Posts

Showing posts from November, 2018

ಮೊದಲಿನ ದುರ್ಬಲ ಜಾನಕಿಯಾಗದೆ ಹೊಸಜಾನಕಿಯಾಗಬೇಕೆನ್ನುವ ಹಂಬಲ !

೩೦, ನವೆಂಬರ್, ೨೦೧೮ ರ  ಸೀತಾರಾಂ ವಿರಚಿತ, ಮಗಳು ಜಾನಕಿ ಧಾರಾವಾಹಿಯ  ೧೧೦ ನೆಯ ಕಂತು.  ! ಅರ್ಧ ಸತ್ಯ, ಪೂರ್ಣ ಸತ್ಯಾನ್ವೇಷಣೆ ಮಾಡುತ್ತಾ ಸಾಗುತ್ತಿರುವ ಮಗಳು ಜಾನಕಿ ಧಾರಾವಾಹಿಯ, ನಾಯಕಿ  ಜಾನಕಿ ಮನೆಬಿಟ್ಟು ಹೊರಗೆ ಹೋಗಿ ಸ್ವತಂತ್ರವಾಗಿ ಹೋರಾಡಬೇಕು, ಮೊದಲಿನ ದುರ್ಬಲ ಜಾನಕಿಯಾಗದೆ ಹೊಸಜಾನಕಿಯಾಗಬೇಕೆನ್ನುವ ಜೀವನವನ್ನೆದುರುಸುತ್ತಾ ಸತ್ಯದರ್ಶಮಾಡಬೇಕೆನ್ನುವ ಹಂಬಲ ಹೊಂದಿದ್ದಾಳೆ ! ತಂದೆ ಬಾರ್ಗಿ, ಮತ್ತು ಪತಿ, ನಿರಂಜನರ ನಡುವೆ ಆದ ಘಟನೆಯಿಂದ  ಜಾನಕಿ' ಡಿಸ್ಟರ್ಬ್' ಆಗಿ್ದಾರೆ. ನಿರಂಜನನ ಮೇಲೆ ಕೈಮಾಡಿ ರಕ್ತಬರುವಂತೆ ಹೊಡೆದದ್ದುಅವಳ ಮನಸ್ಸಿಗೆ ಬಹಳ ಆಘಾತವಾಗಿದೆ. ಇತರಹದ ಘರ್ಷಣೆಗಳು ಏಕೆ ಆಗುತ್ತಿವೆ. ಯಾರು ಸರಿ, ಯಾರು ತಪ್ಪು ಎನ್ನುವ  ಮೂಲ ಅರಿಯಲು ಮನೆ ಬಿಟ್ಟು ದೂರಹೋಗಬೇಕು. ಸ್ವತಂತ್ರವಾಗಿ ಜೀವನವನ್ನು ಎದುರಿಸಬೇಕೆನ್ನುವ ಅವಳ ನಿರ್ಧಾರ  ! ಒಂಟಿಯಾಗಿರುವಾಗ ಇವುಗಳ ಸತ್ಯ ಕಾಣಿಸಬಹುದೇನೋ !? ಬಾರ್ಗಿಯವರು,  ನಿಮ್ಮಪ್ಪ ಸರಿಯೇ ? ಅಥವಾ  ನಿರಂಜನ ಸರಿಯೇ ? ಎಂದು ಕೇಳಿದಾಗ, "ನೀವು ನಿಮ್ಮ  ಎಷ್ಟೋ ಆಪ್ತರನ್ನು  ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದೀರಿ;  ನಂಬಿದರಿಗೆ ದ್ರೋಹ ಎಸಗಿದ್ದೀರಿ.  ಹಾಗೆಯೇ ಮಗಳಿಗೂ ಏಕೆ ದ್ರೋಹ ಮಾಡಿರಬಹುದು "? ನಾನು ಸ್ವಂತ ಮಗಳಾಗಿಯೂ ನನಗೇಕೆ ಹೀಗೆ ಮಾಡಿದಿರಿ ? ಎನ್ನುವ ಪ್ರಶ್ನೆಯಿಂದ ಬಾರ್ಗಿಯವರು  ತತ್ತರಿಸಿಹೋಗುತ್ತಾರೆ. ನಿರಂಜನ ಒಂದು ವರ್ಷ ದೂರಕ್ಕೆ ಹೋಗ

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ ಮಗಳು ಜಾನಕಿ ಧಾರಾವಾಹಿಯ ವರದಿ !

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ ಮಗಳು ಜಾನಕಿ ಧಾರಾವಾಹಿಯ ವರದಿ : ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ  ಟೆಲಿವಿಷನ್ ನ ಕನ್ನಡ ಸೀರಿಯಲ್ ಮಗಳು ಜಾನಕಿಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ. ಬಾರ್ಗಿಯವರ ಮನೆಯಲ್ಲಿ ರಾತ್ರಿ ಊಟದ ಡೈನಿಂಗ್ ಟೇಬಲ್ ಬಳಿ ಊಟಕ್ಕೆ ಎಲ್ಲರೂ ಕೂತಿದ್ದಾರೆ (ಜಾನಕಿ ಚಂಚಲ ರಷ್ಮಿಯರು) ಊಟ  ಮಾಡುವ ಸಮಯ. ಈಗಾಗಲೇ ಗಡಿಯಾರ ೯-೧೫ ತೋರಿಸ್ತಾ ಇದೆ. ಮಗಳು ಚಂಚಲೆ "ಪಪ್ಪಾ ಊಟಕ್ಕೆ ಬನ್ನಿ"  ಅಂತ ಮಹಡಿಯಮೇಲಿರುವ ತಂದೆ ಬಾರ್ಗಿಯವರನ್ನು ಕೂಗಿ ಕರೆಯುತ್ತಿದ್ದಾಳೆ. ಮಹಡಿಯ ಮೇಲೆ : ಬಾರ್ಗಿ ತಮ್ಮ ಪಿ ಎ, ಮೀರಾ ರವರ ಜೊತೆ ನಿರಂಜನನ  ವಿಷಯ ಏನಾಯಿತು ಅಂತ ಸಮಾಲೋಚಿಸುತ್ತಿದ್ದಾರೆ. ಅಷ್ಟರಲ್ಲೇ ದೂತ ಚರಣಮೂರ್ತಿ ಓಡಿಬಂದು ಬಾಸ್ ಗೆ ವರದಿ ಒಪ್ಪಿಸುತ್ತಾನೆ.  ನಿರಂಜನ ಅಂಗಡಿಹತ್ರ ಬಂದಿಲ್ಲ. ಗ್ಯಾಂಗ್ ನವರು ಕಾದು ,ನಿಂತಿದಾರೆ  ಗಾಡಿ ನಿಲ್ಲಿಸಿ ಕಾಯ್ತಾ ಇದ್ದಾರೆ. ನಿರಂಜನ   ತನ್ನ ಫೋನ್ ಸ್ವಿಚ್ ಆಪ್ ಮಾಡಿದಾನೆ   ನಿರಂಜನ ಪತ್ತೆ ಇಲ್ಲ. ಟೆನ್ಷನ್ ಹೆಚ್ತಾ ಇದೆ ಸರಿ,  ಬಾರ್ಗಿ,ಮಿರಾ ಗೊಂದಲಕ್ಕೆ ಈಡಾಗುತ್ತಾರೆ. ಒಂದೂ  ಅರ್ಥ ಆಗ್ತಿಲ್ಲ ಭಾರ್ಗಿ ಮೀರರನ್ನು ತಮ್ಮ ಜೊತೆ ಊಟಮಾಡಲು ಕರಕೊಂಡು ಬರ್ತಾರೆ. ಬಾರ್ಗಿ ತಮ್ಮ ಉದ್ವಿಗ್ನತೆಯನ್ನು ಬದಿಗೊತ್ತಿ, ನಗುಮುಖವಾಡವನ್ನು ಹಾಕಿಕೊಂಡು   ೯

ದೀಪಾವಳಿ ಹಬ್ಬದ ಮಹತ್ವ :

 ದೀಪಾವಳಿ ಹಬ್ಬ,  ಕೇವಲ ಪಟಾಕಿಗಳನ್ನೂ ಹಚ್ಚಿಇಲ್ಲವೇ ದೀಪಮಾಲೆಗಳನ್ನು ಪ್ರಜ್ವಲಿಸಿ  ಸಂಭ್ರಮಿಸುವ ದಿನವೊಂದೇ ಅಲ್ಲ. ದೀಪಾವಳಿಗೆ ಕೌಮುದಿ ಉತ್ಸವ್  ಭಾಯೀದೂಜ್ , ಧನ್ ತೇರಾಸ್,  ಎನ್ನುವ ಹೆಸರುಗಳೂ ಇವೆ. ೦೫, ನವೆಂಬರ್,  ೨೦೧೮,  ತ್ರಯೋದಶಿ  ಧನ್ ತೇರಾಸ್ ನೀರು ತುಂಬುವ ಹಬ್ಬ.  ೦೬,ನವೆಂಬರ್, ೨೦೧೮, . ನರಕ ಚತುರ್ದಶಿ  ೦೭, ನವೆಂಬರ್, ೨೦೧೮, . ಅಮಾವಾಸ್ಯೆ ದೀಪಾವಳಿ ಲಕ್ಷ್ಮಿ ಪೂಜೆ  ೦೮, ನವೆಂಬರ್ ಬಲಿಪಾಡ್ಯಮಿ ವಿಕ್ರಮ ಶೇಕ್, ಮಹಾವೀರ ಶೇಕ್ ಗೋವರ್ಧನ್ ಪೂಜೆ   ಬಿದಿಗೆ ಭಾಯ್ ದೂಜ್   ತಧಿಯ   ದೀಪಾವಳಿಯ ಮೊದಲನೆಯ ದಿನ ಬಲಿಪಾಡ್ಯಮಿ  ಇಂದಿನ   ಬಲೀಂದ್ರಪೂಜೆಯನ್ನು ಆಚರಿಸುತ್ತಾರೆ. ಇದರ ಪೌರಾಣಿಕ ಹಿನ್ನೆಲೆಯು ಹೀಗಿದೆ. ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ.  ಆತನ ಮಗ ವಿರೋಚನ. ವಿರೋಚನನ ಪುತ್ರನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ. ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ ರಜೋತ್ತಮಗುಣಪ್ರಬಲನಾಗಿದ್ದನು. ಅಂದರೆ ತನ್ನ ಹಿಂಸಾ ಪ್ರವೃತ್ತಿಯನ್ನು ಬಿಡುತ್ತಿರಲಿಲ್ಲ.  ಆದರೆ ರಾಕ್ಷಸೀ ಪ್ರವೃತ್ತಿ ಅವನನ್ನು ಒಬ್ಬ ಹಿಂಸಕನನ್ನಾಗಿ ಮಾಡಿತು  ಋಷಿಗಳ ತಪಸ್ಸಿಗೆ ಭಂಗ ಮಾಡುವುದು ಅವರ  ಯಜ್ಞಯಾಗಾದಿಗಳಿಗೆ ತೊಂದರೆ  ಋಷಿಪತ್ನಿಯರಿಗೆ ಹಿಂಸೆ ಇದನ್ನು ಸಹಿಸಲಾರದೆ   ಋಷಿಗಳು ಬಲಿಯನ್ನು ಕೊಲ್ಲಲು ವಿಷ್ಣುಪರಮಾತ್ಮನಲ್ಲಿ ಮೊರೆ ಇಟ್ಟರು. ಬಲಿಚಕ್ರವರ್ತಿಗೆ ಅಶ್ವಮೇಧಯಾಗ ಮಾಡಿದನು ಆ ಸಮಯದಲ್ಲಿ ಬಂದವರಿಗೆ