೀರು ತುಂಬುವ ಹಬ್ಬ.  ೦೬,ನವೆಂಬರ್, ೨೦೧೮, . ನರಕ ಚತುರ್ದಶಿ  ೦೭, ನವೆಂಬರ್, ೨೦೧೮, . ಅಮಾವಾಸ್ಯೆ ದೀಪಾವಳಿ ಲಕ್ಷ್ಮಿ ಪೂಜೆ  ೦೮, ನವೆಂಬರ್ ಬಲಿಪಾಡ್ಯಮಿ ವಿಕ್ರಮ ಶೇಕ್, ಮಹಾವೀರ ಶೇಕ್ ಗೋವರ್ಧನ್ ಪೂಜೆ   ಬಿದಿಗೆ ಭಾಯ್ ದೂಜ್   ತಧಿಯ   ದೀಪಾವಳಿಯ ಮೊದಲನೆಯ ದಿನ ಬಲಿಪಾಡ್ಯಮಿ  ಇಂದಿನ   ಬಲೀಂದ್ರಪೂಜೆಯನ್ನು ಆಚರಿಸುತ್ತಾರೆ. ಇದರ ಪೌರಾಣಿಕ ಹಿನ್ನೆಲೆಯು ಹೀಗಿದೆ. ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ.  ಆತನ ಮಗ ವಿರೋಚನ. ವಿರೋಚನನ ಪುತ್ರನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ. ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ ರಜೋತ್ತಮಗುಣಪ್ರಬಲನಾಗಿದ್ದನು. ಅಂದರೆ ತನ್ನ ಹಿಂಸಾ ಪ್ರವೃತ್ತಿಯನ್ನು ಬಿಡುತ್ತಿರಲಿಲ್ಲ.  ಆದರೆ ರಾಕ್ಷಸೀ ಪ್ರವೃತ್ತಿ ಅವನನ್ನು ಒಬ್ಬ ಹಿಂಸಕನನ್ನಾಗಿ ಮಾಡಿತು  ಋಷಿಗಳ ತಪಸ್ಸಿಗೆ ಭಂಗ ಮಾಡುವುದು ಅವರ  ಯಜ್ಞಯಾಗಾದಿಗಳಿಗೆ ತೊಂದರೆ  ಋಷಿಪತ್ನಿಯರಿಗೆ ಹಿಂಸೆ ಇದನ್ನು ಸಹಿಸಲಾರದೆ   ಋಷಿಗಳು ಬಲಿಯನ್ನು ಕೊಲ್ಲಲು ವಿಷ್ಣುಪರಮಾತ್ಮನಲ್ಲಿ ಮೊರೆ ಇಟ್ಟರು. ಬಲಿಚಕ್ರವರ್ತಿಗೆ ಅಶ್ವಮೇಧಯಾಗ ಮಾಡಿದನು ಆ ಸಮಯದಲ್ಲಿ ಬಂದವರಿಗೆ
ಪತ್ರಿಕಾವೃತ್ತಿ  ಅದರ ಮಾಲೀಕರ ನೀತಿಯಮೇಲೆ ಅವಲಂಭಿತವಾಗಿರುತ್ತದೆ. ಜೀವನ  ಆ ಸಂಸ್ಥೆಗಳಲ್ಲಿ ಕೆಲಸಮಾಡುವ ಕಾರ್ಯಕರ್ತರ  ಭದ್ರತೆ ಕಡಿಮೆ. ಮಾಲೀಕರು ತಮ್ಮ ಅಭಿಪ್ರಾಯಗಳಿಗೆ ಮಹತ್ವಕೊಡುತ್ತಾರೆ.ಆದರೂ  ಹಾರ್ನಿಮನ್ ಪತ್ರಿಕೋದ್ಯಮವನ್ನೇ ತಮ್ಮ ಉದ್ಯೋಗ ಕ್ಷೇತ್ರವನ್ನಾಗಿ ಆರಿಸಿಕೋಂಡರು. ಅದರ ಮೂಲಕ ತಮ್ಮ  ತಾಯಿನಾಡಾದ ಬ್ರಿಟನ್ ಮಾಡಿರುವ ಅಪರಾಧಗಳನ್ನು  ಸರಿಪಡಿಸಬೇಕೆಂದು ನಿಶ್ಚಯಿಸಿ  ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.  ಹಾರ್ನಿಮನ್ನರ  ಬರವಣಿಗೆ ಬಹಳ ವಿಶಿಷ್ಟ ಶೈಲಿಯದಾಗಿತ್ತು . ಭಾರತೀಯ ದಂಡಸಂಹಿತೆ (ಇಂಡಿಯನ್ ಪೀನಲ್ ಕೋಡ್) ಮತ್ತು ರಾಜ್ಯದ್ರೋಹ ಕಾನೂನಿನ ಮೇಲೆ ಅಧಿಕಾರಯುತ ಪರಿಶ್ರಮ ಪಡೆದಿದ್ದರು. ಭಾರತಕ್ಕೆ ಬಂದಮೇಲೆ ಸ್ಥಳೀಯರ  ಔದಾರ್ಯ, ಸರಳತೆಗಳು ಅವರಿಗೆ ಮೆಚ್ಚುಗೆಯಾಯಿತು . ಭಾರತೀಯರ  ಸಮಸ್ಯೆಗಳನ್ನು ಅಭ್ಯಾಸಮಾಡಿ ಅರ್ಥಮಾಡಿಕೊಂಡರು. ೧೮೫೭ರಲ್ಲಿ ನಡೆದ ಮೊದಲ ಸ್ವಾತಂತ್ರ ಸಂಗ್ರಾಮದ  ವೈಫಲ್ಯತೆಯ ಬಗ್ಗೆ  ಕಾರಣಗಳನ್ನು ಕುರಿತು ಅಭ್ಯಾಸಮಾಡಿದರು. ಹಾರ್ನಿಮನ್   ಇಂಗ್ಲಂಡಿನಲ್ಲಿ ಪತ್ರಕರ್ತರಾಗಿ ಕೆಲ್ಸಮಾಡುತ್ತಿದ್ದಾಗಲೇ ಮಾನವ ಹಕ್ಕುಗಳ ರಕ್ಷಣೆಗಾಗಿ  ಲೇಖನಗಳನ್ನು ಪ್ರಕಟಿಸಿ  ಅಲ್ಲಿನ ರಾಜ ರಾಣಿಯರ ಆಡಳಿತವನ್ನು ಖಂಡಿಸಿದ್ದರು ಅವರ ಉನ್ನತ  ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಭಾರತ ಸೂಕ್ತವಾದ ಸ್ಥಳವೆಂದು ಮನವರಿಕೆಯಾಯಿತು. ಆಗ ಮುಂಬಯಿ ನಗರದಲ್ಲಿದ್ದ ಇಂಗ್ಲಿಷ್ ದಿನಪತ್ರಿಕೆಗಳೆಲ್ಲಾ ಬ್ರಿಟಿಷ್ ಸರಕಾರದ ಅಧೀನದಲ್ಲ