ಸಮಗ್ರ ಲಲಿತ ಪ್ರಬಂಧಗಳು-ಎ.ಏನ್. ಮೂರ್ತಿರಾವ್ ಪುಸ್ತಕದಲ್ಲಿ 'ಬಿ. ಎಂ. ಶ್ರೀ' ರವರ ಬಗ್ಗೆ. ಪುಟ : ೩೩೭

ಛೀಮಾರಿ, ವಾಂಗ್ಮಯ 

ಕರ್ನಾಟಕ ಕವಿಚರಿತ್ರೆಯಲ್ಲಿ ದಾಖಲಾದ

ಮಂಗಳೂರಿನಲ್ಲಿ ಹೊಸಕನ್ನಡ ಕವಿತೆಗಳನ್ನು          ಹಟ್ಟಿಯಂಗಡಿ ನಾರಾಯಣರಾಯರ (೧೯೨೧) ತರುವಾಯ ಮುಳಿಯ ತಿಮ್ಮಪ್ಪಯ್ಯ,

ಹೊಸಗನ್ನಡ ಅರುಣೋದಯದ ಕಾಲದಲ್ಲಿ ಲೇಖಕರು ಅಆಂಗ್ಲ ಕವಿತೆಗಳನ್ನು ಕನ್ನಡಕ್ಕೆ ಸಿ ಕನ್ನಡ ನವೋದಯ ಪಾಯಹಾಕಿದ ಧೀಮಂತ ವ್ಯಕ್ತಿ ಮಂಗಳೂರು ಕಾರ್ಕಳ ಮದ್ರಾಸ್ ಸರಳತೆ ಸಾರ್ಥಕತೇ ಸಹಾಯ ಪರರತೆ ವ್ಯಕ್ತಿ ವೈಶಿಷ್ಟ್ಯತೆ ಮಂಗಳೂರಿನ ಸರ್ಕಾರೀ ಕಾಲೇಜ್ ನಲ್ಲಿ ಅಧ್ಯಾಪಕರು ಸಮಾಧಾನವಿಲ್ಲದೆ ಮದ್ರಾಸ್ ಗೆ ಹೋಗಿ ಲಾ ಪದವಿ ಗಳಿಸಿದರು ಸ್ವಲ್ಪದಿನ ವಕೀಲರಾಗಿ ಕೆಲಸ Indian spectator National magazine ಅನಾಮದೇಯನಾಗಿ ಲೇಖನ ಬರೆದುಕೊಡುತ್ತಿದ್ದರು ಪತ್ರಿಕೆ ಕರನಂತರಗಳಿಂದ ಮುಂಬಯಿಗೆ ಆಗ ತಾವು ಮುಂಬಯಿನಗರಕ್ಕೆ ಬಂದು ನೆಲೆಸಿಡಸ್ರು ತಮ್ಮ ೫೦ ನೆಯ ವಯಸ್ಸಿನಲ್ಲಿ ಕನ್ನಡದ್ಲಲಿ ಬರವಣಿಗೆ ಕನ್ನಡ ಸಾಹಿತ್ಯ ಪತ್ರಿಕೆಗೆ ಮಂಗಳೂರಿನ ಸ್ವದೇಶಾಭಿಮಾನಿ ವಾಗ್ ಭೂಷಣ ಧಾರವಾಡ ಅಆಂಗ್ಲ ಕವಿತಾವಣಿ, ಆಂಗ್ಲ ಕವಿತಾವಳಿ ೧೯೧೯ ರಲ್ಲಿ ಪ್ರಕಟಿತ ಭಾಷಾಶಾಸ್ರ ಮತ್ತು ತತ್ವಜ್ಞಾನ ಆಸ್ಕ್ತಿ ಕನ್ನಡ ಕಥಾನಕ ಕನ್ನಡ ಭಾಷೆ, ಅದರ ಸಂಪತ್ತು ಮೈಲಿಕ ಅಧ್ಯಯನ, ಅಂದಿನ ವಿದ್ವಾಂಸರು ಕನ್ನಡ ಶಬ್ದಗಳು, ದೇಶ್ಯ, ಸಂಸ್ಕೃತದ ತತ್ಸಮ ತದ್ಭವಗಳಿಗೆ ಮೀಸಲೆಂದು ಭಾವಿಸಿದ್ದರು ಪ್ರಾಕೃತದಿಂದ ಮರಾಠಿಯಿಂದ ಹೊಸ ಪದಗಳನ್ನು ಸ್ವೀಕರಿಸಿ, ವಿಸ್ತರಿಸಿದರು ಮುಂಬಯಿನ ಏಷ್ಯಾಟಿಕ್ ಸೊಸೈಟಿಯಲ್ಲಿ ನೀಡಿದ ಭಾಷಣ ಕೊಂಕಣಿ ಮಾತೃಭಾಷೆ ಬ್ರಹ್ಮಸಮಾಜದಲ್ಲಿ ಸಕ್ರಿಯತೆ ಗಾಯತ್ರೀಮಂತ್ರ ಮತ್ತು ಭಜನೆಗಳನ್ನು ಕನ್ನಡಕ್ಕೆ ಸತ್ವಯುತವೂ ಮತ್ತು ಐತಿಹಾಸಿಕ ಮಹತ್ವದ್ ಕೊಡುಗೆಗಳೆಂದು ಪಂಡಿತರ ಅಂಬೋಣ. 

ಡಾ. ಅನಂತನಾರಾಯಣ (ಇಂಗ್ಲೀಷ್ ಕವಿತೆಗಳನ್ನು ಕನ್ನಡಕೆ ಭಾಷಾಂತರಿಸುವ ಕೆಲಸ ವ್ಯಾಪಕವಾಗಿ ಯಾವ ತೊಂದರೆಯಿಲ್ಲದೆ ನಡೆಯುತ್ತಿತ್ತು. ಕಾವ್ಯ ಪ್ರಕತನದಲ್ಲಿ ಯಾವ ಇರಲಿಲ್ಲ ದಿನಪತ್ರಿಕೆ, ಮಾಸಪತ್ರಿಕೆಗಳು ಮದ್ರಾಸ್ನಲ್ಲಿ ನೆಲಸಿದ್ದ ಎಂ. ಡಿ. ಅಳಸಿಂಗಾಚಾರ್ಯ ಎಂಬ ಕನ್ನಡ ವಿದ್ವಾಂಸರು ತಮ್ಮ ಬರಹಗಳನ್ನು ಪ್ರಕಟಿಸಲು ಉಡುಪಿಗೆ ಕಲಿಸುತ್ತಿದ್ದರು ಶ್ರೀ ಕೃಷ್ಣ ಸೂಕ್ತಿ ಎಂಬ ಪತ್ರಿಕೆಗೆ  ಮುಂಬಯಿನಲ್ಲಿ ಬಂದು ನೆಲಸಿದ ಎಚ್. ನಾರಾಯಣರಾಯರು ಧಾರವಾಡದ ವಾಗ್ ಭೂಷಣ ಎಂಬ ಪತ್ರಿಕೆಗೆ ಮತ್ತು ಬೆಂಗಳೂರಿನ ಸಾಹಿತ್ಯ ಪರಿಷತ್ ಪತ್ರಕೆಗೆ ಎಸ್. ಜಿ .ನರಸಿಂಹಚಾಯ,ಜಯರಾಯಾಚಾರ್ಯ, ಸೋಸಲೆ ಅಯ್ಯಶಾಸ್ತ್ರಿ, ಎಸ. ಜಿ. ಗೋವಿಂದ ಚಾರ್ಯ, ಎಸ. ಜಿ. ನರಸಿಂಹಾಚಾರ್ಯ,

ಕಡೆಂಗೋಡ್ಲು ಶಂಕರಭಟ್ಟ (೧೯೦೪-೧೯೬೮) , ಪಂಜೆ ಮ್ಯಾಗೇಶರಾಯರು (೧೮೭೪-೧೯೩೭) ೧೯ ನೆಯ ಶತಮಾನದ ಕೊನೆಯಲ್ಲಿ 

ಗೋವಿಂದ ಪೈ (೧೮೮೩-೧೯೬೩)

೧೯೪೧ ನಲ್ಲಿ ಶ್ರೀಯವರಿಗೆ ಗೌರವಸಮರ್ಪಣೆ. ೧೯೮೪ ರಲ್ಲಿ ಶತಮಾನೋತ್ಸವ. ಪ್ರಮುಖವಾದ ಮುಖ್ಯ ಕೇಂದ್ರಗಳನ್ನು ಗುರುತಿಸಿಕೊಂಡರು ಮೈಸೂರ್ ಸೆಂಟರ್, (), ಧಾರವಾಡ (ಮುಂಬೈ ಪ್ರಾವಿನ್ಸ್) ಮಂಗಳೂರು (ಮದ್ರಾಸ್ ಪ್ರಾವಿನ್ಸ್)

ಚಾರ್ಯ ಬಿ. ಎಂ. ಶ್ರೀ. ರವರ  ತಮಾನೋತ್ಸವ ಸ್ಮರಣ ಕಾರ್ಯಕ್ರಮ  ಆನ್ ಲೈನ್  ಝೂಮ್ ನಲ್ಲಿ ಸುಂದರವಾಗಿ ಮೂಡಿಬಂದಿದೆ.  ಶ್ರೀಯವರ ಬಗೆ  ಕನ್ನಡ ಕಾವ್ಯಾಸಕ್ತರು ಡಾ. ಜನಾರ್ಧನ ಭಟ್ಟರ ಉಪನ್ಯಾಸದ  ಸವಿಯನ್ನು ಅನುಭವಿಸಿದ್ದಾರೆ. ಇದಕ್ಕಾಗಿ ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಣೇಶ ಉಪಾಧ್ಯರವರು ಅಭಿನಂದನೆಗೆ ಪಾತ್ರರು. 

ಇದೇ ಸಮಯದಲ್ಲಿ ಮತ್ತೊಬ್ಬ ಮಂಗಳೂರಿನ ಸಂಜಾತ ಮುಂಬಯಿನಲ್ಲಿ ನೆಲೆಸಿ ಇಂಗ್ಲೀಷ್  ಕನ್ನಡ ಅನುವಾದ ಕಾವ್ಯವನ್ನು ಸಮೃದ್ಧಗೊಳಿಸಿದ  ವಿದ್ವಾಂಸ ಹಟ್ಟಿ ಅಂಗಡಿ ನಾರಾಯಣರಾಯರ ಶತಮಾನೋತ್ಸವದ ಸಂಸ್ಮರಣೆಯನ್ನೂ ಹಮ್ಮಿಕೊಂಡಿರುವುದು ಸಮಯೋಚಿತವಾಗಿದೆ. ಡಾ. ಅನಂತ ನಾರಾಯಣರವರ ಮಾತಿನಂತೆ ಈ ಇಬ್ಬರು ದಿಗ್ಗಜರೂ ಬೇರೆಬೇರೆ ಕಾಲಘಟ್ಟದಲ್ಲಿ ಹೆಚ್ಚು ಹೆಚ್ಚು ಸಕ್ರಿಯರಾಗಿ ಕೆಲಸಮಾಡಿದ್ದರೂ  ಕನ್ನಡಕ್ಕೆ ಒಂದು ಹೊಸ ಮಾರ್ಗವನ್ನು ಕೊಟ್ಟು ಆಂಗ್ಲ ಕವಿತೆಗಳನ್ನು ಕನ್ನಡಕ್ಕೆ ಅನುವಾದಮಾಡಿದ  ಕಾರ್ಯದಲ್ಲಿ  ಒಂದು ಬೃಹತ್ ಸಾಧನೆಯನ್ನು ಮಾಡಿರುವುದು ಗಮನಕ್ಕೆ ಬರುತ್ತದೆ. ಒಂದು ಮಟ್ಟದಲ್ಲಿ ಈ ಇಬ್ಬರು ಮಹನೀಯರ  ಸಾಧನೆಗಳು ಹೆಚ್ಚುಕಡಿಮೆ  ಪೂರಕವಾದದ್ದೆಂದು  

ಇಂತಹ ಕಮ್ಮಟಗಳಿಗೆ  ತಕ್ಕ ವಿದ್ವಾಂಸರನ್ನು ಕಲೆಹಾಕಿ ಅದ್ಭುತವಾಗಿ ನಡೆಸಿಕೊಂಡು ಬರುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಹೀಗೆ ಮುಂಬಯಿ  ಕನ್ನಡ ವಿಭಾಗ ಡಾ. ಜಿ. ಏನ್. ಉಪಾಧ್ಯಾಯರ ಮುಂದಾಳತ್ವದಲ್ಲಿ ಮುಂಚೂಣಿಯಲ್ಲಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಇನ್ನು ಡಾ. ಜನಾರ್ಧನ ಭಟ್ಟರ ಬಗ್ಗೆ ಹೇಳುವುದಕ್ಕಿಂತ ಅವರ ಮಾತುಗಳನ್ನು ಕೇಳುವುದೇ ಸೊಗಸು. ಹಿತಮಿತವಾಗಿ ಎಲ್ಲಾ ಪ್ರಮುಖ ಸಂಗತಿಗಳನ್ನು ಸ್ವಲ್ಪವೂ ಬಿಡದೆ ನಿಖರವಾಗಿ ತಮ್ಮ ಭಾಷೆಯನ್ನು ಬಳಸುವ ಅವರ ಭಾಷಾ ಸಿದ್ಧಿಯನ್ನು ನಾವು ಈಗಾಗಲೇ ಮನಗಂಡಿದ್ದೇವೆ. 

ಕನ್ನಡದ ಸ್ಥಾನಮಾನಗಳು :

ಆಗಿನ ಕಾಲದಲ್ಲಿ ನಮಗೆಲ್ಲ ಕನ್ನಡ ಅಂದರೆ  ಅಸಡ್ಡೆ. ಹೈಸ್ಕೂಲಿನಲ್ಲಿ ನಾವು ಕನ್ನಡ ಕ್ಲಾಸಿಗೆ ಯಾತಕ್ಕೆ ಹೋಗುತ್ತಿದ್ದೆವು ಅಂದರೆ-ಬಾಕಿ ಕ್ಲಾಸುಗಳಲ್ಲಿ ಸ್ವಲ್ಪ ಬೇಸರವಾಗಿದ್ದರೆ, ಆಯಾಸವಾಗಿದ್ದರೆ, ಹುಚ್ಚು ಹುಚ್ಚಾಗಿ ಜೊತೆಯವರೊಡನೆ ಮಾತಾಡಿ ಬೇಸರ ಕಳಕೊಳ್ಳೋದಕ್ಕೆ !

ಉಲ್ಲೇಖ ಲೇಖನ :

ಡಾ  ಬಿ. ಎಂ. ಶ್ರೀ. ಗಳಬಗ್ಗೆ ಅತ್ಯಂತ ನಿಕಟವಾಗಿ  ಬಲ್ಲ ಶತಾಯುಷಿ  ಡಾ. ಎ .ಏನ್. ಮೂರ್ತಿರಾಯರ ಲೇಖನ :

ಡಾ ಎ. ಏನ್. ಮೂರ್ತಿರಾಯರ ಸಮಗ್ರ ಲಲಿತ ಪ್ರಬಂಧದಲ್ಲಿ  ಅವರ ಸಮಕಾಲೀನರ ವ್ಯಕ್ತಿ ಚಿತ್ರಗಳು ( ನರಸಿಂಹಾಚಾರ್, ಶ್ರೀನಿವಾಸಮೂರ್ತಿಗಳು, ಟಿ. ಎಸ್. ವೆಂಕಣ್ಣಯ್ಯ, ಪ್ರೊ. ಆರ್ ಎಲ್ ನರಸಿಂಹಯ್ಯ,)  ಅದ್ಭುತ ಒಳನೋಟಗಳನ್ನು ಕೊಡುತ್ತವೆ. ಬಿ.ಎಂ.ಶ್ರೀ ರವರ ಬಗೆಗಂತೂ ಅವರ ಲೇಖನ ಒಂದು ಆಕರವಿದ್ದಂತೆ. ಹಾಗಾಗಿ ಶ್ರೀ ಯವರ ಬಗ್ಗೆ ಅವರ ಕನ್ನಡ ಪರ ಸಾಧನೆಗಳ ಬಗ್ಗೆ ಅಧಿಕೃತ, ಹಾಗೂ ಸಮಗ್ರ ಹಾಗೂ ಅತ್ಯಂತ ಸೂಕ್ಷ್ಮ  ಮಾಹಿತಿಗಳನ್ನು ಇವು ಒಳಗೊಂಡಿದೆ ಎಂದು ನನ್ನ ಅನಿಸಿಕೆ. ನನ್ನ ಬಳಿ ಇದ್ದ ಪುಸ್ತಕದ ಜಿರೊಕ್ಸ್ ಪ್ರತಿಯನ್ನು ಇಲ್ಲಿ ಪ್ರಸ್ತುತಪಡಿಸಲು ಆಶಿಸಿದ್ದೆ. ಆದರೆ ಅದನ್ನು  ಕೆಲವು ವೇಳೆ ಓದಲು  ತೊಂದರೆಯಾಗುವುದರಿಂದ  ನಾನೇ  ಕುಳಿತು ೩ ದಿನಗಳಲ್ಲಿ ಟೈಪಿಸಿ ಸಿದ್ಧಪಡಿಸಿದ್ದೇನೆ. ನಡುಗುವ ಬೆರಳುಗಳು ಮತ್ತು ಮಂಜಿನ ಕಣ್ಣಿನ ದೃಷ್ಟಿಯಲ್ಲಿ ಮಾಡಿದ ಈ ಸಿದ್ಧತೆಯಲ್ಲಿ ಹಲವು ತಪ್ಪುಗಳಿರಲೇ ಬೇಕಲ್ಲವೇ ?  ಕ್ಷಮೆಯಿರಲಿ. 

 ಬಿ. ಎಂ. ಶ್ರೀ.  :

ಶ್ರೀಕಂಠಯ್ಯನವರು  ೫ ವರ್ಷ ಕಾಲ -ಮೂರು  ವರ್ಷ ಬಿ. ಎ. ಕ್ಲಾಸಿನಲ್ಲಿ, ಎರಡು ವರ್ಷ ಎಂ. ಎ. ಕ್ಲಾಸಿನಲ್ಲಿ-ನನಗೆ ಗುರುಗಳಾಗಿದ್ದವರು. ಆಮೇಲೂ ಕೂಡಾ ಅವರು ಬದುಕಿದ್ದ ವರೆಗೂ  ಗುರುಸ್ಥಾನೀಯರಾಗಿದ್ದರು. ಅವರ ನೆನಪಿಗಾಗಿ ಒಂದು ಸಮಾರಂಭ ಏರ್ಪಡಿಸಿತು ಅಂತಂದರೆ,  ಅದರಲ್ಲಿ ಭಾಗಿಯಾಗುವುದು  ನನ್ನ ಭಾಗ್ಯ. ಆ ಭಾಗ್ಯವನ್ನು ದೊರಕಿಸಿಕೊಟ್ಟದ್ದಕ್ಕಾಗಿ ನಾನು ಕನ್ನಡ  ಅಧ್ಯಯನ ಸಂಸ್ಥೆಯವರಿಗೆ ನಿಜವಾಗಿ ಕೃತಜ್ಞನಾಗಿದ್ದೇನೆ. 

ಯಾವತ್ತು ಅವರ 'ಇಂಗ್ಲಿಷ್ ಗೀತಗಳು'   ಎಂಬ ಪುಸ್ತಕ ಪ್ರಕಟವಾಯಿತೋ, ಹೆಚ್ಚು ಕಡಿಮೆ ಅದರ ಮಾರನೆಯ ದಿನದಿಂದಲೇನೇ  ಕನ್ನಡ ನಾಡಿನ ಎಲ್ಲ ಕಡೆಗಳಿಂದಲೂ ಹಾಡು ಕೇಳಿಬರುವಂತಾಯಿತು. ಎಲ್ಲರ ಮನಸ್ಸಿನಲ್ಲಿಯೂ ಹಿಂದಿನ ಕಾವ್ಯಗಳ ಬಗ್ಗೆ ಸ್ವಲ್ಪ ಅತೃಪ್ತಿ ಇತ್ತು ಅಂತ ಕಾಣುತ್ತೆ. ಹೊಗೆಯಾಡುತ್ತಿತ್ತು ಆ ಅತೃಪ್ತಿ.  ಅದಕ್ಕೆ  ಬಿ. ಎಂ. ಶ್ರೀ ರವರು ಒಂದು ಜ್ಯೋತಿ ಸ್ಪರ್ಶ ಮಾಡಿದರು.. ಎಲ್ಲ ಕಡೆಯೂ ಬೆಳಕು ಹರಡಿಕೊಂಡಿತು. ಈ ಉಪಕಾರ ಆಷ್ಟಿಷ್ಟು ಎಂದು ಹೇಳಲಾಗುವುದಿಲ್ಲ. 

ಈ ಸಂದರ್ಭದಲ್ಲಿ ಸ್ವಾಭಾವಕವಾಗಿಯೇ ನನ್ನ ಮನಸ್ಸು ನಾನು ಮೊದಲು  ಬಿ.ಎಂ. ಶ್ರೀ ಯವರನ್ನು ಕಂಡ ದಿನವನ್ನು ನೆನೆಯುತ್ತಿದೆ. ಅದು ಸುಮಾರು ೬೭ ವರ್ಷಗಳ ಹಿಂದಿನ ಮಾತು. ನನಗೆ ಆಗ ೧೫ ವರ್ಷ. ಹೈಸ್ಕೂಲಿನಲ್ಲಿದ್ದೆ. ಸ್ಕೂಲಿನಲ್ಲಿ ನಾವು ಒಂದು ಡಿಬೇಟ್ ಏರ್ಪಡಿಸಿದ್ದೆವು. ಆ ಚರ್ಚೆಯ ವಿಷಯ ಏನೂ ಅಂತ ಹೇಳಿದರೆ ಬಹುಶಃ ತಾವೆಲ್ಲಾ ನಗುತ್ತೀರಿ. ಶ್ರೀಕಂಠಯ್ಯನವರು ಗಟ್ಟಿಯಾಗಿ ನಗಲಿಲ್ಲ, ಮುಗುಳು ನಗೆ ನಕ್ಕರು ಅಷ್ಟೆ. ಚರ್ಚೆಯ ವಿಷಯ "ಪುರಾತನ ಭಾರತ ಇಂದಿನ ಭಾರತಕ್ಕಿಂತ ಉತ್ತಮವಾಗಿತ್ತು" (Ancient India was better than Modern India) ಅಂತ.  'ನಮಗೆ ಎಂಥ ಸೊಗಸಾದ ಸಬ್ಜೆಕ್ಟ್ ಹುಡುಕಿ ಬಿಟ್ಟಿದ್ದೀವಿ  ! ಯಾರ ಹತ್ತಿರ ಹೇಳಿದರೂ ನಮ್ಮ ಬೆನ್ನು ತಟ್ಟುತ್ತಾರೆ 'ಅಂತ ಹೆಮ್ಮೆ. ಅವಾಗ ನಾನು ಚರ್ಚಾಕೂಟದ ಸೆಕ್ರೆಟರಿಯಾಗಿದ್ದೆ. ಬಿ.ಎಂ. ಶ್ರೀಯವರನ್ನು 'ಸ್ಪೀಕರ್' ಆಗಿ ಕರಕೊಂಡು ಬಂದರೆ ದೊಡ್ಡ ಪ್ರೊಫೆಸರನ್ನು ಕರಕೊಂಡು ಬಂದರು ಅನ್ನುವ ಕೀರ್ತಿ ಬರುತ್ತೆ ' ಅಂತಂದುಕೊಂಡು ಶ್ರೀಯವರ ಮನೆಗೆ ಹೋದೆವು, ನಾನು ಮತ್ತು ಇನ್ನೊಬ್ಬರು. 

ನಾವು ಹೋದದ್ದು ಕನ್ನಡದ ನಾಯಕರಾದ ಶ್ರೀಯವರ ಮನೆಗಲ್ಲ, ಇಂಗ್ಲಿಷ್ ಪ್ರೊಫೆಸರ್ ಶ್ರೀಯವರ ಮನೆಗೆ. ಅವರಿಗೂ ಕನ್ನಡಕ್ಕೂ ಯಾವವಿಧವಾದ ಸಂಬಂಧವಾದರೂ ಇತ್ತಾ ಅನ್ನುವುದು ನಮಗೆ ಏನೇನೂ ಗೊತ್ತಿಲ್ಲ. ಆ ವೇಳೆಗಾಗಲೇ ಸುಮಾರು ೪-೫ ವರ್ಷಗಳ ಹಿಂದೇನೆ ಅವರು ಧಾರವಾಡದಲ್ಲಿ ಬಹಳ ದೊಡ್ಡ ಭಾಷಣವೊಂದನ್ನು ಮಾಡಿದ್ದರು. ಆ ಭಾಷಣ ಇವತ್ತಿಗೂ ಕೂಡ ಉಪಯುಕ್ತವಾದ ವಿಷಯಗಳನ್ನು ಒಳಗೊಂಡಿದೆ. ಆದರೆ ನಮಗೆ ಅದೊಂದೂ ಗೊತ್ತಿರಲಿಲ್ಲ. ಆಗಿನ ಕಾಲದಲ್ಲಿ ನಮಗೆಲ್ಲ ಕನ್ನಡ ಅಂದರೆ  ಅಸಡ್ಡೆ. ಹೈಸ್ಕೂಲಿನಲ್ಲಿ ನಾವು ಕನ್ನಡ ಕ್ಲಾಸಿಗೆ ಯಾತಕ್ಕೆ ಹೋಗುತ್ತಿದ್ದೆವು ಅಂದರೆ-ಬಾಕಿ ಕ್ಲಾಸುಗಳಲ್ಲಿ ಸ್ವಲ್ಪ ಬೇಸರವಾಗಿದ್ದರೆ, ಆಯಾಸವಾಗಿದ್ದರೆ, ಹುಚ್ಚು ಹುಚ್ಚಾಗಿ ಜೊತೆಯವರೊಡನೆ ಮಾತಾಡಿ ಬೇಸರ ಕಳಕೊಳ್ಳೋದಕ್ಕೆ ! ನಮ್ಮ ಕನ್ನಡ 'ಮುನಷಿ'ಗಳು ಸೂಟ್ ಹಾಕ್ಕೊಂಡು ಬರತಾ ಇರಲಿಲ್ಲ.  ಟೈ ಕಟ್ಟಿಕೊಂಡು ಬರತಾ ಇರಲಿಲ್ಲ. ಒಂದು ಕ್ಲೋಸ್ ಕಾಲರ್ ಕೋಟು ಹಾಕ್ಕೊಂಡು ಬರುತ್ತಿದ್ದರು. ಕ್ಲಾಸನ್ನು ಹದದಲ್ಲಿಟ್ಟುಕೊಳ್ಳೋದು ಅಂದರೆ, ಅವರಿಗೆ ವಿಶ್ವಪ್ರಯತ್ನ.  ನಾನು ಹೈಸ್ಕೂಲಿನಲ್ಲಿದ ಮೂರು ವರ್ಷದಲ್ಲಿ ಒಂದು ದಿನವಾದರೂ ಆ ಪ್ರಯತ್ನ ಫಲಿಸಿದ್ದನ್ನು ಕಾಣೆ.   

ಅಂಥಾದ್ದು-ಆಗ ಕನ್ನಡಕ್ಕಿದ್ದ ಸ್ಥಾನ. ಇಂಥ ಭಾಷೆಗೆ, ಯಾರೂ  ಗೌರವಿಸದ ಭಾಷೆಗೆ, ಯಾರಿಗೂ ಬೇಡವಾದ ಭಾಷೆಗೆ, ಬೇರೆ ಒಂದು ಇಲಾಖೆ ಯಾತಕ್ಕಿರಬೇಕು, ವಿಶ್ವವಿದ್ಯಾನಿಲಯದಲ್ಲಿ ? ಅದಕ್ಕೆ ಪ್ರಾಧ್ಯಾಪಕರು ಬೇರೆ ಯಾತಕ್ಕಿರಬೇಕು ? ಇಂಥದೊಂದು ಇಲಾಖೆ ಇರಬೇಕು ಅನ್ನುವ ಅಭಿಪ್ರಾಯ ಕೂಡ ನಮ್ಮಲ್ಲಿ ಯಾರಿಗೂ ಬಂದಹಾಗೆ ಕಾಣೆ, ಆ ಕಾಲದಲ್ಲಿ.  ವಿಶ್ವವಿದ್ಯಾನಿಲಯದ ಆವರಣದಲ್ಲೇನಾದರೂ ಬಂದಿತ್ತೋ ಏನೋ -ನನಗೆ ಗೊತ್ತಿಲ್ಲ. 

ನಾವು ಶ್ರೀಯವರ ಮನೆಗೆ ಹೋಗಿ 'ಇಂಥದ್ದೊಂದು ಡಿಬೇಟ್ ಏರ್ಪಡಿಸಿದ್ದೇವೆ. ತಾವು ಆ ದಿನ ಬರಬೇಕು' ಎಂದು ಬೇಡಿದೆವು. ಸಾಧಾರಣವಾಗಿ ಆಗಿನ ಸಂಭಾಷಣೆಯೆಲ್ಲ ಇಂಗ್ಲೀಷ್ ನಲ್ಲೆ ನಡೆಯುತ್ತಿತ್ತು.  ಶ್ರೀಕಂಠಯ್ಯನವರೂ  ಯಾವಾಗಲೂ ಇಂಗ್ಲಿಷ್ ನಲ್ಲೆ ಮಾತಾಡುತ್ತಿದ್ದರು ನಾನು ೫ ವರ್ಷ ಕಾಲೇಜಿನಲ್ಲಿ ಅವರಶಿಷ್ಯನಾಗಿದ್ದ ಕಾಲದಲ್ಲಿ ಒಂದೇ ಒಂದು ದಿನ ಅವರು ಒಂದೇ ಒಂದು ಕನ್ನಡ ಪದ ಉಪಯೋಗಿಸಿದ್ದು ಕಾಣೆ. ಆಗಿನ ವಾತಾವರಣ ಹಾಗಿತ್ತು. ಶ್ರೀಯವರು "I see, you are having  a debate...Ancient India was better than modern India'! India is better than anything else, ; and Ancient India was better than any thing modern !   A self-evident proposition, isn't it ? ಎಂದರು ಸ್ವಲ್ಪ ಮುಗುಳು ನಗೆ ನಗುತ್ತ. 

ಇದ್ದಕ್ಕಿದ್ದ ಹಾಗೇ  ನಮ್ಮ ಧರ್ಯವೆಲ್ಲ ಇಳಿದು ಹೋಯಿತು. ಇವರು ನಮ್ಮನ್ನು ಮೆಚ್ಚುತ್ತಾರೆ ಅಂದುಕೊಂಡಿದ್ದರೆ -ಇದೇನು ಈ ತರಹ ಮಾತಾಡುತಾರಲ್ಲ ! ಅವರ ಮಾತಿನ ಅರ್ಥ ನಮಗಾಗಲಿಲ್ಲ.  elf-evident proposition ಅಂದರೆ ಏನೋ- ನಮಗೆ ಗೊತ್ತಿರಲಿಲ್ಲ. ನಾವು ಹೈಸ್ಕೂಲು ವಿದ್ಯಾರ್ಥಿಗಳಷ್ಟೆ 'ಹಾಗೆಂದರೇನು ಅಂತ ವಿಚಾರ ಮಾಡೋಣ 'ಅಂತ ಆ ಮಾತನ್ನು ಗುರುತು ಹಾಕ್ಕೊಂಡದ್ದು ನೆನಪಿದೆ. ಈ ಮಾತನ್ನೆಲ್ಲ ಯಾತಕ್ಕೆ ಹೇಳತಾ ಇದೀನಿ ಅಂದರೆ- ಆಗಿನ ಕಾಲದಲ್ಲಿ ಕೂಡ ಅವರು ಭಾರತದ ವಿಷಯದಲ್ಲೇ ಆಗಲಿ, ಇತರದೇಶಗಳ ವಿಷಯದಲ್ಲೇ ಆಗಲಿ, ಒಂದು ಬಗೆಯ ನಿಷ್ಪಕ್ಷಪಾತವಾದ ದೃಷ್ಟಿಯನ್ನು ಬೆಳೆಸಿಕೊಂಡಿದ್ದರು ಅನ್ನುವುದನ್ನು ತಿಳಿಸುವುದಕ್ಕೆ. ನಮ್ಮ ದೇಶವನ್ನು ನಾವು ಹೊಗಳಿದರೆ, ನಮ್ಮ ಪೂರ್ವಿಕರನ್ನು ನಾವು ಹೊಗಳಿದರೆ, ಅದು ಎಲ್ಲರೂ ಮೆಚ್ಚಬೇಕಾದ  ವಿಷಯ ಅಂತ ನಮ್ಮ ಭಾವನೆ.  ಅವರಿಗೆ ಹೊಗಳಿಕೆ ಬೇಡ ಅಂತಲ್ಲ; ಆದರೆ ತಿಳಿದು ಹೊಗಳಬೇಕು. ಏನ್ಶೆಂಟ್ ಇಂಡಿಯಾದಲ್ಲೂ ಕೇಡಿಗರಿದ್ದಿರಬೇಕು; ತ್ರೇತಾಯುಗದಲ್ಲಿ ಕೂಡ ಇದ್ದಿರಬೇಕು; ರಾವಣ ಆ ಯುಗದವನು ತಾನೇ ? ಹಿಂದೆ ಕೇಡಿಗರಿಲ್ಲದೆ ಇದ್ದರೆ, ದೇವರಿಗೆ ಅವತಾರ ಮಾಡೋದಕ್ಕೆ ಅವಕಾಶವೇ ಸಿಕ್ಕುವುದಿಲ್ಲವಲ್ಲ . ಕೆಟ್ಟ ಪ್ರಪಂಚ ಸರಿಪಡಿಸೋದಕ್ಕೆ  ತಾನೇ ಅವರು ಅವತಾರ ಮಾಡಬೇಕಾಗಿ ಬಂದದ್ದು? ಇದನ್ನು ಮರೆತು ನಾವು  ಆಗಿನ ಕಾಲದಲ್ಲಿದ್ದೆಲ್ಲಾ ಒಳ್ಳೆಯದು, ಈಗಿರೋದೆಲ್ಲಾ ಕೆಟ್ಟದ್ದು ಅಂದುಕೊಂಡಿದ್ದೆವು. ಅವರು ಈ ದೃಷ್ಟಿಗೆ ಆಗಲೇನೆ ಒಂದು ಪೆಟ್ಟು ಕೊಟ್ಟರು. ನಮ್ಮ ಮನಸ್ಸನ್ನು ಸರಿಪಡಿಸೋದಕ್ಕೆ ಅವರ ಮಾತು ಸಹಾಯಮಾಡಿತು  ಅಂತ ಕಾಣುತ್ತೆ. 

ಅವರಿಗೆ ಬೇರೆ ಏನೋ ಕೆಲಸವಿದ್ದದ್ದರಿಂದ ಅವರು ನಮ್ಮ ಡಿಬೇಟಿಗೆ ಬರೋದಕ್ಕಾಗಲಿಲ್ಲ. ಅಲ್ಲಿಂದಾಚೆಗೆ ನಾನು ಅವರನ್ನು ನೋಡಿದ್ದು ಕಾಲೇಜಿಗೆ  ವಿದ್ಯಾರ್ಥಿಯಾಗಿ ಸೇರಿದಮೇಲೇನೇ-೧೯೧೯ ರಲ್ಲಿ.  ಆ ಕಾಲದಲ್ಲಿ  ನನ್ನ ಹೆಸರಿನವರೇ ಆದ ನನ್ನ ಇನ್ನೊಬ್ಬ ಗುರುಗಳು ಇಲ್ಲೇನೇ,  ಈ ಮಾನಸಗಂಗೋತ್ರಿಗೆ ಹತ್ತಿರದಲ್ಲೇ ಇರತಕ್ಕ ಒಂದು ನಾಲೆಯಮೇಲೆ ನನ್ನ ಕೂರಿಸಿಕೊಂಡು, ನಾನು ಕನ್ನಡ ಬಿಟ್ಟು ಬಿಟ್ಟು ಫ್ರೆಂಚ್ ತೊಗೊಂಡದ್ದಕ್ಕಾಗಿ ಚೀಮಾರಿ ಮಾಡಿದರು. ಅಲ್ಲದೆ ಆಗ ಬಹುಶಃ ಯಾವುದೊ ಮಾಸಪತ್ರಿಕೆಯಲ್ಲೋ ಅಥವಾ ಪುಸ್ತಕದಲ್ಲೋ-ಸರಿಯಾಗಿ ನೆನಪಿಲ್ಲ. -ಅಚ್ಚಾಗಿದ್ದ ಬಿ.ಎಂ.ಶ್ರೀ ಯವರ ಕೆಲವು ಕವನಗಳನ್ನು ಓದಿದರು. ಅದನ್ನು ಕೇಳಿದಾಗ ನನಗೆ ರೋಮಾಂಚವಾಯಿತು. ಅಷ್ಟು ಸರಳವಾದ ಸುಂದರ ಬರವಣಿಗೆ ಕನ್ನಡದಲ್ಲಿ ಬಂದಿತ್ತು ಅಂತ ನನಗೆ ಗೊತ್ತಿರಲಿಲ್ಲ. ಹೈಸ್ಕೂಲಿನಲ್ಲಿದ್ದಾಗಲೇ ಕೆಲವರು ಹಿರಿಯ ಸ್ನೇಹಿತರು ನನಗೆ ಎಚ್ಚರಿಕೆ ಕೊಟ್ಟಿದ್ದರು. ಬಿ. ಎ.ಗೆ ಕನ್ನಡ ಮಾತ್ರ ತಗೋಬೇಡ ಕಂಡೆಯ. ಪ್ರಶ್ನಪತ್ರಿಕೆ ಓದೋದಕ್ಕೆ ಒಂದು ಘಂಟೆ ಹಿಡಿಯುತ್ತೆ. ಉತ್ತರ ಬರೆಯೋಕೆ ಪುರಸೊತ್ತೇ ಇರೋದಿಲ್ಲ. ಜೋಕೆ ಕನ್ನಡ  ತಗೊಂಡೀಯ ? ನಾನು ಫ್ರೆಂಚ್ ತೊಗೊಂಡೆ ನನ್ನ (ಮೇಲೆ ಹೇಳಿದ) ಗುರುಗಳು ಮಾತ್ರ 'ನೀನು ಮಾಡಿದ್ದು ಶುದ್ಧ ತಪ್ಪು.  ಕನ್ನಡ ತಗೊಳ್ಳಬೇಕಿತ್ತು ' ಎಂದು ಛಿ ಮಾರಿ ಹಾಕಿ, 'ನೋಡು,  ಈಗ ಕನ್ನಡದಲ್ಲಿ ಎಷ್ಟು ಸೊಗಸಾದ ಅರವಣಿಗೆ ಬರತಾ ಇದೆ ' ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಕಥೆಯೊಂದನ್ನೂ ಶ್ರೀ ಯವರ ಕೆಲವು ಗೀತೆಗಳನ್ನು ಓದಿ ತೋರಿಸಿದರು. 

ಆಮೇಲೆ, ೧೯೨೬ ರಲ್ಲಿ 'ಇಂಗ್ಲಿಷ್ ಗೀತಗಳು' ಎಂಬ ಪುಸ್ತಕ ಪ್ರಕಟವಾದಮೇಲೆ, ಇಡೀ ಪುಸ್ತಕವನ್ನು ನಾನು ಬಹಳ ಆಸಕ್ತಿಯಿಂದ, ಬಹಳ ಉತ್ಸಾಹದಿಂದ ಓದಿದೆ.  ಅಷ್ಟು ಹೊತ್ತಿಗೆ ಸ್ವಲ್ಪಮಟ್ಟಿಗೆ ಇಂಗ್ಲಿಷ್ ಸಾಹಿತ್ಯವನ್ನ ಅಭ್ಯಾಸಮಾಡಿದ್ದದ್ದರಿಂದ ಇಂಗ್ಲೆಡಿ ನಲ್ಲಿ 'ರೊಮ್ಯಾಂಟಿಕ್ ಪಿರಿಯೆಡ್' ಬರೋದಕ್ಕಿಂತ ಹಿಂದಿನ ಸಾಹಿತ್ಯದಲ್ಲಿ ಯಾವ ಯಾವ ಲಕ್ಷಣಗಳು ಕಾಣುತಾ ಇದ್ದವು ಅನ್ನೋದೂ, ಆ ಲಕ್ಷಣಗಳಿಗೂನೂ ನಮ್ಮಲ್ಲಿ ನವೋದಯ ಕಾಲಕ್ಕಿಂತ ಹಿಂದಿನ ಸಾಹಿತ್ಯದ ಸ್ಥಿತಿಗೂನೂ ಕೆಲವು ಸಾದೃಶ್ಯಗಳಿವೆ ಅಂತನ್ನೋದೂ ನನಗೆ ಮನವರಿಕೆಯಾಗಿತ್ತು. ಛಂದಸ್ಸು ನಮ್ಮನ್ನು ಬಿಗಿಯಾಗಿ ಹಿಡಿದಿಟ್ಟಿದೆ ಅನ್ನೋದೂ ಗೊತ್ತಾಗಿತ್ತು  poetic diction  ಮೇಲಿನ ವ್ಯಾಮೋಹ- ಅಂದರೆ, ಸೂರ್ಯನ್ನ ಸೂರ್ಯ ಅಂತ ಕರೆಯಬಾರದು the orb of day  ಅಂತ ಕರೆಯಬೇಕು : ಗಾಳಿಯನ್ನ ಗಾಳಿ ಅಂತ ಕರೆಯಬಾರದು, a gentle gale ಅಂತ ಕರೆಯಬೇಕು. ಇಲ್ಲದಿದ್ದರೆ ಕಾವ್ಯ ಹೇಗೋ ಕೆಟ್ಟುಹೋಗುತ್ತೆ" ಅನ್ನುವ ಭಾವನೆ -ಅವಾಗ ಅನೇಕರ ಮನಸ್ಸಿನಲ್ಲಿ ಇತ್ತು. ಹಾಗೇನೇ ನಮ್ಮಲ್ಲೂ ಕೂಡ ಕಾವ್ಯಕ್ಕೆ ಉಚಿತವಾದ ಪದಗಳೇ ಕೆಲವಿವೆ  ಅನ್ನುವ ಭಾವನೆ ಇತ್ತು. ಅದರ ಜೊತೆಗೆ  ನಮ್ಮಲ್ಲಿ 'ಪರ್ಯಾಯ ಪದಗಳ ಹಾವಳಿ ಬೇರೆ; ಅರ್ಜುನ ಅಂತ ಹೇಳಬೇಕಾದರೆ ಒಂದು ಸರತಿ ಅರ್ಜುನ ಅನ್ನಬಹುದು; ಆಮೇಲೆ ಪಾರ್ಥ ಅನ್ನಬಹುದು;ಆಮೇಲೆ ಧನಂಜಯ; ಕಿರೀಟಿ, ಫಲ್ಗುಣ- ಒಂದು ಹತ್ತು ಹೆಸರು ಬಳಸಬಹುದು. 

ಹೀಗೆ ಒಂದು ಕಡೆ ಕಾವ್ಯೋಚಿತ ಪದಗಳ ಬಂಧನ. ಮತ್ತೊಂದು ಕಡೆ ಹಳೇ ಛಂದಸ್ಸಿನ ಬಂಧನ, ಅವರಲ್ಲಿ heroic couplets  ಇದ್ದ ಹಾಗೆ ನಮ್ಮಲ್ಲಿ ಷಟ್ಪದಿ ಮುಂತಾದವು. ಅವು ಬಹಳ ಬಿಗಿ ಎಂದರೂ ಅವುಗಳ ನಡಗೆ  ಚೆನ್ನಲ್ಲ ಎನ್ನುವಂತಿಲ್ಲ. 'ಹರಶ ರಪ್ರಥಮಾವತಾರ ಲೋಚನೆ ಮಹೇಶ್ವರ  ಚಾಪತಾಂಗವಷೋಜಾತೆ ..'-ಇದನ್ನು ಮೊದಲು ಓದಿದಾಗ' 'ನಡಗೆ ಏನು ಸೊಗಸಾಗಿದೆ' ಅಂದುಕೊಂಡು ಮೆಚ್ಚಿ ಚಪ್ಪರಿಸಿದ್ದು ನೆನಪಿದೆ. ಆಮೇಲೆ ಹಾಗೇ  ಯೋಚನೆ ಮಾಡಿದಾಗ ಪ್ರಶ್ನೆಗಳೆದ್ದವು : ಇದರ ಅರ್ಥ ಪತ್ತೆ ಮಾಡೋದು ಹೇಗೆ ? ಹರಶರ ಎಂದರೇನು ? ಮೊದಲು ಅದನ್ನ ಪತ್ತೆ ಮಾಡಿಕೊಳ್ಳಬೇಕು. ಆ  ಹರಶರದ ಪ್ರಥಮಾವತಾರ ಯಾವುದು ? ಇದಕ್ಕೆ ನಮ್ಮ ಪುರಾಣದ ಕಥೆಗಳೆಲ್ಲ ನಮಗೆ ಗೊತ್ತಿರಬೇಕು. ಆಮೇಲೆ ಆ ಒಗಟುಗಳನ್ನೆಲ್ಲ ಒಂದೊಂದಾಗಿ ಬಿಡಿಸಿಕೊಂಡು ಪದ್ಯವನ್ನ ಅರ್ಥಮಾಡಿಕೊಳ್ಳಬೇಕು.  'ನಾಗಭೂಷಣನಾಗಿ  ಶಿವನಲ್ಲ ..'ಸರಿ, ಮತ್ತೆ ಒಗಟು, ಮತ್ತೆ ಯಥಾಪ್ರಕಾರ ಪುರಾಣಗಳಿಗೆ ಹೋಗು. ಡಿಕ್ಷನರಿ ತೆಗೆದು ನೋಡು ! ಹರಶರ ಪ್ರಥಮಾವತಾರ ಲೋಚನೆ' ಅನ್ನೋದಕ್ಕೆ ಬದಲಾಗಿ ಸುಮ್ಮನೆ 'ಮೀನ ಲೋಚನೆ' ಅಂದುಬಿಟ್ಟಿದ್ರೆ, ನಮಗೆ ಅರ್ಥವಾಗತಾ ಇತ್ತು. ಅರ್ಥವಾಗಿ ಬಿಡುತ್ತಲ್ಲ ಅಂತದ್ಕೊಂಡೆನೇ  ತನ್ನ ಪಾಂಡಿತ್ಯ ಪ್ರದರ್ಶನ ಮಾಡಿ ಬರೆಯೋದಕ್ಕೆ ಹೊರಟ ಕವಿ ! ಇದನ್ನೆಲ್ಲಾ ಓದಿದ್ದ ನನಗೆ-

ಹೊಳೆ ಬೆಳಗಿ ಜಾರುವುದು 

ಗಿಳಿ ನೆಗೆದು ಹಾರುವುದು 

ಎಂದು ಮೊದಲಾಗುವ ಪದ್ಯವನ್ನು ಓದಿದಾಗ 'ಇದೇನು ಇಷ್ಟು ಸುಲಭವಾಗಿ ಅರ್ಥವಾಗುತ್ತಲ್ಲ ! ಕವಿಗಳು  ಹೀಗೂ ಬರೆಯುತ್ತಾರೆಯೇ  ?ಎನ್ನಿಸಿತು. ಇನ್ನೂ ಒಂದು ವ್ಯತ್ಯಾಸವೇನು ಅಂತಂದರೆ; ಹೊಳೆ ಬೆಳಗಿ ಜಾರುವುದನ್ನು, ಗಿಳಿ ನೆಗೆದು ಹಾರಿದ್ದನ್ನು. ಆ ಪದ್ಯವನ್ನು ಬರೆದ ಕವಿ ಕಣ್ಣಾರ ನೋಡಿದ್ದ. ಇಲ್ಲಿ ಬರುವುದು ಸ್ವಂತ ಅನುಭವದ ನಿರೂಪಣೆ. 

ಹಿಂದಿನಕಾಲದ ನಮ್ಮ ಕಥೆಗಳನ್ನು ಡಿ. ವಿ. ಗುಂಡಪ್ಪನವರು 'ರಾಯ ಕೇಳೆಂದ ಸಾಹಿತ್ಯ' ಎಂದು ಹೆಸರಿಸಿ ಹಾಸ್ಯ ಮಾಡಿದ್ದೂ ನೆನಪಿದೆ. ಈ ರಾಯ ಕೇಳೆಂದ ಸಾಹಿತ್ಯವನ್ನು, ರಾಮಾಯಣ ಮಹಾಭಾರಗಳ ಕಥೆಗಳನ್ನು, ಬೇಕಾದಷ್ಟು ಜನ ಹಿಂದೆ ಬರೆದಿದ್ದಾರೆ. ಮತ್ತೆ ಮತ್ತೆ ಅದರ ಪುನರಾವರ್ತನೆ. ಪುನರಾವರ್ತನಾವಾದ ಮಾತ್ರಕ್ಕೆ ಅದರಲ್ಲಿ ಕವಿಯ ಸ್ವಂತ ಕೈವಾಡ ವಿರಬಾರದೆಂದಲ್ಲ. ಹಾಗಿಲ್ಲ ದಿದ್ದರೆ  ಪಂಪ ಭಾರತವನ್ನು ಯಾತಕ್ಕೆ ಓದುತ್ತಿದ್ದೆವು, ಕುಮಾರವ್ಯಾಸನನ್ನು ಏಕೆ ಓದುತ್ತಿದ್ದೆವು ? ಆದರೂ ಒಟ್ಟಿನಲ್ಲಿ ನಮ್ಮ ಇಡೀ ಕಾವ್ಯ ಸಾಹಿತ್ಯ ತಗೊಂಡರೆ, ಇದು ಹಳೇ ಕಾಲದ ಸಾಹಿತ್ಯದ ಪುನರಾವರ್ತನೆ, ಇದರಲ್ಲಿ ಅನುಭವಕ್ಕಿಂತ, ಸ್ವಂತ ಅನುಭವಕ್ಕಿಂತ ಅನುಕರಣವೇ ಹೆಚ್ಚು ಅನ್ನಿಸುತ್ತೆ. 

ಶ್ರೀಕಂಠಯ್ಯನವರು ಮಾಡಿದ ಎಲ್ಲ ಕೆಲಸಗಳಿಗಿಂತಲೂ ಮುಖ್ಯವಾದವು ಇವು. ಅವರು ಛಂದಸ್ಸಿನಲ್ಲಿ ಸ್ವತಂತ್ರ ಮಾರ್ಗವನ್ನು ಅನುಸರಿಸಿದರು. ನಮಗೆ ಹೊಸಮಾದರಿಗಳನ್ನು ತೋರಿಸಿಕೊಟ್ಟರು. ಸರಳವಾದ ಭಾಷೆ ಕಾವ್ಯಕ್ಕೆ ಉತ್ತಮ ಎಂಬುದನ್ನು, ತಿಳಿಯಾದ ಅಚ್ಚ ಹೊಸಗನ್ನಡದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಬರೆಯಬಹುದು ಎಂಬುದನ್ನು ತೋರಿಸಿಕೊಟ್ಟರು. ಇದಕ್ಕಿಂತಲೂ ಹೆಚ್ಚಿನ ಉಪಕಾರವೆಂದರೆ ನಮ್ಮ ಸ್ವಂತ ಅನುಭವ, ನಾವು ಕಣ್ಣಲ್ಲಿ ಕಂಡದ್ದು, ಕಿವಿಯಲ್ಲಿ ಕೇಳಿದ್ದು, ಮನಸ್ಸಿನಲ್ಲಿ ಸಂಕಟಪಟ್ಟಿದ್ದು, ಅಥವಾ ಸಂತೋಷಪಟ್ಟದ್ದು-ಇವೆಲ್ಲ ಕಾವ್ಯಕ್ಕೆ ವಿಷಯವಾಗಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದು. ಅದರಿಂದಲೇ ಇರಬೇಕು -ಯಾವತ್ತು ಅವರ 'ಇಂಗ್ಲಿಷ್ ಗೀತಗಳು'   ಎಂಬ ಪುಸ್ತಕ ಪ್ರಕಟವಾಯಿತೋ, ಹೆಚ್ಚು ಕಡಿಮೆ ಅದರ ಮಾರನೆಯ ದಿನದಿಂದಲೇನೇ  ಕನ್ನಡ ನಾಡಿನ ಎಲ್ಲ ಕಡೆಗಳಿಂದಲೂ ಹಾಡು ಕೇಳಿಬರುವಂತಾಯಿತು. ಎಲ್ಲರ ಮನಸ್ಸಿನಲ್ಲಿಯೂ ಹಿಂದಿನ ಕಾವ್ಯಗಳ ಬಗ್ಗೆ ಸ್ವಲ್ಪ ಅತೃಪ್ತಿ ಇತ್ತು ಅಂತ ಕಾಣುತ್ತೆ. ಹೊಗೆಯಾಡುತ್ತಿತ್ತು ಆ ಅತೃಪ್ತಿ.  ಅದಕ್ಕೆ  ಬಿ. ಎಂ. ಶ್ರೀ ರವರು ಒಂದು ಜ್ಯೋತಿ ಸ್ಪರ್ಶ ಮಾಡಿದರು.. ಎಲ್ಲ ಕಡೆಯೂ ಬೆಳಕು ಹರಡಿಕೊಂಡಿತು. ಈ ಉಪಕಾರ ಆಷ್ಟಿಷ್ಟು ಎಂದು ಹೇಳಲಾಗುವುದಿಲ್ಲ. 

ಹಿಂದೆ ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಬಯಲು ಪ್ರದೇಶ ಎಷ್ಟಿತ್ತೊ ಅದೆಲ್ಲ ಇವತ್ತು ಫಲವತ್ತಾಗಿದೆ. ನಮ್ಮಲ್ಲಿ ಕಾದಂಬರಿ ಇರಲಿಲ್ಲ. ಸಣ್ಣಕಥೆ ಎಲ್ಲೋ ಇತ್ತು ಅಂತ, ಯಾವುದೊ ಹಿಂದಿನ ದೊಡ್ಡ ಕಾವ್ಯದಲ್ಲಿ ಮಧ್ಯೆ ಒಂದು ಕಥೆ ಅಡಗಿತ್ತು ಅಂತಂದುಕೊಂಡು ನಾವು ಸಂತೋಷಪಟ್ಟುಕೊಳ್ಳಬೇಕಾಗಿತ್ತು. ಭಾವಗೀತೆ ವಿಷಯದಲ್ಲಿ ನಾವು ಅದೇ ಮಾತು ಹೇಳಬಹುದು. ಈಗಲೋ-ಸಣ್ಣ ಕಥೆ,ಭಾವಗೀತೆ, ಕಾದಂಬರಿ, ಲಲಿತ ಪ್ರಬಂಧ,-ಎಷ್ಟೊಂದು ಸಾಹಿತ್ಯ ಪ್ರಕಾರಗಳು ಬಂದಿವೆ ? ಶ್ರೀಕಂಠಯ್ಯನವರು ಅವೆಲ್ಲವನ್ನೂ ತಾವೇ ಬರೆಯಲಿಲ್ಲ ಆದರೆ ಯಾವಾಗ ಮನಸ್ಸಿಗೆ ಒಂದು ಸ್ವಾತಂತ್ರ್ಯವನ್ನು ಕೊಟ್ಟರು, ಅವಾಗ ನಾವು ತಡೆಯಿಲ್ಲದೆ ಸಂಚರಿಸೋದಕ್ಕೆ ಪ್ರಾರಂಭಮಾಡಿದೆವು. ಇಂಥಿಂಥಾಕಡೆ ಇಂಥಿಂಥ ಗಣೆ ಇದೆ ಅನ್ನೋದು ನಮಗೆ ಗೊತ್ತಾಯಿತು. ಗಣಿಗೆ ಹೋಗಿ ನಮಗೆ ಬೇಕಾದ್ದನ್ನೆಲ್ಲ ಹೊತ್ತುಕೊಂಡು ಬಂದೆವು. ಆದ್ದರಿಂದ ನೇರವಾಗಿಯೋ ಅಪ್ರತ್ಯಕ್ಷವಾಗಿಯೋ ಇಂದಿನ ನಮ್ಮ ಎಲ್ಲ ಸಾಹಿತ್ಯದ ಮೇಲೂ ಬಿ. ಎಂ. ಶ್ರೀಯವರ ಮುದ್ರೆ ಇದ್ದೇ ಇದೆ. ಅದಕ್ಕಾಗಿ ನಾವು ಎಷ್ಟು ಕೃತಜ್ಞರಾಗಿದ್ದರೂ ಸಾಲದು. 

ಶ್ರೀ ರವರು ಬರೆದದ್ದು ಸ್ವಲ್ಪವೇ ಇರಬಹುದು. ಆದರೆ. ಅವರ ಪ್ರಭಾವ ಸ್ವಲ್ಪವಲ್ಲ. ಮಾಸ್ತಿಯವರು ತಮ್ಮ ಕವನವೊಂದರಲ್ಲಿ 'ಕನ್ನಡ ನಾಡಿನಲ್ಲಿ ಇವತ್ತು ಯಾರು ಯಾರು ಎಲ್ಲೆಲ್ಲಿ ಏನೇನು ಬರೆಯುತ್ತಿದ್ದಾರೆ ಯಾವ ಯಾವ ವಾಣಿ ಕನ್ನಡದಲ್ಲಿ ಕೇಳಿಬರುತ್ತಿದೆ ಅವೆಲ್ಲವೂ ಕೂಡ ಅವರ ಪ್ರಭಾವದಿಂದ ಬಂದದ್ದು'. ಎನ್ನುವ ಅರ್ಥ ಬರುವ ಮಾತಾಡಿದ್ದಾರೆ. ಅದು ಅಕ್ಷರಶಃ ನಿಜ. 

ಈ ಕೆಲಸವನ್ನು ಅವರು ಯಾವಕಾಲದಲ್ಲಿ ಮಾಡಿದರೋ ಆಗ ಕನ್ನಡ ಯಾವ ಸ್ಥಿತಿಯಲ್ಲಿತ್ತು ಅನ್ನೋದನ್ನು ಆಗಲೇ ಹೇಳಿದ್ದೇನೆ. ಇದನ್ನು ಮಾಡಲು ಹೊರಟಾಗ ನಮ್ಮ ನಾಡಿನ ಜನರು ಅವರಿಗೆ ಸಾಕಷ್ಟು ಉತ್ತೇಜನ ಕೊಡಲಿಲ್ಲ ಅನ್ನಿಸುತ್ತೆ. ಅದು  ಯಾರ ತಪ್ಪು ಅಲ್ಲ; ಅಂದಿನ ವಾತಾವರಣದ ತಪ್ಪು. ನಮಗೆ ಯಾರಿಗೂ ಕನ್ನಡ ಅನ್ನೋದು ಬೇಕಾಗಿರಲಿಲ್ಲ. ಇಂಗ್ಲೀಷಿನ ವ್ಯಾಮೋಹ ಅಷ್ಟು ಹೆಚ್ಚಾಗಿತ್ತು, ಒಂದು ಕಡೆ. ಮತ್ತೊಂದು ಕಡೆ ಸಂಸ್ಕೃತ ಓದಿಕೊಂಡರೆ ಸಾಕು, ಕನ್ನಡದಲ್ಲಿ ಪಾಠವನ್ನೂ ಹೇಳಬಹುದು ಅನ್ನುವ ಭಾವನೆಯಿತ್ತು. ಇಂಗ್ಲೀಷಿನಲ್ಲಿ   ವ್ಯಾಮೋಹವಿದ್ದವರಿಗಂತೂ ಕನ್ನಡ ಕೆಲಸಕ್ಕೆ ಬಾರದ ಭಾಷೆ. 

ಒಂದು ದಿನ  ನಾನು ಕುಕ್ಕನಹಳ್ಳಿ ಕೆರೆಯಮೇಲೆ ಹೋಗುತ್ತಿದ್ದಾಗ ನಮ್ಮ ಕಾಲೇಜಿನ ಮತ್ತೊಬ್ಬ ಪ್ರಾಧ್ಯಾಪಕರು (ಹೆಸರು ಹೇಳೊಲ್ಲ) ಅವರು ನನ್ನ ಗುರುಗಳಾಗಿದ್ದವರೇನೇ -ಸಿಕ್ಕಿ ನನ್ನನ್ನು ಕೇಳಿದರು 'What is all this fuss your Shrikanthaiah is making about kannada ? I mean ..is there anything in it ? ಅವರ ಪ್ರಶ್ನೆಯ ಒಳ ಅರ್ಥವಿದು. "ಶ್ರೀಕಂಠಯ್ಯನವರು ಇಂಗ್ಲೀಷ್ ಪ್ರಾಧ್ಯಾಪಕರು; ಅದರಲ್ಲೇನೂ ಹೆಸರು ಮಾಡೋಕಾಗೋದಿಲ್ಲ ಅಂತ ಇದೊಂದು ಪಂದು ಮಾಡಿದ್ದಾರೋ ? ಅಷ್ಟು ಹೊತ್ತಿಗೆ ನಾನು ಶ್ರೀಯವರ ಮಠಕ್ಕೆ ಸೇರಿಲ್ಲದೆ ಹೋದರೂ, ಆ ಮಠದ ಬಾಗಿಲಲ್ಲಿ ನಿಂತು, ಯಾರಾದರೂ ಒಳಕ್ಕೆ ಕರೆದಾರೇ ಅಂತ ಕಾಯ್ದುಕೊಂಡಿದ್ದೆ. ಆದ್ಧರಿಂದ  ಆ ಪ್ರಾಧ್ಯಾಪಕರಿಗೆ ಉತ್ತರ ಹೇಳೋದು ಸುಲಭವಾಯಿತು. " There is something in it.  Kannada happens to be our language. With out it we can't survive. Without it we can't create any thing. We can understand, read and use English. But, we can't create  ಎಂದು ಉತ್ತರ ಕೊಟ್ಟೆ.  ಅವರು  Yes, yes, I suppose there is something in what you say " ಅಂದರು. ನನ್ನ ಮಾತು ಅವರಿಗೆ ನಿಜವಾಗಿ ಅವರಿಗೆ ಮನಸ್ಸಿಗೆ ಮುಟ್ಟಲಿಲ್ಲ. ಅವರ ಉತ್ತರ ಕೇವಲ ಮರ್ಯಾದೆಗೆ ಹೇಳಿದ್ದು. ಭೌತಶಾಸ್ತ್ರ

ನನ್ನ ಉತ್ತರದಲ್ಲಿ ಮುಖ್ಯವಾದ ಪದ create ಅನ್ನೋದು, ನಮ್ಮ ವಿಶ್ವವಿದ್ಯಾನಿಲಯಯದ ಒಳಗೂ ಹೊರಗೂ ಜನ ಏನಾದರೂ ಬರೆಯುವುದಕ್ಕೆ ಶುರು ಮಾಡಿದರೆಂದರೆ -ಶ್ರೀಕಂಠಯ್ಯನವರು " ಇಂಗ್ಲೀಷ್ ಗೀತಗಳು" ಅನ್ನುವ ಪುಸ್ತಕ ಪ್ರಕಟಿಸಿದಮೇಲೆ, ನಾಡಿನಲ್ಲೆಲ್ಲಾ ಸಂಚಾರಮಾಡಿ ಕನ್ನಡದ ಪರವಾಗಿ ಪ್ರಚಾರಮಾಡಿದಮೇಲೆ, ಕನ್ನಡದಲ್ಲಿ ಮಾತ್ರವಲ್ಲ ಇಂಗ್ಲೀಷಿನಲ್ಲೇ ಆಗಲಿ ಫಿಲಾಸಫಿ ಗಿಲಾಸಫಿ ಮುಂತಾದ ಇತರ ವಿಷಯಗಳನ್ನು ಕುರಿತೇ ಆಗಲಿ, ನಿಜವಾಗಿ ಕಷ್ಟಪಟ್ಟು ಯೋಚನೆಮಾಡಿ ಬರೆಯಲಾರಂಭಿಸಿದ್ದು ಆ ಬಗೆಯ ಆಲೋಚನೆ ಕನ್ನಡದಲ್ಲಿ ಆರಂಭವಾದಮೇಲೆ, ಅಂದರೆ ವಿಶ್ವವಿದ್ಯಾನಿಲಯದಲ್ಲಿ creative spirit - ಸೃಜನಶೀಲ ಮನೋವೃತ್ತಿ -ಏನಾದರೂ ಬಂದಿದ್ದರೆ ಅದಕ್ಕೂ ನಾವು ಶ್ರೀಕಂಠಯ್ಯನವರಿಗೇ  ಕೃತಜ್ಞತೆ ಸಲ್ಲಿಸಬೇಕು. ಇವರಲ್ಲಿ ನನಗೆ ಯಾವ ಸಂಶಯವೂ ಇಲ್ಲ. 

ಶ್ರೀಕಂಠಯ್ಯನವರ ಸೇವೆ ಬಹುಮುಖವಾದದ್ದು. ಅವರು ಕನ್ನಡಕ್ಕಾಗಿ ನಿಂತು ಪ್ರಚಾರಮಾಡಿದರು; ತಾವೇ ಸಾಹಿತ್ಯವನ್ನು ಸೃಷ್ಟಿಸಿದರು; ಸಾಹಿತ್ಯ ಸೃಷ್ಟಿಗೆ ಬೇಕಾದ ಮನೋ ಸ್ವಾತಂತ್ರ್ಯವನ್ನೂ  ನಮಗೆ ಕೊಟ್ಟರು. ಜೊತೆಗೆ ರಾಜಕೀಯ ದೃಷ್ಟಿಯಿಂದಲೂ ಅವರು ಮಾಡಿದ ಉಪಕಾರ ದೊಡ್ಡದೇ. ನಮ್ಮ ಮೈಸೂರು ಮಹಾರಾಜರ ಕೃಪಾ ಛತ್ರದ ಆಶ್ರಯದಲ್ಲಿ ಕನ್ನಡ ನಾಡು ಒಂದಾಗಬೇಕು ಅನ್ನುವುದು ಅವರ ಹಿರಿಯಾಸೆ. ಮಹಾರಾಜರ ಕೃಪಾ ಛತ್ರದ ಕೆಳಗಲ್ಲದಿದ್ದರೂ ಕನ್ನಡ ನಾಡು ಒಂದಾಯಿತು. ಅದಾಗುವವರೆಗೆ ಅವರು ಬದುಕಿರಲಿಲ್ಲ. ಆದರೆ ಈಗಲೂ ಅವರ ಬಯಲುಚೇತನ ಇಲ್ಲೆಲ್ಲಾ ಓಡಾಡುತ್ತಿರಬಹುದೇನೋ, ನಾಡು ಒಂದಾದದ್ದನ್ನು ಕಂಡು ಸಂತೋಷ ಪಟ್ಟುಕೊಳ್ಳುತ್ತಾ ಇರಬಹುದೇನೋ ಅನ್ನಿಸುತ್ತೆ. ಕನ್ನಡ ನಾಡಿನಲ್ಲಿ ಭಾವೈಕ್ಯ ವುಂಟಾಗುವುದಕ್ಕೂ ಅವರ ಸೇವೆ ಸಹಾಯಕವಾಯಿತು. ಬಾಕಿ ಕೆಲಸವನ್ನು ರಾಜಕಾರಣಿಗಳು ಮಾಡಿದರು. ಶ್ರೀಕಂಠಯ್ಯನವರು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿಲ್ಲ.   

ಧಾರವಾಡದಲ್ಲಿ ೭ ವರ್ಷಗಳ ಹಿಂದೆ ಮಾಡಿದ ಭಾಷಣದಲ್ಲಿ ಹೇಳಿದಮಾತು : ನಮ್ಮ ನಾಡಿನಲ್ಲಿ ವಿದ್ಯಾವಂತರೆಲ್ಲರಿಗೂ ಕೂಡ ಕನ್ನಡ, ಸಂಸ್ಕೃತ ಇಂಗ್ಲೀಷು -ಈ ಮೂರೂ ಭಾಷೆಗಳಲ್ಲೂ  ಚೆನ್ನಾಗಿ ಪ್ರವೇಶವಿರಬೇಕು. ಇತ್ತೀಚಿಗೆ ಈ ವಿಷಯದಲ್ಲಿ ನಮ್ಮ ಜನ ಬೇರೆ ಅಭಿಪ್ರಾಯಗಳಿಗೆ ಮನಸೋತಿದ್ದಾರೆಯೇನೋ ಅನ್ನುವ ಸಂದೇಹಕ್ಕೆ ಅವಕಾಶವಿದೆ. ಸ್ಪಷ್ಟವಾಗಿ ಯಾರೂ  ಸಂಸ್ಕೃತ ಬೇಡ ಅನ್ನೋದಿಲ್ಲ. ಇಂಗ್ಲೀಷ್ ಬೇಡ ಅನ್ನೋದಿಲ್ಲ. ಆದರೂ ಕೆಲವರು ಇಂಗ್ಲೀಷ್ ನಮ್ಮ ಶತ್ರು'ಎಂದದ್ದನ್ನು ಕೇಳಿದ್ದೇನೆ. ಇಂಗ್ಲಿಷಿನ ಪರವಾಗಿ ವಕೀಲಿ ವಹಿಸಲು ನಾನೇನೂ ಆತುರನಾಗಿಲ್ಲ. ನನ್ನ ಅಂಗಡಿಯಲ್ಲಿ ನಾನು ಮಾರಿದ್ದೇನೋ ಇಂಗ್ಲೀಷೇ. ಆದರೆ ಆ ಅಂಗಡಿಯನ್ನು ಮುಚ್ಚಿ ದಶಕಗಳಾಗಿ ಹೋದವು. ಅಲ್ಲದೆ ಆಗಿನಕಾಲದಿಂದಲೂ ನನ್ನ ಮನಸ್ಸಿನಲ್ಲಿ -ಬಹುಶಃ ನಮ್ಮೆಲ್ಲರ ಮನಸ್ಸಿನಲ್ಲಿ-ಇನ್ನೊಂದು ಭಾವನೆಯಿದೆ; ಪ್ರಪಂಚದಲ್ಲಿ ಎಷ್ಟೊಂದು ಜನ ಕೇಡಿಗರು ಎಷ್ಟೊಂದು ಕೆಟ್ಟ ಕೆಲಸ ಮಾಡಿದ್ದಾರೆ, ಎಷ್ಟೊಂದು ಹಿಂಸೆ ಕೊಟ್ಟಿದ್ದಾರೆ, ಎಷ್ಟೊಂದು ನೋವು ಉಂಟುಮಾಡಿದ್ದಾರೆ-ಇಂಥ ಕೆಲಸವನ್ನು ಯಾರು ಹೆಚ್ಚುಮಾಡಿದ್ದಾರೆ ಅಂತ ಲೆಕ್ಕ ಹಾಕಿದರೆ , ಬಹುಶಃ ನಾವು ಈ ಬಿಳಿ ಜನಾಂಗದವರನ್ನು ಹೆಸರಿಸಬೇಕಾಗುತ್ತೆ. ಅವರಿಂದ ಪ್ರಪಂಚಕ್ಕೆ ಬಹುಶಃ ಇನ್ನೆಲ್ಲರಿಂದ ಆಗಿರೋದಕ್ಕಿಂತ ಹೆಚ್ಚು ಕೇಡಾಗಿದೆ. ಅಂದಮೇಲೆ ಇಂಗ್ಲೆಂಡನ್ನಾಗಲಿ ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನಾಗಲಿ ನಾನು ಪ್ರೀತಿಯಿಂದ ಸ್ಮರಿಸುತ್ತೇನೆ ಅಂತಲೇನೂ ಹೇಳಲಾರೆ. ಅವರನ್ನು ದ್ವೇಷಿಸುವುದಿಲ್ಲ. ಯಾತಕ್ಕೆ ಅಂದರೆ ಗಾಂಧೀಜಿ ನಮಗೆ ಹೇಳಿಕೊಟ್ಟಿದ್ದಾರೆ. 'ನೀವು ದ್ವೇಷಿಸಬೇಕಾದ್ದು ಜನರನ್ನಲ್ಲ. ಅವರಲ್ಲಿ ಕೇಡಿತನವನ್ನು ಕಂಡರೆ ಆ ಕೇಡಿತನವನ್ನು ದ್ವೇಷಿಸಿ' ಎಂದು. ಅಂದಮೇಲೆ ನಾನು ಇಂಗ್ಲಿಷಿನ ಪರವಾಗಿ ಮಾತನಾಡಿದರೆ ಅವರ ಮೇಲಿನ ದುರಭಿಮಾನದಿಂದಲ್ಲ. ಸಂಸ್ಕೃತದ ವಿಷಯ ಮಾತನಾಡಿದರೂ ಕೂಡ ಅದರಮೇಲಿನ ದುರಭಿಮಾನದಿಂದಲ್ಲ. ಒಂದಾನೊಂದು ಕಾಲದಲ್ಲಿ ನಾವು ಇವೆರಡರಮೇಲೆ ಯುದ್ಧವನ್ನೇ ಹೂಡಬೇಕಾಗಿತ್ತು. ಶ್ರೀಕಂಠಯ್ಯನವರೇ ಆ ಯುದ್ಧದ ನೇತಾರರಾದರು. ಅವರೆಡೂ ಅಂದು ನಮ್ಮನ್ನು ಮುತ್ತಿದ್ದವು. ಆದ್ದರಿಂದ ನಾವು ಯುದ್ಧ ಮಾಡಬೇಕಾಯಿತು. ಮಾಡಿದೆವು. ಅವಾಗ ಅವೆರಡನ್ನೂ  ಹಳಿಯಬೇಕಾಗಿತ್ತು. ಹಳಿದೂ ಹಳಿದೆವು. ನ್ಯಾಯ-ನಾವು ಒಂದು ದೊಡ್ಡ ಕೆಲಸ ಸಾಧಿಸೋಕೆ ಅಂತ ಹಾಗೆ ಮಾಡಿದೆವು. ನ್ಯಾಯವಾಗಿ ಎಲ್ಲಿಯವರೆಗೆ ಹೋಗಬಹುದೋ ಅದಕ್ಕಿಂತ ಒಂದೆರಡು ಹೆಜ್ಜೆ ಮುಂದಕ್ಕೂ ಹೋದವೇನೋ !ಇವತ್ತು ನಾವು ಆ ಯುದ್ಧದಲ್ಲಿ ಗೆದ್ದಿದ್ದೇವೆ. ಈ ವಿಷಯದಲ್ಲಿ ಯಾರೂ ಸಂಶಯ ಇಟ್ಟು ಕೊಳ್ಳಬೇಕಾದಿಲ್ಲ. ಕನ್ನಡದಲ್ಲಿ  ಈಗ ಬೇಕಾದದ್ದೆಲ್ಲ ಆಗಿದೆ ಅಂತ ನಾನು ಸೂಚಿಸುತ್ತಾ  ಇಲ್ಲ.  ಆಗ ಬೇಕಾದ ಕೆಲಸ ಇನ್ನೂ  ಇದೆ. ಅಂದರೆ ಅದೆಲ್ಲಾ ಜನರಲ್ ಗಳು ಹೇಳುವಹಾಗೆ. ಗೆದ್ದಮೇಲೆ ಮಾಡಬೇಕಾದ mopping-up operations, ಅಷ್ಟೇನೆ. ಅದು ಆಗುತ್ತೆ.  ಯಾರು ಬೇಡ ಅಂದರೂ ಆಗಿಯೇ ಆಗುತ್ತೆ. ಆದ್ದರಿಂದ ನಾವು  ಹಿಂದೆ ಸಂಸ್ಕೃತಕ್ಕೆ ಹೆದರಿದ ಹಾಗೆ, ಇಂಗ್ಲೀಷಿಗೆ ಹೆದರಿದ ಹಾಗೆ, ಇವತ್ತು ಹೆದರಬೇಕಾದ್ದಿಲ್ಲ. ಶ್ರೀಕಂಠಯ್ಯನವರ ಮನಸ್ಸಿನಲ್ಲಿದ್ದದ್ದನ್ನ ನೆನಪಿಸಿಕೊಳ್ಳೋಣ; ನಮಗೆಲ್ಲರಿಗೂ ಕೂಡ ಇಂಗ್ಲೀಷ್ ಬೇಕು, ಹೊಸ ಶಾಸ್ತ್ರಗಳು ಹುಟ್ಟಿವೆ, ಹೊಸ ಅನುಭವ ಆಗುತ್ತಿದೆ. ಹಿಂದಿನ ೫೦೦ ವರ್ಷಗಳಲ್ಲಿ  ಆದಷ್ಟು ಬದಲಾವಣೆಗಳು ಈಗ ೧೦-೨೦ ವರ್ಷಗಳಲ್ಲಿ ಆಗುತ್ತಿವೆ. ಆವೆಲ್ಲಕ್ಕೂ ತಕ್ಕಂತೆ ಭಾಷೆ ಬೆಳೆಯಬೇಕು.  ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮಾನವ ಶಾಸ್ತ್ರ,-ತಾ ಶಾಸ್ತ್ರಗಳ ವಿಷಯವನ್ನಂತೂ ಹೇಳಬೇಕಾದ್ದೇ ಇಲ್ಲ -ಎಲ್ಲ ತಮ್ಮ ಹಳೆಯ  ಎಲ್ಲೆಗಳನ್ನು  ಮೀರಿ ಬೆಳೆದಿವೆ. ಇದೆಲ್ಲಕ್ಕೂ ತಕ್ಕಂತೆ ನಮ್ಮ ಭಾಷೆಯನ್ನು ಸಜ್ಜುಗೊಳಿಸಿಕೊಳ್ಳಬೇಕು. ಆದ್ದರಿಂದ ಇವತ್ತು ಪ್ರಪಂಚದಲ್ಲಿ ಯಾವ ಭಾಷೆ ಪ್ರಬಲವಾಗಿದೆ, ಯಾವ ಭಾಷೆಯಲ್ಲಿ ನಮಗೆ ಯುರೋಪ್ ಅಮೆರಿಕಗಳ ಹೊಸಶಾಸ್ತ್ರಗಳೆಲ್ಲ ಕರಗತವಾಗುತ್ತವೆ  ಅವನ್ನ ನಾವು ಚಾಲತಿಯಲ್ಲಿಟ್ಟುಕೊಳ್ಳಬೇಕು.  ಅದರ ವಿಷಯದಲ್ಲಿ ಮಮತೆಯನ್ನೂ ಕೂಡ  ಬೆಳೆಸಿಕೊಳ್ಳಬೇಕು. ಕನ್ನಡಿಗರು ಆ ಭಾಷೆಗೆ ಹೆದರಬೇಕಾಗದ್ದಿಲ್ಲ  ಅಂತ ಹೇಳಿದೆನಷ್ಟೆ. ಇನ್ನೂ ಮುಂದೆ ಹೋಗಿ ಹೇಳುತ್ತೇನೆ : ಒಂದಾನೊಂದು ಕಾಲದಲ್ಲಿ ನಮ್ಮಿಂದ ಆ ಭಾಷೆಗಳು (ಇಂಗ್ಲೀಷ್ , ಸಂಸ್ಕೃತ) ಸೇವೆ ತಗೊಂಡವು. ಇವತ್ತು ನಾವೇ ಯಾತಕ್ಕೆ ಆ ಭಾಷೆಗಳಿಂದ ಸೇವೆ ತೆಗೊಳ್ಳಬಾರದು ? ಇಂಗ್ಲೀಷು ನಮಗೆ ತೆತ್ತಾಗಿ ಬರಲಿ ನಮ್ಮ ಕನ್ನಡಕ್ಕೆ ಮಾಡಬೇಕಾದ ಸೇವೆ ಮಾಡೋದಕ್ಕೆ ಬರಲಿ.  ಕನ್ನಡದ ಮಹಾನದಿ ಹರಿಯಬೇಕಾದರೆ ಅದಕ್ಕೆ ಉಪನದಿಗಳು ಬೇಕು, ಇಂಗ್ಲೀಷು  ಆ ಉಪನದಿಯಾಗಿ ಬರಲಿ. ಕನ್ನಡ ಚಕ್ರವರ್ತಿಸ್ಥಾನದಲ್ಲಿರಬೇಕಾದರೆ ಸಾಮಂತ ರಾಜರಿರಬೇಕು. ಇಂಗ್ಲೀಷ್ ಸಾಮಂತ ರಾಜನಾಗಿ ಬರಲಿ. 

ಶ್ರೀಕಂಠಯ್ಯನವರು ಆಗಾಗ ಹೇಳುತ್ತಿದ್ದ ವಿಷಯಗಳಲ್ಲಿ ಮುಖ್ಯವಾದ ಒಂದೆರಡು ಈಗ ನೆನಪಿಗೆ ಬರುತ್ತಿವೆ,. ಇವತ್ತು ಕನ್ನಡ ಸಾಹತ್ಯವನ್ನು ನೋಡಿ ನಾವೆಲ್ಲಾ ಹೆಮ್ಮಪಟ್ಟುಕೊಳ್ಳುತ್ತೇವೆ. ಕನ್ನಡ ಸಾಹಿತ್ಯ ಎಷ್ಟುಮಟ್ಟಿಗೆ ಬೆಳೆದಿದೆ, ನಾವು ಯಾರ ಮುಂದು ತಲೆತಗ್ಗಿಸಿ ನಿಲ್ಲಬೇಕಾಗಿಲ್ಲ, ಅನ್ನುವ ಭಾವನೆ ಇವತ್ತು ನ್ಯಾಯವಾಗಿ, ಸ್ವಾಭಾವಿಕವಾಗಿ ನಮ್ಮೆಲ್ಲರಲ್ಲೂ ಮೂಡಿದೆ. ಉತ್ಕೃಷ್ಟವಾದ ಸಾಹಿತ್ಯದ ಸೃಷ್ಟಿಯಾಗಿದೆ. ಆದರೂ  ಕೂಡ ನಾವು 'ನಮ್ಮ ಕನ್ನಡದಲ್ಲಿ ಏನು ತಾನೇ   ಇಲ್ಲ 'ಅನ್ನುವ ಮಾತನ್ನು ಆಡಬಾರದು ಆನ್ನಿಸುತ್ತೆ. ಶ್ರೇಯಸ್ಸಿಗೆ ಅಸಂತೋಷವೇ  ಮೂಲ ಎನ್ನುವ ಮಾತನ್ನು ಶ್ರೀಕಂಠಯ್ಯನವರು ಅನೇಕಸಲ ಹೇಳಿದರು. ಯಾವಾಗಲೂ ತೃಪ್ತಿ ಬರಬಾರದು. ತೃಪ್ತಿ ಬಂತು ಅಂದರೆ ಅಲ್ಲಿಗೇ  ನಮ್ಮ ಕೆಲಸ ನಿಲ್ಲುತ್ತೆ. ಕನ್ನಡದಲ್ಲಿ ಶಾಸ್ತ್ರಗಳನ್ನು ಕುರಿತ ಬರವಣಿಗೆ ಸಾಲದು,  ತುಂಬ ಬರಬೇಕು, ಅನ್ನುವುದು ಶ್ರೀಕಂಠಯ್ಯನವರ ಮನಸ್ಸಿನಲ್ಲಿತ್ತು. ಆ ಭಾಗದಲ್ಲಿ ಈಗಲೂ ನಡೆಯಬೇಕಾದ ಕೆಲಸ ಬೇಕಾದಷ್ಟಿದೆ. ಪ್ರಪಂಚ ಮಿಂಚಿನವೇಗದಲ್ಲಿ ಸಾಗುತ್ತಿದೆ. ಎಷ್ಟೋ ಹೊಸ ಕಾರ್ಯಗಳು ನಡೆದಿವೆ; ಹೊಸ ಹೊಸ Inventions ಗಳು ಬಂದಿವೆ; ನಮ್ಮ ಕಣ್ಣ ಮುಂದೆ ಹೊಸ ಕ್ಷೇತ್ರಗಳು ಹುಟ್ಟಿಕೊಂಡು ವಿಸ್ತಾರವಾಗುತ್ತಿವೆ. ನಮ್ಮ ಬರವಣಿಗೆ ಇವೆಲ್ಲವನ್ನೂ ಗಣನೆಗೆ ತಂದುಕೊಂಡು ಅವಕ್ಕೆ ಅಭಿವ್ಯಕ್ತಿ ಕೊಡಬೇಕು. ಅದಕ್ಕಾಗಿ ಹೊಸ ಹೊಸ ಪದಗಳೂ ನುಡಿ ಗಟ್ಟು  ಬೇಕು. ಅವು ಈಗ ನಮ್ಮಲ್ಲಿಲ್ಲ; ಇಂಗ್ಲಿಷಿನಲ್ಲಿ ದೊರಕುವ ಹೊಸ  Concept ಗಳಿಗೆ ಅಭಿವ್ಯಕ್ತಿ ಕೊಡಲು ಸಂಸ್ಕೃತ ನೆರವಾಗ ಬಹುದು. ಎಲ್ಲೆಲ್ಲಿ ಏನೇನು ಸಿಗುತ್ತದೆಯೋ ಎಲ್ಲವನ್ನೂ ನಾವು ಬರಮಾಡಿಕೊಳ್ಳಬೇಕು. ನಮ್ಮ ಆಲೋಚನೆಯೂ ದೃಷ್ಟಿಯೂ ಇತ್ತಕಡೆ ಹರಿಯಬೇಕು. 'ನಾವು ಏನು ತಾನೇ ಮಾಡಿಲ್ಲ ? ಎಲ್ಲವನ್ನೂ ಮಾಡಿದ್ದೇವೆ' ಅನ್ನುವ ಭಾವನೆಯನ್ನು ಬಿಟ್ಟು'ಮಾಡದಿರುವುದು ಬೇಕಾದಷ್ಟಿದೆ, ಅದನ್ನು ಮಾಡೋಣ' ಎಂದುಕೊಂಡು ಕಾರ್ಯೋನ್ಮುಖರಾಗಬೇಕು. 

ಶ್ರೀಕಂಠಯ್ಯನವರು ಕೊಟ್ಟ  ಎಚ್ಚರಿಕೆಗಳಲ್ಲಿ ಇದೊಂದು; 'ನಿಮ್ಮಲ್ಲಿ ಅಸಂತೋಷ ಇರಲಿ, ತೃಪ್ತಿ ಪಟ್ಟುಕೊಳ್ಳಬೇಡಿ '

ಹಿರಣ್ಮಯೇನ ಪಾತ್ರೇಣ  ಸತ್ಯಸ್ಯಾಪಿ ಹಿತಂ ಮುಖಂ 

ತತ್ ತ್ವಂ ಪೂಷನ್  ಅಪಾವೃಣು  ಸತ್ಯ ಧರ್ಮಾಯ  ದೃಷ್ಟಯೇ 

ನಾವು ಮಾಡಬೇಕಾದ ಕೆಲಸ ಮುಗಿಯತಕ್ಕದ್ದಲ್ಲ. ಯಾವತ್ತೂ ಕೆಲಸ ಮುಗಿಯಿತು  ಅಂತೀವೋ ಅವತ್ತು ಮೃತ್ಯು ಬಂತು ಅಂತಲೇ ಲೆಕ್ಕ. ಅಮೃತತ್ವ ಅಂತಂದರೆ ಸದಾ ಸತ್ಯ, ಸೌಂದರ್ಯ  ಸೌಶೀಲ್ಯಗಳ ಬೆನ್ನಟ್ಟಿ ಹೋಗುತ್ತಿರುವುದು, ಅವುಗಳ ಅರಿವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವುದು, ಅವುಗಳ ಪ್ರಭೆಯನ್ನು ಹೀರಿ ಕೊಳ್ಳುತ್ತಲೇ ಇರುವುದು. ಈ ಸಂದೇಶವನ್ನೂ ಕೂಡ ಶ್ರೀಕಂಠಯ್ಯನವರು ಕೊಟ್ಟರು.  ಅದು ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿರಲಿ 

  
Comments

Popular posts from this blog

ಗಾಂಧಿ ಸ್ಮೃತಿ 2019 !

ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ ? ಹಾ - ಕುವೆಂಪು.

Uttar dakshin, a Music concert by stalwarts like Smt/Shri. Kumareshan and Pt. Ulhas N.Kashalkarji