Posts

Showing posts from February, 2019

ಎಪಿಸೋಡ್ ನಂಬರ್ : ೧೫೮, ಮಗಳು ಜಾನಕಿ, ೬ ಫೆಬ್ರವರಿ, (ಬುಧವಾರ) ೨೦೧೯,

ಎಪಿಸೋಡ್ ನಂಬರ್ : ೧೫೮, ಮಗಳು ಜಾನಕಿ, ೬ ಫೆಬ್ರವರಿ, (ಬುಧವಾರ) ೨೦೧೯, ನಿನ್ನೆಯಿಂದ (ಫೆಬ್ರವರಿ ೫) ಮುಂದುವರೆದ ಕತೆ. ಕತೆ ನಡೆದದ್ದು ಹೀಗೆ (ನನಗನ್ನಿಸಿದಂತೆ) : ಸಿಎಸ್ಪಿಯವರು ನಿರಂಜನನ ಮಾತು ಕೇಳಿ (ಸಂತೋಷ್ ಶಾರ್ದೂಲ್  ರವರಿಗೆ ಎಲ್ಲಾ ವಿಷಯ ತಿಳಿಸಿದ ಬಗ್ಗೆ) ಗರಬಡಿದವರಂತಾಗಿ ಕೋಪದಿಂದ ಕಿಡಿಕಿಡಿಯಾದರು. 'ಈಡಿಯೆಟ್ ಯಾಕೋ ಹೇಳ್ದೆ ಸತ್ಯನಾ ಎಲ್ಲ ಬಿಟ್ಟು ಆಶಾರ್ದೂಲಂಗೆ, ಆತ ಉಪ್ಪುತಿಂದ ಮನೆಗೆ ಎರಡು ಬಗೆಯುವ ಸ್ವಭಾವದವನು.' 'ಫೋಲೀಸ್ ಡಿಪಾರ್ಟ್ಮೆಂಟ್ ಗೂ ಮೋಸಮಾಡಿದಾನೆ'. 'ಅವನು ಭಾರ್ಗಿಯವರ ಶಿಷ್ಯ; ನಾನು ಕಷ್ಟಪಟ್ಟು ಎಲ್ಲಾ ಎವಿಡೆನ್ಸ್ ಗಳನ್ನ ಕಲೆಹಾಕಿ ಆನಂದ್ ಬೆಳಗೂರ್ ರವರಿಗೆ ಹೇಳಿ ಅಂತ ಹೇಳಿದ್ರೆ ,ಎಲ್ಲಾ ಬಿಟ್ಟು ಆ ಸಂತೋಷ್ ಶಾರ್ದೂರಿಗೆ ಯಾಕ್ ಹೇಳಕ್ ಹೋದ್ರಿ' ? ಈಗ ಭಾರ್ಗಿ ಶಾರ್ದೂಲ್  ರಿಂದ ವಿಷ್ಯ ತಿಳಿದು ತನ್ನ ಎಲ್ಲಾ ತಪ್ಪುಗಳನ್ನೂ ಮುಚ್ ಹಾಕಕ್ಕೆ ಪ್ರಯತ್ನ ಮಾಡ್ತಾನೆ. 'ಜಾನಕಿಗೆ ಮೋಸಮಾಡಿದವರಿ ಶಿಕ್ಷೆ ಕೊಡಿಸೋಣ ಅಂದ್ರೆ ,ಎಲ್ಲಾ ಸಾಕ್ಷ್ಯಗಳನ್ನೂ ನಾಶಮಾಡ್ಬಿಟ್ರಲ್ರಿ' ? ಸಿಎಸ್ಪಿ : ಸ್ವಲ್ಪ ಕೋಪ ಶಾಂತವಾದ ಬಳಿಕ ಸಂಗ್ರಹಿಸಿದ ಎಲ್ಲಾ ಎವಿಡೆನ್ಸ್ ಗಳ ಪ್ರತಿಗಳಲ್ಲಿ ಒಂದನ್ನು ಆನಂದ್ ಬೆಳಗೂರ್ ರವರಿಗೆ ಮತ್ತು ಇನ್ನೊಂದನ್ನು ನನಗೆ ಕೊಡಿ. ಈಗ ಹೊರಡಿ. ಆನಂದ್ ಬೆಳಗೂರ್ ರಷ್ಮಿಯವರ ಮನೆಗೆ ಬಂದು ಆಕೆಯ ಹೇಳಿಕೆ ತೆಗೆದುಕೊಳ್ಳುತ್ತಾರೆ. ನಿರಂಜನ ಮದುವೆಯ ಮೊದಲೇ ನನಗೆ ಅ