Posts

Showing posts from December, 2018
ಎಪಿಸೋಡ್ ೧೨೩. (ಮ. ಜಾ.ಧಾರವಾಹಿ, ೧೯,ಡಿಸೇಂಬರ್ ೨೦೧೮) ಒಟ್ಟಾರೆ ಕತೆ ಬಹಳ ರೋಚಕವಾಗಿ, ನಂಬಲಾರ್ಹವಾಗಿ  ಮುಂದುವರೆಯುತ್ತಿದೆ. ಚಂದು  ಬಾರ್ಗಿಯವರು  ತಂದೆ ಶಂಕರ ದೇವಘಟ್ಟ, ಮಗ ಸುಹಾಸ್ ದೇವಘಟ್ಟರ  ನಡುವೆ ಭಿನ್ನಾಭಿಪ್ರಾಯದ ವಿಷ ಬೀಜ ಬಿತ್ತಿ ಅವರಿಬ್ಬರ ನಡುವೆ  ಜಗಳ ಆಡಿಸಿ ತನ್ನ ಕೆಲಸ ಸಾಹಿಸಿದ್ದಾರೆ ಚಂದು ಭಾರ್ಗಿಯವರ ಕುಟಿಲತೆಯಿಂದ ಶಂಕರದೇವಘಟ್ಟರಂತಹ ನಿಸ್ಪೃಹ ಶಿಕ್ಷಣ ಸಂಸ್ಥೆಯ ನಿರ್ಮಾಪರು, ರಾಜೀನಾಮೆ ಕೊಡುವ ಬೆಳವಣಿಗೆಯಿಂದ  ಜಾನಕಿ  ತನ್ನ ಪಿ. ಎ. ಪೋಸ್ಟ್ ಗೆ  ರಾಜೀನಾಮೆ ಕೊಡಲು ವಿವಶಳಾಗುತ್ತಾಳೆ.  ಸುಹಾಸ್ ಜಾನಕಿಗೆ, "ನಿಮಗೆ  ಕೆಲ್ಸ ಬೇಕೇ  ಬೇಕು ಅನ್ನಿಸಿದರೆ, ಹೊಸ ಮ್ಯಾನೇಜಿಂಗ್ ಟ್ರಸ್ಟಿಯವರ ಕಚೇರಿಯಲ್ಲಿ ಸೆಕ್ರೆಟರಿಯಾಗಿ ಮುಂದುವರೆಯ ಬೇಕಾಗುತ್ತೆ.  ನೋಡಿ " ತಿಂಗಳಿಗೆ  ೬೦ ಸಾವಿರ ರೂಪಾಯಿ ವೇತನ ಮತ್ತು ವಸತಿ ಸೌಕರ್ಯ ಕೊಡುವುದಾಗಿ ಹೇಳಿದ ಭಾರ್ಗಿಯವರ  ಮಾತಿಗೆ  ಸೊಪ್ಪುಹಾಕದೆ, "ನನಗೆ ನೌಕರಿ ಬೇಡ", ಎಂದು ಹೇಳಿ ಹೊರಡುತ್ತಾಳೆ, ಸ್ವಾಭಿಮಾನಿ ಜಾನಕಿ ಪುಟ್ಟ. ಎನೇನೋಬೆಳವಣಿಗೆಗಳು : ಬಾರ್ಗಿಯವರು ಸಿಎಮ್.ರವರನ್ನು ಭೇಟಿಮಾಡಿ, ದೇವಘಟ್ಟದ ರೂರಲ್ ಶಿಕ್ಷಣ ಸಂಸ್ಥೆಗೆ ಮ್ಯಾನೇಜಿಂಗ್ ಟ್ರಸ್ಟಿ ಪದವಿ ಬಿಟ್ಟುಕೊಟ್ಟ ಅಚ್ಚರಿಯನ್ನು  ವಿವರಿಸುವ ಮೊದಲೇ ಸಿ.ಎಮ್. ಗೆ ಈ ವಿಷಯ ಗೊತ್ತಿರುತ್ತದೆ. ಸಿ.ಎಂ. ಇದನ್ನು ಅರ್ಥಮಾಡಿಕೊಳ್ಳಲು ಕಷ್ಟ ಪಡು ತ್ತಿರುವಾಗಲೇ, ಭಾರ್ಗಿಯವರು ತಮಗೆ ಬೇಗ ಮಂತ
೧೭ ನೇ ತಾರೀಖಿನ ಮಗಳು ಜಾನಕಿ ಧಾರಾವಾಹಿ ಸುಮಾರಾಗಿ  ಧಾರಾವಾಹಿಯ ಎಲ್ಲಾ ಒಳ  ಗುಟ್ಟುಗಳೂ ನಿಧಾನವಾಗಿ ಕಳಚಿಕೊಳ್ಳುತ್ತಿವೆ . ಜಾನಕಿ, ಶಂಕರ ದೇವಘಟ್ಟರ ಸ್ಕೂಲ್ ನಲ್ಲಿ ಕೆಲಸಮಾಡ್ತಿರೋದು ಅನ್ನೋ ವಿಷಯ ತಂದೆ ಚಂದು ಭಾರ್ಗಿಯವರಿಗೆ ಮಗಳ ಬಾಯಿನಿಂದಲೇ ತಿಳಿಯಿತು. ಜಾನಕಿ ವಾಸಿಸುವ ಜಾಗಾನೂ ತಿಳೀತು. ಜಾನಕಿಗೆ ಡಿ.ಎನ್.ಎಸ್. ರಾಜುನ  ನೋಡಿದ್ದಾಯಿತು .(ಆತನೇ ತನ್ನ ಅದೃಷ್ಟಹೀನ ಮಾವ ಆನ್ನೋ ವಿಶಯ ತಿಳಿಯದು ) ನಿರಂಜನನ ತಾಯಿ, ದೇವಕಿ, ಅಕ್ಕ ಸಂಜನಳನ್ನು  ನೋಡಿದಿದ್ದಾಗಿದೆ. ಅವರೇ ಅನ್ನ ಗಂಡನ ತಾಯಿ, ಹಾಗೂ  ಅಕ್ಕ ಅನ್ನೋ ವಿಷಯ ತಿಳ್ಕೊಳ್ಳಬೇಕಾಗಿದೆ. ತಾಯಿ ಮಗಳಿಗೂ ಜಾನಕಿಯ ಬಗ್ಗೆ ಗೊತ್ತಿಲ್ಲ ತಿಳಿಯದ ವಿಷಯಗಳೆಂದರೆ, ಶಂಕರದೇವಘಟ್ಟರಿಗೆ ತನ್ನ ಬಾಲ್ಯದ ಗೆಳೆಯ ಡಿ.ಎನ್.ಎಸ್.ರಾಜು ಕಷ್ಟದಲ್ಲಿದಾನೆ. ಆತನೇ ಜಾನಕಿಯ ಮಾವ ಅನ್ನೋ ವಿಚಾರ ಗೊತ್ತಾಗಬೇಕಿದೆ. ಸಿ.ಎಸ್.ಪಿ ಮತ್ತು ಶ್ಯಾಮಲಮ್ಮನಿಗೆ ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ನಿರಂಜನನೇ ನಿರಂಜನ್ ಧಾವಳಿ ಅನ್ನೋ ಸತ್ಯ ಗೊತ್ತಾದರೆ ಎಲ್ಲಾ ತಳಮೇಲಾಗುವ ಸಾಧ್ಯತೆ ಇರುತ್ತೆ ಇಂತಹ ಸಂದಿಗ್ದ  ಪರಿಸ್ಥಿತಿಯಲ್ಲಿ ಕತೆಯನ್ನು ಸಮತೋಲಿಸಿಕೊಂಡು  ಓಡಿಸಿಕೊಂಡು ಹೋಗುವುದು ಬಹಳ ಸವಾಲಿನ ಕೆಲಸ. ಈಗಾಗಲೇ ಪ್ರಸಿದ್ಧಿಯ ಶಿಖರದಲ್ಲಿರುವ ಟೀ.ಎನ್ ಸೀತಾರಾಮ್ ತಮ್ಮ ಕತೆಯ ಕೊನೆಯಲ್ಲಿ ಜಾನಕಿ, ಸಿ.ಎಸ್.ಪಿ. ಮಗಳು, ರಶ್ಮಿಯವರು  ಆಕೆಯ ತಾಯಿ  ಅನ್ನೋ ವಿಚಾರವನ್ನು ಪ್ರತಿಪಾದಿಸುವ  ಸೀನ್  ಹೇಗೆ ತೆರೆಯಮೇಲೆ ತ
೧೧೧ ನೆಯ ಎಪಿಸೋಡಿನ ಮಗಳು ಜಾನಕಿ, (೩ ಡಿಸೇಂಬರ್, ೨೦೧೮) ಇದನ್ನು ಪರಿಚಯದ ಕಂತೆಂದು ಹೇಳಬಹುದು. ಹೊಸ ಪಾತ್ರಗಳ ಪರಿಚಯ, ಅವರ ಮುಂದಿನ ಹೆಜ್ಜೆಗಳು. ಹಳೆವ್ಯಕ್ತಿಗಳ ಮುನ್ನೋಟಗಳು ಇತ್ಯಾದಿ. ಜಾನಕಿ ಮನೆಬಿಟ್ಟಬಳಿಕ ತನ್ನ ಗೆಳತಿ ಅದಿತಿಯ ಮನೆಗೆ ಹೋಗಲು ಬಸ್ಸಿನಲ್ಲಿ ಪ್ರಯಾಣಿಸುತ್ತಾಳೆ.  ಅವಳು ತಿಳಿಸಿದ ಶೋರೂಮ್ ಸೇಲ್ಸ್ ಕೆಲಸ ಜಾನಕಿಯ ಮನೋಧರ್ಮಕ್ಕೆ ಹಿಡಿಸುತ್ತಿಲ್ಲ. ಬೇಡವೆಂದು ನಿರಾಕರಿಸಿ ಪ್ರೀತಿಯ ಗೆಳತಿಯ ಮನಸ್ಸನ್ನು ನೋಯುಸುವುದು ಹರ್ಟ್ ಆಗುವಂತಹದು. ಡಾನ್ಸ್ ಟೀಚಿಂಗ್ ಕೆಲಸಕ್ಕೆ ಸೇರಲು ತುಂಬಾ ಸಮಯವಿದೆ. ತಲೆಯಲ್ಲಿ  ಏನು ಮಾಡಬೇಕೆಂಬ ನಿರ್ದಿಷ್ಟವಾದ ಪ್ಲಾನ್  ಇಲ್ಲ. ಬಸ್ಸಿನಿಂದ ಇಳಿದು ಜೇನುತೊರೆಗೆ ಹೋಗುವಾಗ  ಟ್ಯಾಕ್ಸಿಯಲ್ಲಿ ಇಬ್ಬರು ಸಹಪ್ರಯಾಣಿಕರ ಭೇಟಿಯಾಗಾತ್ತೆ. ಅವರು ಅವಳಿಗೆ ಅಪರಿಚಿತರು. ಆದರೆ ಪ್ರೇಕ್ಷಕರಾದ ನಮಗೆ ಗೊತ್ತು. ಅವರಲ್ಲೊಬ್ಬರು, ತನ್ನ ಗಂಡ ನಿರಂಜನನ ತಾಯಿ ಮತ್ತೊಬ್ಬರು ನಿರಂಜನನ ಅಕ್ಕ ಸಂಜನ (ಇವರನ್ನು ನೋಡುವ ನಾವೆಲ್ಲಾ ಕಾಯ್ತಿದ್ವಲ್ಲಾ)  ಮೂವರೂ ಮಾತಾಡುವಾಗ  ಜಾನಕಿಯ ಹೆಸರು ಗೊತ್ತಾಗದಂತೆ ಎಚ್ಚರಿಕೆ ವಹಿಸಿರುವುದು ನಿರ್ಮಾಪಕರ ಜಾಣ್ಮೆಯ  ವೇದ್ಯವಾಗುತ್ತೆ. ಸಂಜನ ಕೆಲಸಕ್ಕೆ ಪ್ರಯತ್ನಿಸಿದ್ದು ಸಿಗಲಿಲ್ಲ. ಹೆಚ್ಚಿನ ಸತ್ಯಸಂಧತೆಯಿಂದಾಗಿ. ಸಿ.ಎಸ್.ಪಿ.ಮನೆಯಲ್ಲಿ ಚೇತನ್ ಜೊತೆ ಮಾತುಕತೆ : ಸಿ.ಎಸ್.ಪಿ. ಮನೆಗೆ ಪ್ರಭಂಜನ ಚೇತನ್ ಹೋಗುತ್ತಾರೆ. ಚೇತನ್,  ನಿರಂಜನನೂ ಆ ಕಂಪೆನಿಗೆ ಸೇರಬಹುದು. ಎನ್ವಿರಾ