Posts

Showing posts from August, 2018
ಪಂಡಿತರಲ್ಲದವರಿಗೆ ಭಾರತದ ಉದ್ಗ್ರಂಥಗಳು ಕಬ್ಬಿಣದ ಕಡಲೆಯಾಗಿತ್ತು ವಿದೇಶಿಯರೂ  ಬಹಳ ಆಸಕ್ತರಾಗಿದ್ದು ಅವರಿಗೆ ಸುಲಭವಾಗಿ ಅರ್ಥ ತಿಳಿಸಬಲ್ಲ ವ್ಯಕ್ತಿಗಳು ವಿರಳವಾಗಿದ್ದರು. ಆ ಸಮಯದಲ್ಲಿ ಚಿನ್ಮಯಾನಂದರು ಮಾಡಿದ ಕಾರ್ಯ ಅಮೋಘವಾದದ್ದು.  ಭಗವದ್ಗೀತೆಯನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ಬೋಧಿಸಿ ಅದನ್ನು ಜನಪ್ರಿಯಮಾಡಿದರು  ಸ್ವಾಮಿ ಚಿನ್ಮಯಾನಂದರು  ( ಮೇ ೮ ,  ೧೯೧೬  -  ಅಗಸ್ಟ್ ೩ ,  ೧೯೯೩ ). ‘ಭಗವದ್ಗೀತೆ’ಯನ್ನು ನಮ್ಮ ದಿನಚರಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಮನವರಿಕೆ ಮಾಡಿಕೊಟ್ಟ ಮಹನೀಯರು ಅವರು ಪಂಚಮವೇದವೆಂದೇ ಹೆಸರಾದ  ‘ಭಗವದ್ಗೀತೆ’ಯ ಕುರಿತಾದ ಗೀತಾಜ್ಞಾನ ಯಜ್ಞಗಳೆಂಬ ಉಪನ್ಯಾಸಗಳು, ಪುಸ್ತಕಗಳು ಹೀಗೆ ಭಗವದ್ಗೀತೆಯಲ್ಲಿ ಮತ್ತು ಭಾರತೀಯ ಅಧ್ಯಾತ್ಮಿಕ ತತ್ವದಲ್ಲಿ ಜನಾಸಕ್ತಿಯನ್ನು ಮೂಡಿಸಿದ ಸೇವೆಗಳು ಅದ್ವಿತೀಯವಾದದ್ದು. ವಿದ್ಯಾಭ್ಯಾಸ :  ಕೊಚ್ಚಿಯಶ್ರೀ ರಾಮವರ್ಮ ಹೈ ಸ್ಕೂಲ್ (೧೯೨೧-೧೯೨೮) ಎಫ್. ಎ ; ವಿವೇಕೋದಯಂ ಸ್ಕೂಲ್ ತ್ರಿಶೂರ್ (೧೯೨೮-೧೯೩೨) ಮಹಾರಾಜಾ ಕಾಲೇಜ್ ಎರ್ನಾಕುಲಂ (೧೯೩೨-೩೪) ಬಿ. ಎ , ಸೇಂಟ್ ಥಾಮಸ್ ಕಾಲೇಜ್ ತ್ರಿಶೂರ್ (೧೯೩೫-೧೯೩೭) ಇಂಗ್ಲಿಷ್ ಸಾಹಿತ್ಯ ಮತ್ತು ಕಾನೂನಿ ನಲ್ಲಿ ಸ್ನಾತಕೋತ್ತರ ಪದವಿ,  ಲಕ್ನೋ ವಿಶ್ವವಿದ್ಯಾಲಯ (೧೯೪೦-೧೯೪೩) ಪತ್ರಿಕೋದ್ಯಮ  ೧೯೩೬ ನಲ್ಲಿ ರಮಣ  ಮಹರ್ಷಿ  (೧೮೭೯-೧೯೫೦) ಯವರನ್ನು ಭೆಟ್ಟಿಮಾಡಿದರು.  ವಡಕ್ಕೆ ಕರುಪ್ಪತ್ತ ಕುಟ್ಟ

Gandhi Smruti :

Image
                                      ಗಾಂಧಿ ಸ್ಮೃತಿ :       Courtesy :  An Autobiography or The Story of my experiments with truth          By : M. K. Gandhi. (Transalted to kannada language, by HRL) (ಈಗ ನನಗೆ ಲಭ್ಯವಾದ ಪುಸ್ತಕದ ಪ್ರಕಾರ ಶ್ಲೋಕದ ಅರ್ಥ-ತಾತ್ಪರ್ಯಗಳನ್ನು ಕೊಟ್ಟಿದ್ದೇನೆ.  : ಶ್ರೀಮದ್ ಭಗವದ್ಗೀತಾ -ಸ್ವಾಮಿ ಆದಿ ದೇವಾನಂದ, ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು)           'ನಮ್ಮ ಮತ, ಹಾಗೂ ಪವಿತ್ರ ಗ್ರಂಥಗಳ ಬಗ್ಗೆ ನನಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ' ಮೋಹನ ದಾಸ ಕರಮಚಂದ ಗಾಂಧಿಯವರು, ಗುಜರಾತಿನ ಒಂದು ವೈಷ್ಣವ ಸಂಪ್ರದಾಯದ ಪರಿವಾರದಲ್ಲಿ ಜನಿಸಿದವರು. ಅವರ ಮನೆಯಲ್ಲಿ  ತಾಯಿಯವರು ಪ್ರತಿದಿನವೂ ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸದೆ ಊಟ ಮಾಡುತ್ತಿರಲಿಲ್ಲ.  ಭಾರತೀಯ ಪರಂಪರೆಯ ದೇವತಾ ಪೂಜೆ-ಪುನಸ್ಕಾರ  ಉಪವಾಸ, ಭಜನೆ, ವ್ರತ, ನೇಮ, ಮೊದಲಾದ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಮನೆಯಲ್ಲಿ ಅವರ ಪರಿವಾರದವರಿಗೂ ಅದೇ ರೀತಿ ನಡೆಯಲು ಒತ್ತುಕೊಡುತ್ತಿದ್ದರು. ಎಂ. ಕೆ. ಗಾಂಧಿಯವರು  ಚಿಕ್ಕವಯಸ್ಸಿನಲ್ಲೇ ಮದುವೆಯಾದರು. ಅವರು ಸಂಸ್ಕೃತವಾಗಲಿ ಅಥವಾ ಅವರ ಮಾತೃಭಾಷೆಯಾದ  ಗುಜರಾತಿಯಲ್ಲಾಗಲಿ ಯಾವ ಧರ್ಮಗ್ರಂಧಗಳನ್ನು ಅಭ್ಯಾಸ ಮಾಡಿರಲಿಲ್ಲ. ಆ ಗ್ರಂಥಗಳನ್ನು ಓದಿ ಅರ್ಥಮಾಡಿಕೊಳ್ಳುವ ವಯಸ್ಸೂ ಅವರದಾಗಿರಲಿಲ್ಲ. ಆಗಾಗ ಭಗವದ್ಗೀತೆಯ
'''ಗಲ್ ಪಕ್ಷಿಗಳು''', Laridae ಎಂಬ ಪಕ್ಷಿ ಪ್ರಜಾತಿಗೆ ಸೇರಿವೆ. ಎಂದು ವರ್ಗಿಕರಣ ಮಾಡಲಾಗಿದೆ ಗಲ್  ಆರ್ಕಟಿಕ್ ಟರ್ನ್ ಎನ್ನುವ ಹಕ್ಕಿಯ ಸಂಬಂಧಿ.   ಹಲವಾರು ಸಾಗರದ ಹಕ್ಕಿಗಳ ಸಾಲಿನಲ್ಲಿರುವ ಪಕ್ಷಿ.ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿರುವ ಸರ್ವೇ ಸಾಮಾನ್ಯವಾದ ಹೆಸರು. ಸುಮಾರು  ೪೦ ಪ್ರಜಾತಿಗಳಿವೆ.  ಉತ್ತರ ಅಮೇರಿಕದಲ್ಲಿ ಸಮಶೀತೋಷ್ಣ ವಲಯ ಉಷ್ಣಪ್ರದೇಶಗಳಲ್ಲಿ  ಕಂಡುಬರುತ್ತದೆ. ನಾನು ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಗಲ್ ಹಕ್ಕಿಗಳ ಪ್ರಭೇದಗಳಲ್ಲಿ ಕೆಲವು ಸಮಾನತೆ ಕಾಣಬಹುದು ಕಟ್ಟುಮಸ್ತಾದ ದೇಹ ದಷ್ಟಪುಷ್ಟವಾದ ರೆಕ್ಕೆಗಳು ಸ್ವಲ್ಪ ಹಾಗಿದ ಕೊಕ್ಕು ಜಾಲಪಾದ  ಮೊದಲಾದವುಗಳು ಬಿಳಿ ಬಣ್ಣ ಸರ್ವೇ ಸಾಮಾನ್ಯ ಆದರೆ ಕೆಲವು ಪ್ರಜಾತಿಗಳಲ್ಲಿ ತಲೆ, ಬೆನ್ನು ರೆಕ್ಕೆ, ಕಪ್ಪು, ಬೂದುಬಣ್ಣ ಕಂದು ಸಾಮಾನ್ಯವಾಗಿ ಮರಿಹಕ್ಕಿಗಳು ಕಂದು . ಕಂದುಬಣ್ಣಕ್ಕಿರುವ ಮರಿಹಕ್ಕಿ ವರ್ಷಕ್ಕೆರಡು ಸಲ ತನ್ನ ಗರಿಗಳನ್ನು ಬದಲಿಸುತ್ತದೆ, ದೇಹದ ಗರಿಗಳು ಉದುರಿದಾಗ ಬಣ್ಣ ಕಂದಿನಿಂದ  ತುಸು  ಮಾಸಿದ ಬಣ್ಣಕ್ಕೆ ತಿರುಗಿ, , ೨-೩ ವರ್ಷಗಳ ಬಳಿಕ ಬಿಳಿಯ ಬಣ್ಣವನ್ನು ಪಡೆಯುತ್ತವೆ. ಗಲ್ ಗಳು  ಗಾಳಿಯಲ್ಲಿ ಹದ್ದಿನಂತೆ ತೇಲುತ್ತ ಸಾಗುತ್ತವೆ. (ಆದರೆ ಹದ್ದಿನಂತೆ ಮುಗಿಲಿನಲ್ಲಿ ಅತಿ ಎತ್ತರದಲ್ಲಿ ಹಾರುವ ಶಕ್ತಿಯನ್ನು ಪಡೆದಿಲ್ಲ) ಸಮುದ್ರತೀರದಲ್ಲಿ ವಾಸ. ಹೊಲ, ಮೊದಲಾದ ಕಡೆ ನೆಲದಲ್ಲಿ ಹೆಕ್ಕಿ ಚಿಕ್ಕ ಕ್ರಿಮಿಕೀಟಗಳನ್ನು ತಿನ್ನಲು ಇಷ್ಟಪಡ