Posts

Showing posts from March, 2020
ಮೈಸೂರು ಅಸೋಸಿಯೇಷನ್, ಮೈಸೂರು,  ಮತ್ತು ಗೀಗಿ ಎಂಟರ್‍ಟೈನ್‍ಮೆಂಟ್ ಜೊತೆಗೂಡಿ ಪದ್ಮಭೂಷಣ ಪುಟ್ಟರಾಜ ಗವಾಯಿಯವರ ಪುಣ್ಯಸ್ಮರಣೆಯನ್ನು ಭಾನುವಾರ  ೧, ಮಾರ್ಚ್ ೨೦೨೦ ರ ಸಂಜೆ  ಆಚರಿಸಲಾಯಿತು.  ಆ ದಿನದ  ಸಂಜೆಯ ಪ್ರಮುಖ ಗಾಯಕಿಯಾಗಿದ್ದ   ಶ್ರೀಮತಿ ಚಂದನಬಾಲಾರವರ  ಜೊತೆಗೆ   ಶ್ರೀ ವಿನಾಯಕ್ ಅವರು, ತಬಲಾದಲ್ಲಿ   ಗಿಟಾರ್‍ನ ಮೇಲೆ ಶ್ರೀ ಅಭಯ್ ನ್ಯಾಯಂಪಲ್ಲಿಯವರು, ಮತ್ತು   ಹಾರ್ಮೋನಿಯಂ ಮೇಲೆ ಶ್ರೀ ಅಭಯ್ ರಾವಂಡೆಯವರು, ಅತ್ಯುತ್ತಮವಾಗಿ ಸಾಥ್ ನೀಡಿ ಕಾರ್ಯಕ್ರಮಕ್ಕೆ ಹೊಳಪು ಕೊಟ್ಟರು.  ಈ ಕಾರ್ಯಕ್ರಮಕ್ಕೆ ಗದಗಿನ ವೀರೇಶ್ವರ ಪುಣ್ಯಾಶ್ರಮದ ಆಶೀರ್ವಾದಗಳೂ ದೊರಕಿದ್ದವು. ಕೈ. ಪುಟ್ಟರಾಜ ಗವಾಯಿಯವರು, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಪರಿಣತರಾಗಿದ್ದು, ೮೦ ಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ರಚಿಸಿದ್ದಾರೆ. ಆಧ್ಯಾತ್ಮವನ್ನು ಕುರಿತೂ ಬರೆದಿದ್ದಾರೆ. ಅನೇಕ ಶಿಷ್ಯರನ್ನು ಸಂಗೀತದಲ್ಲಿ ಅಣಿ ಮಾಡಿದ ಹಿರಿಮೆ ಕೂಡ ಪುಟ್ಟರಾಜ ಗವಾಯಿಯವರದು. ಶ್ರೀಪಂಚಾಕ್ಷರಿ  ಗವಾಯಿಯವರ ಶಿಷ್ಯರಾದ ಇವರು ತಮ್ಮ ಗುರುಗಳ ಹಿರಿಮೆಯನ್ನು ನಾಡಿನಲ್ಲೆಲ್ಲ ಸಾರಿದರು. ಶ್ರೀಮತಿ ಚಂದನಬಾಲಾ ಅವರು ಕರ್ನಾಟಕ ಸಂಗೀತವನ್ನು ಬೆಂಗಳೂರಿನಲ್ಲಿ ಕಲಿತು, ತಮ್ಮದೇ ವಿಶೇಷವಾದ “ಮರ್ಮ” ಶೈಲಿಯನ್ನು ಕೈಗೂಡಿಸಿಕೊಂಡಿದ್ದಾರೆ. ಮೊದಲು ಅವರು “ಪಂಚಾಕ್ಷರೇಶ್ವರ” ಎಂದು ರಾಗವೆತ್ತಿ ಹಲವಾರು ದೇವರನಾಮಗಳನ್ನು ಹಾಡಿದರು. “ಕಾಗದ ಬಂದಿದ